ಚೀನಾದ ರೆಸ್ಟೋರೆಂಟ್ನಲ್ಲಿ ಗ್ರಾಹಕರಿಗೆ ಜ್ಯೂಸ್ ಬದಲು ಲಿಕ್ವಿಡ್ ಡಿಟರ್ಜೆಂಟ್; 7 ಜನರು ಅಸ್ವಸ್ಥ
China : ಸರ್ವರ್ ಕೊಟ್ಟ ಜ್ಯೂಸ್ ಅನ್ನು ಆ ಏಳೂ ಜನರು ಕುಡಿದರು. ಒಬ್ಬೊಬ್ಬರಿಗೆ ಹೊಟ್ಟೆ ತೊಳೆಸಿದಂತಾದಾಗ ಎಲ್ಲರನ್ನೂ ಆಸ್ಪತ್ರೆಗೆ ಸೇರಿಸಿದರು. ಪಂಪ್ ಮಾಡಿ ಸೇವಿಸಿದ ಜ್ಯೂಸ್ ಹೊರತೆಗೆಯಲಾಯಿತು. ಸದ್ಯ ಎಲ್ಲರ ಆರೋಗ್ಯ ಸ್ಥಿರವಾಗಿದೆ.
Viral : ಬಣ್ಣಗಳು ಮರಳು ಮಾಡುತ್ತವೆ ಎಂದು ಗೊತ್ತಿತ್ತು. ಆದರೆ ಆಪತ್ತನ್ನೂ ತರುತ್ತವೆ ಎನ್ನುವುದಕ್ಕೆ ಈ ಘಟನೆ ಸಾಕ್ಷಿ. ಚೀನಾದ ರೆಸ್ಟೋರೆಂಟ್ ತನ್ನ ಗ್ರಾಹಕರಿಗೆ ಹಣ್ಣಿನ ರಸದ ಬದಲಾಗಿ ಲಿಕ್ವಿಡ್ ಡಿಟರ್ಜೆಂಟ್ ಕೊಟ್ಟಿದೆ. ಅದನ್ನು ಕುಡಿದ ಏಳು ಜನರು ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಘಟನೆಯು ಜನವರಿ 16ರಂದು ಝೆಜಿಯಾಂಗ್ನಲ್ಲಿ ನಡೆದಿದೆ. ಸರ್ವರ್ ಮಾಡಿದ ಪ್ರಮಾದದಿಂದ ಈ ಘಟನೆ ಸಂಭವಿಸಿದೆ.
ಸಿಸ್ಟರ್ ವುಕಾಂಗ್ ಎನ್ನುವವರು ತಮ್ಮ ಕುಟುಂಬ ಮತ್ತು ಸ್ನೇಹಿತರೊಂದಿಗೆ ಈ ರೆಸ್ಟೋರೆಂಟ್ಗೆ ಬಂದಿದ್ದರು. ಊಟ ಮಾಡುತ್ತಿದ್ದಾಗ ಸರ್ವರ್, ಹಣ್ಣಿನ ರಸ ಎಂದು ಬಾಟಲಿಯನ್ನು ಇವರ ಟೇಬಲ್ಲಿಗೆ ತಂದಿಟ್ಟನು. ನಂತರ ಅದನ್ನು ಅವರೆಲ್ಲ ಕುಡಿದರು. ಸ್ವಲ್ಪ ಹೊತ್ತಿಗೆ ಹೊಟ್ಟೆಯೊಳಗೆ ಸಂಕಟವಾದಂತಾಗಿ ಒದ್ದಾಡತೊಡಗಿದರು. ನಂತರ ಒಬ್ಬೊಬ್ಬರೇ ಅಸ್ವಸ್ಥರಾಗುತ್ತಿದ್ದಂತೆ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಸದ್ಯ ಈ ಏಳು ಜನರ ಆರೋಗ್ಯ ಸ್ಥಿರವಾಗಿದೆ.
