Viral Video: ಬೆಕ್ಕು ಮತ್ತು ಮಹಿಳೆಯ ನಡುವಿನ ಈ ಬಾಂಧವ್ಯಕ್ಕೆ ಸರಿಸಾಟಿ ಯಾವುದು ಇಲ್ಲ

ಪ್ರಾಣಿಗಳ ಕುರಿತ ಮುದ್ದಾದ ವೀಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ್ಗೆ ವೈರಲ್ ಆಗುತ್ತಿರುತ್ತವೆ. ಇಂತಹ ವೀಡಿಯೋಗಳು ನಮ್ಮ ಮುಖದಲ್ಲಿ ಕಿರು ನಗೆಯನ್ನು ಮೂಡಿಸುತ್ತದೆ. ಅದೇ ರೀತಿ ಇಲ್ಲೊಂದು ಬೆಕ್ಕು ಮತ್ತು ಒಬ್ಬ ತಾಯಿಯ ಬಾಂಧವ್ಯದ ವೈರಲ್ ಆಗಿದೆ.

Viral Video: ಬೆಕ್ಕು ಮತ್ತು ಮಹಿಳೆಯ ನಡುವಿನ ಈ ಬಾಂಧವ್ಯಕ್ಕೆ ಸರಿಸಾಟಿ ಯಾವುದು ಇಲ್ಲ
Video Viral
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷತಾ ವರ್ಕಾಡಿ

Updated on: May 10, 2023 | 6:52 PM

ಸಾಮಾನ್ಯವಾಗಿ ಬೆಕ್ಕುಗಳು ಎಲ್ಲರ ಮನೆಯಲ್ಲೂ ಇರುತ್ತವೆ. ಅವುಗಳು ಆಟ ಊಟ ಎನ್ನುತ್ತಾ ಅವುಗಳ ಪಾಡಿಗೆ ಇದ್ದು ಬಿಡುತ್ತವೆ. ಆದರೆ ಆ ಬೆಕ್ಕುಗಳು ಮನೆಯ ಯಾಜಮಾನಿ ‘ಅಮ್ಮ’ ನ ಜೊತೆಗೆ ವಿಶೇಷ ಬಾಂಧವ್ಯವನ್ನು ಹೊಂದಿರುತ್ತವೆ. ಏಕೆಂದರೆ ಅಮ್ಮ ಅವುಗಳಿಗೆ ತಿನ್ನಲು ಊಟ ಮೀನು ಕೊಡುತ್ತಾರೆ. ಅಷ್ಟೇ ಅಲ್ಲದೆ ಮನೆ ಮಗುವಿನಂತೆ ಅವುಗಳಿಗೆ ಪ್ರೀತಿಕೊಟ್ಟು ಸಾಕುತ್ತಾರೆ. ಈ ಅಮ್ಮ ಮತ್ತು ಬೆಕ್ಕುಗಳ ನಡುವಿನ ನಿಷ್ಕಲ್ಮಶ ಪ್ರೀತಿಯ ಬಾಂಧವ್ಯವನ್ನು ನೋಡುವುದೇ ಒಂದು ಚಂದ. ಅಂತಹದ್ದೇ ಮಹಿಳೆ ಮತ್ತು ಬೆಕ್ಕಿನ ಬಾಂಧವ್ಯವನ್ನು ತೋರಿಸುವ ವೀಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಟುತ್ತಿದೆ.

