AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನೀರೆಂದು ಭಾವಿಸಿ ಆ್ಯಸಿಡ್ ಕುಡಿದ ಮಹಿಳೆ, ಆಭರಣದಂಗಡಿಯಲ್ಲಿ ನಡೆದ ಘಟನೆ

ಹಾಪುರ್‌ನ ಆಭರಣ ಅಂಗಡಿಯಲ್ಲಿ ನೀರು ಕೇಳಿದ ಮಹಿಳೆಯೊಬ್ಬರು, ತಪ್ಪಾಗಿ ಆ್ಯಸಿಡ್ ಕುಡಿದು ಅಸ್ವಸ್ಥರಾಗಿದ್ದಾರೆ. ಬಾಯಾರಿಕೆಗೆಂದು ಸಿಪ್ ಕುಡಿಯುತ್ತಿದ್ದಂತೆ ತೀವ್ರ ನೋವುಂಟಾಗಿ ಬಾಯಿ, ಗಂಟಲು ಸುಟ್ಟಿದೆ. ಪ್ರಜ್ಞೆ ತಪ್ಪಿದ ಮಹಿಳೆಗೆ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಪೊಲೀಸರು ಸಿಹಿ ತಿನಿಸು ಅಂಗಡಿ ಮಾಲೀಕನನ್ನು ವಶಕ್ಕೆ ಪಡೆದು, ಘಟನೆ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

ನೀರೆಂದು ಭಾವಿಸಿ ಆ್ಯಸಿಡ್ ಕುಡಿದ ಮಹಿಳೆ, ಆಭರಣದಂಗಡಿಯಲ್ಲಿ ನಡೆದ ಘಟನೆ
ನೀರು
ನಯನಾ ರಾಜೀವ್
|

Updated on: Jul 12, 2026 | 10:34 AM

Share

ಹಾಪುರ್, ಜುಲೈ 12: ಆಭರಣ(Jewellery) ಖರೀದಿಗೆಂದು ಜ್ಯುವೆಲ್ಲರಿ ಶಾಪ್​ಗೆ ಬಂದಿದ್ದ ಮಹಿಳೆ ಬಾಯಾರಿಕೆ ಎಂದು ಬಾಟಲಿಯನ್ನು ತೆಗೆದು ಬಾಯಿಗಿಟ್ಟರೆ ಅದರಲ್ಲಿ ಇದ್ದಿದ್ದು ನೀರಲ್ಲ, ಅದು ಆ್ಯಸಿಡ್ ಆಗಿತ್ತು. ಈ ಘಟನೆ ಉತ್ತರ ಪ್ರದೇಶದ ಹಾಪುರ್ ಜಿಲ್ಲೆಯಲ್ಲಿ ನಡೆದಿದೆ. ಅರ್ಜುನ್ ನಗರ ಪ್ರದೇಶದ ನಿವಾಸಿಯಾದ ಮಹಿಳೆಯೊಬ್ಬರು ಶುಕ್ರವಾರ ಸಂಜೆ ಒಡವೆಗಳನ್ನು ಖರೀದಿಸಲು ಸ್ಥಳೀಯ ಆಭರಣದ ಅಂಗಡಿಯೊಂದಕ್ಕೆ ಹೋಗಿದ್ದರು. ಒಡವೆಗಳನ್ನು ನೋಡುತ್ತಿದ್ದಾಗ ಆಕೆಗೆ ತೀವ್ರ ಬಾಯಾರಿಕೆಯಾಗಿ ಗಂಟಲು ಒಣಗಿದಂತಾಗಿದೆ. ತಕ್ಷಣ ಆಕೆ ಅಂಗಡಿಯವರ ಬಳಿ ಕುಡಿಯಲು ನೀರು ಕೇಳಿದ್ದಾರೆ.

ಗ್ರಾಹಕರಿಗೆ ನೀರು ತರಲು ಆಭರಣ ಅಂಗಡಿಯ ಸಿಬ್ಬಂದಿ ಹತ್ತಿರದಲ್ಲೇ ಇದ್ದ ಸಿಹಿ ತಿನಿಸುಗಳ ಅಂಗಡಿಗೆ ಓಡಿದ್ದಾರೆ. ಅಲ್ಲಿನ ಅಂಗಡಿಯವರು ಫ್ರಿಡ್ಜ್‌ನಲ್ಲಿದ್ದ ಸಂಪೂರ್ಣ ಸೀಲ್ ಆಗಿದ್ದ ನೀರಿನ ಬಾಟಲಿಯೊಂದನ್ನು ಕೊಟ್ಟಿದ್ದಾರೆ. ನೌಕರ ಅದನ್ನು ತಂದು ಜ್ಯೂವೆಲ್ಲರಿ ಶಾಪ್‌ನಲ್ಲಿದ್ದ ಮಹಿಳೆಗೆ ಕೊಟ್ಟಿದ್ದಾರೆ.

