AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Vande Bharat Train: ವಂದೇ ಭಾರತ್ ಎಕ್ಸ್​ಪ್ರೆಸ್ ರೈಲಿನೊಳಗೆ ಕಸದ ರಾಶಿ; ವೈರಲ್ ಫೋಟೋಗೆ ಜನರ ಪ್ರತಿಕ್ರಿಯೆ ನೋಡಿ

IAS officer Awanish Sharan Tweet: ಐಎಎಸ್ ಅಧಿಕಾರಿ ಅವನೀಶ್ ಶರಣ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಈ ಫೋಟೋ ಹಂಚಿಕೊಂಡಿದ್ದಾರೆ. ರೈಲಿನ ಬೋಗಿಗಳಲ್ಲಿ ಬಾಟಲಿಗಳು, ಪ್ಲಾಸ್ಟಿಕ್ ಬ್ಯಾಗು ಇತ್ಯಾದಿ ತ್ಯಾಜ್ಯಗಳು ಬಿದ್ದಿರುವುದು ಮತ್ತು ಕಾರ್ಮಿಕರೊಬ್ಬರು ಪೊರಕೆ ಹಿಡಿದು ಇವುಗಳನ್ನು ಗುಡಿಸಲು ನಿಂತಿರುವುದನ್ನು ಈ ಫೋಟೋದಲ್ಲಿ ಕಾಣಬಹುದು.

Vande Bharat Train: ವಂದೇ ಭಾರತ್ ಎಕ್ಸ್​ಪ್ರೆಸ್ ರೈಲಿನೊಳಗೆ ಕಸದ ರಾಶಿ; ವೈರಲ್ ಫೋಟೋಗೆ ಜನರ ಪ್ರತಿಕ್ರಿಯೆ ನೋಡಿ
ವಂದೇ ಭಾರತ್ ಎಕ್ಸ್​ಪ್ರೆಸ್ ರೈಲಿನೊಳಗೆ ಕಸದ ರಾಶಿ
TV9 Web
| Edited By: |

Updated on: Jan 28, 2023 | 2:42 PM

Share

ನವದೆಹಲಿ: ಜನರ ಗಮನ ಸೆಳೆದಿರುವ ವಂದೇ ಭಾರತ್ ಎಕ್ಸ್​ಪ್ರೆಸ್ ರೈಲಿನ (Vande Bharat Express Train) ಬೋಗಿಯೊಂದರಲ್ಲಿ ತುಂಬಿದ್ದ ಕಸದ ರಾಶಿಯ ಫೋಟೋವೊಂದು (Garbage photo) ಇಂಟರ್ನೆಟ್​ನಲ್ಲಿ ವೈರಲ್ ಆಗುತ್ತಿದೆ. ವಂದೇ ಭಾರತ್ ರೈಲನ್ನು ಭಾರತದ ಪ್ರಗತಿಯ ಸಂಕೇತವೆಂದೇ ಗುರುತಿಸುವ ಜನರಿಗೆ ಈ ಫೋಟೋ ಇರಿಸುಮುರಿಸು ತಂದಿದೆ.

ಐಎಎಸ್ ಅಧಿಕಾರಿ ಅವನೀಶ್ ಶರಣ್ (Awanish Sharan) ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಈ ಫೋಟೋ ಹಂಚಿಕೊಂಡಿದ್ದಾರೆ. ರೈಲಿನ ಬೋಗಿಗಳಲ್ಲಿ ಬಾಟಲಿಗಳು, ಪ್ಲಾಸ್ಟಿಕ್ ಬ್ಯಾಗು ಇತ್ಯಾದಿ ತ್ಯಾಜ್ಯಗಳು ಬಿದ್ದಿರುವುದು ಮತ್ತು ಕಾರ್ಮಿಕರೊಬ್ಬರು ಪೊರಕೆ ಹಿಡಿದು ಇವುಗಳನ್ನು ಗುಡಿಸಲು ನಿಂತಿರುವುದನ್ನು ಈ ಫೋಟೋದಲ್ಲಿ ಕಾಣಬಹುದು. ಐಎಎಸ್ ಅಧಿಕಾರಿ ಈ ಫೋಟೋ ಹಾಕಿ ವೀ ದಿ ಪೀಪಲ್ (ನಾವು ಜನರು) ಎಂದು ಕ್ಯಾಪ್ಚನ್ ಕೊಟ್ಟು ಮಾರ್ಮಿಕವಾಗಿ ಜನರ ಬೇಜಾವ್ದಾರಿತನದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಅವನೀಶ್ ಶರಣ್ ಅವರ ಈ ಪೋಸ್ಟ್​ಗೆ ಹಲವು ಟ್ವೀಟಿಗರು ಸ್ಪಂದಿಸಿ ಬೇಸರ ವ್ಯಕ್ತಪಡಿಸಿದ್ದಾರೆ. ಜನರ ನಡವಳಿಕೆಯನ್ನು ಬಹಳ ಮಂದಿ ಖಂಡಿಸಿದ್ದಾರೆ. ಅಂಥ ಕೆಲ ಪ್ರತಿಕ್ರಿಯೆಗಳು ಇಲ್ಲಿವೆ.