ಇದನ್ನೂ ಓದಿ : ಕಂಡೀರಾ ಬಿಳಿನವಿಲ ಸೊಬಗ; ವೈರಲ್ ಆಗಿರುವ ಈ ವಿಡಿಯೋ ನೋಡಿ
ವುಕಾಂಗ್, ‘ಏಳು ಮಂದಿ ಊಟ ಮಾಡಿ ಜ್ಯೂಸ್ ಕುಡಿದೆವು. ನನ್ನ ಗಂಡ ಮೊದಲು ಕುಡಿದರು. ಅದು ಕಹಿ ಇದೆ ಎಂದು ಹೇಳಿದರು. ನಾನೂ ಕುಡಿದೆ ನನಗೂ ಹಾಗೇ ಅನ್ನಿಸಿತು. ತಕ್ಷಣವೇ ಗಂಟಲು ಚುರುಗುಟ್ಟಿತು. ಆಸ್ಪತ್ರೆಯಲ್ಲಿ ನಮ್ಮೆಲ್ಲರ ಹೊಟ್ಟೆಯನ್ನು ಪಂಪ್ ಮಾಡಿ ಆ ಹಾನಿಕಾರಕ ಲಿಕ್ವಿಡ್ ಹೊರತೆಗೆಯಲಾಯಿತು. ಆನಂತರ ಸರ್ವರ್, ಕಣ್ತಪ್ಪಿನಿಂದ ಆಗಿದೆ ಎಂದು ತಮ್ಮ ತಪ್ಪನ್ನು ಒಪ್ಪಿಕೊಂಡರು. ಅವರು ರೆಸ್ಟೋರೆಂಟ್ನ ಉದ್ಯೋಗಿ ಅವರಲ್ಲವೆಂದು ದಿನವೂ ಅಲ್ಲಿಗೆ ಬಂದು ಸಹಾಯ ಮಾಡುತ್ತಾರೆ ಎನ್ನುವುದು ತಿಳಿಯಿತು.’ ಎಂದಿದ್ದಾರೆ.
ಇದನ್ನೂ ಓದಿ : ಕ್ರಿಸ್ಟೆನ್ ವೆಡ್ಸ್ ಪವನ್; ಫೇಸ್ಬುಕ್ನಲ್ಲಿ ಪರಿಚಯವಾದ ಸ್ವೀಡಿಷ್ ಯುವತಿ ಮದುವೆಯಾಗಲು ಭಾರತಕ್ಕೆ ಬಂದಳು
ಆದರೆ ಗ್ರಾಹಕರಿಗೆ ಯಾವ ಫ್ಲೋರ್ ಕ್ಲೀನರ್ ಕೊಡಲಾಗಿದೆ ಎಂಬುದರ ಬಗ್ಗೆ ಇನ್ನೂ ಸ್ಪಷ್ಟವಾಗಿ ತಿಳಿದು ಬಂದಿಲ್ಲ ಎಂದು ರೆಸ್ಟೋರೆಂಟ್ನ ಮಾಲೀಕರು ತಿಳಿಸಿದ್ದಾರೆ. ಚೈನೀಸ್ ಆನ್ಲೈನ್ ಮಾರುಕಟ್ಟೆಯಲ್ಲಿ ಕಿತ್ತಳೆಹಣ್ಣಿನ ರಸದಂತೆ ಕಾಣುವ ಅನೇಕ ಫ್ಲೋರ್ ಕ್ಲೀನರ್ಗಳು ಲಭ್ಯವಿವೆ. ಅವುಗಳ ಪ್ಯಾಕೆಟ್ ಮೇಲೆ ಚೈನೀಸ್ ಭಾಷೆ ಇರುವುದರಿಂದ ಪರಊರು, ದೇಶದವರಿಗೆ ಅರ್ಥವಾಗದೆ ಹೀಗೆಲ್ಲ ಅಪಾಯ ಉಂಟಾಗುವ ಸಾಧ್ಯತೆ ಇರುತ್ತದೆ.
ಇದನ್ನು ಓದಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 1:57 pm, Mon, 30 January 23