AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs ENG: 64 ಎಸೆತ 131 ರನ್..! ಭಾರತದ ಬೌಲರ್​ಗಳನ್ನು ಬೆಂಡೆತ್ತಿದ ಬಟ್ಲರ್

Jos Buttler Century vs India T20: ಭಾರತ ವಿರುದ್ಧದ ಅಂತಿಮ ಟಿ20 ಪಂದ್ಯದಲ್ಲಿ ಇಂಗ್ಲೆಂಡ್‌ನ ಜೋಸ್ ಬಟ್ಲರ್ ಸ್ಫೋಟಕ ಶತಕ ಬಾರಿಸುವ ಮೂಲಕ ರನ್ ಬರ ನೀಗಿಸಿಕೊಂಡರು. 64 ಎಸೆತಗಳಲ್ಲಿ 131 ರನ್ ಗಳಿಸಿ, 5 ವರ್ಷಗಳ ನಂತರ ಅಂತಾರಾಷ್ಟ್ರೀಯ ಟಿ20 ಶತಕದ ಬರವನ್ನು ನೀಗಿಸಿಕೊಂಡರು. ಹ್ಯಾರಿ ಬ್ರೂಕ್ ಜೊತೆ 233 ರನ್‌ಗಳ ದಾಖಲೆ ಜೊತೆಯಾಟ ನಡೆಸಿ, ಇಂಗ್ಲೆಂಡ್ 257 ರನ್ ಗಳಿಸಲು ನೆರವಾದರು. ಇದು ಟಿ20 ಕ್ರಿಕೆಟ್‌ನಲ್ಲಿ ಹೊಸ ಇತಿಹಾಸ ಸೃಷ್ಟಿಸಿತು.

ಪೃಥ್ವಿಶಂಕರ
|

Updated on: Jul 11, 2026 | 10:48 PM

Share
ರನ್ ಬರ ಎದುರಿಸುತ್ತಿದ್ದ ಇಂಗ್ಲೆಂಡ್‌ನ ಅನುಭವಿ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಜೋಸ್ ಬಟ್ಲರ್ ಕೂಡ ಟೀಂ ಇಂಡಿಯಾ ವಿರುದ್ಧದ ಕೊನೆಯ ಟಿ20 ಪಂದ್ಯದಲ್ಲಿ ಲಯ ಕಂಡುಕೊಂಡಿದ್ದಾರೆ. ಟೀಂ ಇಂಡಿಯಾ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದ ಬಟ್ಲರ್ ಸುಮಾರು 5 ವರ್ಷಗಳ ದೀರ್ಘ ಕಾಯುವಿಕೆಯ ನಂತರ ಅಂತರರಾಷ್ಟ್ರೀಯ ಟಿ20 ಪಂದ್ಯದಲ್ಲಿ ಶತಕ ಬಾರಿಸಿದರು.

1 / 6
ಸೌತಾಂಪ್ಟನ್‌ನ ಯುಟಿಲಿಟಾ ಬೌಲ್ ಕ್ರೀಡಾಂಗಣದಲ್ಲಿ ನಡೆದ ಸರಣಿಯ ಅಂತಿಮ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ಪರ ಜೋಸ್ ಬಟ್ಲರ್ ಸ್ಫೋಟಕ ಶತಕ ಬಾರಿಸಿದರು. ಈ ಪಂದ್ಯಕ್ಕೂ ಮೊದಲು ಬಟ್ಲರ್ ರನ್ ಬರ ಎದುರಿಸುತ್ತಿದ್ದರು,  ಆಡಿದ ಮೂರು ಇನ್ನಿಂಗ್ಸ್‌ಗಳಲ್ಲಿ ಕೇವಲ 44 ರನ್ ಗಳಿಸಿದರು. ಆದರೆ ಬಟ್ಲರ್ ತಮ್ಮ 160 ನೇ ಅಂತರರಾಷ್ಟ್ರೀಯ  ಟಿ20  ಪಂದ್ಯದಲ್ಲಿ ಶತಕ ಬಾರಿಸುವ ಮೂಲಕ ಫಾರ್ಮ್​ ಕಂಡುಕೊಂಡರು.

