Sign In

By signing in or creating an account, you agree with Associated Broadcasting Company's Terms & Conditions and Privacy Policy.

Blackbucks Death: ಸೇತುವೆಯಿಂದ ಜಿಗಿಯಲು ಹೋಗಿ 12 ಕೃಷ್ಣಮೃಗಗಳ ದಾರುಣ ಸಾವು

ಮಹಾರಾಷ್ಟ್ರದ ಸೋಲಾಪುರ್ ಜಿಲ್ಲೆಯಲ್ಲಿ ಗುಡ್ಡದ ಮಧ್ಯೆ ಹೊಸದಾಗಿ ನಿರ್ಮಿಸಿದ ಹೆದ್ದಾರಿ ಸೇತುವೆ ಬಳಿ ಹಿಂಡಾಗಿ ಬರುತ್ತಿದ್ದ ಕೃಷ್ಣಮೃಗಗಳು ರಸ್ತೆ ದಾಟುವ ಪ್ರಯತ್ನದಲ್ಲಿ 30 ಅಡಿ ಕೆಳಗೆ ಬಿದ್ದಿವೆ. ಹೀಗೆ ಬಿದ್ದ ಎಲ್ಲಾ 15 ಕೃಷ್ಣಮೃಗಗಳು ಗಂಭೀರವಾಗಿ ಗಾಯಗೊಂಡಿವೆ. ಇವುಗಳ ಪೈಕಿ 12 ಪ್ರಾಣಿಗಳು ಸತ್ತುಹೋಗಿವೆ.

Blackbucks Death: ಸೇತುವೆಯಿಂದ ಜಿಗಿಯಲು ಹೋಗಿ 12 ಕೃಷ್ಣಮೃಗಗಳ ದಾರುಣ ಸಾವು
ಸೇತುವೆಯಿಂದ ಜಿಗಿಯಲು ಹೋಗಿ 12 ಕೃಷ್ಣಮೃಗಗಳ ದಾರುಣ ಸಾವುImage Credit source: PTI
Follow us
TV9 Web
| Updated By: ಸುಗ್ಗನಹಳ್ಳಿ ವಿಜಯಸಾರಥಿ

Updated on:Jan 30, 2023 | 2:07 PM

ಮುಂಬೈ: ಕಾಡಿನ ಮಧ್ಯೆ ಇರುವ ರಸ್ತೆಗಳನ್ನು ದಾಟಲು ಹೋಗಿ ಕಾಡು ಪ್ರಾಣಿಗಳು ಸಾಯುವ ಘಟನೆ ಬಹಳಷ್ಟು ವರದಿಯಾಗುತ್ತವೆ. ಜಿಂಕೆಗಳು ನಾಡಿಗೆ ಬಂದು ನಾಯಿಗಳ ಬಾಯಿಗೆ ಆಹಾರವಾಗುವುದೂ ಇದೆ. ಆದರೆ, ಸೇತುವೆಯಿಂದ ಕೆಳಗೆ ಹಾರಿ 12 ಕೃಷ್ಣಮೃಗಗಳು (Blackbucks) ಸಾವನ್ನಪ್ಪಿದ ದಾರುಣ ಘಟನೆ ಮಹಾರಾಷ್ಟ್ರ ರಾಜ್ಯದಲ್ಲಿ ಸಂಭವಿಸಿದೆ.

ಸೋಲಾಪುರ್ ಜಿಲ್ಲೆಯಲ್ಲಿ ಮಾಂದರುಪ್ ಬೈಪಾಸ್ ರಸ್ತೆಯಲ್ಲಿ ಈ ದುರ್ಘಟನೆ ನಡೆದಿದೆ. ಕೇಗಾಂವದಿಂದ ಬಿಜಾಪುರ ರಸ್ತೆಗೆ ಹೋಗುವ ಈ ಹೆದ್ದಾರಿಯನ್ನು ಹೊಸದಾಗಿ ನಿರ್ಮಿಸಲಾಗಿದೆ. ಹಿಂಡಾಗಿ ಬರುತ್ತಿದ್ದ ಕೃಷ್ಣಮೃಗಗಳು ರಸ್ತೆ ದಾಟುವ ಪ್ರಯತ್ನದಲ್ಲಿ ಕೃಷ್ಣ ಮೇಲ್ಸೇತುವೆಯಿಂದ 30 ಅಡಿ ಕೆಳಗೆ ಬಿದ್ದಿವೆ. ಹೀಗೆ ಬಿದ್ದ ಎಲ್ಲಾ 15 ಕೃಷ್ಣಮೃಗಗಳು ಗಂಭೀರವಾಗಿ ಗಾಯಗೊಂಡಿವೆ. ಇವುಗಳ ಪೈಕಿ 12 ಪ್ರಾಣಿಗಳು ಸತ್ತುಹೋಗಿವೆ.

