ನಮಗೂ ಇಂಥ ಅಪ್ಪ ಬೇಕು; ‘ಏನೂ ಆಗುವುದಿಲ್ಲ ಮಗಳೇ, ಇಲ್ಲಿ ಒಮ್ಮೆ ನಾಲ್ಕು ಹೆಜ್ಜೆ ಕುಣಿದು ನೋಡು’

Happiness : ಅದೇನದು ಕುಣೀತೀಯಾ? ಅದೆಷ್ಟು ಮನೆಗಳಲ್ಲಿ ಅಬ್ಬರಿಸುವುದಿಲ್ಲ ಹೀಗೆ? ಆದರೆ ಈ ಅಪ್ಪ ಮಾತ್ರ ಅಪರಿಚಿತರೊಂದಿಗೆ ಸಾರ್ವಜನಿಕ ಸ್ಥಳದಲ್ಲಿ ತನ್ನ ಮಗಳನ್ನು ಕುಣಿಯುವಂತೆ ಪ್ರೋತ್ಸಾಹಿಸಿದ್ದಾನೆ. ಯಾಕಿರಬಹುದು?

ನಮಗೂ ಇಂಥ ಅಪ್ಪ ಬೇಕು; ‘ಏನೂ ಆಗುವುದಿಲ್ಲ ಮಗಳೇ, ಇಲ್ಲಿ ಒಮ್ಮೆ ನಾಲ್ಕು ಹೆಜ್ಜೆ ಕುಣಿದು ನೋಡು’
ತನ್ನ ಮಗಳನ್ನು ಸಾರ್ವಜನಿಕ ಸ್ಥಳದಲ್ಲಿ ನರ್ತಿಸುವಂತೆ ಪ್ರೋತ್ಸಾಹಿಸುತ್ತಿರುವ ಅಪ್ಪ.
Follow us
TV9 Web
| Updated By: ಶ್ರೀದೇವಿ ಕಳಸದ

Updated on:May 05, 2023 | 3:25 PM

Viral Video : ಎಲ್ಲರೊಳಗೂ ನೃತ್ಯ ಎನ್ನುವ ಮಗು ಒಳಗೊಳಗೇ ಕುಣಿಯುತ್ತಲೇ ಇರುತ್ತದೆ. ಅವಕಾಶಕ್ಕಾಗಿ ಅದು ಹಾತೊರೆಯುತ್ತಿರುತ್ತದೆ. ಕೆಲವರು ಅದನ್ನೇ ನೆಚ್ಚಿಕೊಂಡು ವೃತ್ತಿಪರತೆಯನ್ನು ಮೆರೆಯುತ್ತಾರೆ ಇನ್ನೂ ಕೆಲವರು ಪ್ರವೃತ್ತಿಯನ್ನಾಗಿಸಿಕೊಳ್ಳುತ್ತಾರೆ. ಇನ್ನೂ ಹಲವರು ಸಂಕೋಚದಿಂದ ನಾಲ್ಕು ಗೋಡೆಯೊಳಗೇ ನರ್ತಿಸಿ ಸಂತೋಷ ಕಂಡುಕೊಳ್ಳುತ್ತಾರೆ. ಆದರೆ ನೃತ್ಯಕಲೆ ಎನ್ನುವುದು ನಮ್ಮೊಳಗಿನ ಅನೇಕ ಸಂಕೋಚಗಳಿಂದ ಬಿಡುಗಡೆಗೊಳಿಸುತ್ತದೆ ಎನ್ನುವುದಂತೂ ಸತ್ಯ. ಈ ಕೆಳಗಿನ ವಿಡಿಯೋ ನೋಡಿ. ಇಲ್ಲೊಬ್ಬ ತಂದೆ ಸಾರ್ವಜನಿಕ ಸ್ಥಳದಲ್ಲಿ ತನ್ನ ಮಗಳನ್ನು ನರ್ತಿಸುವಂತೆ ಒತ್ತಾಯಿಸುತ್ತಿದ್ದಾರೆ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!
View this post on Instagram

