AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕುಡಿದ ಮತ್ತಿನಲ್ಲಿ ಮಧ್ಯರಾತ್ರಿ ಗೂಳಿಸವಾರಿ; ಪೊಲೀಸರೆದುರು ತಪ್ಪೊಪ್ಪಿಕೊಂಡ ಯುವಕ

Uttarakhand : ಹೃಷಿಕೇಶದ ತಪೋವನದ ಬೀದಿಯಲ್ಲಿ ನಡುರಾತ್ರಿಯಲ್ಲಿ ಈ ಯುವಕ ಕುಡಿದು ಹೀಗೆ ಗೂಳಿಸವಾರಿ ಮಾಡುತ್ತಿದ್ದರೆ, ಕೈಲಾಪತಿಗೆ ಜಯವಾಗಲಿ ಎಂಬ ಘೋಷಣೆ ಕೂಗಿದ್ದಾರೆ ಜನ! ಆಮೇಲೇನಾಯಿತು ಓದಿ.

ಕುಡಿದ ಮತ್ತಿನಲ್ಲಿ ಮಧ್ಯರಾತ್ರಿ ಗೂಳಿಸವಾರಿ; ಪೊಲೀಸರೆದುರು ತಪ್ಪೊಪ್ಪಿಕೊಂಡ ಯುವಕ
ಮಧ್ಯರಾತ್ರಿ ಕುಡಿದ ಅಮಲಿನಲ್ಲಿ ಗೂಳಿಸವಾರಿ ಮಾಡಿದ ಯುವಕ
Follow us
TV9 Web
| Updated By: ಶ್ರೀದೇವಿ ಕಳಸದ

Updated on:May 09, 2023 | 4:12 PM

Viral Video : ಕಲಿಯುಗ ಎಂದರೆ ಇದೇ ಏನು? ಕೇಳಬೇಡಿ. ಈ ವಿಡಿಯೋ ನೋಡಿದ ನಂತರ ಇದು ಯಾವ ಯುಗ ಎಂದು ನೀವೇ ನಿರ್ಧರಿಸಿ. ಇಲ್ಲೊಬ್ಬ ಯುವಕ ರಾತ್ರೋರಾತ್ರಿ ಕುಡಿದ ಮತ್ತಿನಲ್ಲಿ ಹೋರಿಸವಾರಿ ಮಾಡಿದ್ದಾನೆ. ಆ ಹೋರಿಯೋ ಕುದುರೆಯಂತೆ ಓಡಿರುವ ರೀತಿ ನೋಡಿದರೆ ಕುಳಿತವ ಯಾವೂರ ರಾಜನೋ ಇವ ಎಂದೆನ್ನಿಸದೇ ಇರಲಾರದು. ಆದರೆ ಇದನ್ನು ನೋಡಿದ ನೆಟ್​ಮಂದಿ ಮಾತ್ರ ದಂಗಾಗಿದ್ದಾರೆ.

ಈ ವಿಡಿಯೋ ಅನ್ನು ಹೃಷಿಕೇಶದ ತಪೋವನದ ಬೀದಿಯಲ್ಲಿ ಚಿತ್ರೀಕರಿಸಲಾಗಿದೆ ಎಂದು ಉತ್ತರಾಖಂಡ್​ ಪೊಲೀಸರು ತಿಳಿಸಿದ್ದಾರೆ. ಇದೀಗ ಈ ಯುವಕನ ವಿರುದ್ಧ ಕಾನೂನು ಕ್ರಮ ಕೈಗೊಳ್ಳಾಗಿದೆ. ಇನ್ನೆಂದೂ ಈತ ಇಂಥ ಕೃತ್ಯದಲ್ಲಿ ಮತ್ತು ಸಾಹಸದಲ್ಲಿ ತೊಡಗದಂತೆ ಎಚ್ಚರಿಕೆಯನ್ನು ನೀಡಲಾಗಿದೆ.

