AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೊಬೈಲ್​ ವಶಪಡಿಸಿಕೊಂಡಿದ್ದಕ್ಕೆ ಶಿಕ್ಷಕರಿಗೆ ವಿದ್ಯಾರ್ಥಿನಿಯಿಂದ ಪೆಪ್ಪರ್ ಸ್ಪ್ರೇ; ವಿಡಿಯೋ ವೈರಲ್

Pepper Spray : ಗೂಗಲ್ ಮಾಡಿ ಕ್ಲಾಸ್​ವರ್ಕ್ ಮಾಡುತ್ತಿದ್ದ ಹೈಸ್ಕೂಲು ವಿದ್ಯಾರ್ಥಿನಿಯ ಮೊಬೈಲ್​ ಅನ್ನು ಶಿಕ್ಷಕರು ಕಸಿದುಕೊಂಡರು. ನನ್ನ ಮೊಬೈಲ್​ ಕೊಡಿ ಎಂದು ಅವರನ್ನು ಬೆನ್ನಟ್ಟಿದ ಆಕೆ ಪೆಪ್ಪರ್ ಸ್ಪ್ರೇ ಮಾಡಿಯೇಬಿಟ್ಟಳು.

ಮೊಬೈಲ್​ ವಶಪಡಿಸಿಕೊಂಡಿದ್ದಕ್ಕೆ ಶಿಕ್ಷಕರಿಗೆ ವಿದ್ಯಾರ್ಥಿನಿಯಿಂದ ಪೆಪ್ಪರ್ ಸ್ಪ್ರೇ; ವಿಡಿಯೋ ವೈರಲ್
ಶಿಕ್ಷಕರ ಮೇಲೆ ಪೆಪ್ಪರ್ ಸ್ಪ್ರೇ ಮಾಡಿದ ಹೈಸ್ಕೂಲು ವಿದ್ಯಾರ್ಥಿನಿ
TV9 Web
| Edited By: ಶ್ರೀದೇವಿ ಕಳಸದ|

Updated on:May 09, 2023 | 11:48 AM

Share

Viral News : ಮೊಬೈಲ್​ ಇಲ್ಲದೆ ಕಾಲವೇ ಚಲಿಸದು ಎಂಬಂಥ ಪರಿಸ್ಥಿತಿಗೆ ಬಂದು ನಿಂತಿದೆ. ಹುಟ್ಟಿದ ಕೂಸಿನಿಂದ ಹಿಡಿದು ಮುಪ್ಪಾನು ಮುದುಕರವರೆಗೂ ಮೊಬೈಲ್ ಸಂಜೀವಿನಿ ಇದ್ದಂತೆ. ಶಾಲಾಕಾಲೇಜುಗಳಲ್ಲಿ ಮೊಬೈಲ್​ ಬಳಕೆಯನ್ನು ನಿಷೇಧಿಸಿದರೂ ಕದ್ದುಮುಚ್ಚಿಯಾದರೂ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಅದರ ಮೊರೆ ಹೋಗುತ್ತಾರೆ. ಇದೀಗ ವೈರಲ್ ಆಗಿರುವ ಈ ವಿಡಿಯೋ ನೋಡಿ. ಹೈಸ್ಕೂಲು ವಿದ್ಯಾರ್ಥಿನಿಯೊಬ್ಬಳು ತರಗತಿ ನಡೆಯುವಾಗ ಗೂಗಲ್​ ಸಹಾಯದಿಂದ ಕ್ಲಾಸ್​ವರ್ಕ್ ಮಾಡುತ್ತಿದ್ದಳು ಎಂಬ ಕಾರಣಕ್ಕೆ ಶಿಕ್ಷಕರು ಮೊಬೈಲ್​ ಇಸಿದುಕೊಂಡಿದ್ದಾರೆ. ಪ್ರತಿಯಾಗಿ ಆಕೆ ಅವರಿಗೆ ಏನು ಮಾಡಿದ್ದಾಳೆ? ವಿಡಿಯೋ ನೋಡಿ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಈ ಘಟನೆಯು ಟೆನ್ನೆಸ್ಸಿಯ ನ್ಯಾಶ್ವೆಲೆಯಲ್ಲಿರುವ ಆಂಟಿಯೋಕ್​ ಶಾಲೆಯಲ್ಲಿ ನಡೆದಿದೆ. ಶಿಕ್ಷಕರು ತನ್ನ ಮೊಬೈಲ್​ ಇಸಿದುಕೊಂಡು ಹೊರಹೋಗುತ್ತಿದ್ದಂತೆ, ಅವರನ್ನು ಹಿಂಬಾಲಿಸಿದ ವಿದ್ಯಾರ್ಥಿನಿ ನನ್ನ ಮೊಬೈಲ್​ ನನಗೆ ಬೇಕು ಎಂದು ಕೂಗಾಡಿದ್ದಾಳೆ. ನಂತರ ಶಿಕ್ಷಕರಿಗೆ ಎರಡು ಸಲ ಪೆಪ್ಪರ್​ ಸ್ಪ್ರೇ ಮಾಡಿದ್ದಾಳೆ. ಉರಿ ಮತ್ತು ಆಘಾತದಿಂದ ಕುಸಿದ ಶಿಕ್ಷಕರು ನೆಲಕ್ಕೆ ಮಂಡಿಯೂರಿ ಕುಳಿತಿದ್ದಾರೆ.

