ಡೋಲೋ 650 ಶಶಿರೇಖಾ; ನಿಮ್ಮ ಮನೆಮಗಳೀಗ ಮಾಡೆಲಿಂಗ್ಗೂ ಸೈ?
Dolo 650 : ‘ಹೌದ್ರಣ್ಣೋ, ನಿಮ್ಗೆ ಅನ್ಮಾನಾ ಬಂದಿದ್ದು ದಿಟಾನೇಯಾ. ಇವರು ಮೈಸೂರಿನ ದಿಟ್ಟೆ ಶಶಿರೇಖಾನೇಯಾ. ಇವ್ರು ಡಿಜಿಟಲ್ ಕ್ರಿಯೇಟರೂ ಔದು. ಇವ್ರ ಒಸಾ ರೀಲ್ಸ್ ನೋಡೀದಿರಾ? ಇವ್ರ ಪಾಲೋವರ್ಸು ಲಕ್ಸಾ ದಾಟವ್ರೆ.
Viral Video : ಎರಡು ವರ್ಷಗಳ ಹಿಂದೆ ಡೋಲೋ 650ಯ ಅಂಬಾಸಿಡರ್ ಎಂಬಂತೆ ಕರ್ನಾಟಕದ ತುಂಬಾ ಬಿಂಬಿಸಲ್ಪಟ್ಟ ಮೈಸೂರಿನ ಶಶಿರೇಖಾ ಅವರ ‘ಕೊರೊನಾ ಡೈಲಾಗ್’ ಯಾರಿಗೆ ತಾನೆ ನೆನಪಿಲ್ಲ? ಆನಂತರ ವಿನಾಕಾರಣ ಸಾಕಷ್ಟು ಟ್ರೋಲ್ಗೆ ಒಳಗಾದ ಅವರು ಒಂದಿನಿತೂ ಕುಗ್ಗದೆ ಬಂದ ಬಾಣಗಳನ್ನೇ ತೊಟ್ಟು ತಮ್ಮನ್ನು ಮತ್ತಷ್ಟು ಗಟ್ಟಿಗೊಳಿಸಿಕೊಂಡರು. ಸಾಮಾಜಿಕ ಜಾಲತಾಣಗಳಲ್ಲಿ ರೀಲ್ಸ್ ಮಾಡುವುದರ ಮೂಲಕ ತಮ್ಮ ಆಸಕ್ತಿ, ಅಭಿಲಾಶೆಗಳನ್ನು ವ್ಯಕ್ತಪಡಿಸಿದರು.
ಇದನ್ನೂ ಓದಿView this post on Instagram
29 ವರ್ಷದ ಶಶಿರೇಖಾ ಎರಡು ಮಕ್ಕಳ ತಾಯಿ. ಕೊರೊನಾ ಸಂದರ್ಭದಲ್ಲಿ ಸ್ಥಳೀಯ ಮಾಧ್ಯಮವೊಂದಕ್ಕೆ ಬೈಟ್ ಕೊಟ್ಟಾಗ ಅದು ರಾತ್ರೋರಾತ್ರಿ ವೈರಲ್ ಆಗಿದ್ದು ನಿಮಗೆ ನೆನಪಿರಬಹುದು. ಈಕೆ ಪರಿಸ್ಥಿತಿಯ ಲಾಭ ಪಡೆದುಕೊಂಡು ಸ್ಥಳೀಯ ಜನಪ್ರತಿನಿಧಿಗಳ ಅನುಕಂಪ ಗಿಟ್ಟಿಸಿಕೊಳ್ಳುತ್ತಿದ್ದಾರೆ ಎಂದು ಪುಕಾರು ಹಬ್ಬಿಸಿದರು.
View this post on Instagram
ಅಷ್ಟೇ ಅಲ್ಲ ಸಾಕಷ್ಟು ಹಣವಂತಳಾಗಿದ್ದಾಳೆ ಎಂದೂ ಆಡಿಕೊಂಡರು. ಆದರೆ ಇಂಥ ಯಾವ ಗಾಳಿಸುದ್ದಿಗಳಿಗೂ ಕುಗ್ಗದೆ ಆಕೆ ತನ್ನ ಪ್ರಾಮಾಣಿಕತೆಯನ್ನು ಮೆರೆದರು. ಮಾಧ್ಯಮದವರು ಮನೆಬಾಗಿಲಿಗೆ ಹೋದಾಗ ತನ್ನ ಸಮುದಾಯದವರು ಅನುಭವಿಸುತ್ತಿರುವ ಸಂಕಷ್ಟಗಳ ಪಟ್ಟಿಯನ್ನೇ ನೀಡಿದರು. ವಸತಿ ಸೌಕರ್ಯ ಕಲ್ಪಿಸಬೇಕೆಂದು ನಿರ್ಭಿಡೆಯಿಂದ ಹೇಳಿ ಸರ್ಕಾರದ ಗಮನ ಸೆಳೆದರು.
