ಅನಾಥ ಮರಿಗಳನ್ನು ದತ್ತು ಸ್ವೀಕರಿಸುತ್ತಿರುವ ಬೆಕ್ಕಮ್ಮನ ವಿಡಿಯೋ ವೈರಲ್

Adoption : ಮೊದಲಮೊದಲು ಆತಂಕ ಮತ್ತು ಅನುಮಾನದಲ್ಲಿ ಮರಿಗಳನ್ನು ನೋಡುತ್ತದೆ ಈ ಬೆಕ್ಕು. ನಿಧಾನವಾಗಿ ಅವುಗಳನ್ನು ಮಡಿಲೊಳಗೆ ಎಳೆದುಕೊಳ್ಳುತ್ತದೆ. ಮನಸ್ಸು ತುಂಬಿಬರುತ್ತದೆ ಈ ವಿಡಿಯ ನೋಡುತ್ತಿದ್ದಂತೆ.

ಅನಾಥ ಮರಿಗಳನ್ನು ದತ್ತು ಸ್ವೀಕರಿಸುತ್ತಿರುವ ಬೆಕ್ಕಮ್ಮನ ವಿಡಿಯೋ ವೈರಲ್
ನಾನೇ ಈಗ ನಿಮ್ಮ ಅಮ್ಮ
Follow us
TV9 Web
| Updated By: ಶ್ರೀದೇವಿ ಕಳಸದ

Updated on:May 06, 2023 | 3:40 PM

Viral Video : ಯಾರಾದರೂ ತಮ್ಮದೇ ಮೊಟ್ಟೆ ಅಥವಾ ಎಳೇಮರಿಗಳನ್ನು ಮುಟ್ಟಿದರೆ ಅವುಗಳನ್ನು ದೂರ ಸರಿಸಿಬಿಡುತ್ತವೆ ಪ್ರಾಣಿ ಪಕ್ಷಿಗಳು. ಇಷ್ಟು ಸೂಕ್ಷ್ಮವಿರು ಇವುಗಳು ಬೇರೆ ಮರಿಗಳನ್ನು ಹತ್ತಿರಕ್ಕೆ ಎಳೆದುಕೊಳ್ಳುತ್ತವೆಯೇ? ಅಪರೂಪಕ್ಕೆ ಇದು ಸಾಧ್ಯವಾಗುತ್ತದೆ. ಪ್ರಾಣಿಗಳೂ ಮನುಷ್ಯರಂತೆ ವಿವಿಧ ಸ್ವಭಾವವನ್ನು ಹೊಂದಿರುತ್ತವೆ. ಇದೀಗ ವೈರಲ್ ಆಗಿರುವ ಈ ಕೆಳಗಿನ ವಿಡಿಯೋ ನೋಡಿ.

Mother Cat Adopts Two Orphaned Kittens by u/RunKind4141 in AnimalsBeingBros

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಅಲೆಕ್ಸಾ ಎಂಬ ಬೆಕ್ಕಿನ ಪೋಷಕಿ ಎರಡು ಅನಾಥ ಮರಿಗಳನ್ನು ಅದರ ಬಳಿ ಇಡುವ ಪ್ರಯತ್ನ ಮಾಡುತ್ತಿದ್ದಾಳೆ. ಅಲೆಕ್ಸಾಳ ಬ್ಲ್ಯಾಂಕೆಟ್​ನೊಳಗೆ ಆ ಮರಿಗಳನ್ನು ಸುತ್ತಿ, ಅವಳದೇ ಮೈವಾಸನೆ ಬರುವಂತೆ ಉಪಾಯ ಹೂಡುತ್ತಾಳೆ. ಆದರೂ ಬೆಕ್ಕು ಬೆಕ್ಕೇ ವಾಸನೆ ಗ್ರಹಿಸುವಲ್ಲಿ! ಮೊದಲು ಆರಂಭದಲ್ಲಿ ಹಿಂಜರಿಯುತ್ತದೆ. ಆದರೆ ಅದೇನೆನ್ನಿಸಿತೋ ಏನೋ… ಅವುಗಳನ್ನು ಮೆಲ್ಲಗೆ ತನ್ನ ಮಡಿಲೊಳಗೆ ಬೆಚ್ಚಗೆ ಇರಿಸಿಕೊಳ್ಳುತ್ತದೆ. ತನ್ನ ಮರಿಗಳೊಂದಿಗೆ ಇವೂ ತನ್ನ ಮರಿಗಳೇ ಎಂಬಂತೆ ಸಲುಹಲು ಶುರುಮಾಡುತ್ತದೆ.

ಇದನ್ನೂ ಓದಿ : ಡೋಲೋ 650 ಶಶಿರೇಖಾ; ನಿಮ್ಮ ಮನೆಮಗಳೀಗ ಮಾಡೆಲಿಂಗ್​ಗೂ ಸೈ?

ಎರಡು ದಿನಗಳ ಹಿಂದೆ ಈ ವಿಡಿಯೋ ಅನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದೆ. ಸುಮಾರು 30,000 ದಷ್ಟು ಜನರು ಇಷ್ಟಪಟ್ಟಿದ್ದಾರೆ. ಅನೇಕರು ಹೃದಯತುಂಬಿ ಪ್ರಕ್ರಿಯಿಸಿದ್ದಾರೆ. ಇನ್ನೂ ಕೆಲವರು ಸಂಬಂಧಿಸಿದ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ಇದನ್ನೂ ಓದಿ : ನಾಯಿ ಕರುವಿನ ಬಾಂಧವ್ಯ; ಸ್ವಜಾತಿ ಸ್ನೇಹ ಸಹಜ ಆದರೆ…

ಬೆಕ್ಕುಗಳು ಅನ್ಯಜಾತಿಯ ಪ್ರಾಣಿಗಳಿಗೂ ತಾಯಿಯಾಗುತ್ತದೆ ಎಂದು ಒಬ್ಬರು ಹೇಳಿದ್ದಾರೆ. ಅಯ್ಯೋ ಆ ಎಳೆಕೂಸುಗಳು ಎಷ್ಟೊಂದು ಸೂಕ್ಷ್ಮ ಮತ್ತು ಮುದ್ದು ಎಂದಿದ್ದಾರೆ. ಈ ಬೆಕ್ಕು ನಿಜಕ್ಕೂ ಮಹಾತಾಯಿಯೇ ಎಂದು ಮತ್ತೊಬ್ಬರು ಹೇಳಿದ್ದಾರೆ.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 3:28 pm, Sat, 6 May 23

ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಎರಡು ಕುಟುಂಬಗಳಿಗೆ ಚನ್ನಪಟ್ಟಣ ಚುನಾವಣಾ ಫಲಿತಾಂಶ ಪ್ರತಿಷ್ಠೆಯ ಪ್ರಶ್ನೆ
ಎರಡು ಕುಟುಂಬಗಳಿಗೆ ಚನ್ನಪಟ್ಟಣ ಚುನಾವಣಾ ಫಲಿತಾಂಶ ಪ್ರತಿಷ್ಠೆಯ ಪ್ರಶ್ನೆ
ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ
ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