ಪ್ಯಾರೀಸ್​ನ ಬೀದಿಯಲ್ಲಿ ಲತಾದೀಯನ್ನು ನೆನೆದ ಈ ವಿದೇಶಿ ಕಲಾವಿದ

Lata Mangeshkar : ‘ನೀವು ಎಲ್ಲಿಂದ ಬಂದಿದ್ದೀರಿ ಎಂದು ಈ ಕಲಾವಿದರು ಕೇಳಿದರು. ನಾನು ಪಾಕಿಸ್ತಾನ ಅಂದೆ. ಆಗ ಅವರು ಈ ಹಾಡನ್ನು ಹಾಡತೊಡಗಿದರು’

ಪ್ಯಾರೀಸ್​ನ ಬೀದಿಯಲ್ಲಿ ಲತಾದೀಯನ್ನು ನೆನೆದ ಈ ವಿದೇಶಿ ಕಲಾವಿದ
ಪ್ಯಾರೀಸ್​ನ ಬೀದಿಯಲ್ಲಿ ಲತಾದೀಯ ಹಾಡು ಹಾಡುತ್ತಿರುವ ಬೀದಿಕಲಾವಿದರು
Follow us
TV9 Web
| Updated By: ಶ್ರೀದೇವಿ ಕಳಸದ

Updated on:Jan 30, 2023 | 4:43 PM

Viral Video : ಕಲಾವಿದರು ತಮ್ಮ ಕೊಡುಗೆಯಿಂದ ಎಂದಿಗೂ ಅಜರಾಮರ. ಅದರಲ್ಲೂ ಗಾಯಕರಂತೂ ಎಲ್ಲಿದ್ದರೂ ಇಡೀ ಭೂಮಿಯನ್ನು ಆವರಿಸಿಕೊಂಡೇ ಇರುತ್ತಾರೆ. ಪ್ಯಾರೀಸ್​ನ ಬೀದಿಯಲ್ಲಿ ವಿದೇಶಿ ಕಲಾವಿದರೊಬ್ಬರು ಲತಾ ಮಂಗೇಶ್ಕರ ಅವರ ಅಜೀಬ ದಾಸತಾ​ ಹೈ ಯೇ ಹಾಡನ್ನು ಹಾಡಿ ಅವರನ್ನು ಸ್ಮರಿಸಿದ್ದಾರೆ. ನೆಟ್ಟಿಗರು ಈ ವಿಡಿಯೋ ನೋಡಿದ ಕಲಾವಿದರು ಖುಷಿಯಿಂದ ಈ ಕಲಾವಿದರಿಗೆ ಹಾರೈಸುತ್ತಿದ್ದಾರೆ.

‘ನೀವು ಎಲ್ಲಿಂದ ಬಂದಿದ್ದೀರಿ ಎಂದು ಈ ಕಲಾವಿದರು ಕೇಳಿದರು. ನಾನು ಪಾಕಿಸ್ತಾನ ಅಂದೆ. ಆಗ ಅವರು ಈ ಹಾಡನ್ನು ಹಾಡತೊಡಗಿದರು’ ಎಂದು ಮಾಹಿರಾ ಘನಿ ಎಂಬುವವರು ಈ ವಿಡಿಯೋ ಟ್ವೀಟ್ ಮಾಡಿದ್ದಾರೆ. 1960ರಲ್ಲಿ ಬಿಡುಗಡೆಯಾದ ದಿಲ್ ಅಪ್ನಾ ಔರ್ ಪ್ರೀತ್ ಪರೈ ಸಿನೆಮಾದ ಈ ಹಾಡನ್ನು ಶೈಲೇಂದ್ರ ಬರೆದಿದ್ದಾರೆ. ಶಂಕರ್ ಜೈಕಿಶನ್​ ರಾಗ ಸಂಯೋಜನೆ ಮಾಡಿದ್ದಾರೆ.

ಇದನ್ನೂ ಓದಿ : ಸಲಾಡ್ ಅಲ್ಲ ಅವಲಕ್ಕಿ; ಅತಿಯಾಯಿತು ಇಂಡಿಗೋ ಪ್ರಚಾರ ತಂತ್ರ ಎನ್ನುತ್ತಿರುವ ನೆಟ್ಟಿಗರು

ಈ ವಿಡಿಯೋ ಈತನಕ ಸುಮಾರು 3 ಲಕ್ಷ ಜನರು ನೋಡಿದ್ದಾರೆ. 14,000ಕ್ಕಿಂತಲೂ ಹೆಚ್ಚು ಜನರು ಇಷ್ಟಪಟ್ಟಿದ್ದಾರೆ. ಸಾವಿರಾರು ಜನರು ರೀಟ್ವೀಟ್ ಮಾಡಿದ್ದಾರೆ. ನೂರಾರು ಜನರು ಪ್ರತಿಕ್ರಿಯಿಸಿದ್ದಾರೆ. ಅನೇಕರು ಇವರ ಪ್ರಯತ್ನವನ್ನು ಶ್ಲಾಘಿಸಿದ್ದಾರೆ. ಕೆಲವರು ಅಸಹನೆಯಿಂದ ಪ್ರತಿಕ್ರಿಯಿಸಿದ್ದಾರೆ. ದ್ವೇಷಮನೋಭಾವದ ಪ್ರತಿಕ್ರಿಯೆಗಳನ್ನು ಕಡೆಗಣಿಸಿ ಎಂದು ಇವರಿಗೆ ಕೆಲವರು ಸಲಹೆ ನೀಡಿದ್ದಾರೆ.

ಇದನ್ನೂ ಓದಿ : ವೃದ್ಧರೊಬ್ಬರು ಕೋತಿಗೆ ರೊಟ್ಟಿ ಕೊಡಲು ಪ್ರಯತ್ನಿಸುತ್ತಿರುವ ಆಪ್ತವಾದ ವಿಡಿಯೋ ವೈರಲ್

ಕಲಾವಿದರಿಗೆ ಯಾವ ಭಾಷೆಯಾದರೇನು ಯಾವ ದೇಶವಾದರೇನು? ಕೇಳುಗರನ್ನು ತಣಿಸುವುದೇ ಅವರ ಕಲಾಧರ್ಮ. ಇದನ್ನು ನೋಡಿದ ನಿಮ್ಮ ಅಭಿಪ್ರಾಯವೇನು? ಮತ್ತೆ ಜಿ ಎಸ್ ಶಿವರುದ್ರಪ್ಪ ಅವರ ಸಾಲು ನೆನಪಾಗುವುದಲ್ಲವೆ?; ಎಲ್ಲ ಕೇಳಲಿ ಎಂದು ನಾನು ಹಾಡುವುದಿಲ್ಲ, ಹಾಡುವುದು ಅನಿವಾರ್ಯ ಕರ್ಮ ನನಗೆ.

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 4:36 pm, Mon, 30 January 23