ಸೋಲಾಪುರ ಪೊಲೀಸರು ಸ್ಥಳಕ್ಕೆ ಆಗಮಿಸಿ ಈ ಪ್ರಾಣಿಗಳ ಕಳೆಬರವನ್ನು ಹೆದ್ದಾರಿಯಿಂದ ತೆರವುಗೊಳಿಸಿದ್ದಾರೆ. ದುರ್ಘಟನೆ ನಡೆದ ಸ್ಥಳದಲ್ಲಿ ರಸ್ತೆಯನ್ನು ಗುಡ್ಡ ಕತ್ತರಿಸಿ ನಿರ್ಮಿಸಿದ್ದು ನಾಲ್ಕು ತಿಂಗಳ ಹಿಂದೆ ಸಂಚಾರಕ್ಕೆ ಮುಕ್ತಗೊಳಿಸಲಾಗಿತ್ತು. ಈ ಸ್ಥಳದ ಸುತ್ತ ಹಸಿರು ಪ್ರದೇಶಗಳಿದ್ದು ಇಲ್ಲಿ ಜಿಂಕೆ ಇತ್ಯಾದಿ ವನ್ಯಜೀವಿಗಳು ಆಹಾರಕ್ಕಾಗಿ ತಿರುಗಾಡುತ್ತಿರುತ್ತವೆ. ಇವುಗಳ ಸಹಜ ಪರಿಸರದಲ್ಲಿ ರಸ್ತೆ ನಿರ್ಮಾಣ ಆಗಿರುವುದು ಈ ಪ್ರಾಣಿಗಳಿಗೆ ಹೊಂದಿಕೊಳ್ಳಲು ಕಷ್ಟವಾಗುತ್ತಿದೆ. ಈ ಹಿಂದೆಯೂ ಹೀಗೆ ರಸ್ತೆ ಸೇತುವೆಯಿಂದ ಬಿದ್ದು ಪ್ರಾಣಿಗಳು ಸಾವನ್ನಪ್ಪಿದ ಘಟನೆ ವರದಿಯಾಗಿದ್ದಿದೆ.

ಕೃಷ್ಣಮೃಗ ಮತ್ತು ಜಿಂಕೆ

ಕೃಷ್ಣಮೃಗ ಎಂದರೆ ಸಾಮಾನ್ಯವಾಗಿ ಸಲ್ಮಾನ್ ಖಾನ್ ಬೇಟೆ ಪ್ರಕರಣ ನೆನಪಿಗೆ ಬರುತ್ತದೆ. ಕೃಷ್ಣಮೃಗ ಮತ್ತು ಜಿಂಕೆ ಎರಡೂ ಒಂದೇ. ಕೃಷ್ಣಮೃಗ ಗಂಡು ಜಿಂಕೆ ಎಂಬುದಷ್ಟೇ ವ್ಯತ್ಯಾಸ. ಗಂಡು ಜಿಂಕೆಗೆ ಕೋಡುಗಳಿರುತ್ತವೆ. ಜಿಂಕೆಗೆ ಕೋಡು ಇರುವುದಿಲ್ಲ.

