AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಲಕ್ನೋದ ಮಿಡ್​ನೈಟ್​ವಾಲೀ ಮ್ಯಾಗಿ; ‘ಆಂಟೀ ಮೇಕಪ್ ಯಾಕೆ?’ ನೆಟ್ಟಿಗರ ಅಸಭ್ಯತನ ಪರಮಾವಧಿ

Maggie : ಸಮಾಜದ ಆಗುಹೋಗುಗಳಿಗೆ ಸೂಕ್ಷ್ಮ ಸಂವೇದನೆಯಿಂದ ಪ್ರತಿಕ್ರಿಯಿಸುವ ವಿವೇಚನೆ ಬೆಳೆಸಿಕೊಂಡ ನೆಟ್ಟಿಗರು ಈ ಪೋಸ್ಟ್​ನಲ್ಲಿ ಯಾಕೋ ಅರಿವು ಕಳೆದುಕೊಂಡು ವರ್ತಿಸಿದ್ದಾರೆ. ನಿಜಕ್ಕೂ ಇದು ಖಂಡನಾರ್ಹ.

ಲಕ್ನೋದ ಮಿಡ್​ನೈಟ್​ವಾಲೀ ಮ್ಯಾಗಿ; 'ಆಂಟೀ ಮೇಕಪ್ ಯಾಕೆ?' ನೆಟ್ಟಿಗರ ಅಸಭ್ಯತನ ಪರಮಾವಧಿ
ಲಕ್ನೋದ ಬೀದಿಯಲ್ಲಿ ಮಧ್ಯರಾತ್ರಿ ಮ್ಯಾಗಿ ತಯಾರಿಸುತ್ತಿರುವ ಅಂಗಡಿಯಾಕೆ
Follow us
TV9 Web
| Updated By: ಶ್ರೀದೇವಿ ಕಳಸದ

Updated on:May 04, 2023 | 1:52 PM

ಓದುತ್ತ ಕುಳಿತಾಗಲೋ, ಕೆಲಸ ಮಾಡುವಾಗಲೋ ಮಧ್ಯರಾತ್ರಿ ಹಸಿವಾದಾಗ ಮ್ಯಾಗಿಯೇ ನಮ್ಮನೆ ದೇವರು ಎಂದು ಹಬೆಯಾಡುವ ಮ್ಯಾಗಿಯನ್ನು ಕಣ್ಣಿಗೆ ಒತ್ತಿಕೊಂಡು, ಅಲ್ಲಲ್ಲ ಸರಕ್ಕನೆ ತುಟಿಯೊಳಗೆಳೆದುಕೊಂಡು ಆಸ್ವಾದಿಸುವುದನ್ನು ಮರೆಯಲು ಸಾಧ್ಯವೆ? ಚೀಸ್​ ಮ್ಯಾಗಿ, ಪೆರಿಪೆರಿ ಮ್ಯಾಗಿ, ತಡ್ಕಾ ಮ್ಯಾಗಿ ಆ ಮ್ಯಾಗಿ ಈ ಮ್ಯಾಗಿ ಒಂದಾ ಎರಡಾ ಈವತ್ತು ಮ್ಯಾಗಿಯ ವೆರೈಟಿಗಳಲ್ಲಿ. ಇಲ್ಲಿ ನೋಡಿ ಲಕ್ನೋದ ಬೀದಿಯಲ್ಲಿ ಮಧ್ಯರಾತ್ರಿ ತಯಾರಾಗುವ ಈ ಮ್ಯಾಗಿಯ ವಿಡಿಯೋ. ಈಗಲೇ ಲಕ್ನೋಗೆ ಹೋಗಬೇಕು ಎನ್ನುವಷ್ಟು ಆಕರ್ಷಕವಾಗಿದೆ!