ಇನ್ಸ್ಟಾಗ್ರಾಮ್ ನಲ್ಲಿ ವೈರಲ್ ಆಗಿರುವ ಬೆಕ್ಕು ಮತ್ತು ಮಹಿಳೆಯ ಬಾಂಧವ್ಯದ ವೀಡಿಯೋವನ್ನು ‘ನಿಜವಾದ ಪ್ರೀತಿಯ ವ್ಯಾಖ್ಯಾನ ತಾಯಿ’ ಎಂಬ ಶೀರ್ಷಿಕೆಯಡಿಯಲ್ಲಿ ಜಗ್ಗು ಪಾಟೀಲ್ ಎಂಬವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ವೀಡಿಯೋದಲ್ಲಿ ಮಹಿಳೆಯ ಕಾಲಿನ ಮೇಲೆ ಬೆಕ್ಕು ಮಲಗಿ ಹಾಯಾಗಿ ನಿದ್ದೆ ಮಾಡುತ್ತಿರುತ್ತದೆ, ಆ ಮಹಿಳೆ ಬೆಕ್ಕಿನ ತಲೆ ಹಾಗೂ ಹೊಟ್ಟೆ ಸವರುತ್ತಾ ಮುದ್ದಿಸುತ್ತಿರುತ್ತಾಳೆ. ನಂತರ ಆ ತಾಯಿ ಅಡುಗೆ ಕೋಣೆಯಲ್ಲಿ ದೋಸೆ ಮಾಡುತ್ತಿರುವಾಗ ಅವರ ಪಕ್ಕದಲ್ಲೇ ಆ ಬೆಕ್ಕು ಮುಗ್ಧತೆಯಿಂದ ಕುಳಿತಿರುತ್ತದೆ ಮತ್ತು ಆ ತಾಯಿ ಬೆಕ್ಕಿನ ಜೊತೆಗೆ ಪ್ರೀತಿಯಿಂದ ಮಾತನಾಡಿ, ಬೆಕ್ಕಿಗೆ ಮುತ್ತನ್ನು ನೀಡುವುದನ್ನು ಕಾಣಬಹುದು. ತಾಯಿ ಮತ್ತು ಬೆಕ್ಕಿನ ಈ ನಿಷ್ಕಲ್ಮಶ ಪ್ರೀತಿಗೆ ನೆಟ್ಟಿಗರು ಮನಸೋತಿದ್ದಾರೆ.

ಇದನ್ನೂ ಓದಿ: ಮೋಡಿ ಮಾಡುತ್ತಿದೆ ‘ಬಹರ್ಲಾ ಹಾ ಮಧುಮಾಸ್’ಹಾಡಿಗೆ ಈ ಜೋಡಿಯ ನೃತ್ಯ

ಇನ್ಸ್ಟಾಗ್ರಾಮ್ ನಲ್ಲಿ ವೈರಲ್ ಆಗಿರುವ ಈ ವೀಡಿಯೊ ಲಕ್ಷಾಂತರ ವೀಕ್ಷಣೆಯನ್ನು  ಪಡೆದುಕೊಂಡಿದೆ. ಇನ್ನು ತಾಯಿ ಮತ್ತು ಬೆಕ್ಕಿನ ಪ್ರೀತಿಯ ವೀಡಿಯೋಗೆ ಹಲವಾರು ಕಮೆಂಟ್ ಗಳು ಹರಿದು ಬಂದಿದೆ. ಒಬ್ಬ ಬಳಕೆದಾರರು ‘ಬೆಕ್ಕು ಎಷ್ಟು ಮುದ್ದಾಗಿದೆ ಅಲ್ಲವೆ’ ಎಂದು ಕಮೆಂಟ್ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರರು ತಾಯಿಯ ರೂಪ ಬೇರೆ ಇರಬಹುದು ಆದರೆ ಪ್ರೀತಿ ಒಂದೇ’ ಎಂದು ಕಮೆಂಟ್ ಮಾಡಿದ್ದಾರೆ. ಮತ್ತೊಬ್ಬ ಬಳಕೆದಾರರು ‘ಒಬ್ಬ ಭಾರತೀಯ ತಾಯಿ ಮಾತ್ರ ಸಾಕುಪ್ರಾಣಿಗಳಿಗೆ ಈ ರೀತಿಯ ಪ್ರೀತಿ ತೋರಿಸಲು ಸಾಧ್ಯ’ ಎಂದು ಕಮೆಂಟ್ ಮಾಡಿದ್ದಾರೆ.

ಮತ್ತಷ್ಟು ವೈರಲ್​ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ:

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