ಸಲಾಡ್ ಅಲ್ಲ ಅವಲಕ್ಕಿ; ಅತಿಯಾಯಿತು ಇಂಡಿಗೋ ಪ್ರಚಾರ ತಂತ್ರ ಎನ್ನುತ್ತಿರುವ ನೆಟ್ಟಿಗರು
Indigo : ಇಂದೇ ತಯಾರಿಸಿದ ಫ್ರೆಷ್ ಸಲಾಡ್ ತಿಂದು ನೋಡಿ! ಈ ಪೋಸ್ಟ್ ಬಗ್ಗೆ ಗೇಲಿ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ ಹಲವರು. ಅವರ ಪ್ರಚಾರ ತಂತ್ರಕ್ಕೆ ನಕ್ಕು ಸುಮ್ಮನಾಗಬೇಕು ಎಂದು ಕೆಲವರು ಹೇಳಿದ್ದಾರೆ.
Viral News : ಅವಲಕ್ಕಿ ಫೋಟೋ ಹಾಕಿ ಇಂದೇ ಮಾಡಿದ ತಾಜಾ ಸಲಾಡ್ ತಿನ್ನಿ ಎಂದು ಆನ್ಲೈನ್ನಲ್ಲಿ ಇಂಡಿಗೋ ಏರ್ಲೈನ್ಸ್ ಟ್ವೀಟ್ ಮಾಡಿದೆ. ನೆಟ್ಟಿಗರು ಈ ಪೋಸ್ಟ್ ನೋಡಿ ಬಿದ್ದುಬಿದ್ದು ನಗುತ್ತಿದ್ದಾರೆ. ಇನ್ನೂ ಕೆಲವರು ತಲೆ ಕೆಟ್ಟಿದೆಯೇ ನಿಮಗೆ ಯಾಕೆ ತಪ್ಪು ದಾರಿಗೆ ಎಳೆಯುತ್ತೀರಾ ಪ್ರಚಾರದ ಹಪಾಹಪಿಗೆ ಎಂದು ಬಯ್ಯುತ್ತಿದ್ದಾರೆ. ಇನ್ನೂ ಕೆಲವರು ಸರಿಯಾಗಿ ಕಾಲೆಳೆಯುತ್ತಿದ್ದಾರೆ.
Salads that are prepared and served on the same day, do try them. You’ll toss everything else away. #AiromaticFresh #goIndiGo https://t.co/9BuLhqnq2f pic.twitter.com/9QANRafwWl
ಇದನ್ನೂ ಓದಿ— IndiGo (@IndiGo6E) January 28, 2023
ಅವಲಕ್ಕಿ ತುಂಬಿದ ತಟ್ಟೆಯ ಮೇಲಿನಿಂದ ನಿಂಬೆಹಣ್ಣನ್ನು ಹಿಂಡುತ್ತಿರುವ ಈ ಫೋಟೋ ನೋಡಿದ ನೆಟ್ಟಿಗರು, ಇದು ಅವಲಕ್ಕಿ, ಇದನ್ನು ಸಲಾಡ್ ಎಂದು ಹೇಳಿ ಯಾರನ್ನು ಮೂರ್ಖರನ್ನಾಗಿಸಲು ಹೊರಟಿದ್ದೀರಾ, ಅದೂ ಭಾರತೀಯರಿಗೆ? ಎಂದು ಕೇಳುತ್ತಿದ್ದಾರೆ. ಇಂದೋರ್ನಲ್ಲಿರುವ ಎಲ್ಲರೂ ತುಂಬಾ ಆರೋಗ್ಯದಿಂದ ಇದ್ದಾರೆ, ಏಕೆಂದರೆ ಅವರು ಶಾವಿಗೆ, ಅವಲಕ್ಕಿಯ ಸಲಾಡ್ ಅನ್ನು ತಿನ್ನುತ್ತಾರೆ ಎಂದು ತಮಾಷೆ ಮಾಡಿದ್ದಾರೆ ಇನ್ನೊಬ್ಬರು.
ಇದನ್ನೂ ಓದಿ : ಚೀನಾದ ರೆಸ್ಟೋರೆಂಟ್ನಲ್ಲಿ ಗ್ರಾಹಕರಿಗೆ ಜ್ಯೂಸ್ ಬದಲು ಲಿಕ್ವಿಡ್ ಡಿಟರ್ಜೆಂಟ್; 7 ಜನರು ಅಸ್ವಸ್ಥ
ನೀವು ವಿಮಾನದಲ್ಲಿ ರುಚಿಯಾದ ಪದಾರ್ಥಗಳನ್ನು ಕೊಡುತ್ತೀರಿ. ಸುಮ್ಮನೆ ಪ್ರಚಾರಕ್ಕಾಗಿ ಹೀಗೆ ಟ್ವೀಟ್ ಮಾಡಿ ಸಾರ್ವಜನಿಕರ ದಾರಿ ತಪ್ಪಿಸಬೇಡಿ ಎಂದು ಹೇಳಿದ್ದಾರೆ ಮತ್ತೊಬ್ಬರು. ಅನೇಕರು ಈ ಪೋಸ್ಟ್ ಅನ್ನು ಗೇಲಿ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಷ್ಟೊಂದು ಆಕ್ರೋಶ ವ್ಯಕ್ತಪಡಿಸುವ ಅಗತ್ಯವೇನಿದೆ? ಇದು ಅವರ ಪ್ರಚಾರ ತಂತ್ರ ನಕ್ಕು ಸುಮ್ಮನಾಗಬೇಕು ಎಂದು ಕೆಲವರು ಹೇಳಿದ್ದಾರೆ. ಅವಲಕ್ಕಿ ತಿನ್ನುವಾಗೆಲ್ಲ ಈ ಪೋಹಾ ಜೋಕ್ಸ್ ನೆನಪಿಸಿಕೊಳ್ಳುತ್ತೇವೆ ಎಂದಿದ್ದಾರೆ ಮತ್ತೂ ಕೆಲವರು.
ಇಷ್ಟು ದಿನ ಇಂದೋರ್ ಅವಲಕ್ಕಿಗೆ ಹೆಸರುವಾಸಿಯಾಗಿತ್ತು. ಈಗಿದು ಸಲಾಡ್ನ ರಾಜಧಾನಿಯಾಯಿತೇ? ಎಂದು ಮತ್ತೊಬ್ಬರು ಕೇಳಿದ್ದಾರೆ.
ಇದನ್ನು ಓದಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 3:54 pm, Mon, 30 January 23