AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎಸ್. ಜಾನಕಿ ಅಂತಿಮ ದರ್ಶನ ಪಡೆದು ಕಣ್ಣೀರು ಹಾಕಿದ ಅಭಿಮಾನಿಗಳು

ಎಸ್. ಜಾನಕಿ ಅಂತಿಮ ದರ್ಶನ ಪಡೆದು ಕಣ್ಣೀರು ಹಾಕಿದ ಅಭಿಮಾನಿಗಳು

ಮದನ್​ ಕುಮಾರ್​
|

Updated on: Jul 12, 2026 | 10:31 AM

Share

ಮುಖ್ಯಾಂಶಗಳು

  • ಭಾರತೀಯ ಚಿತ್ರರಂಗದ ಲೆಜೆಂಡರಿ ಗಾಯಕಿ ಎಸ್. ಜಾನಕಿ ನಿಧನ.
  • ಅವರ ಆಸೆಯಂತೆ ಮೈಸೂರಿನಲ್ಲಿಯೇ ನೆರವೇರಲಿದೆ ಅಂತ್ಯಕ್ರಿಯೆ.
  • ಮಹಾರಾಜ ಮೈದಾನದಲ್ಲಿ ಮಧ್ಯಾಹ್ನ 3 ಗಂಟೆ ತನಕ ಅಂತಿಮ ದರ್ಶನ.

ಲೆಜೆಂಡರಿ ಸಿಂಗರ್ ಎಸ್. ಜಾನಕಿ ನಿಧನರಾಗಿದ್ದು, ಮೈಸೂರಿನಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಅಭಿಮಾನಿಗಳು, ಸೆಲೆಬ್ರಿಟಿಗಳು, ರಾಜಕೀಯ ಗಣ್ಯರು ಆಗಮಿಸಿ ಅಂತಿಮ ನಮನ ಸಲ್ಲಿಸಿದ್ದಾರೆ. ಜಾನಕಿ ಅವರಿಗೆ ಇರುವ ಅಭಿಮಾನಿಗಳ ಬಳಗ ದೊಡ್ಡದು. ಅಂತಿಮ ದರ್ಶನ ಪಡೆಯಲು ಬಂದ ಜನರು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.

ಲೆಜೆಂಡರಿ ಗಾಯಕಿ ಎಸ್. ಜಾನಕಿ (S Janaki) ಅವರು ನಿಧನರಾಗಿದ್ದು, ಮೈಸೂರಿನಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಅಪಾರ ಸಂಖ್ಯೆಯ ಅಭಿಮಾನಿಗಳು, ಸೆಲೆಬ್ರಿಟಿಗಳು, ರಾಜಕೀಯ ಗಣ್ಯರು ಬಂದು ಅಂತಿಮ ನಮನ ಸಲ್ಲಿಸಿದ್ದಾರೆ. ಜಾನಕಿ ಅವರಿಗೆ ಇರುವ ಅಭಿಮಾನಿಗಳ ಬಳಗ ದೊಡ್ಡದು. ಅಂತಿಮ ದರ್ಶನ ಪಡೆಯಲು ಬಂದ ಅಭಿಮಾನಿಗಳು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಜಾನಕಿ ಅವರಿಗೆ ಮೈಸೂರಿನ ಜೊತೆ ವಿಶೇಷ ನಂಟು ಇತ್ತು. ಅವರನ್ನು ಸ್ಮರಿಸಿಕೊಂಡು ಅಭಿಮಾನಿಗಳು ಭಾವುಕರಾಗಿದ್ದಾರೆ. ಮೈಸೂರು ಎಂದರೆ ಎಸ್. ಜಾನಕಿ ಅವರಿಗೆ ಪಂಚಪ್ರಾಣ ಆಗಿತ್ತು. ಕೊನೇ ದಿನಗಳನ್ನು ಅವರು ಮೈಸೂರಿನಲ್ಲೇ ಕಳೆದರು. ಅವರ ಆಸೆಯಂತೆ ಮೈಸೂರಿನಲ್ಲೇ ಎಸ್. ಜಾನಕಿ ಅವರ ಅಂತ್ಯಕ್ರಿಯೆ ಮಾಡಲಾಗುತ್ತಿದೆ. ಮೈಸೂರಿನ ಮಹಾರಾಜ ಮೈದಾನದಲ್ಲಿ ಮಧ್ಯಾಹ್ನ 3 ಗಂಟೆ ತನಕ ಅಂತಿಮ ದರ್ಶನಕ್ಕೆ ಅವಕಾಶ ಇರಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us