ಸರ್, ಜನರಿಗೆ ತಮ್ಮ ಹಕ್ಕು ಏನೆಂದು ಗೊತ್ತಿದೆಯೇ ಹೊರತು ತಮ್ಮ ಕರ್ತವ್ಯ ಏನೆಂದು ತಿಳಿದಿಲ್ಲ ಎಂದು ಒಬ್ಬರು ಬರೆದರೆ, ನಾವು ಉತ್ತಮ ಸೌಲಭ್ಯ, ಸೌಕರ್ಯ ಬೇಕೆಂದು ಕೇಳುತ್ತೇವೆ. ಆದರೆ, ಅದನ್ನು ಹೇಗೆ ಪಾಲಿಸಬೇಕು, ಸ್ವಚ್ಛವಾಗಿಟ್ಟುಕೊಳ್ಳಬೇಕು ಎಂದು ಗೊತ್ತಿಲ್ಲ ಎಂದು ಮಗದೊಬ್ಬರು ಹತಾಶೆ ಪಟ್ಟಿದ್ದಾರೆ.

ಯಾವುದೇ ರೈಲಿನಲ್ಲೂ ಇದು ಸಾಮಾನ್ಯ ಎಂದು ಇನ್ನೊಬ್ಬರು ಇನ್ನಷ್ಟು ಹತಾಶೆಯಿಂದ ಬರೆದಿದ್ದಾರೆ. ನಮ್ಮ ಜವಾಬ್ದಾರಿ ಅರಿಕೊಳ್ಳದಿದ್ದರೆ ಏನೂ ಬದಲಾಗದು. ದೇಶವನ್ನು ಆರೋಗ್ಯಯುತವಾಗಿ ಹೇಗೆ ಇಟ್ಟುಕೊಳ್ಳಬೇಕೆಂಬುದು ಜನರಿಗೆ ಗೊತ್ತಿರಬೇಕು ಎಂದೊಬ್ಬರು ಕಾಮೆಂಟಿಸಿದ್ದಾರೆ.

ವಂದೇ ಭಾರತ್ ಎಕ್ಸ್​ಪ್ರೆಸ್ ರೈಲಿನಲ್ಲಿ ಕಸದ ರಾಶಿ ಕಾಣಿಸುವ ವಿಚಾರ ಈಗ ಹೊಸದಾಗಿ ಉಳಿದಿಲ್ಲ. ಕೆಲ ದಿನಗಳ ಹಿಂದೆ ಸಿಕಂದರಾಬಾದ್ ವಿಶಾಖಪಟ್ಟಣಂ ಮಾರ್ಗದ ವಂದೇ ಭಾರತ್ ಎಕ್ಸ್​ಪ್ರೆಸ್ ರೈಲಿನ ಬೋಗಿಗಳಲ್ಲಿ ಕಸಗಳ ರಾಶಿಯೇ ತುಂಬಿರುವುದು ಬೆಳಕಿಗೆ ಬಂದಿತ್ತು. ಸಿಬ್ಬಂದಿ ದಿನವೂ ಬೋಗಿಗಳನ್ನು ಸ್ವಚ್ಛಗೊಳಿಸುತ್ತಿದ್ದರೂ ಕಸ ತುಂಬುತ್ತಲೇ ಹೋಗುತ್ತಿದೆ. ರೈಲ್ವೆ ಇಲಾಖೆ ನಿರಂತರವಾಗಿ ಸ್ವಚ್ಛತಾ ಜಾಗೃತಿ ಮೂಡಿಸುವ ಕೆಲಸವನ್ನಂತೂ ಮಾಡುತ್ತಿದೆ. ಆದರೆ, ಎಲ್ಲೆಂದರಲ್ಲಿ ಕಸ ಬಿಸಾಡುವ ಕೆಲ ಜನರ ಚಾಳಿ ಮಾತ್ರ ಬದಲಾದಂತೆ ಕಾಣುತ್ತಿಲ್ಲ.

