ಮೂರನೇ ಚಾರ್ಲ್ಸ್ ಪಟ್ಟಾಭಿಷೇಕಕ್ಕೆ ಆಗಮಿಸಿದ ಅಪರಿಚಿತ ಜವರಾಯನೇ?

Grim Reaper : ಚಾರ್ಲ್ಸ್‌ರ ಪಟ್ಟಾಭಿಷೇಕವನ್ನು ಮಿಲಿಯಗಟ್ಟಲೇ ಮಂದಿ ನೋಡಿ ಸಂಭ್ರಮಿಸುತ್ತಿದ್ದ ಗಳಿಗೆಯಲ್ಲೇ… ಭಯಂಕರ ಪ್ರೇತಾಕೃತಿ ಹಿಂದಿನ ಬಾಗಿಲಗುಂಟ ದಾಟಿ ಹೋಯಿತಲ್ಲ! ಇದು ಖಂಡಿತ ಸಾವೇ ಎನ್ನುತ್ತಿದ್ದಾರೆ ಜಗತ್ತಿನ ಜನ.

ಮೂರನೇ ಚಾರ್ಲ್ಸ್ ಪಟ್ಟಾಭಿಷೇಕಕ್ಕೆ ಆಗಮಿಸಿದ ಅಪರಿಚಿತ ಜವರಾಯನೇ?
ಮೂರನೇ ಕಿಂಗ್ ಚಾರ್ಲಸ್​ ಪಟ್ಟಾಭಿಷೇಕ
Follow us
TV9 Web
| Updated By: ಶ್ರೀದೇವಿ ಕಳಸದ

Updated on:May 08, 2023 | 2:39 PM

Viral News : ನಮ್ಮಲ್ಲಿ ಸಾವಿನ ಅಧಿದೇವತೆಯಾಗಿ ಕೋಣವೇರಿ ಬರುವ ಯಮಧರ್ಮನ ಬಗ್ಗೆ ನಿಮಗೆ ಗೊತ್ತೇ ಇದೆ. ಇನ್ನು ಕೆಲವು ಪಾಶ್ಚಾತ್ಯ ಪುರಾಣಗಳಲ್ಲಿ ಸಾವಿನ ಅಧಿದೇವತೆಯ ರೂಪ ಹೇಗಿರುತ್ತದೆ ಎಂಬ ಬಗ್ಗೆ ನಿಮಗೆ ತಿಳಿದಿದೆಯೇ? ಸಾವನ್ನು ಉದ್ದನೆಯ ಕೊಯ್ಲುಗತ್ತಿಯನ್ನು ಹಿಡಿದ ಅಸ್ಥಿಪಂಜರದಂತೆಯೋ ಕಪ್ಪು ಬಣ್ಣದ ಮೇಲಂಗಿ ಹಾಗೂ ಗೊರಬು ಧರಿಸಿದ ಮುಖ ಕಾಣದ ಆಕೃತಿಯಂತೆ ಇರುತ್ತದೆ. ಈ ಪ್ರೇತದಂತಹ ಆಕೃತಿಗೆ ‘ಗ್ರಿಮ್ ರೀಪರ್’ ಎನ್ನುತ್ತಾರೆ.

ಮೊನ್ನೆ ಲಂಡನ್ನಿನ ವೆಸ್ಟ್‌ಮಿನ್‌ಸ್ಟರ್‌ ಆಬ್ಬೀಯಲ್ಲಿ ರಾಜಮನೆತನದ ಮೂರನೇ ಚಾರ್ಲ್ಸ್ ಅವರ ಪಟ್ಟಾಭಿಷೇಕ ಬಹು ವಿಜೃಂಭಣೆಯಿಂದ ನಡೆಯಿತಷ್ಟೇ. ಕ್ಯಾಂಟರ್​ಬೆರಿಯ ಆರ್ಚ್‌ಬಿಷಪ್‌ರ ಸಮ್ಮುಖದಲ್ಲಿ ರಾಣಿ ಪತ್ನಿ ಕಮಿಲಾ ಜೊತೆಗೂಡಿ ನಡೆದ ಈ ಚಾರ್ಲ್ಸ್‌ರ ಪಟ್ಟಾಭಿಷೇಕ ಮಹೋತ್ಸವವನ್ನು ಜಗತ್ತಿನಾದ್ಯಂತ ಮಿಲಿಯಗಟ್ಟಲೇ ಮಂದಿ ನೋಡಿ ಸಂಭ್ರಮಿಸುತ್ತಿದ್ದ ಗಳಿಗೆಯಲ್ಲೇ… ಅರೇ! ಇದೇನಿದು? ಒಂದು ಭಯಂಕರ ಪ್ರೇತಾಕೃತಿ ಹಿಂದಿನ ಬಾಗಿಲಗುಂಟ ದಾಟಿ ಹೋಯಿತಲ್ಲ!?

