Guinness World Record : ಗಿನ್ನಿಸ್ ದಾಖಲೆ ಬರೆದ 50,890 ಹರಳುಗಳಿಂದ ವಿನ್ಯಾಸಗೊಳಿಸಲಾದ ವೆಡ್ಡಿಂಗ್ ಗೌನ್
ಇಲ್ಲೊಂದು ಮದುವೆ ಗೌನ್ ಸೋಶಿಯಲ್ ಮೀಡಿಯಾಗಳಲ್ಲಿ ಭಾರೀ ಸದ್ದು ಮಾಡುತ್ತಿದೆ. ಜೊತೆಗೆ ಈ ಬಟ್ಟೆ ವಿಶೇಷ ವಿನ್ಯಾಸದಿಂದಲೇ ಗಿನ್ನೆಸ್ ವಿಶ್ವ ದಾಖಲೆಯನ್ನು ಪಡೆದುಕೊಂಡಿದೆ. ಏನಿದರ ವಿಶೇಷತೆ, ಇಲ್ಲಿದೆ ಸಂಪೂರ್ಣ ವಿವರ.
ಮದುವೆ ಪ್ರತಿಯೊಬ್ಬರ ಜೀವನದಲ್ಲಿಯೂ ಒಂದು ವಿಶೇಷ ದಿನ. ಈ ವಿಶೇಷ ದಿನಕ್ಕೆ ಲಕ್ಷಾಂತರ ಹಣ ಸುರಿದು ಸಂಭ್ರಮದಿಂದ ಆಚರಿಸಲಾಗುತ್ತದೆ. ವಧುವಿನ ವಿಚಾರಕ್ಕೆ ಬಂದರೆ ಆಭರಣಗಳಿಂದ ಹಿಡಿದು ಬಟ್ಟೆಗಳ ವರೆಗೆ ಎಷ್ಟೇ ದುಡ್ಡಿದ್ದರೂ ಕಡಿಮೆ ಎಂದೆನಿಸಿ ಬಿಡುತ್ತದೆ. ಹಾಗೆಯೇ ಇಲ್ಲೊಂದು ಮದುವೆ ಗೌನ್ ಸೋಶಿಯಲ್ ಮೀಡಿಯಾಗಳಲ್ಲಿ ಭಾರೀ ಸದ್ದು ಮಾಡುತ್ತಿದೆ. ಜೊತೆಗೆ ಈ ಬಟ್ಟೆ ವಿಶೇಷ ವಿನ್ಯಾಸದಿಂದಲೇ ಗಿನ್ನೆಸ್ ವಿಶ್ವ ದಾಖಲೆಯನ್ನು ಪಡೆದುಕೊಂಡಿದೆ. ಏನಿದರ ವಿಶೇಷತೆ, ಇಲ್ಲಿದೆ ಸಂಪೂರ್ಣ ವಿವರ.
ಹೌದು ಒಂದು ಸಾವಿರ, ಹತ್ತು ಸಾವಿರಾನೂ ಅಲ್ಲ, ಬರೋಬ್ಬರಿ 50,890 ಹರಳುಗಳನ್ನು ಬಳಸಿ ಬಿಳಿ ಬಣ್ಣದ ಮದುವೆ ಗೌನನ್ನು ವಿನ್ಯಾಸಗೊಳಿಸಲಾಗಿದೆ. ಈ ಉಡುಪನ್ನು ತಯಾರಿಸಲು ಸುಮಾರು ನಾಲ್ಕು ತಿಂಗಳು ತೆಗೆದುಕೊಳ್ಳಲಾಗಿದೆ. ಇಟಾಲಿಯನ್ ಬ್ರೈಡಲ್ ಫ್ಯಾಶನ್ ಬ್ರ್ಯಾಂಡ್ ಈ ಉಡುಪನ್ನು ವಿನ್ಯಾಸಗೊಳಿಸಿದ್ದು, ಈ ಉಡುಪನ್ನು ಮೈಕೆಲಾ ಫೆರೆರೊ ಫ್ಯಾಶನ್ ಶೋನಲ್ಲಿ ಪ್ರದರ್ಶಿಸಲಾಗಿದೆ. ಈ ಬಟ್ಟೆಯನ್ನು ಗಿನ್ನೆಸ್ ವಿಶ್ವ ದಾಖಲೆಯನ್ನು ಪಡೆದುಕೊಂಡಿದ್ದು, ಈ ಬಟ್ಟೆಯ ವಿಶೇಷತೆಯ ಬಗ್ಗೆ ಗಿನ್ನೆಸ್ ವಿಶ್ವ ದಾಖಲೆಯ ಅಧಿಕೃತ ಇನ್ಸ್ಟಾಗ್ರಾಮ್ ಪೇಜ್ನಲ್ಲಿ ಶೇರ್ ಮಾಡಲಾಗಿದೆ. ವಿಡಿಯೋ ಇಲ್ಲಿದೆ ನೋಡಿ.
View this post on Instagram
ಇದನ್ನೂ ಓದಿ: ಪತಿ ಟ್ರಾಫಿಕ್ ನಿಯಮ ಉಲ್ಲಂಘಿಸಿದ್ದಕ್ಕೆ ಪೊಲೀಸ್ ಠಾಣೆ ಮೆಟ್ಟಿಲೇರಿದ ಪತ್ನಿ, ವಿಷಯ ಬೇರೆಯೇ ಇದೆ
ಮಾಡೆಲ್ ಮಾರ್ಚೆ ಗೆಲಾನಿ ಕ್ಯಾವ್ ಈ ವೆಡ್ಡಿಂಗ್ ಗೌನ್ ಧರಿಸಿ ರಾಂಪ್ ವಾಕ್ ಮಾಡಿದ್ದಾರೆ. ಗಿನ್ನೆಸ್ ವಿಶ್ವ ದಾಖಲೆಯ ವರದಿಯ ಪ್ರಕಾರ 2011ರಲ್ಲಿ 45,024 ಹರಳುಗಳ ಉಡುಗೆಯ ದಾಖಲೆಯನ್ನು ಮುರಿದು , ಇದೀಗಾ ಈ ಉಡುಪು 50,890 ಹರಳುಗಳ ಮೂಲಕ ಹೊಸ ದಾಖಲೆ ಸೃಷ್ಟಿಸಿದೆ.
ಮತ್ತಷ್ಟು ವೈರಲ್ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:
Published On - 12:59 pm, Thu, 11 May 23