ಒಂದು ಸಿಪ್ ಕುಡಿಯುತ್ತಿದ್ದಂತೆ ನರಕಯಾತನೆ ಬಾಟಲಿಯ ಒಳಗೆ ಏನಿದೆ ಎಂಬ ಸಣ್ಣ ಅರಿವೂ ಇಲ್ಲದ ಆ ಮಹಿಳೆ, ಬಾಟಲಿಯ ಸೀಲ್ ಒಡೆದು ತಕ್ಷಣ ಒಂದು ಸಿಪ್ ಕುಡಿದಿದ್ದಾರೆ. ಆ್ಯಸಿಡ್ ಗಂಟಲಿಗೆ ಇಳಿಯುತ್ತಿದ್ದಂತೆ ತೀವ್ರ ಉರಿ ಹಾಗೂ ನೋವಿನಿಂದ ಕಿರುಚಾಡಿದ ಮಹಿಳೆ, ತಕ್ಷಣವೇ ಅಂಗಡಿಯಿಂದ ಹೊರಗೆ ಓಡಿಬಂದು ಅದನ್ನು ಉಗುಳಿದ್ದಾರೆ.

ಆಸಿಡ್‌ನ ತೀವ್ರತೆಗೆ ಆಕೆಯ ಬಾಯಿ ಮತ್ತು ಗಂಟಲಿನ ಭಾಗ ಸಂಪೂರ್ಣ ಸುಟ್ಟುಹೋಗಿದ್ದು, ಸ್ಥಳದಲ್ಲೇ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ. ತಕ್ಷಣವೇ ಆಕೆಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಪರಿಸ್ಥಿತಿ ತೀರಾ ಗಂಭೀರವಾಗಿದ್ದರಿಂದ ಹೆಚ್ಚಿನ ಚಿಕಿತ್ಸೆಗಾಗಿ ಸದ್ಯ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಮತ್ತಷ್ಟು ಓದಿ: CET ಪರೀಕ್ಷೆ: ಆಭರಣ ಧರಿಸಿ ಬಂದಿದ್ದ ವಿದ್ಯಾರ್ಥಿಗಳಿಗೆ ಶಾಕ್​​ ಕೊಟ್ಟ ಸಿಬ್ಬಂದಿ

ತನಿಖೆ ಚುರುಕು: ಪೊಲೀಸರ ವಶದಲ್ಲಿ ಅಂಗಡಿ ಮಾಲೀಕ ಘಟನೆಯ ನಂತರ ಕಾರ್ಯಪ್ರವೃತ್ತರಾಗಿರುವ ಹಾಪುರ್ ಪೊಲೀಸರು ಸಿಹಿ ತಿನಿಸುಗಳ ಅಂಗಡಿಯ ಮಾಲೀಕನನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಆತನ ಅಂಗಡಿಯಿಂದ ಕೆಲವು ಆ್ಯಸಿಡ್ ಬಾಟಲಿಗಳನ್ನೂ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಆದರೆ, ಈ ಬಗ್ಗೆ ಪ್ರತಿಕ್ರಿಯಿಸಿರುವ ಆಭರಣ ಅಂಗಡಿಯ ಮಾಲೀಕ ಡೇನು, ‘‘ನಮಗೆ ತಿಳಿದ ಮಟ್ಟಿಗೆ ಆ ಬಾಟಲಿ ಸಂಪೂರ್ಣವಾಗಿ ಸೀಲ್ ಆಗಿತ್ತು. ಸ್ವೀಟ್ ಸ್ಟಾಲ್‌ನವನು ಫ್ರಿಡ್ಜ್‌ನಿಂದ ಹೇಗೆ ತೆಗೆದುಕೊಟ್ಟನೋ, ನಾವು ಹಾಗೆಯೇ ತಂದು ಗ್ರಾಹಕರಿಗೆ ನೀಡಿದ್ದೆವು” ಎಂದು ಹೇಳಿದ್ದಾನೆ. ಫ್ರಿಡ್ಜ್‌ನಲ್ಲಿ ನೀರಿನ ಬಾಟಲಿಗಳ ಪಕ್ಕದಲ್ಲೇ ಆಸಿಡ್ ಬಾಟಲಿಯನ್ನು ಇಡಲಾಗಿತ್ತೇ ಅಥವಾ ಕಂಪನಿಯಿಂದಲೇ ಪ್ಯಾಕಿಂಗ್‌ನಲ್ಲಿ ಅದಲುಬದಲಾಗಿದೆಯೇ ಎಂಬ ಕೋನದಲ್ಲಿ ಸದ್ಯ ಪೊಲೀಸರು ಸಿಸಿಟಿವಿ ದೃಶ್ಯಗಳನ್ನು ಆಧರಿಸಿ ತನಿಖೆ ನಡೆಸುತ್ತಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ ಬಾಟಲಿಗಳನ್ನು ನೋಡದೆ ಕಣ್ಣು ಮುಚ್ಚಿ ಇಂತಹ ವಸ್ತುಗಳನ್ನು ಬಳಸುವ ಮುನ್ನ ಎಚ್ಚರಿಕೆ ಅಗತ್ಯ ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
ನಯನಾ ರಾಜೀವ್
ನಯನಾ ರಾಜೀವ್