ಇದನ್ನು ಓದಿ : ಮೊಬೈಲ್​ ವಶಪಡಿಸಿಕೊಂಡಿದ್ದಕ್ಕೆ ಶಿಕ್ಷಕರಿಗೆ ವಿದ್ಯಾರ್ಥಿನಿಯಿಂದ ಪೆಪ್ಪರ್ ಸ್ಪ್ರೇ; ವಿಡಿಯೋ ವೈರಲ್

ಉತ್ತರಾಖಂಡ್ ಪೊಲೀಸರು ಈ ವಿಡಿಯೋ ಮತ್ತು ಘಟನೆಯ ವಿವರವನ್ನು ಟ್ವೀಟ್ ಮಾಡಿದ್ದಾರೆ; ‘ಮೇ 5ರಂದು ಮಧ್ಯರಾತ್ರಿ ಈ ಘಟನೆ ನಡೆದಿದೆ. ಈ ಘಟನೆಯ ವಿಡಿಯೋ ಅನ್ನು ಸಾಮಾಜಿಕ ಜಾಲತಾಣದಲ್ಲಿ ನೋಡಿದ ತಕ್ಷಣವೇ ಈ ಯುವಕನನ್ನು ಪತ್ತೆ ಹಚ್ಚಿ ಕಾನೂನು ಕ್ರಮ ಕೈಗೊಳ್ಳಲಾಗಿದೆ. ಮುಂದೆ ಇರು ಪುನರಾವರ್ತನೆಯಾಗದಂತೆ ಆತನಿಗೆ ಎಚ್ಚರಿಕೆ ನೀಡಲಾಗಿದೆ’.

ಇದನ್ನೂ ಓದಿ : ವೈರಲ್ ಚಿಲ್ಲಿ ಲಿಪ್​ ಗ್ಲಾಸ್​; ಇದನ್ನು ಟ್ರೆಂಡ್​ ಆಗಲು ಬಿಡಬೇಡಿ ಎನ್ನುತ್ತಿರುವ ನೆಟ್ಟಿಗರು

ಆದರೆ ನೆಟ್ಟಿಗರಲ್ಲಿ ಕೆಲವರು ಈತನಕ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರೆ, ಇನ್ನೂ ಕೆಲವರು ಜಲ್ಲಿಕಟ್ಟು ಪಂದ್ಯವನ್ನು ನೆನಪಿಸಿಕೊಂಡು, ಇದು ಕಾನೂನು ರೀತಿ ಅಪರಾಧವಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ. ಆದರೆ ಅಪರಾತ್ರಿಯಲ್ಲಿ ಹೀಗೆ ವರ್ತಿಸುವುದು ಎಷ್ಟು ಸರಿ? ಈ ಪ್ರಕರಣವನ್ನು ಸಾರ್ವಜನಿಕ ಹಿತಾಸಕ್ತಿಯ ಮೇರೆಗೆ ಗ್ರಹಿಸಬೇಕಲ್ಲವೆ?

ನೀವೇನಂತೀರಿ?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 4:05 pm, Tue, 9 May 23

