ಪ್ರಜ್ಞೆ ತಪ್ಪಿದ ಚಾಲಕ; 66 ಜನರನ್ನು ಉಳಿಸಿದ 7ನೇ ತರಗತಿಯ ಬಾಲಕನ ವಿಡಿಯೋ ವೈರಲ್

School Bus : ಚಾಲಕ ಬಸ್ ಓಡಿಸುತ್ತಲೇ ಅಸ್ವಸ್ಥನಾಗತೊಡಗುತ್ತಾನೆ. ಯಾರಾದರೂ 911ಗೆ ಕರೆ ಮಾಡಿ ಎಂದು ಕೂಗುತ್ತಾನೆ. ಬಸ್ಸಿನಲ್ಲಿದ್ದ ಪ್ರಯಾಣಿಕರೆಲ್ಲ ಗಾಬರಿಯಿಂದ ಚೀರಾಡುತ್ತಾರೆ. ಆದರೆ ಒಬ್ಬ ಬಾಲಕ ಮಾತ್ರ ಸಾಹಸ ಮೆರೆಯುತ್ತಾನೆ.

ಪ್ರಜ್ಞೆ ತಪ್ಪಿದ ಚಾಲಕ; 66 ಜನರನ್ನು ಉಳಿಸಿದ 7ನೇ ತರಗತಿಯ ಬಾಲಕನ ವಿಡಿಯೋ ವೈರಲ್
ಪ್ರಜ್ಞೆತಪ್ಪಿ ಬಿದ್ದ ಚಾಲಕ, ಬಸ್​ ನಿಯಂತ್ರಿಸುತ್ತಿರುವ ಬಾಲಕ
Follow us
ಶ್ರೀದೇವಿ ಕಳಸದ
| Updated By: Digi Tech Desk

Updated on:May 02, 2023 | 1:54 PM

Viral Video : ಇದೀಗ ವೈರಲ್ ಆಗಿರುವ ಈ ವಿಡಿಯೋ ಅನ್ನು ಮಿಚಿಗನ್​ನಲ್ಲಿರುವ ವಾರನ್​ ಕನ್ಸಾಲಿಡೇಟೆಡ್​ ಶಾಲೆಯು ಸಾಮಾಜಿಕ ಜಾಲತಾಣದಲ್ಲಿ ಅಪ್​ಲೋಡ್ ಮಾಡಿದೆ. ಡೈಲನ್​ ರೀವ್ಸ್​ ಬರ್ನೆಟ್​ ರಸ್ತೆಯ ಬಳಿ ಇರುವ ಮೆಸೋನಿಕ್​ ಬೌಲೆವಾರ್ಡ್​ನಲ್ಲಿ ಈ ಘಟನೆ ಸಂಭವಿಸಿದೆ. ಬಸ್​ ಡ್ರೈವರ್ ಪ್ರಜ್ಞೆ ತಪ್ಪುತ್ತಿರುವಂತೆ ಬಸ್ಸಿನಲ್ಲಿದ್ದ ಏಳನೇ ತರಗತಿಯ ಬಾಲಕ ಸಮಯಪ್ರಜ್ಞೆಯಿಂದ ವರ್ತಿಸಿ 66 ಜನರ ಜೀವವನ್ನು ಉಳಿಸಿದ್ದಾನೆ.

ವಾಹನ ದಟ್ಟಣೆ ಇರುವ ರಸ್ತೆಯಲ್ಲಿ ಈ ಬಸ್ ಸಾಗುತ್ತಿತ್ತು. ಇದ್ದಕ್ಕಿದ್ದಂತೆ ಡ್ರೈವರ್​ ಅಸ್ವಸ್ಥನಾಗಿದ್ದಾನೆ. ಇದನ್ನು ಗಮನಿಸಿದ ಈ ಬಾಲಕ ಬಸ್​ ಅಪಘಾತಕ್ಕೆ ಒಳಗಾಗದಂತೆ ನಿಯಂತ್ರಿಸಿದ್ದಾನೆ. ಇವನ ಸಮಯ ಪ್ರಜ್ಞೆ, ಗಮನಿಸುವಿಕೆ, ಪರಿಸ್ಥಿತಿಯನ್ನು ಹತೋಟಿಗೆ ತೆಗೆದುಕೊಂಡ ರೀತಿಯನ್ನು ನೆಟ್ಟಿಗರು ಶ್ಲಾಘಿಸುತ್ತಿದ್ದಾರೆ.

ಇದನ್ನೂ ಓದಿ : ಉತ್ತರಪ್ರದೇಶದ ಶಾಲಾ ಬಸ್ಸಿನಲ್ಲಿ ಹೆಬ್ಬಾವು ಪತ್ತೆ, ವಿಡಿಯೋ ವೈರಲ್

ಈ ವಿಡಿಯೋ ಸುಮಾರು 53 ಸೆಕೆಂಡುಗಳದ್ದು. ಡ್ರೈವರ್ ಪ್ರಜ್ಞೆ ತಪ್ಪುವ ಮೊದಲು ಯಾರಾದರೂ 911ಗೆ ಕರೆ ಮಾಡಿ ಎಂದು ಕೂಗುತ್ತಾನೆ. ಗಾಬರಿಗೊಂಡ ಪ್ರಯಾಣಿಕರು ಅರಚತೊಡಗುತ್ತಾರೆ. ಆದರೆ ಈ ಬಾಲಕ ಮಾತ್ರ ಧೈರ್ಯದಿಂದ ಮುನ್ನುಗ್ಗಿ ಬಸ್​ ಅನ್ನು ನಿಯಂತ್ರಿಸಿ ನಿಲ್ಲಿಸುತ್ತಾನೆ.

ಇದನ್ನೂ ಓದಿ : Viral Video : ಲೈವ್​ ಎಂಬ ಅರಿವಿದ್ದೇ ಈ ಬೆಕ್ಕು ಹೀಗೆ ಮಾಡಿತೆ?

ಶಾಲಾಸಿಬ್ಬಂದಿಯು ಈ ಹುಡುಗನ ಸಾಹಸವನ್ನು ಶ್ಲಾಘಿಸಿ ಈ ವಿಡಿಯೋ ಅನ್ನು ಸಾಮಾಜಿಕ ಜಾಲತಾಣಕ್ಕೆ ಅಪ್​ಲೋಡ್ ಮಾಡಿದೆ. ನೆಟ್ಟಿಗರು ಈತನನ್ನು ಕೊಂಡಾಡುತ್ತಿದ್ದಾರೆ.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 1:30 pm, Tue, 2 May 23

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