View this post on Instagram
ಕೆಲಸದ ಬಿಡುವಿನ ವೇಳೆ ತನ್ನ ನೆಚ್ಚಿನ ಕನ್ನಡ ಚಿತ್ರಗೀತೆಗಳಿಗೆ ಅಭಿನಯಿಸಿ ರೀಲ್ಸ್ ಮಾಡಿ ಸಾಮಾಜಿಕ ಜಾಲತಾಣಗಳಿಗೆ ಅಪ್ಲೋಡ್ ಮಾಡಿದರು. ಈಕೆಯ ಜನಪ್ರಿಯತೆಯನ್ನು ಗಮನಿಸಿ ಕೆಲವರು ಈಕೆಯನ್ನು ಸಂದರ್ಶಿಸಿದರು. ಈಕೆ ಮಾತನಾಡಲು ಆರಂಭಿಸಿದರೆ ಮೈಸೂರಿನ ಚಾಮುಂಡಿಯೇ ಮೈವೆತ್ತುತ್ತಿದ್ದಾಳೇನೋ ಎಂಬಂತೆ ಭಾಸವಾಗುತ್ತದೆ, ಅಂಥ ಶಕ್ತಿದಾಯಿನಿ ಈಕೆ. ಕೆಲ ಸ್ಥಳೀಯ ಸಂಘ ಸಂಸ್ಥೆಗಳು ಈಕೆಯ ದಿಟ್ಟತನ, ವಿಚಾರಪರತೆಯನ್ನು ಗಮನಿಸಿ ಶ್ಲಾಘಿಸಿ ಸನ್ಮಾನ ಮಾಡಿದವು.
View this post on Instagram
ಸಾಮಾಜಿಕ ಜಾಲತಾಣಗಳ ಮೂಲಕ ಜನರನ್ನು ತಲುಪುತ್ತಿರುವ ಈಕೆಯನ್ನು ಏಂಜೆಲ್ ಬ್ಯೂಟಿಕೇರ್, ಹರಿಣಿ ಮೇಕ್ಓವರ್ಸ್ನಂಥ ಸಂಸ್ಥೆಗಳು ವಿಶೇಷ ವಸ್ತ್ರವಿನ್ಯಾಸ ಮತ್ತು ಅಲಂಕಾರದಿಂದ ಈಕೆಯ ವ್ಯಕ್ತಿತ್ವಕ್ಕೆ ಮತ್ತಷ್ಟು ಮೆರಗನ್ನು ಕೊಟ್ಟವು. ಶಶಿರೇಖಾರಲ್ಲಿದ್ದ ಆತ್ಮವಿಶ್ವಾಸ ಇನ್ನೂ ಒಂದು ಮೆಟ್ಟಿಲು ಏರುವಂತೆ ಮಾಡಿದವು. ಅವರೊಳಗಿನ ಕಲಾವಿದೆಗೆ ಪುಷ್ಠಿ ಕೊಟ್ಟವು.
View this post on Instagram
ಈವತ್ತು ಡಿಜಿಟಲ್ ಕ್ರಿಯೇಟರ್ ಆಗಿ ಹೊಮ್ಮಿರುವ ಶಶಿರೇಖಾಗೆ ಸುಮಾರು 1,40,000 ಫಾಲೋವರ್ಸ್ಗಳು ಇನ್ಸ್ಟಾಗ್ರಾಂನಲ್ಲಿದ್ದಾರೆ. ಇಂದಿಗೂ ಕೂಲಿಯನ್ನೇ ನೆಚ್ಚಿಕೊಂಡು ಬದುಕುತ್ತಿರುವಾಕೆ. ತನ್ನತನದ ಬಗ್ಗೆ ಅರಿವಿರುವಾಕೆ. ವಿಚಾರವಂತಿಕೆಯನ್ನು ಮೈಗೂಡಿಸಿಕೊಂಡಿರುವಾಕೆ. ಯಾವುದೇ ಭ್ರಮೆಗೆ ಬೀಳದೆ, ದುಡಿದು ತಿಂದರಷ್ಟೇ ಬದುಕು ಎಂಬುದನ್ನು ಸ್ಪಷ್ಟವಾಗಿ ಅರಿತುಕೊಂಡಾಕೆ. ಸ್ವಾಭಿಮಾನದ ಈ ಹೆಣ್ಣುಮಗಳಿಗೆ ಒಳ್ಳೆಯದಾಗಲಿ. ಅಭಿನಯದಲ್ಲಿ ಆಸಕ್ತಿ ಇರುವ ಈಕೆಗೆ ಅವಳ ವ್ಯಕ್ತಿತ್ವಕ್ಕೆ ಪೂರಕವಾದಂಥ ಅವಕಾಶಗಳು ದಕ್ಕಲಿ.
ಮತ್ತಷ್ಟು ವೈರಲ್ ವಿಡಿಯೋಗಳಿಗಾಗಿ ಕ್ಲಿಕ್ ಮಾಡಿ
Published On - 5:07 pm, Thu, 4 May 23