ತಮನ್ನಾ ವಿವಾದದಲ್ಲಿ ಯಶ್ ಹೆಸರು ಹೇಳಿದ ನಟಿ ಕಾರುಣ್ಯ ರಾಮ್
ತಮನ್ನಾ ವಿವಾದದಲ್ಲಿ ಯಶ್ ಹೆಸರು ಹೇಳಿದ ನಟಿ ಕಾರುಣ್ಯ ರಾಮ್
ಇ-ಖಾತಾ ಬಗ್ಗೆ ಮಹತ್ವದ ಮಾಹಿತಿ ನೀಡಿದ ಡಿಕೆ ಶಿವಕುಮಾರ್
ಇ-ಖಾತಾ ಬಗ್ಗೆ ಮಹತ್ವದ ಮಾಹಿತಿ ನೀಡಿದ ಡಿಕೆ ಶಿವಕುಮಾರ್
ಬೆಂಗಳೂರಿನಲ್ಲಿ ಫುಟ್ ಪಾತ್ ಅಂಗಡಿ ತೆರವುಗೊಳಿಸಲು ನಿರ್ಧಾರ: ಡಿಕೆಶಿ
ಬೆಂಗಳೂರಿನಲ್ಲಿ ಫುಟ್ ಪಾತ್ ಅಂಗಡಿ ತೆರವುಗೊಳಿಸಲು ನಿರ್ಧಾರ: ಡಿಕೆಶಿ
​ ಕ್ರಿಪ್ಟೋ ಕರೆನ್ಸಿ ಹೆಸರಿನಲ್ಲಿ ಸಾವಿರಾರು ಜನರಿಗೆ ವಂಚನೆ
​ ಕ್ರಿಪ್ಟೋ ಕರೆನ್ಸಿ ಹೆಸರಿನಲ್ಲಿ ಸಾವಿರಾರು ಜನರಿಗೆ ವಂಚನೆ
ಝಾನ್ಸಿಯಲ್ಲಿ ಬಿರುಗಾಳಿಯ ಹೊಡೆತಕ್ಕೆ 70ಕ್ಕೂ ಹೆಚ್ಚು ಗಿಳಿಗಳು ಬಲಿ
ಝಾನ್ಸಿಯಲ್ಲಿ ಬಿರುಗಾಳಿಯ ಹೊಡೆತಕ್ಕೆ 70ಕ್ಕೂ ಹೆಚ್ಚು ಗಿಳಿಗಳು ಬಲಿ
ಹತ್ತು ಸಾವಿರ ಜನ ಕೂತು ವೀಕ್ಷಿಸಲು ಗ್ಯಾಲರಿಗಳ ವ್ಯವಸ್ಥೆ: ಶಿವಕುಮಾರ್
ಹತ್ತು ಸಾವಿರ ಜನ ಕೂತು ವೀಕ್ಷಿಸಲು ಗ್ಯಾಲರಿಗಳ ವ್ಯವಸ್ಥೆ: ಶಿವಕುಮಾರ್
ಎಲ್ಲ ಪಕ್ಷಗಳ ಮುಖ್ಯಮಂತ್ರಿಗಳನ್ನು ಭೇಟಿಯಾದ ಪ್ರಧಾನಿ ಮೋದಿ
ಎಲ್ಲ ಪಕ್ಷಗಳ ಮುಖ್ಯಮಂತ್ರಿಗಳನ್ನು ಭೇಟಿಯಾದ ಪ್ರಧಾನಿ ಮೋದಿ
ಬೆಂಗಳೂರಿನಲ್ಲಿ ಸುರಂಗ ಮಾರ್ಗದ ಬಗ್ಗೆ ಮಹತ್ವದ ಅಪ್ಡೇಟ್​ ನೀಡಿದ ಡಿಕೆಶಿ
ಬೆಂಗಳೂರಿನಲ್ಲಿ ಸುರಂಗ ಮಾರ್ಗದ ಬಗ್ಗೆ ಮಹತ್ವದ ಅಪ್ಡೇಟ್​ ನೀಡಿದ ಡಿಕೆಶಿ
ಬಸವಣ್ಣನವರನ್ನು ಟೀಕಿಸುವ ಬಸನಗೌಡ ಯತ್ನಾಳ್ ಒಬ್ಬ ಅರೆಹುಚ್ಚ: ರೇಣುಕಾಚಾರ್ಯ
ಬಸವಣ್ಣನವರನ್ನು ಟೀಕಿಸುವ ಬಸನಗೌಡ ಯತ್ನಾಳ್ ಒಬ್ಬ ಅರೆಹುಚ್ಚ: ರೇಣುಕಾಚಾರ್ಯ
ಖರ್ಗೆ ಹಠಾವ್ ಬಿಜೆಪಿ ಬಚಾವ್ ಅನ್ನೋದು ವಿಪಕ್ಷ ನಾಯಕರ ಅಜೆಂಡಾ ಆಗಿದೆ: ಖರ್ಗೆ
ಖರ್ಗೆ ಹಠಾವ್ ಬಿಜೆಪಿ ಬಚಾವ್ ಅನ್ನೋದು ವಿಪಕ್ಷ ನಾಯಕರ ಅಜೆಂಡಾ ಆಗಿದೆ: ಖರ್ಗೆ