AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಿರಿಯ ಗಾಯಕಿ ಎಸ್​​. ಜಾನಕಿ ನಿಧನ: ಅಜ್ಜಿ ನೆನೆದು ಮೊಮ್ಮಗಳು ಅಪ್ಸರಾ ಭಾವುಕ

ಹಿರಿಯ ಗಾಯಕಿ ಎಸ್​​. ಜಾನಕಿ ನಿಧನ: ಅಜ್ಜಿ ನೆನೆದು ಮೊಮ್ಮಗಳು ಅಪ್ಸರಾ ಭಾವುಕ

ರಾಮ್​, ಮೈಸೂರು
| Edited By: |

Updated on:Jul 12, 2026 | 8:00 AM

Share

S Janaki Passes Away: ಮೈಸೂರಿನಲ್ಲಿ ತಮ್ಮ ಅಜ್ಜಿ ಎಸ್. ಜಾನಕಿ ಅವರ ಪಾರ್ಥಿವ ಶರೀರವನ್ನು ನೋಡಿದ ನಂತರ, ಅವರ ಮೊಮ್ಮಗಳು ಅಪ್ಸರಾ ಮಾಧ್ಯಮಗಳೊಂದಿಗೆ ಭಾವುಕರಾಗಿ ಮಾತನಾಡಿದ್ದಾರೆ. ಇದು ತಮ್ಮ ಕುಟುಂಬಕ್ಕೆ ಮಾತ್ರವಲ್ಲದೆ ಇಡೀ ದೇಶಕ್ಕೆ ದೊಡ್ಡ ನಷ್ಟ ಎಂದು ಅಪ್ಸರಾ ಹೇಳಿದ್ದಾರೆ. ಕರ್ನಾಟಕದ ಜನತೆ ಅಜ್ಜಿಗೆ ಅಪಾರ ಪ್ರೀತಿ ತೋರಿದ್ದಾರೆ ಎಂಬುದನ್ನು ಈ ವೇಳೆ ಸ್ಮರಿಸಿದ್ದಾರೆ.

ಮೈಸೂರು, ಜುಲೈ 12: ಹಿರಿಯ ಗಾಯಕಿ ಎಸ್​.ಜಾನಕಿ(88) ವಿಧಿವಶ ಹಿನ್ನೆಲೆ ಮೈಸೂರಿನಲ್ಲಿ ಅವರ ಮೊಮ್ಮಗಳು ಅಪ್ಸರಾ, ಅಜ್ಜಿಯ ಕುರಿತು ಭಾವುಕವಾಗಿ ಮಾತನಾಡಿದ್ದಾರೆ. ಅನಾರೋಗ್ಯ ಸಮಸ್ಯೆಯಿಂದ ಅಜ್ಜಿ ನಿಧನರಾಗಿದ್ದು, ಘಟನೆ ದುಃಖ ಉಂಟುಮಾಡಿದೆ. ಅವರು ತಮ್ಮ ಗಾಯನದ ಮೂಲಕ ಅಪಾರ ಜನರ ಮನ ಗೆದ್ದಿದ್ದರು. ದಕ್ಷಿಣ ಭಾರತದ ಚಿತ್ರರಂಗಕ್ಕೆ ಅಪಾರ ಕೊಡುಗೆ ನೀಡಿದ್ದ ಅವರಿಗೆ ಮೈಸೂರು ಅಂದರೆ ತುಂಬಾ ಇಷ್ಟ, ಅವರು ಇಲ್ಲೇ ಇದ್ದರು. ಕರ್ನಾಟಕದ ಜನತೆ ಅಜ್ಜಿಗೆ ಅಪಾರ ಪ್ರೀತಿ ತೋರಿದ್ದಾರೆ. ಅಜ್ಜಿಗೆ ಸರ್ಕಾರಿ ಗೌರವ ಸಲ್ಲಿಸಲು ಕರ್ನಾಟಕ ಸರ್ಕಾರ ನಿರ್ಧರಿಸಿದ್ದು, ನಮ್ಮ ಕುಟುಂಬದ ಪರವಾಗಿ ಧನ್ಯವಾದ ಸಲ್ಲಿಸುತ್ತೇನೆ ಎಂದವರು ಹೇಳಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Published on: Jul 12, 2026 08:00 AM

Follow Us