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

‘ಫ್ಲೇವರ್ಸ್ ಆಫ್ ಲಕ್ನೋ’ ಎಂಬ ಇನ್‌ಸ್ಟಾಗ್ರಾಮ್ ಪುಟದಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ಲಕ್ನೋದ ಈ ಬೀದಿಯಲ್ಲಿ ನೂರಾರು ಜನರು, ಮಧ್ಯರಾತ್ರಿಯಲ್ಲಿ ಈ ಮಹಿಳೆ ತಯಾರಿಸುವ ಮ್ಯಾಗಿಯಂಗಡಿ ಬಂದು ಜಮಾಯಿಸುತ್ತಾರೆ. ವಿವಿಧ ತರಕಾರಿಗಳು, ಬೆಣ್ಣೆ, ಮಸಾಲೆಪುಡಿಗಳೊಂದಿಗೆ ನೂಡಲ್ಸ್​ ಬೇಯುವಾಗ ಇಡೀ ಬೀದಿಯೆಲ್ಲ ಮೂಗರಳಿಸಲಾರಂಭಿಸುತ್ತದೆ.

ಈ ತನಕ ಈ ವಿಡಿಯೋ ಅನ್ನು 4 ಲಕ್ಷ ಜನರು ಇಷ್ಟಪಟ್ಟಿದ್ದಾರೆ. ಪ್ರತಿಕ್ರಿಯೆಗಳ ಸಂಖ್ಯೆ ಸಾವಿರಕ್ಕೂ ಹೆಚ್ಚಿದೆ. ಇದು ತವಾ ಮ್ಯಾಗಿ ಎಂದು ಹಲವರು ಹೇಳಿದ್ದಾರೆ. ಸಾಮಾನ್ಯವಾಗಿ ಮ್ಯಾಗಿಗೆ ಕಡಾಯಿ ಬಳಸುತ್ತಾರೆ. ಆದರೆ ಈಕೆ ಇಲ್ಲಿ ತವಾ ಬಳಸಿದ್ದು ಗಮನಾರ್ಹ.

ಇದನ್ನೂ ಓದಿ : ನಾಯಿ ಕರುವಿನ ಬಾಂಧವ್ಯ; ಸ್ವಜಾತಿ ಸ್ನೇಹ ಸಹಜ ಆದರೆ…

ದಯವಿಟ್ಟು ಹೇಳಿ, ಅದೆಷ್ಟು ಜನ ಮ್ಯಾಗಿಯಷ್ಟೇ ಅಲ್ಲ ಸುಂದರವಾದ ಈ ಮಹಿಳೆಯನ್ನೂ ನೋಡುತ್ತಿದ್ದೀರಿ. ಕೈ ಎತ್ತಿ! ಎಂದು ಒಬ್ಬರು ತಮಾಷೆ ಮಾಡಿದ್ದಾರೆ. ಎಲ್ಲಾ ಸರಿ ಆದರೆ ಮಧ್ಯರಾತ್ರಿ ಮ್ಯಾಗಿ ಮಾಡುವಾಗ ಇಷ್ಟೊಂದೆಲ್ಲ ಮೇಕಪ್ ಬೇಕೆ, ಅದೂ ಮಧ್ಯರಾತ್ರಿ? ಎಂದು ಒಬ್ಬಾಕೆ ಪ್ರಶ್ನಿಸಿದ್ದಾರೆ. ಈ ಪ್ರತಿಕ್ರಿಯೆಗೆ ನೂರು ಜನರು ಮುಗಿಬಿದ್ದು ತರಾಟೆಗೆ ತೆಗೆದುಕೊಂಡಿದ್ದಾರೆ.