ಇದನ್ನೂ ಓದಿ : ಡೋಲೋ 650 ಶಶಿರೇಖಾ; ನಿಮ್ಮ ಮನೆಮಗಳೀಗ ಮಾಡೆಲಿಂಗ್​ಗೂ ಸೈ?

‘ವೆಸ್ಟ್‌ಮಿನ್‌ಸ್ಟರ್ ಆಬ್ಬೀಗೆ ಆಗಮಿಸಿದ ಗ್ರಿಮ್ ರೀಪರ್​ನನ್ನು ಮತ್ತ್ಯಾರಾದರೂ ಗಮನಿಸಿದಿರಾ?’ ಎಂಬ ಒಕ್ಕಣೆಯ ಟ್ವೀಟ್ ಈಗ ಎಲ್ಲೆಡೆ ಹರಿದಾಡುತ್ತಿದೆ. ಹತ್ತಾರು ಸಾವಿರ ಮಂದಿ ಪ್ರತಿಕ್ರಿಯಿಸಿದ್ದಾರೆ. ‘ಇದು ಖಂಡಿತ ಸಾವೇ,’ ಎಂದು ಹಲವರು ಹೇಳಿದ್ದರೆ, ಜನಪ್ರಿಯ ಫ್ಯಾಂಟಸಿ ಸಾಹಿತ್ಯ ಓದುವ ಅಥವಾ ಸಿನೆಮಾ ನೋಡುವ ಹವ್ಯಾಸವಿರುವ ಒಂದಷ್ಟು ಮಂದಿ ಡಾರ್ತ್ ವೇಡರ್, ಹ್ಯಾರಿ ಪಾಟರ್ ಮೊದಲಾದವುಗಳನ್ನು ಉಲ್ಲೇಖಿಸಿ ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ : ಗುಂಗೀಯ ಹುಳ ಬಂದಿತ್ತೇನ ತಂಗಿ?; ಕಣ್ಣಲ್ಲೇ ಕೊಲ್ಲುವ ಪ್ರಾಂಜಲಿ ಶರ್ಮಾ ಬೆಳ್ಳಿತೆರೆಗೆ ಯಾವಾಗ?

ಒಬ್ಬ ಮಾತ್ರ, ‘ಅದು ಮೇಘನ್ ಮರ್ಕಲ್’ ಇರಬೇಕು ಎಂದು ಚಟಾಕಿ ಹಾರಿಸಿದ್ದಾನೆ. ಮೇಘನ್ ಮತ್ತು ರಾಜಕುಮಾರ ಹ್ಯಾರಿ ಸುಮಾರು ಮೂರು ವರ್ಷಗಳ ಹಿಂದೆ ರಾಜಮನೆತನದ ಜವಾಬ್ದಾರಿಗಳನ್ನೂ ಅದರೊಟ್ಟಿಗೆ ಬರುವ ಅಂಕಿತಗಳನ್ನೂ ತೊರೆದದ್ದನ್ನು ಇಲ್ಲಿ ನೆನೆಪಿಸಿಕೊಳ್ಳಬಹುದು.

ಒಟ್ಟಿನಲ್ಲಿ ಪಟ್ಟಾಭಿಷೇಕದ ಸಂತಸದ ಸಂಭ್ರಮದಲ್ಲಿ ಪ್ರೇತದರ್ಶನವಾದುದು ಯಾರದೋ ಕುಚೇಷ್ಟೆಯೋ? ಕಾಕತಾಳೀಯವೋ? ಅಥವಾ ನಮ್ಮೆಲ್ಲರ ಅಂತಿಮ ಸತ್ಯದ ದರ್ಶನವೋ? ಇದನ್ನು ನೋಡಿ ನಿಮಗೇನೆನ್ನಿಸುತ್ತದೆ?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 2:09 pm, Mon, 8 May 23

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