2 / 6
ಈ ಪಂದ್ಯದಲ್ಲಿ ಇಂಗ್ಲೆಂಡ್‌ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಆರಂಭಿಕ ಫಿಲ್ ಸಾಲ್ಟ್ ಬೇಗನೆ ಔಟಾದರು. ಆದರೆ ಬಟ್ಲರ್​ಗೆ ಈ ವಿಕೆಟ್ ಪತನ ಯಾವುದೇ ಪರಿಣಾಮ ಬೀರಲಿಲ್ಲ. ಹೀಗಾಗಿ ಬಟ್ಲರ್ ಕೇವಲ 34 ಎಸೆತಗಳಲ್ಲಿ ಅರ್ಧಶತಕ ಬಾರಿಸಿದರೆ, ಮುಂದಿನ 17 ಎಸೆತಗಳಲ್ಲಿ ಉಳಿದ 50 ರನ್​ಗಳನ್ನು ಕಲೆಹಾಕಿ ತಮ್ಮ ಅಂತರರಾಷ್ಟ್ರೀಯ ಟಿ20 ವೃತ್ತಿಜೀವನದ ಎರಡನೇ ಶತಕವನ್ನು ಪೂರೈಸಿದರು.

3 / 6
ಬಟ್ಲರ್ 51 ಎಸೆತಗಳಲ್ಲಿಯೇ ತಮ್ಮ ಶತಕ ಪೂರೈಸಿದರು. 16ನೇ ಓವರ್‌ನಲ್ಲಿ ಅಕ್ಷರ್ ಪಟೇಲ್ ಬೌಲಿಂಗ್‌ನಲ್ಲಿ ಸಿಕ್ಸರ್ ಬಾರಿಸುವ ಮೂಲಕ ಈ ಮೈಲಿಗಲ್ಲು ದಾಟಿದ ಬಟ್ಲರ್, ಒಂಬತ್ತು ಬೌಂಡರಿ ಮತ್ತು ಆರು ಸಿಕ್ಸರ್‌ಗಳ ನೆರವಿನಿಂದ ತಮ್ಮ ಶತಕ ಪೂರೈಸಿದರು. ಇದು ಅವರ ಎರಡನೇ ಶತಕವಾಗಿದ್ದು, ಸುಮಾರು ಐದು ವರ್ಷಗಳಲ್ಲಿ ಅವರ ಮೊದಲ ಶತಕವಾಗಿದೆ. ಬಟ್ಲರ್ ಅವರ ಹಿಂದಿನ ಶತಕ ನವೆಂಬರ್ 2021 ರಲ್ಲಿ ನಡೆದ ಟಿ20 ವಿಶ್ವಕಪ್‌ನಲ್ಲಿ ಶ್ರೀಲಂಕಾ ವಿರುದ್ಧ ಬಂದಿತು.

4 / 6
ಶತಕದ ನಂತರವೂ ತಮ್ಮ ಸ್ಫೋಟಕ ಬ್ಯಾಟಿಂಗ್ ಮುಂದುವರೆಸಿದ ಬಟ್ಲರ್ ಅಂತಿಮವಾಗಿ 19 ನೇ ಓವರ್‌ನಲ್ಲಿ ಔಟಾದರು. ಕೇವಲ 64 ಎಸೆತಗಳಲ್ಲಿ ಎಂಟು ಸಿಕ್ಸರ್‌ಗಳು ಮತ್ತು 12 ಬೌಂಡರಿಗಳನ್ನು ಒಳಗೊಂಡಂತೆ 131 ರನ್‌ಗಳ ಇನ್ನಿಂಗ್ಸ್ ಆಡಿದರು. ಇದಲ್ಲದೆ, ಬಟ್ಲರ್, ನಾಯಕ ಹ್ಯಾರಿ ಬ್ರೂಕ್ ಅವರೊಂದಿಗೆ ಎರಡನೇ ವಿಕೆಟ್‌ಗೆ 233 ರನ್‌ಗಳ ಜೊತೆಯಾಟವನ್ನಾಡಿದರು.