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
ಬಾಗಲಕೋಟೆ ಜೋಡೆತ್ತುಗಳ ಕಮಾಲ್‌.. 10 ಗಂಟೆಗಳಲ್ಲಿ 20 ಎಕರೆ ಬಿತ್ತನೆ!
ಬಾಗಲಕೋಟೆ ಜೋಡೆತ್ತುಗಳ ಕಮಾಲ್‌.. 10 ಗಂಟೆಗಳಲ್ಲಿ 20 ಎಕರೆ ಬಿತ್ತನೆ!
ಮಹಿಳೆಯ ಸಾಲು ಸಾಲು ಕಷ್ಟ ಕೇಳಿ ಕಣ್ಣೀರಿಟ್ಟ ಸಂಸದ ಶ್ರೇಯಸ್ ಪಟೇಲ್
ಮಹಿಳೆಯ ಸಾಲು ಸಾಲು ಕಷ್ಟ ಕೇಳಿ ಕಣ್ಣೀರಿಟ್ಟ ಸಂಸದ ಶ್ರೇಯಸ್ ಪಟೇಲ್
ಇಂಡಸ್ಟ್ರಿಗೆ ಅಪ್ಪ ಆಗಿ ಬಿಟ್ಟಿದ್ದಾರಂಂತೆ ರಂಗಾಯಣ ರಘು: ವಿಡಿಯೋ ನೋಡಿ
ಇಂಡಸ್ಟ್ರಿಗೆ ಅಪ್ಪ ಆಗಿ ಬಿಟ್ಟಿದ್ದಾರಂಂತೆ ರಂಗಾಯಣ ರಘು: ವಿಡಿಯೋ ನೋಡಿ
ಹೆಣ್ಮಕ್ಕಳು ಬೇಕು ಸರ್.. ಸಿಎಂ ಮುಂದೆ ಅಳಲು ತೋಡಿಕೊಂಡ ಯುವಕ
ಹೆಣ್ಮಕ್ಕಳು ಬೇಕು ಸರ್.. ಸಿಎಂ ಮುಂದೆ ಅಳಲು ತೋಡಿಕೊಂಡ ಯುವಕ
ನಟಿಸೋದು ಇಷ್ಟ, ಡ್ಯಾನ್ಸ್ ಮಾಡೋದು ಕಷ್ಟ: ಹಿರಿಯ ನಟ ಅನಂತ್ ನಾಗ್
ನಟಿಸೋದು ಇಷ್ಟ, ಡ್ಯಾನ್ಸ್ ಮಾಡೋದು ಕಷ್ಟ: ಹಿರಿಯ ನಟ ಅನಂತ್ ನಾಗ್
ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿದ್ದ ದಿನಗಳ ನೆನಪಿಸಿಕೊಂಡ ಅನಂತ್
ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿದ್ದ ದಿನಗಳ ನೆನಪಿಸಿಕೊಂಡ ಅನಂತ್
‘ದಾದಾ ಸಾಹೇಬ್ ಫಾಲ್ಕೆ’ ಘೋಷಣೆಯಾದ ದಿನ ಮಾಡಿದ್ದೇನು? ಅನಂತ್ ನಾಗ್ ಉತ್ತರ
‘ದಾದಾ ಸಾಹೇಬ್ ಫಾಲ್ಕೆ’ ಘೋಷಣೆಯಾದ ದಿನ ಮಾಡಿದ್ದೇನು? ಅನಂತ್ ನಾಗ್ ಉತ್ತರ
ರಂಗಭೂಮಿ ಹಾಗೂ ಬದುಕಿನ ಪಯಣ ಬಿಚ್ಚಿಟ್ಟ ಅನಂತ್ ನಾಗ್
ರಂಗಭೂಮಿ ಹಾಗೂ ಬದುಕಿನ ಪಯಣ ಬಿಚ್ಚಿಟ್ಟ ಅನಂತ್ ನಾಗ್
ಬದಲಾಗುತ್ತಿರುವ ಇಂದಿನ ರಾಜಕೀಯ ವ್ಯವಸ್ಥೆ ಬಗ್ಗೆ ಅನಂತ್ ನಾಗ್ ನೇರ ಮಾತು
ಬದಲಾಗುತ್ತಿರುವ ಇಂದಿನ ರಾಜಕೀಯ ವ್ಯವಸ್ಥೆ ಬಗ್ಗೆ ಅನಂತ್ ನಾಗ್ ನೇರ ಮಾತು
ಸಿಗಂದೂರು ರಸ್ತೆಯಲ್ಲಿ ನಿಗೂಢ ಪೂಜೆ, ಮಾಟಮಂತ್ರದಿಂದ ಬೆಚ್ಚಿಬಿದ್ದ ಜನ
ಸಿಗಂದೂರು ರಸ್ತೆಯಲ್ಲಿ ನಿಗೂಢ ಪೂಜೆ, ಮಾಟಮಂತ್ರದಿಂದ ಬೆಚ್ಚಿಬಿದ್ದ ಜನ