Guinness World Records: ತನ್ನ ಮೂಗಿನಿಂದ ಕೆಲವೇ ಸೆಕೆಂಡುಗಳಲ್ಲಿ ಇಂಗ್ಲೀಷ್ ವರ್ಣಮಾಲೆ ಟೈಪ್ ಮಾಡಿ ಗಿನ್ನೆಸ್ ದಾಖಲೆ ಬರೆದ ವ್ಯಕ್ತಿ
ಒಟ್ಟು 26 ಅಕ್ಷರಗಳನ್ನು 27 ಸೆಕುಂಡುಗಳಲ್ಲಿ ಮೂಗಿನ ಸಹಾಯದಿಂದ ಟೈಪ್ ಮಾಡಿದ ವ್ಯಕ್ತಿ ವಿನೋದ್ ಕುಮಾರ್ ಚೌಧರಿ(Vinod Kumar Chaudhary). ನಿನ್ನೆ (ಮೇ. 15)ರಂದು ಈ ವಿಡಿಯೋವನ್ನು ಗಿನ್ನೆಸ್ ವಿಶ್ವ ದಾಖಲೆಯ ಅಧಿಕೃತ ಇನ್ಸ್ಟಾಗ್ರಾಮ್ ಪೇಜ್ನಲ್ಲಿ ಹಂಚಿಕೊಳ್ಳಲಾಗಿದೆ.
ಇಂಗ್ಲೀಷ್ ವರ್ಣಮಾಲೆ(Alphabets)ಯನ್ನು ತನ್ನ ಮೂಗಿನ ಮೂಲಕ ಕೇವಲ 27 ಸೆಕೆಂಡುಗಳಲ್ಲಿ ಟೈಪ್ ಮಾಡಿ ವಿಶ್ವ ದಾಖಲೆ(Guinness World Records) ಯನ್ನು ಬರೆದಿದ್ದಾರೆ. ಒಟ್ಟು 26 ಅಕ್ಷರಗಳನ್ನು 27 ಸೆಕುಂಡುಗಳಲ್ಲಿ ಮೂಗಿನ ಸಹಾಯದಿಂದ ಟೈಪ್ ಮಾಡಿದ ವ್ಯಕ್ತಿ ವಿನೋದ್ ಕುಮಾರ್ ಚೌಧರಿ(Vinod Kumar Chaudhary). ನಿನ್ನೆ (ಮೇ. 15)ರಂದು ಈ ವಿಡಿಯೋವನ್ನು ಗಿನ್ನೆಸ್ ವಿಶ್ವ ದಾಖಲೆಯ ಅಧಿಕೃತ ಇನ್ಸ್ಟಾಗ್ರಾಮ್ ಪೇಜ್ನಲ್ಲಿ ಹಂಚಿಕೊಳ್ಳಲಾಗಿದೆ. ಈ ವಿಡಿಯೋ ಇದೀಗಾ ಎಲ್ಲೆಡೆ ಭಾರೀ ವೈರಲ್ ಆಗಿದೆ.
ವಿಡಿಯೋ ಇಲ್ಲಿದೆ ನೋಡಿ:
View this post on Instagram
ಇದನ್ನೂ ಓದಿ: ‘ದೋಸೆ ಮಾಡೋದಕ್ಕಿಂತ ಚೆಲ್ಲೋದೇ ಜಾಸ್ತಿಯಾಯ್ತಲ್ಲಣ್ಣೋ’ ನೆತ್ತಿಗೇರಿದ ನೆಟ್ಟಿಗರ ಕೋಪ
ವಿಡಿಯೋದಲ್ಲಿ ವಿನೋದ್ ಕುಮಾರ್ ಚೌಧರಿ ತನ್ನ ಮೂಗಿನ ಸಹಾಯದಿಂದ ಇಂಗ್ಲೀಷ್ ವರ್ಣಮಾಲೆಯನ್ನು ಟೈಪ್ ಮಾಡುತ್ತಿರುವುದನ್ನು ಕಾಣಬಹುದು. ವಿಡಿಯೋ ಹಂಚಿಕೊಂಡ ಒಂದೇ ದಿನದಲ್ಲಿ 57,740 ಲೈಕುಗಳನ್ನು ಪಡೆದುಕೊಂಡಿದೆ. ಇದಲ್ಲದೇ ಕಾಮೆಂಟ್ ಮೂಲಕ ಸಾಕಷ್ಟು ನೆಟ್ಟಿಗರು ತಮ್ಮ ಅಭಿಪ್ರಾಯಗಳನ್ನು ಬರೆದುಕೊಂಡಿದ್ದಾರೆ. ಈ ವಿಡಿಯೋ ಇದೀಗಾ ಎಲ್ಲೆಡೆ ಭಾರೀ ವೈರಲ್ ಆಗಿದೆ.
ಮತ್ತಷ್ಟು ವೈರಲ್ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:
Published On - 3:30 pm, Tue, 16 May 23