5 / 6
ಇದು ಅಂತರರಾಷ್ಟ್ರೀಯ ಟಿ20 ಪಂದ್ಯಗಳಲ್ಲಿ (ಪೂರ್ಣ ಸದಸ್ಯ ರಾಷ್ಟ್ರಗಳಲ್ಲಿ) ಯಾವುದೇ ವಿಕೆಟ್‌ಗೆ ಅತ್ಯಧಿಕ ಪಾಲುದಾರಿಕೆಯಾಗಿದೆ. ಇದರ ಜೊತೆಗೆ ಈ ಹಿಂದೆ ಈ ದಾಖಲೆ ನಿರ್ಮಿಸಿದ್ದ ಭಾರತದ ತಿಲಕ್ ವರ್ಮಾ ಮತ್ತು ಸಂಜು ಸ್ಯಾಮ್ಸನ್ (210 ರನ್‌ಗಳು) ಅವರ ದಾಖಲೆಯನ್ನು ಮುರಿದರು. ಇವರಿಬ್ಬರ ಜೊತೆಯಾಟದಿಂದಾಗಿ ಇಂಗ್ಲೆಂಡ್ 257 ರನ್‌ಗಳ ದಾಖಲೆಯ ಮೊತ್ತವನ್ನು ಕಲೆಹಾಕಿತು.

6 / 6
ಪೃಥ್ವಿಶಂಕರ
ಪೃಥ್ವಿಶಂಕರ

ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ, ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ನೆಲೆ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ನಾನು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ನನ್ನ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ನನ್ನ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More
Follow Us
ಸೌಜನ್ಯ ಪ್ರಕರಣ ಮರು ತನಿಖೆ: SITಯಿಂದ ಕೈಬಿಡುವಂತೆ ಸರ್ಕಾರಕ್ಕೆ AASP ಪತ್ರ

ಚಾಮರಾಜನಗರದಲ್ಲಿ ತಡರಾತ್ರಿ ಸುರಿದ ಭಾರಿ ಮಳೆಗೆ ಭಾಗಶಃ ಕೊಚ್ಚಿ ಹೋದ ಸೇತುವೆ!

ಭೂಸುಧಾರಣಾ ಕಾಯ್ದೆ ತಿದ್ದುಪಡಿ ವಾಪಸ್​ಗೆ ಆಗ್ರಹಿಸಿ ರಾಹುಲ್​ಗೆ ಪತ್ರ

ಆಟೋದಲ್ಲಿ ಸೋಮನಾಥಪುರ ದೇವಾಲಯಕ್ಕೆ ಬಂದ ರಜನಿಕಾಂತ್

ಪೆಟ್ರೋಲ್ ಬಂಕ್‌ನಲ್ಲಿ ನಿಲ್ಲಿಸಿದ್ದ ಖಾಸಗಿ ಬಸ್ ಕಳವು

ನಕಲಿ ಔಷಧ ದಂಧೆಯ ಮತ್ತೊಬ್ಬ ಆರೋಪಿ ಬಾಲಸುಬ್ರಮಣಿಯನ್ ಚೆನ್ನೈನಲ್ಲಿ ಬಂಧನ

ಟಾಸ್ಕ್​ ವಿಷಯಕ್ಕೆ ತಮ್ಮ ತಂಡದ ವೈರತ್ವ ಕಟ್ಟಿಕೊಂಡ ಗಾನವಿ; ಸುಸ್ತು?

ಬೆಂಗಳೂರಿನಲ್ಲಿ ಭಾರಿ ಮಳೆ, ಕೆಆರ್ ಮಾರುಕಟ್ಟೆಯಲ್ಲಿ ಭಾರಿ ಅವಾಂತರ

ಮಳೆಗೆ ಕೆಸರು ಗದ್ದೆಯಂತಾದ ಶಿಡ್ಲಘಟ್ಟದ ರಸ್ತೆ: ಜನರ ಪರದಾಟ

ಲಷ್ಕರ್ ಟಾಪ್ ಕಮಾಂಡರ್ ಫೌಜಿ ಮೂಸಾ ಎನ್‌ಕೌಂಟರ್‌ನಲ್ಲಿ ಹತ