AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಾಯಿಗಳ ಈ ಪಂದ್ಯಕ್ಕೆ ಬೆಕ್ಕೇ ರೆಫರಿ; ನೆಟ್ಟಿಗರ ಗಮನ ಸೆಳೆದ ಈ ವಿಡಿಯೋ ನೋಡಿ

Viral Video : ಈ ವಿಡಿಯೋ ನೋಡಿದ ನೆಟ್ಟಿಗರು, ಈ ಮೂವರೂ ಒಡಹುಟ್ಟಿವರು ಎನ್ನುತ್ತಿದ್ದಾರೆ. ಮಿಲಿಯನ್​ಗಟ್ಟಲೆ ಜನ ಈ ವಿಡಿಯೋ ನೋಡಿದ್ದು ಯಾಕೆ ಎನ್ನುವ ಕುತೂಹಲ ನಿಮಗೂ ಉಂಟಾಗಿರಬೇಕಲ್ಲವೆ?

ನಾಯಿಗಳ ಈ ಪಂದ್ಯಕ್ಕೆ ಬೆಕ್ಕೇ ರೆಫರಿ; ನೆಟ್ಟಿಗರ ಗಮನ ಸೆಳೆದ ಈ ವಿಡಿಯೋ ನೋಡಿ
ನಾಯಿಗಳೊಂದಿಗೆ ಆಟವಾಡುತ್ತಿರುವ ಬೆಕ್ಕು
TV9 Web
| Edited By: |

Updated on:May 02, 2023 | 11:37 AM

Share

ಬೆಕ್ಕು ನಾಯಿ ಶತ್ರುಗಳು ಎನ್ನುತ್ತಾರೆ. ಆದರೆ ಅಪರೂಪಕ್ಕೆ ಇದು ಸುಳ್ಳು ಎನ್ನುವುದನ್ನು ಕೆಲ ಬೆಕ್ಕು ನಾಯಿಗಳು ಆಗಾಗ ಸಾಬೀತುಪಡಿಸುತ್ತಿರುತ್ತವೆ. ಒಡಹುಟ್ಟಿದವರಂತೆಯೋ, ತಾಯಿ ಮಗುವಿನಂತೆಯೋ, ಅಪ್ಪ ಮಗುವಿನಂತೆಯೋ, ಸ್ನೇಹಿತರಂತೆಯೋ ಆಟವಾಡಿಕೊಂಡಿರುತ್ತವೆ. ಪರಸ್ಪರ ಕಾಳಜಿ ತೆಗೆದುಕೊಳ್ಳುತ್ತವೆ. ಪ್ರೀತಿಸಿಕೊಳ್ಳುತ್ತವೆ. ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಅಪ್​ಲೋಡ್ ಆಗಿರುವ ಕೋಟ್ಯಂತರ ವಿಡಿಯೋಗಳೇ ಇದಕ್ಕೆ ಸಾಕ್ಷಿ.

ಈ ವಿಡಿಯೋ ನೋಡಿ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ನಿಮ್ಮಿಬ್ಬರಿಗಿಂತ ನಾನು ಚಿಕ್ಕವನೇ ಇರಬಹುದು. ಆದರೆ ನಾನು ನಿಮಗೆ ಸಮ ಎನ್ನುತ್ತಿದೆ ಈ ಬೆಕ್ಕು! ಎರಡೂ ನಾಯಿಗಳು ತಮ್ಮಷ್ಟಕ್ಕೆ ತಾವು ಆಟದಲ್ಲಿ ಮುಳುಗಿದ್ದರೆ ಈ ಬೆಕ್ಕು ರೆಫರಿಯಂತೆ ವರ್ತಿಸಿದೆ. ಮಾರ್ಚ್ 26 ರಂದು ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋ ಅನ್ನು ಈತನಕ 1.3 ಮಿಲಿಯನ್‌ಗಿಂತಲೂ ಹೆಚ್ಚು ಜನ ನೋಡಿದ್ದಾರೆ. ಸುಮಾರು 80,000 ಜನರು ಈ ವಿಡಿಯೋ ಇಷ್ಟಪಟ್ಟಿದ್ದಾರೆ. ಸಾವಿರಾರು ಜನರು ಈ ಸುಂದರವಾದ ವಿಡಿಯೋಗೆ ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ : ನಾನೂ ನನ್ನ ಬೆಕ್ಕುಗಳೂ; ಬೆಕ್ಕುಗಳೊಂದಿಗೆ ಬೈಕ್​ಸವಾರಿ ಮಾಡುತ್ತಿರುವ ಬೆಂಗಳೂರಿಗನ ವಿಡಿಯೋ ವೈರಲ್

ಈ ಬೆಕ್ಕು ಖಂಡಿತ ರೆಫರಿ ಎಂದು ಒಬ್ಬರು ಹೇಳಿದ್ದಾರೆ. ಈ ಮೂರನ್ನು ನೋಡುತ್ತಿದ್ದರೆ ಸಣ್ಣದು ಖಂಡಿತ ಇವುಗಳ ತಮ್ಮನೋ ತಂಗಿಯೋ ಇರಬೇಕು ಎನ್ನಿಸುತ್ತದೆ ಎಂದು ಮತ್ತೊಬ್ಬರು ಹೇಳಿದ್ದಾರೆ. ಪಂಜದಿಂದ ಹೊಡೆಯುವ ಆ ಶೈಲಿ ನೋಡಿ, ಈ ಮೂವರೂ ವೃತ್ತಿಪರ ಆಟಗಾರರಂತೆ ತೋರುತ್ತಿದ್ದಾರೆ ಎಂದಿದ್ದಾರೆ ಹಲವರು.