ಇದನ್ನು ಓದಿ : ಅಬ್ಬಾ ಕೆಲಸ ಮುಗೀತಪ್ಪಾ! ಬಿಬಿಸಿ ಸುದ್ದಿವಾಚಕಿಯ ಲೈವ್​ ನ್ಯೂಸ್​ ತುಣುಕು ವೈರಲ್

ಇತರೇ ಕ್ಲಾಸಿನ ವಿದ್ಯಾರ್ಥಿಗಳು, ಶಿಕ್ಷಕರು ಈ ಅಚಾತುರ್ಯ ಘಟನೆಯನ್ನು ನೋಡಲು ತರಗತಿಯಿಂದ ಹೊರಬಂದಿದ್ದಾರೆ. ಮತ್ತೊಂದು ಕ್ಲಾಸಿನ ಶಿಕ್ಷಕರು ನಿನ್ನ ಮೊಬೈಲ್​ ಅನ್ನು ಹಿಂದಿರುಗಿಸಲಾಗದು ಎಂದೂ ಹೇಳಿದ್ದಾರೆ. ಆದರೆ ರೆಡ್ಡಿಟ್​ನಲ್ಲಿ ಈ ವಿಡಿಯೋ ಪೋಸ್ಟ್​ ಮಾಡಲಾದ ವ್ಯಕ್ತಿ, ‘ಈ ಹಿಂದೆ ಕೂಡ ಬೇರೊಬ್ಬ ವಿದ್ಯಾರ್ಥಿಯು ಕ್ಲಾಸಿನಲ್ಲಿ ಮೊಬೈಲ್​ ಬಳಸಿದಾಗ ಇದೇ ಶಿಕ್ಷಕರು ಮೊಬೈಲ್​ ಅನ್ನು ವಶಪಡಿಸಿಕೊಂಡಿದ್ದರು. ಆ ವಿದ್ಯಾರ್ಥಿ ಶಿಕ್ಷಕರ ಮುಖಕ್ಕೇ ಗುದ್ದಿದ್ದ. ಇಂಥ ಘಟನೆಗಳು ಆಗಾಗ ಈ ಶಾಲೆಯಲ್ಲಿ ನಡೆಯುತ್ತಲೇ ಇರುತ್ತವೆ’ ಎಂದಿದ್ದಾರೆ.

ಇದನ್ನೂ ಓದಿ : ಗುಂಗೀಯ ಹುಳ ಬಂದಿತ್ತೇನ ತಂಗಿ?; ಕಣ್ಣಲ್ಲೇ ಕೊಲ್ಲುವ ಪ್ರಾಂಜಲಿ ಶರ್ಮಾ ಬೆಳ್ಳಿತೆರೆಗೆ ಯಾವಾಗ?

ಈ ವಿಡಿಯೋ ನೋಡಿದ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಮೆರಿಕದಲ್ಲಿ ಯಾಕೆ ವಿದ್ಯಾರ್ಥಿಗಳು ತಮ್ಮ ಶಿಕ್ಷಕರನ್ನು ಗೌರವಿಸುವುದಿಲ್ಲವೋ? ಈಕೆ ಶಿಕ್ಷಕರ ಮೇಲೆ ನೇರ ಹಲ್ಲೆ ನಡೆಸಿದ್ದಾಳೆ ಇದು ತಪ್ಪು. ಆಕೆಯನ್ನು ಈ ದೇಶದಿಂದಲೇ ಹೊರಹಾಕಬೇಕು. ಇದು ಸಾಂಸ್ಕೃತಿಕ ಆಘಾತ. ನಮ್ಮ ತಾಯ್ನಾಡಿನಲ್ಲಿ ಇಂಥ ವರ್ತನೆ ಸಲ್ಲದು ಎಂದು ಅನೇಕರು ತಮ್ಮ ಕೋಪ ವ್ಯಕ್ತಪಡಿಸಿದ್ಧಾರೆ.