ಓಹೋ ನಿಮಗೆ ಮ್ಯಾಗಿಗಿಂತ ಆಕೆಯ ಮೇಕಪ್​ ಕಿರಿಕಿರಿ ಮಾಡಿದೆಯಾ? ಬನ್ನಿ ಈಗಲೇ ಮ್ಯಾಗಿ ತಿಂದು ಬರೋಣ ಎಂದು ಮತ್ತೊಬ್ಬರು ಆಹ್ವಾನಿಸಿದ್ಧಾರೆ. ದುಡಿಯುವ ವರ್ಗದವರು ಮೇಕಪ್​ ಮಾಡಿಕೊಂಡರೆ ನಿಮಗೆ ಪ್ರಶ್ನೆಗಳೇಳುತ್ತವೆ. ಆದರೆ ಅದೇ ಮೇಲ್ವರ್ಗದ ಜನರು ಏನೇ ಮಾಡಿದರೂ ನೀವು ಸುಮ್ಮನಿರುತ್ತೀರಿ ಅಲ್ಲವೆ? ಎಂದು ಮತ್ತೂ ಒಬ್ಬರು ಕೇಳಿದ್ದಾರೆ.

ಇದನ್ನೂ ಓದಿ : ಮುದ್ದಾದ ಈ ಸಿಂಹದಮರಿ ನನಗೆ ಬೇಕು! ಕಾಡಿನಂಚಿನಲ್ಲಿ ಅರ್ಜಿ ಗುಜರಾಯಿಸುತ್ತಿದ್ದಾರೆ ನೆಟ್ಟಿಗರು

ಮೇಕಪ್​ವಾಲೀ ಆಂಟೀ 3 ಗಂಟೆಯ ನಂತರ ನಮಗಾಗಿ ಸಮಯ ಮಾಡಿಕೊಳ್ಳಿ ಎಂದು ಕೆಲ ಹುಡುಗರು ಪ್ರಚೋದನೀಯವಾಗಿ ಪ್ರತಿಕ್ರಿಯಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ಹಲವರು, ಅಸಭ್ಯವಾಗಿ ಪ್ರತಿಕ್ರಿಯಿಸಬೇಡಿ ಆಕೆ ತನ್ನಪಾಡಿಗೆ ತಾನು ದುಡಿದು ತಿನ್ನುತ್ತಿದ್ದಾಳೆ. ಹೇಗಾದರೂ ಅಲಂಕರಿಸಿಕೊಳ್ಳುತ್ತಾಳೆ ಅದು ಆಕೆಯ ವೈಯಕ್ತಿಕ. ಮೊದಲು ಮಹಿಳೆಯನ್ನು ಮತ್ತು ಆಕೆಯ ಕೌಶಲ, ಬುದ್ಧಿಮತ್ತೆ, ಶ್ರಮ, ಧೈರ್ಯವನ್ನು ಗೌರವಿಸಿ ಎಂದು ಬುದ್ಧಿ ಹೇಳಿದ್ದಾರೆ.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 1:38 pm, Thu, 4 May 23

