AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Weekly Horoscope: ಜುಲೈ 13 ರಿಂದ 19 ರವರೆಗಿನ ದ್ವಾದಶ ರಾಶಿಗಳ ವಾರ ಭವಿಷ್ಯ ಇಲ್ಲಿದೆ

Weekly Horoscope: ಜುಲೈ 13 ರಿಂದ 19 ರವರೆಗಿನ ದ್ವಾದಶ ರಾಶಿಗಳ ವಾರ ಭವಿಷ್ಯ ಇಲ್ಲಿದೆ

ಅಕ್ಷತಾ ವರ್ಕಾಡಿ
|

Updated on:Jul 12, 2026 | 8:56 AM

Share

ಜುಲೈ 13 ರಿಂದ 19, 2026 ರವರೆಗಿನ ವಾರ ಭವಿಷ್ಯವನ್ನು ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ಅವರು ನೀಡಿದ್ದಾರೆ. ಈ ವಾರದಲ್ಲಿ ಗ್ರಹಗಳ ಸ್ಥಾನ, ದಕ್ಷಿಣಾಯನ ಆರಂಭ, ಮಣ್ಣೆತ್ತಿನ ಅಮಾವಾಸ್ಯೆ, ಹಾಗೂ ಪ್ರತಿಯೊಂದು ರಾಶಿಗಳ ಮೇಲೆ ಆಗುವ ಪರಿಣಾಮಗಳು, ಅದೃಷ್ಟ ಸಂಖ್ಯೆಗಳು ಮತ್ತು ಬಣ್ಣಗಳ ಕುರಿತು ಸಮಗ್ರ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ ಗುರೂಜಿಯವರು ಜುಲೈ 13 ರಿಂದ 19 ರವರೆಗಿನ ದ್ವಾದಶ ರಾಶಿಗಳ ವಾರ ಭವಿಷ್ಯವನ್ನು ನೀಡಿದ್ದಾರೆ. ಈ ವಾರವು ಪರಾಭವ ನಾಮ ಸಂವತ್ಸರ, ಉತ್ತರಾಯಣ, ಜ್ಯೇಷ್ಠ ಮಾಸವನ್ನು ಒಳಗೊಂಡಿದ್ದು, ಇದೇ ವಾರದಲ್ಲಿ ದಕ್ಷಿಣಾಯನ ಮತ್ತು ಆಷಾಢ ಮಾಸವೂ ಪ್ರಾರಂಭವಾಗಲಿದೆ. ಮಣ್ಣೆತ್ತಿನ ಅಮಾವಾಸ್ಯೆ, ಅಮೃತ ಲಕ್ಷ್ಮೀ ವ್ರತ, ಕಟಕ ಸಂಕ್ರಮಣದಂತಹ ಹಲವು ವಿಶೇಷತೆಗಳಿಂದ ಈ ವಾರ ಕೂಡಿರುತ್ತದೆ. ಗ್ರಹಗಳ ಸ್ಥಾನಗಳ ಕುರಿತು ವಿವರಿಸಿರುವ ಗುರೂಜಿ, ಶನಿ ಮೀನ ರಾಶಿಯಲ್ಲಿ, ರಾಹು ಕುಂಭದಲ್ಲಿ, ಕುಜ ವೃಷಭದಲ್ಲಿ, ರವಿ ಮತ್ತು ಬುಧ ಮಿಥುನದಲ್ಲಿ, ಹಾಗೂ ಗುರು ಕಟಕ ರಾಶಿಯಲ್ಲಿ ಸಂಚಾರ ಮಾಡಲಿದ್ದಾರೆ. ರವಿ ಗ್ರಹವು ಜುಲೈ 16 ರಂದು ಕಟಕ ರಾಶಿಯನ್ನು ಪ್ರವೇಶಿಸಲಿದೆ. ಸಿಂಹದಲ್ಲಿ ಕೇತು ಮತ್ತು ಶುಕ್ರ ಸಂಚಾರದಲ್ಲಿರುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ:

 

 

Published on: Jul 12, 2026 08:54 AM

Follow Us