ಎಸ್. ಜಾನಕಿ ಪಾರ್ಥಿವ ಶರೀರ ನೋಡಿ ಬಿಕ್ಕಿ ಬಿಕ್ಕಿ ಅತ್ತ ಗಾಯಕಿ ವಾಣಿ ಹರಿಕೃಷ್ಣ
ಮೈಸೂರಿನಲ್ಲಿ ಎಸ್. ಜಾನಕಿ ಅವರ ಅಂತಿಮ ದರ್ಶನ ಪಡೆದ ಬಳಿಕ ವಾಣಿ ಹರಿಕೃಷ್ಣ ಭಾವುಕರಾದರು. ಹಳೆಯ ದಿನಗಳನ್ನು ನೆನಪಿಸಿಕೊಂಡು ಕಣ್ಣೀರು ಹಾಕಿದರು. ಎಸ್. ಜಾನಕಿ ಅವರ ಜೊತೆಗಿನ ತಮ್ಮ ಒಡನಾಟವನ್ನು ನೆನಪಿಸಿಕೊಂಡು ಬಿಕ್ಕಿ ಬಿಕ್ಕಿ ಅತ್ತರು. ಈ ವೇಳೆ ನಟಿ ತಾರಾ ಸಂತೈಸಿದರು.
ಮೈಸೂರಿನ ಮಹಾರಾಜ ಮೈದಾನದಲ್ಲಿ ಎಸ್. ಜಾನಕಿ ಅವರ ಅಂತಿಮ ದರ್ಶನ ಪಡೆದ ಬಳಿಕ ಗಾಯಕಿ ವಾಣಿ ಹರಿಕೃಷ್ಣ ಅವರು ಭಾವುಕರಾದರು. ಹಳೆಯ ದಿನಗಳನ್ನು ನೆನಪಿಸಿಕೊಂಡು ಕಣ್ಣೀರು ಹಾಕಿದರು. ಎಸ್. ಜಾನಕಿ (S Janaki) ಅವರ ಜೊತೆಗಿನ ತಮ್ಮ ಒಡನಾಟವನ್ನು ನೆನಪಿಸಿಕೊಂಡು ಅವರು ಬಿಕ್ಕಿ ಬಿಕ್ಕಿ ಅತ್ತರು. ಈ ವೇಳೆ ಹಿರಿಯ ನಟಿ ತಾರಾ ಅವರು ಸಂತೈಸಿದರು. ‘ನಾನು ಸಿನಿಮಾದಲ್ಲಿ ಹಾಡುವುದಕ್ಕೂ ಮುನ್ನವೇ ಅವರು ನನ್ನನ್ನು ನೋಡಿದ್ದರು. ಸರಿತಾ ರೀತಿಯೇ ಇದ್ದಾಳೆ ಅಂತ ನನಗೆ ಹೇಳುತ್ತಿದ್ದರು. ನನಗೆ ಅವರು ಆಪ್ತವಾಗಿದ್ದರು. ಇಂದು ಅವರ ಪಾದಗಳನ್ನು ನೋಡಲು ನನಗೆ ಬಹಳ ಕಷ್ಟ ಆಯಿತು. ಆ ಪಾದಗಳಿಗೆ ನಾನು ಬಹಳ ಸಲ ನಮಸ್ಕಾರ ಮಾಡಿದ್ದೆ. ಅವರ ನೆನಪುಗಳು ಸದಾ ನನ್ನ ಜೊತೆ ಇರುತ್ತವೆ’ ಎಂದು ವಾಣಿ ಹರಿಕೃಷ್ಣ ಅವರು ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Follow Us