ಇದನ್ನೂ ಓದಿ : ಡೋಲೋ 650 ಶಶಿರೇಖಾ; ನಿಮ್ಮ ಮನೆಮಗಳೀಗ ಮಾಡೆಲಿಂಗ್​ಗೂ ಸೈ?

ಬಹಳ ನೋವಿನ ಸಂಗತಿ ಎಂದರೆ, ಇಲ್ಲಿರುವ ವಿದ್ಯಾರ್ಥಿಗಳು ಈ ಘಟನೆಯನ್ನು ನೋಡಿ ತಮಾಷೆಯಾಗಿ ನಕ್ಕಿದ್ದಾರೆ ಎಂದು ಮತ್ತೊಬ್ಬರು ಬೇಸರ ವ್ಯಕ್ತಪಡಿಸಿದ್ದಾರೆ. ಶಾಲೆಗಳಲ್ಲಿ ಶಸ್ತ್ರಧಾರಿ ಭದ್ರತಾ ಸಿಬ್ಬಂದಿ ಬೇಕಿಲ್ಲ ಎಂದು ಕೆಲವರು ವಾದಿಸುತ್ತಾರೆ. ಆದರೆ ಶಾಲಾ ಮಕ್ಕಳು ಆಕ್ರಮಣಕಾರಿಯಾಗಿ ವರ್ತಿಸುತ್ತಿದ್ದಾರೆ. ಆಗಾಗ ಶೂಟೌಟ್​ ಪ್ರಕರ್ಣಗಳು ದಾಖಲಾಗುತ್ತಿವೆ ಎಂದು ಇಬ್ಬೊಬ್ಬರು ಆತಂಕ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ : ಸ್ಪೈಸ್​ಜೆಟ್​ನ​ ಬ್ಯಾಂಕಾಕ್​ ವಿಮಾನದಲ್ಲಿ ಪೈಲಟ್​ನ​ ತಮಾಷೆ ವಿಡಿಯೋ ವೈರಲ್

ಅಂದಹಾಗೆ ಪೆಪ್ಪರ್ ಸ್ಪ್ರೇಯಂಥ ಸಾಧನಗಳನ್ನು ತುರ್ತು ಸಮಯದಲ್ಲಿ ಸ್ವರಕ್ಷಣೆಗಾಗಿ ಬಳಸಲಾಗುತ್ತದೆ ಎನ್ನುವುದು ಎಲ್ಲರ ಗಮನದಲ್ಲಿದ್ದರೆ ಸಾಕು. ಅಸಭ್ಯ ವರ್ತನೆ, ಅತ್ಯಾಚಾರ, ಅನವಶ್ಯಕ ಹಲ್ಲೆ, ಕಳ್ಳತನದ ಸಂದರ್ಭದಲ್ಲಿ ಈ ಸಾಧನವನ್ನು ಬಳಸಲು ಅಡ್ಡಿಯಿಲ್ಲ.

ಇದನ್ನು ಓದಿದ ನೀವು ಏನಂತೀರಿ?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 11:47 am, Tue, 9 May 23

