ಫ್ರಿಡ್ಜ್​ಗಿಂತ ಮಡಿಕೆಯೇ ಉತ್ತಮ! ಆನಂದ ಮಹೀಂದ್ರಾ ಯಾಕೆ ಹೀಗೆ ಹೇಳಿರುವುದು?

Anand Mahindra : ಹೀಗೆ ನೀವು ಹೋಲಿಕೆ ಮಾಡಲು ಸಾಧ್ಯವಿಲ್ಲ. ಮಡಿಕೆಯೇ ಬೇರೆ ಫ್ರಿಡ್ಜೇ ಬೇರೆ. ಎರಡರ ಪ್ರಯೋಜನಗಳು ಬೇರೆಬೇರೆ ಎಂದು ಅನೇಕರು ಈ ಟ್ವೀಟ್​ಗೆ ಪ್ರತಿಕ್ರಿಯಿಸಿದ್ದಾರೆ. ನೀವೇನಂತೀರಿ?

ಫ್ರಿಡ್ಜ್​ಗಿಂತ ಮಡಿಕೆಯೇ ಉತ್ತಮ! ಆನಂದ ಮಹೀಂದ್ರಾ ಯಾಕೆ ಹೀಗೆ ಹೇಳಿರುವುದು?
ಫ್ರಿಡ್ಜ್​ ಮತ್ತು ಮಣ್ಣಿನ ಮಡಿಕೆ
Follow us
TV9 Web
| Updated By: ಶ್ರೀದೇವಿ ಕಳಸದ

Updated on:May 10, 2023 | 4:32 PM

Viral News : ‘ವಿನ್ಯಾಸ ಮತ್ತು ಸೌಂದರ್ಯಪ್ರಜ್ಞೆಯ ಹಿನ್ನೆಲೆಯಲ್ಲಿ ನೋಡಿದಾಗ ಫ್ರಿಡ್ಜ್​ಗಿಂತ ಮಡಿಕೆಯೇ ಸಮರ್ಥ. ನಮ್ಮ ನಿತ್ಯಜೀವನದಲ್ಲಿ ಇದು ಅತ್ಯುತ್ತಮವಾದ ಗೃಹಸಾಧನವಾಗಬಲ್ಲುದು’ ಎಂದು ಉದ್ಯಮಿ ಆನಂದ ಮಹೀಂದ್ರಾ ಫ್ರಿಡ್ಜ್ ಮತ್ತು ಮಡಿಕೆಯ ಫೋಟೋ ಟ್ವೀಟ್ ಮಾಡಿದ್ದಾರೆ. ಇದೀಗ ನಿನ್ನೆಯಷ್ಟೇ ಮಾಡಿದ ಈ ಟ್ವೀಟ್ ಈಗಾಗಲೇ 1.2 ಮಿಲಿಯನ್​ಗಿಂತಲೂ ಹೆಚ್ಚು ಜನರ ಗಮನ ಸೆಳೆದಿದೆ.

ಅನೇಕರು ಈ ಟ್ವೀಟ್​ಗೆ ವಿವಿಧ ನೋಟಗಳಿಂದ ಪ್ರತಿಕ್ರಿಯಿಸಿದ್ದಾರೆ. ಕೆಲವರು ಈ ಟ್ವೀಟ್​ ಅನ್ನು ಒಪ್ಪಿದ್ದಾರೆ ಇನ್ನೂ ಕೆಲವರು ಇದು ವಾಸ್ತವದಿಂದ ದೂರ ಎಂದಿದ್ದಾರೆ. ಇನ್ನೂ ಕೆಲವರು ತಮಾಷೆಯಾಗಿ ಉತ್ತರಿಸಿದ್ದಾರೆ. ಮಡಿಕೆಗಾದರೆ ರೂ. 200 ವ್ಯಯಿಸಬಹುದು. ಫ್ರಿಡ್ಜ್​ ಗಾದರೆ ರೂ. 10,000 ಮತ್ತು ಅದಕ್ಕಿಂತಲೂ ಮಿಗಿಲು. ಜೊತೆಗೆ ವಿದ್ಯುತ್ ಬಿಲ್​. ಆದರೆ ಮಡಿಕೆಯಲ್ಲಿರುವ ನೀರು ಬೇಸಿಗೆಯಲ್ಲಿ ತಂಪಾಗಿರುತ್ತದೆ ಮತ್ತು ರುಚಿಯನ್ನೂ ಹೆಚ್ಚಿಸಿಕೊಳ್ಳುತ್ತದೆ ಎಂದು ಅನೇಕರು ಹೇಳಿದ್ದಾರೆ.