ಆಟವನ್ನು ಮುಗಿಸಿ ಕೊನೆಯಲ್ಲಿ ಮೂರೂ ಸೇರಿ ವಿಶ್ರಮಿಸುವುದನ್ನು ನೋಡುತ್ತಿದ್ದರೆ ಎಂಥವರಿಗೂ ಪ್ರೀತಿ ಉಕ್ಕಿಬರುತ್ತದೆ. ಆಟವೇ ಇಲ್ಲಿ ಪ್ರೀತಿ, ಪ್ರೀತಿಯೇ ಇಲ್ಲಿ ಆಟವೆಂಬಂತೆ ಈ ಮೂರು ಜೀವಗಳು ವ್ಯಕ್ತಪಡಿಸಿವೆ.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 11:37 am, Tue, 2 May 23

ನೀವೆಲ್ಲರೂ ನನ್ನ ರಕ್ಷಣೆಗೆ ಬರಬೇಕು: ಸದನದಲ್ಲಿ ಪರಿಪರಿಯಾಗಿ ಬೇಡಿಕೊಂಡ ಶಾಸಕ
ನೀವೆಲ್ಲರೂ ನನ್ನ ರಕ್ಷಣೆಗೆ ಬರಬೇಕು: ಸದನದಲ್ಲಿ ಪರಿಪರಿಯಾಗಿ ಬೇಡಿಕೊಂಡ ಶಾಸಕ
ಗರ್ಭಿಣಿ ಸೊಸೆಯನ್ನು ಮಾವ ಹತ್ಯೆ ಮಾಡಿದ್ಯಾಕೆ? ಸ್ಫೋಟಕ ಕಾರಣ ಬಿಚ್ಚಿಟ್ಟ SP
ಗರ್ಭಿಣಿ ಸೊಸೆಯನ್ನು ಮಾವ ಹತ್ಯೆ ಮಾಡಿದ್ಯಾಕೆ? ಸ್ಫೋಟಕ ಕಾರಣ ಬಿಚ್ಚಿಟ್ಟ SP
17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಉದ್ಘಾಟನೆ: ಲೈವ್ ವಿಡಿಯೋ
17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಉದ್ಘಾಟನೆ: ಲೈವ್ ವಿಡಿಯೋ
ರಾಜ್ ಬಿ ಶೆಟ್ಟಿಯ ಸಕ್ಸಸ್ ಗುಟ್ಟು ರಟ್ಟು ಮಾಡಿದ ಸುದೀಪ್: ವಿಡಿಯೋ
ರಾಜ್ ಬಿ ಶೆಟ್ಟಿಯ ಸಕ್ಸಸ್ ಗುಟ್ಟು ರಟ್ಟು ಮಾಡಿದ ಸುದೀಪ್: ವಿಡಿಯೋ
ಧಮ್ಕಿ ಕೇಸ್ ಆರೋಪಿ ರಾಜೀವ್ ಗೌಡ ಪತ್ನಿ ವಿಧಾನಸೌಧದಲ್ಲಿ ಪ್ರತ್ಯಕ್ಷ
ಧಮ್ಕಿ ಕೇಸ್ ಆರೋಪಿ ರಾಜೀವ್ ಗೌಡ ಪತ್ನಿ ವಿಧಾನಸೌಧದಲ್ಲಿ ಪ್ರತ್ಯಕ್ಷ
ಸದನದಲ್ಲಿ ಪೆನ್​ಡ್ರೈವ್ ತೋರಿಸಿದ ಆರ್​ ಅಶೋಕ್: ಯಾವ ಮ್ಯಾಟರ್ ಗೊತ್ತಾ?
ಸದನದಲ್ಲಿ ಪೆನ್​ಡ್ರೈವ್ ತೋರಿಸಿದ ಆರ್​ ಅಶೋಕ್: ಯಾವ ಮ್ಯಾಟರ್ ಗೊತ್ತಾ?
ನಿವೃತ್ತಿ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ ಕೆಎಲ್ ರಾಹುಲ್
ನಿವೃತ್ತಿ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ ಕೆಎಲ್ ರಾಹುಲ್
‘ದರ್ಶನ್ ‘ಲ್ಯಾಂಡ್​ಲಾರ್ಡ್’ ನೋಡಿದ್ದರೆ ಏನೆನ್ನುತ್ತಿದ್ದರು?’
‘ದರ್ಶನ್ ‘ಲ್ಯಾಂಡ್​ಲಾರ್ಡ್’ ನೋಡಿದ್ದರೆ ಏನೆನ್ನುತ್ತಿದ್ದರು?’
ಅಜಿತ್ ಪವಾರ್ ಅಂತ್ಯಕ್ರಿಯೆಗೆ ಸೇರಿದ್ದ ಜನಸಾಗರ ನೋಡಿ!
ಅಜಿತ್ ಪವಾರ್ ಅಂತ್ಯಕ್ರಿಯೆಗೆ ಸೇರಿದ್ದ ಜನಸಾಗರ ನೋಡಿ!
ಈ ವರ್ಷ ನಟಿ ರಚಿತಾ ರಾಮ್ ಮದುವೆ: ವಿಷಯ ಖಚಿತಪಡಿಸಿದ ಡಿಂಪಲ್ ಕ್ವೀನ್
ಈ ವರ್ಷ ನಟಿ ರಚಿತಾ ರಾಮ್ ಮದುವೆ: ವಿಷಯ ಖಚಿತಪಡಿಸಿದ ಡಿಂಪಲ್ ಕ್ವೀನ್