ಕ್ರಿಸ್ಟೆನ್​ ವೆಡ್ಸ್​ ಪವನ್​; ಫೇಸ್​ಬುಕ್​ನಲ್ಲಿ ಪರಿಚಯವಾದ ಸ್ವೀಡಿಷ್​ ಯುವತಿ ಮದುವೆಯಾಗಲು ಭಾರತಕ್ಕೆ ಬಂದಳು

Facebook : 2012ರಲ್ಲಿ ಇವರಿಬ್ಬರೂ ಫೇಸ್​ಬುಕ್​ ಮೂಲಕ ಪರಿಚಯವಾದರು. ಕಳೆದ ವರ್ಷ ತಾಜ್​ಮಹಲಿನ ಎದುರು ಭೇಟಿಯಾಗಿ ಮದುವೆ ಒಪ್ಪಂದ ಮಾಡಿಕೊಂಡರು. ಇದೀಗ ಸ್ವೀಡಿಷ್​ ಯುವತಿ ಭಾರತದ ಸೊಸೆ.

ಕ್ರಿಸ್ಟೆನ್​ ವೆಡ್ಸ್​ ಪವನ್​; ಫೇಸ್​ಬುಕ್​ನಲ್ಲಿ ಪರಿಚಯವಾದ ಸ್ವೀಡಿಷ್​ ಯುವತಿ ಮದುವೆಯಾಗಲು ಭಾರತಕ್ಕೆ ಬಂದಳು
ಕ್ರಿಸ್ಟೆನ್ ಮತ್ತು ಪವನ್
Follow us
TV9 Web
| Updated By: ಶ್ರೀದೇವಿ ಕಳಸದ

Updated on:Jan 30, 2023 | 12:51 PM

Viral News : ಅಂತರ್ಜಾಲ ಈಗ ಎಲ್ಲ ದೂರವನ್ನು ಹತ್ತಿರ ಮಾಡಿಬಿಡುತ್ತದೆ. ಆದರೆ ಈ ಅವಕಾಶ ಅನುಕೂಲವನ್ನು ಹೇಗೆ ಉಪಯೋಗಿಸುತ್ತೇವೆ ಎನ್ನುವುದು ನಮ್ಮ ನಮ್ಮ ತಿಳಿವಳಿಕೆಗೆ ಬಿಟ್ಟಿದ್ದು. 2012ರಲ್ಲಿ ಸ್ವೀಡಿಷ್​ ಯುವತಿ ಮತ್ತು ಭಾರತೀಯ ಯುವಕ ಫೇಸ್​ಬುಕ್​ ಮೂಲಕ ಸ್ನೇಹಿತರಾದರು. ಸ್ನೇಹ ಪ್ರೇಮಕ್ಕೆ ತಿರುಗಿತು. ಪ್ರೇಮ ಸಂಬಂಧದಿಂದ ಮದುವೆಯತನಕ. ಇದೀಗ ಇವರಿಬ್ಬರ ಮದುವೆಯ ಫೋಟೋಗಳು ವೈರಲ್ ಆಗುತ್ತಿವೆ.

ಪ್ರೀತಿಗೆ ಯಾವ ಭಾಷೆ, ದೇಶ, ಗಡಿಯ ಹಂಗಿಲ್ಲ. ಒಂದುಗೂಡಿಸುವುದಷ್ಟೇ ಅದರ ಉದ್ದೇಶ. 2012ರಲ್ಲಿ ಪರಿಚಯವಾದ ಇವರು ಫೋನ್​ ಮತ್ತು ವಿಡಿಯೋ ಕಾಲ್​ ಮೂಲಕ ಒಡನಾಡಿಕೊಂಡಿದ್ದರು. ನಂತರ ಒಂದು ವರ್ಷದ ಹಿಂದೆ ಆಗ್ರಾದಲ್ಲಿ ಇವರಿಬ್ಬರೂ ಮೊದಲ ಸಲ ಭೇಟಿಯಾದರು. ಇವರ ಮದುವೆಯ ನಿರ್ಣಯಕ್ಕೆ ತಾಜ್​ಮಹಲ್​ ಸಾಕ್ಷಿಯಾಯಿತು.

ಇದನ್ನೂ ಓದಿ : ಟಾಮಿ ವೆಡ್ಸ್​ ಜೈಲಿ; ಉತ್ತರ ಪ್ರದೇಶದಲ್ಲಿ ನಾಯಿಗಳ ಮದುವೆ; ವಿಡಿಯೋ ವೈರಲ್

ಜನವರಿ 28ಕ್ಕೆ ಮದುವೆ ಏರ್ಪಾಡಾಯಿತು. ಮಾರು 6,000 ಕಿ.ಮೀ ಪ್ರಯಾಣಿಸಿ ಉತ್ತರ ಪ್ರದೇಶದ ಎಟಾ ನಗರಕ್ಕೆ ಇಟಾಹ್​ಕ್ಕೆ ವಧು ಕ್ರಿಸ್ಟೆನ್​ ಬಂದೇ ಬಿಟ್ಟಳು. ನೆರೆದ ಬಂಧುಬಳಗದವರೆದುರು ಶುಕ್ರವಾರ ಎಟಾದ ಶಾಲೆಯೊಂದರಲ್ಲಿ ಹಿಂದೂ ಪದ್ಧತಿಯ ಪ್ರಕಾರ ಪವನ್​ ಮತ್ತು ಕ್ರಿಸ್ಟೆನ್ ಮದುವೆಯಾದರು.

ಇದನ್ನೂ ಓದಿ : ನಾಯಿಮರಿ ತನ್ನ ಜನನ ಪ್ರಮಾಣ ಪತ್ರಕ್ಕೆ ಕಾಲ್ಬೆರಳು ಒತ್ತಿ ಸಹಿ ಮಾಡಿರುವ ವಿಡಿಯೋ ವೈರಲ್

ಪವನ್​ ಡೆಹ್ರಾಡೂನ್​ ವಿವಿಯಿಂದ ಬಿ.ಟೆಕ್​ ಪದವಿ ಪೂರೈಸಿದ್ದಾನೆ. ಖಾಸಗೀ ಸಂಸ್ಥೆಯೊಂದರಲ್ಲಿ ಎಂಜಿನಿಯರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾನೆ. ‘ನನ್ನ ಕುಟುಂಬವನ್ನು ಈ ಮದುವೆಯನ್ನು ಸಂಪೂರ್ಣ ಸಂತೋಷದಿಂದ ಸ್ವೀಕರಿಸಿದೆ’ ಎಂದು ಹೇಳಿದ್ದಾನೆ. ‘ಈ ಮೊದಲು ಕೂಡ ನಾನು ಭಾರತಕ್ಕೆ ಭೇಟಿ ನೀಡಿದ್ದೆ. ನನಗೆ ಬಹಳ ಇಷ್ಟವಾಯಿತು. ಇದೀಗ ಇಲ್ಲಿಯವರನ್ನೇ ಮದುವೆಯಾಗಿದ್ದು ಖುಷಿ ಇದೆ’ ಎಂದಿದ್ದಾಳೆ ಕ್ರಿಸ್ಟೆನ್​

ಇದನ್ನು ಓದಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 12:51 pm, Mon, 30 January 23