ಪಾಕಿಸ್ತಾನಕ್ಕೆ ಬಲೂಚಿ ಮತ್ತು ತಾಲಿಬಾನಿಗಳಿಂದಲೂ ಉಳಿಗಾಲವಿಲ್ಲ!
ಪಾಕಿಸ್ತಾನಕ್ಕೆ ಬಲೂಚಿ ಮತ್ತು ತಾಲಿಬಾನಿಗಳಿಂದಲೂ ಉಳಿಗಾಲವಿಲ್ಲ!
ಆಪರೇಷನ್​ ಸಿಂಧೂರ್​, ಪ್ರಧಾನಿಗೆ ಧನ್ಯವಾದ ತಿಳಿಸಿದ ಪಹಲ್ಗಾಮ್ ಸಂತ್ರಸ್ತೆ
ಆಪರೇಷನ್​ ಸಿಂಧೂರ್​, ಪ್ರಧಾನಿಗೆ ಧನ್ಯವಾದ ತಿಳಿಸಿದ ಪಹಲ್ಗಾಮ್ ಸಂತ್ರಸ್ತೆ
ಅರಸೊತ್ತಿಗೆ ಕಾಲದಿಂದ ನಡೆದುಕೊಂಡು ಬಂದಿರುವ ಪದ್ಧತಿ: ಅರ್ಚಕ ದೀಕ್ಷಿತ್
ಅರಸೊತ್ತಿಗೆ ಕಾಲದಿಂದ ನಡೆದುಕೊಂಡು ಬಂದಿರುವ ಪದ್ಧತಿ: ಅರ್ಚಕ ದೀಕ್ಷಿತ್
‘ಭರ್ಜರಿ ಬ್ಯಾಚುಲರ್ಸ್’ ಹೊಸ ಎಪಿಸೋಡ್​ಗೆ ಹೊರಾಂಗಣ ಶೂಟಿಂಗ್; ಯಾವ ಜಿಲ್ಲೆ?
‘ಭರ್ಜರಿ ಬ್ಯಾಚುಲರ್ಸ್’ ಹೊಸ ಎಪಿಸೋಡ್​ಗೆ ಹೊರಾಂಗಣ ಶೂಟಿಂಗ್; ಯಾವ ಜಿಲ್ಲೆ?
ಸೋಫಿಯಾ ಖುರೇಷಿ ಬೆಳಗಾವಿಯ ಸೊಸೆ: ಲೆಫ್ಟಿನೆಂಟ್ ಕರ್ನಲ್​ರ ಮಾವ ಹೇಳಿದ್ದೇನು?
ಸೋಫಿಯಾ ಖುರೇಷಿ ಬೆಳಗಾವಿಯ ಸೊಸೆ: ಲೆಫ್ಟಿನೆಂಟ್ ಕರ್ನಲ್​ರ ಮಾವ ಹೇಳಿದ್ದೇನು?
ಸೇನೆಗೆ ವರವಾಯ್ತೇ ಲಕ್ಷ್ಮೀ ಜನಾರ್ದನ ಪ್ರಸಾದ! ಬಲಭಾಗದಿಂದ ಹೂ ನೀಡಿದ ದೇವರು
ಸೇನೆಗೆ ವರವಾಯ್ತೇ ಲಕ್ಷ್ಮೀ ಜನಾರ್ದನ ಪ್ರಸಾದ! ಬಲಭಾಗದಿಂದ ಹೂ ನೀಡಿದ ದೇವರು
Dewald Brevis: ಬೇಬಿ ಎಬಿ ಸಿಡಿಲಬ್ಬರ: ಹೊಸ ದಾಖಲೆ ನಿರ್ಮಾಣ
Dewald Brevis: ಬೇಬಿ ಎಬಿ ಸಿಡಿಲಬ್ಬರ: ಹೊಸ ದಾಖಲೆ ನಿರ್ಮಾಣ
ವಿವೇಕ, ವಿವೇಚನೆ ಮಾರಿಕೊಂಡಿರುವ ಪಾಕಿಸ್ತಾನಕ್ಕೆ ಬುದ್ಧಿ ಬಾರದು
ವಿವೇಕ, ವಿವೇಚನೆ ಮಾರಿಕೊಂಡಿರುವ ಪಾಕಿಸ್ತಾನಕ್ಕೆ ಬುದ್ಧಿ ಬಾರದು
ಸಿಯಾಲ್​ಕೋಟ್ ತೊರೆಯುತ್ತಿರುವ ಪಾಕ್ ಜನ, ಕಾಲ್ತುಳಿದಂಥಾ ಸ್ಥಿತಿ
ಸಿಯಾಲ್​ಕೋಟ್ ತೊರೆಯುತ್ತಿರುವ ಪಾಕ್ ಜನ, ಕಾಲ್ತುಳಿದಂಥಾ ಸ್ಥಿತಿ
ವಿಡಿಯೋ: ಭೀಕರ ದಾಳಿಗೆ ಛಿದ್ರ ಛಿದ್ರವಾಗಿ ಹಾರಿದ ಪಾಕ್ ಸೈನಿಕರ ಮೃತದೇಹ
ವಿಡಿಯೋ: ಭೀಕರ ದಾಳಿಗೆ ಛಿದ್ರ ಛಿದ್ರವಾಗಿ ಹಾರಿದ ಪಾಕ್ ಸೈನಿಕರ ಮೃತದೇಹ