ಆಹಾ ಈಕೆ ‘ನಿಂಜಾ’ದಿಂದ ಅವತರಿಸಿ ಬಂದಿದ್ದಾಳೇನು? ನೆಟ್ಮಂದಿಯ ಅಚ್ಚರಿ
Martial Art : ಈಕೆ ಜೆಜೆ ಗೋಲ್ಡನ್ ಡ್ರ್ಯಾಗನ್ ಎಂಬ ಹೆಸರಿನಿಂದ ಈ ಹದಿಹರೆಯದ ಹುಡುಗಿ ಖ್ಯಾತಿ ಗಳಿಸಿದ್ದಾಳೆ. ಸಾಮಾಜಿಕ ಜಾಲತಾಣಗಳಲ್ಲಿ ಈಕೆಯ ಸಮರ ಕಲಾ ಪ್ರದರ್ಶನದ ವಿಡಿಯೋಗಳನ್ನು ಸಾಕಷ್ಟು ಜನ ಮೆಚ್ಚುತ್ತಾರೆ.
Viral Video : ಸಮರ ಕಲೆ ಎಂದಾಗ ಸಾಮಾನ್ಯವಾಗಿ ನಮ್ಮ ಕಣ್ಣಮುಂದೆ ಬರುವುದು ಪುರುಷಾಕೃತಿ. ಆದರೆ ಈ ಕಲೆಯ ತೊಡಗಿಕೊಳ್ಳುವಲ್ಲಿ ಮಹಿಳೆಯರೇನು ಹಿಂದೆ ಬಿದ್ದಿಲ್ಲ. ಇದೀಗ ವೈರಲ್ ಆಗಿರುವ ಈ ವಿಡಿಯೋ ಗಮನಿಸಿ. ಈ ಯುವತಿ ಸಮರ ಕಲೆಯ ಅಭ್ಯಾಸದಲ್ಲಿ ಅದೆಷ್ಟು ಶ್ರದ್ಧೆಯಿಂದ ತೊಡಗಿಕೊಂಡಿದ್ದಾಳೆಂದು. ಕಣ್ಣುಮುಚ್ಚಿ ಗುರಿ ಸಾಧಿಸುತ್ತಾಳೆಂದರೆ ಆಕೆ 24 ಗಂಟೆಗಳ ಕಾಲವೂ ಇದನ್ನೇ ಉಸಿರಾಡಿದ್ದಾಳೆಂದರ್ಥ.
This woman looks like she came out of a ninja movie pic.twitter.com/m163kz9oNz
ಇದನ್ನೂ ಓದಿ— Next Level Skills (@NextSkillslevel) January 28, 2023
ಕಣ್ಣು ತೆಗೆದೇ ಈಕೆ ಮಾಡುವುದನ್ನು ಮಾಡಲು ಕಷ್ಟ. ಇನ್ನು ಈಕೆ ಹೀಗೆ ಕಣ್ಣುಮುಚ್ಚಿ ಗುರಿ ಸಾಧಿಸುತ್ತಾಳೆಂದರೆ ಹೇಗೆ ಸಾಧ್ಯ? ಈ ವಿಡಿಯೋ ಅನ್ನು ಈತನಕ 1 ಲಕ್ಷಕ್ಕೂ ಹೆಚ್ಚು ಜನರು ನೋಡಿದ್ದಾರೆ. ನೂರಾರು ಜನರು ಪ್ರತಿಕ್ರಿಯಿಸಿದ್ದಾರೆ. ಈಕೆ ಎಷ್ಟೊಂದು ಪರಿಪೂರ್ಣವಾಗಿ ಸಾಧನೆಯಲ್ಲಿ ತೊಡಗಿಕೊಂಡಿದ್ದಾಳೆ ಎಂದಿದ್ದಾರೆ ಅನೇಕರು.
ಇದನ್ನೂ ಓದಿ : ರಸ್ತೆಯಲ್ಲಿ ಮೂರ್ಛೆ ಹೋಗಿದ್ದ ನಾಯಿಯನ್ನು ರಕ್ಷಿಸಿದ ವಿಡಿಯೋ ವೈರಲ್
ನಾನಂತೂ ಇವಳನ್ನೇ ನೋಡುತ್ತಿದ್ದೇನೆ, ಅದೆಷ್ಟು ತನ್ಮಯಳಾಗಿ ಈಕೆ ಈ ಕಲೆಯನ್ನು ಸಾಧಿಸಿಕೊಂಡಿರಬಹುದು ಎಂದು ಅಚ್ಚರಿಯಿಂದ ಪ್ರತಿಕ್ರಿಯಿಸಿದ್ದಾರೆ ಕೆಲವರು. ಆದರೆ ಈಕೆಯ ನಿಜವಾದ ಟ್ರಿಕ್ಸ್ಗಳನ್ನು ಯಾವಾಗ ನೋಡಲು ಸಾಧ್ಯವಾಗಬಹುದು ಎಂದು ಕೇಳಿದ್ದಾರೆ ಕೆಲವರು. ವುಮನ್ ಬ್ರೂಸ್ಲಿ ಎಂದು ಹೇಳಿದ್ದಾರೆ ಒಂದಿಬ್ಬರು.
ಇದನ್ನೂ ಓದಿ : ವೃದ್ಧರೊಬ್ಬರು ಕೋತಿಗೆ ರೊಟ್ಟಿ ಕೊಡಲು ಪ್ರಯತ್ನಿಸುತ್ತಿರುವ ಆಪ್ತವಾದ ವಿಡಿಯೋ ವೈರಲ್
ಅಂದಹಾಗೆ ಈಕೆಯ ಹೆಸರು ಜೆಸ್ಸಿ ಜೇನ್ ಮೆಕ್ಪಾರ್ಲ್ಯಾಂಡ್. ಹದಿಹರೆಯದ ಈಕೆ ಜೆಜೆ ಗೋಲ್ಡನ್ ಡ್ರ್ಯಾಗನ್ ಎಂಬ ಹೆಸರಿನಿಂದ ಖ್ಯಾತಿ ಗಳಿಸಿದ್ದಾಳೆ. ಸಾಮಾಜಿಕ ಜಾಲತಾಣಗಳಲ್ಲಿ ಈಕೆ ಸಮರ ಕಲೆಯ ವಿಡಿಯೋಗಳನ್ನು ಅಪ್ಲೋಡ್ ಮಾಡುತ್ತಿರುತ್ತಾಳೆ. ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು? ಈಕೆ ಟ್ರಿಕ್ಸ್ ಬಳಸಿದ್ದಾಳೆಯೇ ಅಥವಾ ಕೌಶಲವೆ? ಆದರೆ ಏನು ಮಾಡಲೂ ಶ್ರದ್ಧೆ ಮತ್ತು ಸಮಯ ಕೊಟ್ಟಕೊಳ್ಳಲೇಬೇಕಲ್ಲವೆ?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