Follow Us
ಧರ್ಮಸ್ಥಳದಲ್ಲಿ ಶಾಸಕರ ಆಣೆ ಪ್ರಮಾಣ ನಿರ್ಧಾರದಿಂದ ಹಿಂದೆ ಸರಿದ ಬಿಜೆಪಿ
ಧರ್ಮಸ್ಥಳದಲ್ಲಿ ಶಾಸಕರ ಆಣೆ ಪ್ರಮಾಣ ನಿರ್ಧಾರದಿಂದ ಹಿಂದೆ ಸರಿದ ಬಿಜೆಪಿ
‘ಹೀರೋಗಳು ವರ್ಷಕ್ಕೆ ಒಂದಾದರೂ ಸಿನಿಮಾ ಕೊಡಬೇಕು, ಆಗ ಇಂಡಸ್ಟ್ರಿ ಉಳಿಯುತ್ತೆ’
‘ಹೀರೋಗಳು ವರ್ಷಕ್ಕೆ ಒಂದಾದರೂ ಸಿನಿಮಾ ಕೊಡಬೇಕು, ಆಗ ಇಂಡಸ್ಟ್ರಿ ಉಳಿಯುತ್ತೆ’
ರಾಕಸಕೊಪ್ಪ ಡ್ಯಾಂ ಖಾಲಿ: ಬೆಳಗಾವಿ ನಗರದ ಕುಡಿಯುವ ನೀರಿನ ಸಮಸ್ಯೆ ತೀವ್ರ
ರಾಕಸಕೊಪ್ಪ ಡ್ಯಾಂ ಖಾಲಿ: ಬೆಳಗಾವಿ ನಗರದ ಕುಡಿಯುವ ನೀರಿನ ಸಮಸ್ಯೆ ತೀವ್ರ
ಬಿಳಿಗಿರಿರಂಗನಾಥಸ್ವಾಮಿ ಬೆಟ್ಟದಲ್ಲಿ ಒಂಟಿ ಸಲಗದ ಅಟಾಟೋಪ
ಬಿಳಿಗಿರಿರಂಗನಾಥಸ್ವಾಮಿ ಬೆಟ್ಟದಲ್ಲಿ ಒಂಟಿ ಸಲಗದ ಅಟಾಟೋಪ
ಕನಕಪುರ ದೇಗುಲ ಮಠದ ಹಿರಿಯ ಶ್ರೀ ಮುಮ್ಮಡಿ ನಿರ್ವಾಣ ಸ್ವಾಮೀಜಿ ಲಿಂಗೈಕ್ಯ
ಕನಕಪುರ ದೇಗುಲ ಮಠದ ಹಿರಿಯ ಶ್ರೀ ಮುಮ್ಮಡಿ ನಿರ್ವಾಣ ಸ್ವಾಮೀಜಿ ಲಿಂಗೈಕ್ಯ
ನಿರ್ಮಲಾನಂದನಾಥಶ್ರೀ ಭೇಟಿಯಾದ ಸಿಎಂ ಡಿಕೆ ಶಿವಕುಮಾರ್
ನಿರ್ಮಲಾನಂದನಾಥಶ್ರೀ ಭೇಟಿಯಾದ ಸಿಎಂ ಡಿಕೆ ಶಿವಕುಮಾರ್
ಇಂದು ಈ ರಾಶಿಯವರಿಗೆ ಹಳೆಯ ಖಾಯಿಲೆಗಳು ಮರುಕಳಿಸುವ ಸಾಧ್ಯತೆ
ಇಂದು ಈ ರಾಶಿಯವರಿಗೆ ಹಳೆಯ ಖಾಯಿಲೆಗಳು ಮರುಕಳಿಸುವ ಸಾಧ್ಯತೆ
ಹೆಚ್​​​ಡಿಕೆ ಪಂಥಾಹ್ವಾನ, ವಿಧಾನಸೌಧಕ್ಕೆ ಆಹ್ವಾನ ಕೊಟ್ಟ ಡಿಕೆ ಶಿವಕುಮಾರ್​​
ಹೆಚ್​​​ಡಿಕೆ ಪಂಥಾಹ್ವಾನ, ವಿಧಾನಸೌಧಕ್ಕೆ ಆಹ್ವಾನ ಕೊಟ್ಟ ಡಿಕೆ ಶಿವಕುಮಾರ್​​
ಚೆನ್ನೈನಲ್ಲಿ ಗೀತಾ ಶಿವರಾಜ್​ಕುಮಾರ್ ಜನ್ಮದಿನ ಆಚರಿಸಿದ ಶಿವಣ್ಣ ಫ್ಯಾನ್ಸ್
ಚೆನ್ನೈನಲ್ಲಿ ಗೀತಾ ಶಿವರಾಜ್​ಕುಮಾರ್ ಜನ್ಮದಿನ ಆಚರಿಸಿದ ಶಿವಣ್ಣ ಫ್ಯಾನ್ಸ್
ಕೊನೆಗೂ ಅಧಿಕಾರ ಹಂಚಿಕೆ ಗುಟ್ಟುಬಿಚ್ಚಿಟ್ಟ ಸಿಎಂ ಡಿ.ಕೆ.ಶಿವಕುಮಾರ್
ಕೊನೆಗೂ ಅಧಿಕಾರ ಹಂಚಿಕೆ ಗುಟ್ಟುಬಿಚ್ಚಿಟ್ಟ ಸಿಎಂ ಡಿ.ಕೆ.ಶಿವಕುಮಾರ್