ಇದನ್ನೂ ಓದಿ : ವೈರಲ್ ಚಿಲ್ಲಿ ಲಿಪ್​ ಗ್ಲಾಸ್​; ಇದನ್ನು ಟ್ರೆಂಡ್​ ಆಗಲು ಬಿಡಬೇಡಿ ಎನ್ನುತ್ತಿರುವ ನೆಟ್ಟಿಗರು

ಆದರೆ ಮಡಿಕೆ ಮತ್ತು ಫ್ರಿಡ್ಜ್​ ಅನ್ನು ಸಾಮ್ಯಗೊಳಿಸಲಾಗದು ಎರಡರ ಪ್ರಯೋಜನ ಬೇರೆಬೇರೆಯೇ ಎಂದು ಕೆಲವರು ಪ್ರತಿಕ್ರಿಯಿಸಿದ್ದಾರೆ. ಮಡಿಕೆ ಇದ್ದರೆ ಮುಗಿಯಿತು ಫ್ರಿಡ್ಜ್​ ಅಥವಾ ನೀರಿನ ಬಾಟಲಿಯ ಅಗತ್ಯವೇ ಇಲ್ಲ ಎಂದು ಕೆಲವರು ಹೇಳಿದ್ದಾರೆ. ಮಡಿಕೆಯೇ ಯಾಕಾಗಬೇಕು? ನಾನು ಪ್ರತೀ ಬೇಸಿಗೆಯಲ್ಲಿ ತಾಮ್ರದ ಪಾತ್ರೆಯಲ್ಲಿ ಮಲ್ಲಿಗೆ ಹೂ ಹಾಕಿಟ್ಟಿರುತ್ತೇನೆ ಎಂದಿದ್ದಾರೆ ಮತ್ತೊಬ್ಬರು.

ಇದನ್ನೂ ಓದಿ : ಮೊಬೈಲ್​ ವಶಪಡಿಸಿಕೊಂಡಿದ್ದಕ್ಕೆ ಶಿಕ್ಷಕರಿಗೆ ವಿದ್ಯಾರ್ಥಿನಿಯಿಂದ ಪೆಪ್ಪರ್ ಸ್ಪ್ರೇ; ವಿಡಿಯೋ ವೈರಲ್

ನಾನು ಮಡಿಕೆಯಲ್ಲಿ ಕ್ರೀಮ್​ ಇಟ್ಟರೆ ಅದು ಮಿಲ್ಕ್​ ಶೇಕ್​ ಆಗಿರುತ್ತದೆ ಎಂದು ಮತ್ತೊಬ್ಬರು ಹೇಳಿದ್ದಾರೆ. ಅದಕ್ಕೆ ಪ್ರತ್ಯುತ್ತರವಾಗಿ ಅದು ಐಸ್ಕ್ರೀಮ್ ಆಗಬೇಕೆಂದರೆ ಫ್ರಿಡ್ಜ್​ನಲ್ಲಿಡಿ ಎಂದು ತಮಾಷೆ ಮಾಡಿದ್ದಾರೆ. ನೀವೇನಂತೀರಿ?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 4:29 pm, Wed, 10 May 23

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