ಕಣ್ಣಾಮುಚ್ಚಾಲೆಯಾಟ ತಂದ ಕುತ್ತು; ಬಾಂಗ್ಲಾದ ಹುಡುಗನೊಬ್ಬ ಮಲೇಷಿಯಾದಲ್ಲಿ ಪತ್ತೆ
Hide and Seek : 15 ವರ್ಷದ ಬಾಂಗ್ಲಾದೇಶದ ಈ ಹುಡುಗ ಆರು ದಿನಗಳ ಕಾಲ ಕಂಟೇನರ್ನಲ್ಲಿದ್ದ. 2,300 ಮೈಲಿಗಳಷ್ಟು ದೂರವನ್ನು ಹಡಗಿನ ಮೂಲಕ ಕ್ರಮಿಸಿ ಮಲೇಷಿಯಾ ತಲುಪಿದ. ಮುಂದೆ?
Viral Video : ಮಕ್ಕಳಿಗೆ ಬಹಳ ಇಷ್ಟವಾದ ಆಟ ಕಣ್ಣಾಮುಚ್ಚಾಲೆ. ದೇಹಕ್ಕಿಂತ ಬುದ್ಧಿಗೆ, ತಮಾಷೆಗೆ ಇಲ್ಲಿ ಹೆಚ್ಚು ಅವಕಾಶವಿದೆ. ಆಡುತ್ತಾ ಆಡುತ್ತಾ ಜಗತ್ತನ್ನೇ ಮರೆಯುವಂಥ ಸೆಳೆತ ಇದಕ್ಕಿದೆ. ಆದರೆ ಮಕ್ಕಳು ಈ ಆಟವನ್ನು ಜಾಗರೂಕರಾಗಿ ಆಡಬೇಕು, ಪೋಷಕರೂ ಈ ಬಗ್ಗೆ ಸದಾ ಗಮನವಿಟ್ಟಿರಬೇಕು ಎನ್ನುವ ಎಚ್ಚರಿಕೆ ಗಂಟೆಯನ್ನು ಇದೀಗ ವೈರಲ್ ಆಗಿರುವ ಈ ವಿಡಿಯೋ ಸೂಚಿಸುತ್ತಿದೆ.
ಬಾಂಗ್ಲಾದೇಶದ 15 ವರ್ಷದ ಫಹೀಮ್ ಎಂಬಾತ ಜನವರಿ 11ರಂದು ಚಿತ್ತಗಾಂಗ್ನಲ್ಲಿ ತನ್ನ ಗೆಳೆಯರೊಂದಿಗೆ ಕಣ್ಣಾಮುಚ್ಚಾಲೆ ಆಡುತ್ತ ಬಚ್ಚಿಟ್ಟುಕೊಳ್ಳಲು ಜಾಗ ಹುಡುಕುತ್ತಿದ್ದ. ಅಲ್ಲಿ ಕಂಡ ಶಿಫ್ಟಿಂಗ್ ಕಂಟೇನರ್ನೊಳಗೆ ಹೋಗಿ ಒಳಗಡೆಯಿಂದ ಬೀಗ ಹಾಕಿಕೊಂಡು ಅವಿತಿಟ್ಟುಕೊಂಡ. ನಂತರ ಅವನಿಗೆ ನಿದ್ದೆ ಬಂದು ಮಲಗಿಬಿಟ್ಟ. ಆ ಕಂಟೇನರ್ ಹಡಗಿನ ಮೂಲಕ ಮಲೇಷಿಯಾಗೆ ತೆರಳಿಬಿಟ್ಟಿತು.
ಇದನ್ನೂ ಓದಿ : ಇಂಗ್ಲಿಷ್ ಅಕ್ಷರಗಳಲ್ಲಿ ತಾಜ್ಮಹಲ್ ರಚಿಸಿದ ಯುವಕನ ವಿಡಿಯೋ ವೈರಲ್
ಅನ್ನ ನೀರಿಲ್ಲದೆ ಕಂಗೆಟ್ಟುಹೋದ ಆತ 6 ದಿನಗಳ ಒಟ್ಟು 2,300 ಮೈಲಿ ಚಲಿಸಿದ. ಮಲೇಷಿಯಾ ತಲುಪಿದಾಗ ಸದ್ಯ ಅವ ಜೀವಂತವಾಗಿದ್ದ. ಆದರೆ ಸುಸ್ತು ಜ್ವರದಿಂದ ಬಳಲುತ್ತಿದ್ದ ಅವನನ್ನು ರಕ್ಷಣಾ ಸಿಬ್ಬಂದಿ ತಕ್ಷಣವೇ ಆಸ್ಪತ್ರೆಗೆ ದಾಖಲಿಸಿತು.
ಇದನ್ನೂ ಓದಿ : ಹಗ್ಗದಾಟದಲ್ಲಿ ಗಿನ್ನೀಸ್ ವಿಶ್ವದಾಖಲೆ ಮಾಡಿದ ಬಲು ಎಂಬ ನಾಯಿ
‘ಆಟವಾಡುತ್ತ ಬಂದ ಈ ಹುಡುಗ ಕಂಟೇನರ್ನಲ್ಲಿ ಬಂದಿಯಾಗಿದ್ದ. ವಾರಗಟ್ಟಲೆ ಉಪವಾಸವಿದ್ದಿದ್ದರಿಂದ ಜ್ವರದಿಂದ ಬಳಲುತ್ತಿದ್ದಾನೆ. ಹೆಚ್ಚಿನ ಚಿಕಿತ್ಸೆಗಾಗಿ ಅವನನ್ನು ಆಸ್ಪತ್ರೆಗೆ ಸೇರಿಸಲಾಗಿದೆ’ ಎಂದು ಮಲೇಷಿಯಾದ ಗೃಹ ಸಚಿವ ಸಚಿವ ಡಟುಕ್ ಸೆರಿ ಸೈಫುದ್ದೀನ್ ನಾಸೂಶನ್ ಇಸ್ಮಾಯಿಲ್ ಮಲೇಷಿಯಾದ ಮಾಧ್ಯಮ ಬೆರ್ನಾಮಾಗೆ ತಿಳಿಸಿದ್ದಾರೆ.
ಇದನ್ನೂ ಓದಿ : ಕಂಡೀರಾ ಬಿಳಿನವಿಲ ಸೊಬಗ; ವೈರಲ್ ಆಗಿರುವ ಈ ವಿಡಿಯೋ ನೋಡಿ
ಏತನ್ಮಧ್ಯೆ, ಪೊಲೀಸರು ಈ ಪ್ರಕರಣವನ್ನು ಮಾನವ ಕಳ್ಳಸಾಗಾಣಿಕೆ ಎಂದು ಅನುಮಾನಿಸಿದ್ದರು. ಆದರೆ ವಿಚಾರಣೆ ನಡೆಸಿದ ಮೇಲೆ ವಾಸ್ತವ ಬೇರೆಯಾಗಿತ್ತು. ಈ ಸಿನಿಮೀಯ ಪ್ರಕರಣ ಎಲ್ಲರಿಗೂ ಒಂದು ಪಾಠ.
ಇದನ್ನು ನೋಡಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 10:44 am, Mon, 30 January 23