A post shared by Sadhana ? (@sadhnaaaa__)

ತಂದೆಯ ಈ ಪ್ರೋತ್ಸಾಹಪೂರ್ವಕ ನಡೆಯನ್ನು ನೆಟ್ಟಿಗರು ಶ್ಲಾಘಿಸುತ್ತಿದ್ದಾರೆ. ಅದರಲ್ಲೂ ಅಪರಿಚಿತ ಜನರೊಂದಿಗೆ ಸಾರ್ವಜನಿಕವಾಗಿ ಹೆಜ್ಜೆ ಹಾಕಲು ಪ್ರೋತ್ಸಾಹಿಸುತ್ತಿರುವುದನ್ನು ನೋಡಿದರೆ ಎಂಥವರಿಗೂ ಅಚ್ಚರಿಯಾಗುತ್ತದೆ. ಕಾರಣ ಇಷ್ಟೇ, ತಮ್ಮ ಮಕ್ಕಳು ಸಾಮಾಜಿಕವಾಗಿ ಬೆರೆಯಲಿ ಎನ್ನುವ ಆಶಯ ಯಾವ ಪೋಷಕರಿಗೂ ಸಹಜ ಅಲ್ಲವೆ?

ಸಾಧನಾ ಮತ್ತು ಪ್ರಣವ್ ಹೆಗಡೆ ಇಬ್ಬರೂ ನೃತ್ಯಕಲಾವಿದರು. ಇವರಿಬ್ಬರೂ ಒಡಗೂಡಿ ಸಾಕಷ್ಟು ರೀಲ್ಸ್​ಗಳನ್ನು ಮಾಡಿದ್ದಾರೆ. ಹೀಗೇ ಒಂದು ದಿನ ಇವರಿಬ್ಬರೂ ರೀಲ್ಸ್​ಗಾಗಿ ತಯಾರಿ ನಡೆಸಿದ್ದಾಗ ಈ ಅಪ್ಪ ತನ್ನ ಮಗಳೊಂದಿಗೆ ಇವರನ್ನು ಎದುರುಗೊಳ್ಳುತ್ತಾರೆ. ಆಗ ತನ್ನ ಮಗಳೂ ಇವರ ಹಾಗೆ ನರ್ತಿಸಲು ಎಂಬ ಆಸೆ ಅವನಲ್ಲಿ ಮೊಳೆಯುತ್ತದೆ.

ಇದನ್ನೂ ಓದಿ : ‘ಪ್ಯಾರ್ ದಿವಾನಾ ಹೋತಾ ಹೈ’ ದೆಹಲಿ ಪೊಲೀಸ್ ಹಾಡಿಗೆ ನೆಟ್ಟಿಗರು ಫಿದಾ

ನಿಮ್ಮೊಂದಿಗೆ ನನ್ನ ಮಗಳೂ ನರ್ತಿಸಬಹುದೆ ಎಂದು ಅಪ್ಪ ಕೇಳಿಕೊಳ್ಳುತ್ತಾನೆ. ಸಾಧನಾ ಮತ್ತು ಪ್ರಣವ್ ತಕ್ಷಣವೇ ಒಪ್ಪಿಕೊಳ್ಳುತ್ತಾರೆ. ಆದರೆ ಈ ಹುಡುಗಿ ಮಾತ್ರ ಸಂಕೋಚದಿಂದ ಮುದ್ದೆಯಾಗುತ್ತಾಳೆ. ಪಟ್ಟುಬಿಡದ ಅಪ್ಪ ಮಗಳಿಂದ ಹೆಜ್ಜೆ ಹಾಕಿಸಿಯೇ ಬಿಡುತ್ತಾನೆ. ಎಲ್ಲರೂ ಸೇರಿ ಹೆಜ್ಜೆ ಹಾಕುವುದನ್ನು ನೋಡುವಾಗ ಮನಸ್ಸು ತುಂಬಿ ಬರುತ್ತದೆ ಅಲ್ಲವೆ?

