ವೈರಲ್ ಚಿಲ್ಲಿ ಲಿಪ್​ ಗ್ಲಾಸ್​; ಇದನ್ನು ಟ್ರೆಂಡ್​ ಆಗಲು ಬಿಡಬೇಡಿ ಎನ್ನುತ್ತಿರುವ ನೆಟ್ಟಿಗರು

Lip Gloss : ಅಯ್ಯಪ್ಪಾ! ಇನ್ನೆಂದೂ ಈ ಲಿಪ್​ ಗ್ಲಾಸ್​ ಪ್ರಯೋಗದ ಉಸಾಬರಿಗೆ ಹೋಗಲಾರೆ ಎನ್ನುತ್ತಿದ್ದಾಳೆ ಈ ಬ್ಯೂಟಿ ಬ್ಲಾಗರ್​. ಯಾಕೆ ಅಂತ ನಿಮಗೀಗಾಗಲೇ ಅರ್ಥವಾಗಿರುತ್ತೆ. ಆದರೂ ಈ ವಿಡಿಯೋ ನೋಡಿ.

ವೈರಲ್ ಚಿಲ್ಲಿ ಲಿಪ್​ ಗ್ಲಾಸ್​; ಇದನ್ನು ಟ್ರೆಂಡ್​ ಆಗಲು ಬಿಡಬೇಡಿ ಎನ್ನುತ್ತಿರುವ ನೆಟ್ಟಿಗರು
ಲಿಪ್​ ಗ್ಲಾಸ್​ ಮೇಲೆ ಮೆಣಸಿನ ಹುಡಿ ಅಂಟಿಸಿಕೊಳ್ಳುತ್ತಿರುವ ಬ್ಲಾಗರ್ ಜಹಾನ್ವಿ ಸಿಂಗ್​
Follow us
TV9 Web
| Updated By: Ganapathi Sharma

Updated on:May 09, 2023 | 2:27 PM

Viral Video : ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಬ್ಯೂಟಿ ಹ್ಯಾಕ್ಸ್​ ನೋಡಿದ್ದೀರಿ. ಆದರೆ ಇದೀಗ ವೈರಲ್ ಆಗಿರುವ ಈ ಬ್ಯೂಟಿ ಹ್ಯಾಕ್​ ಎಂದಾದರೂ ನೋಡಿದ್ದೀರಾ? ಖಂಡಿತ ಸಾಧ್ಯವಿಲ್ಲ. ಏಕೆಂದರೆ ಒಂದು ಮೆಣಸಿನಕಾಯಿ ಹೆಚ್ಚುವ ಹೊತ್ತಿಗೆ ಬೆರಳೆಲ್ಲ ಉರಿ ಅಂಟಿರುತ್ತದೆ. ಇನ್ನು ಮೃದುವಾದ ತುಟಿಗೆ ಹೀಗೆ ಮೆಣಸಿನ ಹುಡಿ ಅಂಟಿಸಿಕೊಳ್ಳುವುದೆಂದರೆ? ಯಾಕೆ ಹೀಗೆ ಮಾಡುತ್ತಿದ್ದಾಳೋ ಈ ಹುಡುಗಿ ಎಂದು ನೆಟ್ಟಿಗರೆಲ್ಲ ತಲೆ ಕೆರೆದುಕೊಳ್ಳುತ್ತಿದ್ದಾರೆ. ನೋಡಿ ನೀವೂ ಈ ವಿಡಿಯೋ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!
View this post on Instagram

A post shared by Jahanvi Singh (@fancy.pinks)

ಜಹಾನ್ವಿ ಸಿಂಗ್​ ಎಂಬ ಬ್ಯೂಟಿ ಬ್ಲಾಗರ್​ ಮೊದಲಿಗೆ ಲಿಪ್​ ಗ್ಲಾಸ್​ ಅನ್ನು ತುಟಿಗೆ ಸವರಿಕೊಳ್ಳುತ್ತಾಳೆ ನಂತರ ಬೀಜಗಳ ಸಮೇತ ಮೆಣಸಿನ ಹುಡಿಯನ್ನು ಅದರ ಮೇಲೆ ಅಂಟಿಸಿಕೊಳ್ಳುತ್ತಾಳೆ. ಆ ನಂತರ ಟಿಶ್ಯೂ ಪೇಪರ್​​ನಿಂದ ತುಟಿಗಳನ್ನು ಸ್ವಚ್ಛಗೊಳಿಸಿಕೊಳ್ಳುತ್ತಾಳೆ. ತುಟಿಗಳು ಗುಲಾಬಿ ಬಣ್ಣಕ್ಕೆ ರಂಗೇರಿರುತ್ತವೆ. ಆದರೆ ಈ ವಿಡಿಯೋ ಮಾಡಿದ ಮೇಲೆ, ಇನ್ನೆಂದೂ ಚಿಲ್ಲಿ ಲಿಪ್​ ಗ್ಲಾಸ್​ನ ಉಸಾಬರಿಗೆ ಹೋಗಬಾರದು ಎಂದು!

