‘ಪ್ಯಾರ್ ದಿವಾನಾ ಹೋತಾ ಹೈ’ ದೆಹಲಿ ಪೊಲೀಸ್ ಹಾಡಿಗೆ ನೆಟ್ಟಿಗರು ಫಿದಾ

Police : ತುಂಬಾ ಸುಮಧುರವಾಗಿದೆ, ಕೇಳುತ್ತಿದ್ದಂತೆ ಮನಸ್ಸು ಸಮಾಧಾನಗೊಳ್ಳುತ್ತದೆ ಎಂದು ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಇದು ನನ್ನ ಮನಸ್ಸನ್ನು ತೀವ್ರವಾಗಿ ಸ್ಪರ್ಶಿಸುತ್ತಿದೆ ಎಂದು ಮತ್ತೊಬ್ಬರು ಹೇಳಿದ್ದಾರೆ. ಕೇಳಿ ನೀವೂ.

'ಪ್ಯಾರ್ ದಿವಾನಾ ಹೋತಾ ಹೈ’ ದೆಹಲಿ ಪೊಲೀಸ್ ಹಾಡಿಗೆ ನೆಟ್ಟಿಗರು ಫಿದಾ
ದೆಹಲಿಯ ಪೊಲೀಸ್​ ರಜತ್ ರಾಥೋಡ್​ ಗಿಟಾರ್ ನುಡಿಸುತ್ತ ಹಾಡುತ್ತಿರುವುದು
Follow us
TV9 Web
| Updated By: ಶ್ರೀದೇವಿ ಕಳಸದ

Updated on:May 05, 2023 | 1:52 PM

Viral Video : ವೃತ್ತಿ ಯಾವುದಾದರೇನು ಪ್ರವೃತ್ತಿ ಎನ್ನುವುದೊಂದು ಇರುತ್ತದೆಯಲ್ಲ. ವೃತ್ತಿಗಿಂತ ಪ್ರವೃತ್ತಿಯೇ ನಮ್ಮ ಅಸ್ತಿತ್ವ ಮತ್ತು ಸಂತೋಷಕ್ಕೆ ಹೆಚ್ಚು ಕಾರಣವಾಗುವುದು. ಈಗಿಲ್ಲಿ ದೆಹಲಿಯ ಪೊಲೀಸರೊಬ್ಬರು ವೇದಿಕೆಯ ಮೇಲೆ ತಮ್ಮ ನೆಚ್ಚಿನ ಚಿತ್ರಗೀತೆಯನ್ನು ಹಾಡುತ್ತಿದ್ದಾರೆ. ಇವರ ಕಂಠಮಾಧುರ್ಯಕ್ಕೆ ಶರಣಾದ ನೆಟ್ಟಿಗರು ಶಭಾಷ್​ ಎನ್ನುತ್ತಿದ್ದಾರೆ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!
View this post on Instagram

A post shared by Rajat Rathor (@rajat.rathor.rj)

ಈಗಾಗಲೇ ಇಂಥ ಸಂಗೀತಾಸಕ್ತ ಪೊಲೀಸರು, ಯೋಧರನ್ನು ನೋಡಿದ್ದೀರಿ. ಅವರ ಹಾಡನ್ನು ಕೇಳಿದ್ದೀರಿ. ಈ ಹಾಡನ್ನೂ ಕೇಳಿದಿರಲ್ಲವೆ? ಗಿಟಾರ್ ನುಡಿಸಿಕೊಂಡು ಅದೆಷ್ಟು ಭಾವಪೂರ್ಣವಾಗಿ ಇವರು ಈ ಹಾಡನ್ನು ಹಾಡಿದ್ದಾರೆ. ಈ ವಿಡಿಯೋ ಅನ್ನು ಲಕ್ಷಾಂತರ ಜನರು ನೋಡಿದ್ದಾರೆ. ಅಂದಹಾಗೆ ಈ ಪೊಲೀಸ್​ ಅಧಿಕಾರಿಯ ಹೆಸರು ರಜತ್ ರಾಥೋಡ್​.

ಇದನ್ನೂ ಓದಿ : ಡೋಲೋ 650 ಶಶಿರೇಖಾ; ನಿಮ್ಮ ಮನೆಮಗಳೀಗ ಮಾಡೆಲಿಂಗ್​ಗೂ ಸೈ?

ರಾಜೇಶ್​ ಖನ್ನಾ ಮತ್ತು ಆಶಾ ಪಾರೇಖ್​ ಅಭಿನಯದ ಕಟೀ ಪತಂಗ್​ ಸಿನೆಮಾದ ಈ ಹಾಡನ್ನು ಕಿಶೋರ್​ ಕುಮಾರ್ ಹಾಡಿದ್ದಾರೆ. ಪ್ಯಾರ್ ದಿವಾನಾ ಹೋತಾ ಹೈ ಈ ಹಾಡು ಕಿಶೋರ್​ ಅವರ ಸೂಪರ್ ಹಿಟ್ ಹಾಡುಗಳಲ್ಲಿ ಒಂದು. ಈಗ ಈ ಕೆಳಗಿನ ವಿಡಿಯೋದಲ್ಲಿ ರಜತ್ ಅವರ ಇನ್ನೊಂದು ಹಾಡನ್ನು ಕೇಳಿ.

ಇದು ತುಂಬಾ ಸುಮಧುರವಾಗಿದೆ, ಕೇಳುತ್ತಿದ್ದಂತೆ ಮನಸ್ಸು ಸಮಾಧಾನಗೊಳ್ಳುತ್ತದೆ ಎಂದು ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಇದು ನನ್ನ ಮನಸ್ಸನ್ನು ತೀವ್ರವಾಗಿ ಸ್ಪರ್ಶಿಸುತ್ತಿದೆ ಎಂದು ಮತ್ತೊಬ್ಬರು ಹೇಳಿದ್ದಾರೆ. ನಾನು ನಿಮ್ಮ ಅಭಿಮಾನಿ ಸರ್​, ನೀವು ಉತ್ತಮ ಕಲಾವಿದರು ಎಂದು ಮಗದೊಬ್ಬರು ಪ್ರತಿಕ್ರಿಯಿಸಿದ್ದಾರೆ.

ಹೀಗೆ ಭಾವಸಾಗರದಲ್ಲಿ ತೇಲಿಹೋಗುವಂತೆ ಮಾಧುರ್ಯಪೂರ್ಣವಾಗಿ ಹಾಡುವ ಈ ಪೊಲೀಸ್​ ಅಧಿಕಾರಿಗೆ ಸಂಗೀತ ಕ್ಷೇತ್ರದಲ್ಲಿಯೂ ಉಜ್ವಲ ಭವಿಷ್ಯ ರೂಪುಗೊಳ್ಳಲಿ.

ಮತ್ತಷ್ಟು ವೈರಲ್​ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 1:37 pm, Fri, 5 May 23

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