ನಾವಿಂದು ಬೇಕಾದಂಥ ನೌಕರಿ ಮಾಡುತ್ತೇವೆ. ಅದರಿಂದ ಸಾಕಷ್ಟು ಹಣವನ್ನೂ ಗಳಿಸುತ್ತೇವೆ ಆದರೆ ನಮಗೆ ಬೇಕಾದಂಥ ಸಣ್ಣ ಸಣ್ಣ ಸಂತೋಷವನ್ನು ಪಡೆಯುವುದು ದೊಡ್ಡ ಸಾಹಸವೇ ಅಲ್ಲವೆ? ಎಂದು ಸಾಧನಾ ಮತ್ತು ಪ್ರಣವ್ ಈ ವಿಡಿಯೋದ ನೋಟ್​ನಲ್ಲಿ ಹೇಳಿದ್ದಾರೆ.

ಇದನ್ನೂ ಓದಿ : ಡೋಲೋ 650 ಶಶಿರೇಖಾ; ನಿಮ್ಮ ಮನೆಮಗಳೀಗ ಮಾಡೆಲಿಂಗ್​ಗೂ ಸೈ?

ಈ ವಿಡಿಯೋ ಅನ್ನು ಈತನಕ ಸುಮಾರು 11.2 ಮಿಲಿಯನ್​ ಜನರು ನೋಡಿದ್ದಾರೆ. 2 ಮಿಲಿಯನ್​ನಷ್ಟು ಜನರು ಇಷ್ಟಪಟ್ಟಿದ್ದಾರೆ. ಮಕ್ಕಳನ್ನು ಅದರಲ್ಲೂ ಹೆಣ್ಣುಮಕ್ಕಳನ್ನು ಹೀಗೆ ಪ್ರೋತ್ಸಾಹಿಸುತ್ತಿರುವ ನಿಮಗೆ ಕೋಟಿ ಧನ್ಯವಾದ ಎಂದು ಅನೇಕರು ಈ ಅಪ್ಪನನ್ನು ಹೊಗಳಿದ್ದಾರೆ. ಸಾರ್ವಜನಿಕವಾಗಿ ಹೀಗೆ ರೀಲ್ಸ್​ ಮಾಡುವವರನ್ನು ಸಾಮಾನ್ಯವಾಗಿ ಗೇಲಿ ಮಾಡುತ್ತಾರೆ. ಆದರೆ ಈ ರೀಲ್​ ಅನ್ನು ಮಾತ್ರ ನೆಟ್ಟಿಗರು ಬಹಳೇ ಮೆಚ್ಚಿದ್ದಾರೆ ಎಂದರೆ ಇದರಲ್ಲಡಗಿರುವ ಸೂಕ್ಷ್ಮ ಸಂದೇಶವನ್ನು ಗಮನಿಸಿ.

ಇಂಥ ಅಪ್ಪ ನಮಗೂ ಬೇಕು ಎಂದು ಅನೇಕರು ಹೇಳಿದ್ದಾರೆ; ಬದುಕೆಂದರೆ ಬರೀ ಓದುವುದು, ದುಡಿಯುವುದು ಮತ್ತು ಜವಾಬ್ದಾರಿಗಳನ್ನು ನಿರ್ವಹಿಸುವುದಷ್ಟೇ ಅಲ್ಲ. ಎಲ್ಲರೊಂದಿಗೂ ಬೆರೆತು ಖುಷಿಪಡುವುದಕ್ಕೆ ಮತ್ತು ನಿರಾಳ ಕ್ಷಣಗಳನ್ನು ಅನುಭವಿಸುವುದಕ್ಕೆ. ಖುಷಿ ಎನ್ನುವುದು ನಮ್ಮದೇ ಆಯ್ಕೆ!

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 3:20 pm, Fri, 5 May 23

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