ಇದನ್ನೂ ಓದಿ : ಮೊಬೈಲ್​ ವಶಪಡಿಸಿಕೊಂಡಿದ್ದಕ್ಕೆ ಶಿಕ್ಷಕರಿಗೆ ವಿದ್ಯಾರ್ಥಿನಿಯಿಂದ ಪೆಪ್ಪರ್ ಸ್ಪ್ರೇ; ವಿಡಿಯೋ ವೈರಲ್

ಯಾಕೆ ಆಕೆ ಹಾಗೆ ಹೇಳಿದಳು ಎನ್ನುವುದನ್ನು ಮತ್ತೆ ಬಿಡಿಸಿ ಹೇಳಬೇಕಲ್ಲ ಅಲ್ಲವಾ? ಗಮನಿಸಿದಿರಾ, ಆಕೆಯ ತುಟಿಗಳು ಊದಿಕೊಂಡಿದ್ದನ್ನು? ಈ ವಿಡಿಯೋ ನೋಡಿದ ಅನೇಕರು, ದಯವಿಟ್ಟು ಇಂಥದನ್ನೆಲ್ಲ ಪ್ರೋತ್ಸಾಹಿಸಬೇಡಿ, ಇದನ್ನು ಟ್ರೆಂಡ್ ಆಗದಂತೆ ನೋಡಿಕೊಳ್ಳಿ. ಇದು ಬಹಳೇ ಅಪಾಯಕಾರಿಯಾಗಿದೆ ಎಂದಿದ್ದಾರೆ. ಇಂಥ ಮೂರ್ಖತನ ಯಾಕೆ ಬೇಕು, ಲಿಪ್​ ಬಾಮ್​ ಹಚ್ಚಿಕೊಂಡರೆ ಮುಗಿಯಿತು ತಾನೆ? ಎಂದು ಮತ್ತೊಬ್ಬರು ಪ್ರಶ್ನಿಸಿದ್ದಾರೆ. ಪ್ರಚಾರಕ್ಕಾಗಿ ಜನ ಏನೂ ಮಾಡುತ್ತಾರೆ. ಇದರಲ್ಲಿ ಜನರ ತಪ್ಪೇನು ಎಂದು ಇನ್ನೊಬ್ಬರು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ : ಸ್ಪೈಸ್​ಜೆಟ್​ನ​ ಬ್ಯಾಂಕಾಕ್​ ವಿಮಾನದಲ್ಲಿ ಪೈಲಟ್​ನ​ ತಮಾಷೆ ವಿಡಿಯೋ ವೈರಲ್

ನಾನೊಮ್ಮೆ ಅಚಾನಕ್ಕಾಗಿ ಝಂಡೂಬಾಮ್​ ಹಚ್ಚಿಕೊಂಡೆ ತುಟಿಗೆ. ಉರಿದುರಿದು ಹೋಯಿತು ತುಟಿ. ಇದೂ ಬಹುಶಃ ಅಷ್ಟೇ ಉರಿ ಅನ್ನಿಸಿರಬಹುದು ಆಕೆಗೆ ಎಂದಿದ್ದಾರೆ ಮತ್ತೊಬ್ಬರು. ಈಗ ಚಿಲ್ಲಿ ಫ್ಲೇಕ್ಸ್ ಆಯ್ತು ಮುಂದೆ ಓರಿಗಾನೋ ಹಚ್ಚಿಕೊಳ್ಳಿ ಎಂದು ತಮಾಷೆ ಮಾಡಿದ್ದಾರೆ ಇನ್ನೂ ಒಬ್ಬರು.

ಹೇಳಿಕೇಳಿ ಮೆಣಸಿನಕಾಯಿ! ಬೇಕಾ ಇಂಥಾ ಹುಚ್ಚಾಟಗಳೆಲ್ಲಾ? ನೀವೇನಂತೀರಿ?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 2:21 pm, Tue, 9 May 23

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