Follow Us
Web contact
Web contact

TV9 Kannada

Read More
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ
ಮೋದಿ ರೀತಿ ಬೆಂಗಾವಲು ಪಡೆ ವಾಹನ ಕಡಿಮೆ ಮಾಡ್ತಾರಾ ಸಿಎಂ? ಹೇಳಿದ್ದೇನು ನೋಡಿ
ಮೋದಿ ರೀತಿ ಬೆಂಗಾವಲು ಪಡೆ ವಾಹನ ಕಡಿಮೆ ಮಾಡ್ತಾರಾ ಸಿಎಂ? ಹೇಳಿದ್ದೇನು ನೋಡಿ
ಅಜ್ಜನ ಹೆಸರ ಮೇಲೆ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮರ್ಥ್ ಶಾಮನೂರು!
ಅಜ್ಜನ ಹೆಸರ ಮೇಲೆ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮರ್ಥ್ ಶಾಮನೂರು!
ದಿಲೀಪ್​​ರ ಉಳಿಸಿಕೊಳ್ಳಲು ಪತ್ನಿ ಮಾಡಿದ ಪ್ರಯತ್ನಗಳ ವಿವರಿಸಿದ ಆಟೋ ಚಾಲಕ
ದಿಲೀಪ್​​ರ ಉಳಿಸಿಕೊಳ್ಳಲು ಪತ್ನಿ ಮಾಡಿದ ಪ್ರಯತ್ನಗಳ ವಿವರಿಸಿದ ಆಟೋ ಚಾಲಕ
ಇಂದಿರಾ ಗಾಂಧಿ ಬಳಿಕ ಮೋದಿಯೇ ಮಾಸ್​​ ಲೀಡರ್​​ ಎಂದ ಕೆ.ಎನ್​​. ರಾಜಣ್ಣ
ಇಂದಿರಾ ಗಾಂಧಿ ಬಳಿಕ ಮೋದಿಯೇ ಮಾಸ್​​ ಲೀಡರ್​​ ಎಂದ ಕೆ.ಎನ್​​. ರಾಜಣ್ಣ
ದಿಲೀಪ್ ಕೊನೆಯ ಕ್ಷಣಗಳನ್ನು ವಿವರಿಸಿದ ಆಟೋ ಚಾಲಕ
ದಿಲೀಪ್ ಕೊನೆಯ ಕ್ಷಣಗಳನ್ನು ವಿವರಿಸಿದ ಆಟೋ ಚಾಲಕ
ಪೊಲೀಸ್ ಠಾಣೆ ಎದುರೇ ಬೈಕ್ ಬಾಕ್ಸ್​ನಲ್ಲಿದ್ದ ಲಕ್ಷ ರೂ. ಹಣ ದೋಚಿದ ಕಳ್ಳರು!
ಪೊಲೀಸ್ ಠಾಣೆ ಎದುರೇ ಬೈಕ್ ಬಾಕ್ಸ್​ನಲ್ಲಿದ್ದ ಲಕ್ಷ ರೂ. ಹಣ ದೋಚಿದ ಕಳ್ಳರು!
ಚಿಕ್ಕೋಡಿ: ಭಾರಿ ಗಾಳಿ ಮಳೆಗೆ ಹಾರಿಹೋದ 5 ಮನೆಗಳ ಛಾವಣಿ
ಚಿಕ್ಕೋಡಿ: ಭಾರಿ ಗಾಳಿ ಮಳೆಗೆ ಹಾರಿಹೋದ 5 ಮನೆಗಳ ಛಾವಣಿ
ದಿಲೀಪ್ ರಾಜ್​​ ವಿಶೇಷ ನೆನಪು; ಹೇಗಿತ್ತು ನೋಡಿ ಅವರ ಜರ್ನಿ
ದಿಲೀಪ್ ರಾಜ್​​ ವಿಶೇಷ ನೆನಪು; ಹೇಗಿತ್ತು ನೋಡಿ ಅವರ ಜರ್ನಿ