Published On - 4:05 pm, Sun, 29 January 23

‘ಇಂಟರ್​ವಲ್​’ ಸಿನಿಮಾ ಗೆದ್ದಿದ್ದು ಹೇಗೆ? 25 ಡೇಸ್ ಸಂಭ್ರಮದಲ್ಲಿ ಚಿತ್ರತಂಡ
‘ಇಂಟರ್​ವಲ್​’ ಸಿನಿಮಾ ಗೆದ್ದಿದ್ದು ಹೇಗೆ? 25 ಡೇಸ್ ಸಂಭ್ರಮದಲ್ಲಿ ಚಿತ್ರತಂಡ
ಪತಿರಾನ ಓವರ್​ನಲ್ಲಿ ಹ್ಯಾಟ್ರಿಕ್ ಸಿಕ್ಸರ್ ಸಿಡಿಸಿದ ಪ್ರಿಯಾಂಶ್
ಪತಿರಾನ ಓವರ್​ನಲ್ಲಿ ಹ್ಯಾಟ್ರಿಕ್ ಸಿಕ್ಸರ್ ಸಿಡಿಸಿದ ಪ್ರಿಯಾಂಶ್
ಬಿಸಿಲ ತಾಪದಿಂದ ಅಹಮದಾಬಾದ್‌ನಲ್ಲಿ ಪ್ರಜ್ಞೆ ತಪ್ಪಿ ಬಿದ್ದ ಪಿ. ಚಿದಂಬರಂ
ಬಿಸಿಲ ತಾಪದಿಂದ ಅಹಮದಾಬಾದ್‌ನಲ್ಲಿ ಪ್ರಜ್ಞೆ ತಪ್ಪಿ ಬಿದ್ದ ಪಿ. ಚಿದಂಬರಂ
ಹಣದ ಕೊರತೆಯಿಂದ ಕಾರು ಮಾರಿದ ಅಜಯ್ ರಾವ್; ಕಣ್ಣೀರು ಹಾಕಿದ ಮಗಳು
ಹಣದ ಕೊರತೆಯಿಂದ ಕಾರು ಮಾರಿದ ಅಜಯ್ ರಾವ್; ಕಣ್ಣೀರು ಹಾಕಿದ ಮಗಳು
ಬಂಗಾಳದಲ್ಲಿ ವಕ್ಫ್ ಮಸೂದೆ ಹಿಂಪಡೆಯಲು ಒತ್ತಾಯಿಸಿ ಭುಗಿಲೆದ್ದ ಹಿಂಸಾಚಾರ
ಬಂಗಾಳದಲ್ಲಿ ವಕ್ಫ್ ಮಸೂದೆ ಹಿಂಪಡೆಯಲು ಒತ್ತಾಯಿಸಿ ಭುಗಿಲೆದ್ದ ಹಿಂಸಾಚಾರ
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಸಿನಿಮಾ ವಾಹನಗಳ ಪ್ರವೇಶ: ಆಕ್ರೋಶ
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಸಿನಿಮಾ ವಾಹನಗಳ ಪ್ರವೇಶ: ಆಕ್ರೋಶ
ಯತ್ನಾಳ್ ಅಸಲಿಗೆ ಒಬ್ಬ ನಕಲಿ ಹಿಂದೂ ಹುಲಿ: ರೇಣುಕಾಚಾರ್ಯ
ಯತ್ನಾಳ್ ಅಸಲಿಗೆ ಒಬ್ಬ ನಕಲಿ ಹಿಂದೂ ಹುಲಿ: ರೇಣುಕಾಚಾರ್ಯ
ರಹಾನೆ ಸ್ಫೋಟಕ ಬ್ಯಾಟಿಂಗ್​ಗೆ ದಂಗಾದ ಲಕ್ನೋ ಬೌಲರ್ಸ್
ರಹಾನೆ ಸ್ಫೋಟಕ ಬ್ಯಾಟಿಂಗ್​ಗೆ ದಂಗಾದ ಲಕ್ನೋ ಬೌಲರ್ಸ್
ಮೃತ್ಯುಂಜಯ ಸ್ವಾಮೀಜಿ ಯತ್ನಾಳ್​ಗೆ ಬುದ್ಧಿ ಹೇಳಲಿ: ಚಂದ್ರಶೇಖರ್ ಪೂಜಾರ್
ಮೃತ್ಯುಂಜಯ ಸ್ವಾಮೀಜಿ ಯತ್ನಾಳ್​ಗೆ ಬುದ್ಧಿ ಹೇಳಲಿ: ಚಂದ್ರಶೇಖರ್ ಪೂಜಾರ್
ಕೆಕೆಆರ್​ ಬೌಲರ್‌ಗಳ ಬೆವರಿಳಿಸಿದ ಪೂರನ್
ಕೆಕೆಆರ್​ ಬೌಲರ್‌ಗಳ ಬೆವರಿಳಿಸಿದ ಪೂರನ್