ರಾಮೆನ್​ ಜೈವಿಕ ಇಂಧನ; ತಂಗಳು ನೂಡಲ್ಸ್​ ಸೂಪ್​ನಿಂದ ಈ ರೈಲು ಓಡುತ್ತದೆ!

Ramen : ಇದು ಪರಿಸರ ಸ್ನೇಹಿ ರೈಲೂ ಹೌದು. ಅಷ್ಟೇ ಅಲ್ಲ ಇದು ಪರಿಮಳವನ್ನು ಪಸರಿಸುತ್ತದೆ. ಆಗ ಪ್ರಯಾಣಿಕರು, ಆಹಾ ಹತ್ತಿರದಲ್ಲಿ ರಾಮೆನ್​ ರೆಸ್ಟೋರೆಂಟ್​ ಇದೆ ಎಂದು ಮೂಗರಳಿಸಿದಲ್ಲಿ ಅಚ್ಚರಿಯೇನಲ್ಲ.  

ರಾಮೆನ್​ ಜೈವಿಕ ಇಂಧನ; ತಂಗಳು ನೂಡಲ್ಸ್​ ಸೂಪ್​ನಿಂದ ಈ ರೈಲು ಓಡುತ್ತದೆ!
ಜಪಾನಿನಲ್ಲಿ ರಾಮೆನ್ ಜೈವಿಕ ಇಂಧನದಿಂದ ಚಲಿಸುತ್ತಿರುವ ರೈಲು
Follow us
TV9 Web
| Updated By: ಶ್ರೀದೇವಿ ಕಳಸದ

Updated on:May 05, 2023 | 12:11 PM

Viral Video : ರಾಮೆನ್​! ಜಪಾನಿ ನೂಡಲ್ಸ್, ಸೂಪ್​​ ಸವಿಯದವರು ಯಾರಿಲ್ಲ? ಜಪಾನಿನಲ್ಲಂತೂ ರಾಮೆನ್​ ಇಲ್ಲದೆ ಬೆಳಗೂ ಆಗುವುದಿಲ್ಲ ಹಾಗೇ ರಾತ್ರಿಯೂ. ಆದರೆ ಈಗ ಇದೇ ರಾಮೆನ್​ನಿಂದ ರೈಲೂ ಓಡುತ್ತದೆ ಎಂಬ ಹೊಸ ವಿಷಯ ನಿಮಗೆ ಗೊತ್ತೆ? ಅರೆ, ರಾಮೆನ್​ಗೂ ರೈಲಿಗೂ ಏನು ಸಂಬಂಧ ಎಂದು ಯೋಚಿಸುತ್ತಿದ್ದೀರಾ? ಬನ್ನಿ ಹಾಗಿದ್ದರೆ ಈ ವಿಡಿಯೋ ನೋಡಿ.

ಎಷ್ಟೇ ಲೆಕ್ಕ ಹಾಕಿ ಮಾಡಿದರೂ ಮಾಡಿದ ಅಡುಗೆ ಉಳಿಯುವುದೇ ಅಲ್ಲವೆ? ಉಳಿದದ್ದನ್ನು ಹೇಗೆ ಕೆಡಿಸುವುದು, ಹಾಗಂತ ತಂಗಳನ್ನು ತಿನ್ನುವುದು ಎಷ್ಟು ಆರೋಗ್ಯಕರ ಎಂಬ ಪ್ರಶ್ನೆ ಕಾಡುತ್ತದೆ. ಈ ದ್ವಂದ್ವದಲ್ಲಿಯೇ ಅಡುಗೆ ಕಸದಬುಟ್ಟಿ ಸೇರಿಯಾಗಿರುತ್ತದೆ. ಆದರೆ ಇದೀಗ ಜಪಾನ್​ನ ರೈಲೊಂದು ತಂಗಳು ರಾಮೆನ್​ ನೂಡಲ್ಸ್​ನ ಸಾರ ಮತ್ತು ಸೂಪ್​ ಅನ್ನು ಜೈವಿಕ ಇಂಧನವನ್ನಾಗಿ ಪರಿವರ್ತಿಸಿದೆ. ಹೇಗಿದೆ ಈ ರಚನಾತ್ಮಕ ಆಲೋಚನೆ!

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಇದನ್ನೂ ಓದಿ : ಹಸ್ಕಿಗೀತೆ; ಸಂಗೀತ ಕಲಿಯುವಲ್ಲಿ ಎಂಥಾ ಶ್ರದ್ಧೆ ಈ ತಾಯಿ ಮಕ್ಕಳದು

ಜಪಾನಿನ ವಿಶೇಷ ಪ್ರವಾಸದ ರೈಲಿನಲ್ಲಿ ಈ ಪ್ರಯೋಗ ಶುರುವಾಗಿದೆ. ಇಲ್ಲಿಯ ಸಾರಿಗೆ ಸಂಸ್ಥೆ ನಿಶಿದಾ ಲಾಜಿಸ್ಟಿಕ್ಸ್ ಈ ಪರ್ಯಾಯ ಇಂಧನವನ್ನು ಕಂಡುಹಿಡಿದಿದೆ. ನೂಡಲ್ಸ್​ ರಸ, ಸೂಪ್​ನಂಥ ದ್ರವಾಹಾರವನ್ನು ಸ್ಥಳೀಯ ರೆಸ್ಟೋರೆಂಟ್​ಗಳಿಂದ ಸಂಗ್ರಹಿಸಲಾಗುತ್ತದೆ. ಇದು ಶೇ. 90 ರಷ್ಟು ಟೆಂಪುರಾ ಎಣ್ಣೆ ಮತ್ತು ಶೇ. 10 ರಷ್ಟು ರಾಮೆನ್​ ಸೂಪ್​ ಅನ್ನು ಒಳಗೊಂಡಿರುತ್ತದೆ.  ನಂತರ ಅದನ್ನು ಸಂಸ್ಕರಿಸಿ ಇಂಧನವನ್ನಾಗಿ ಪರಿವರ್ತಿಸಲಾಗುತ್ತದೆ.

ಈ ಜೈವಿಕ ಇಂಧನವು ಇತರೇ ಇಂಧನಗಳಂತೆ ಪರಿಸರಕ್ಕೆ ಮಾರಕವಲ್ಲ. ಪರಿಸರ ಸ್ನೇಹಿಯೂ ಹೌದು ಹಾಗೆಯೇ ರೈಲು ಚಲಿಸುತ್ತಿರುವಂತೆ ವಿಶೇಷ ಪರಿಮಳವನ್ನು ಪಸರಿಸುತ್ತದೆ. ಆಗ ಪ್ರಯಾಣಿಕರು, ಆಹಾ ಹತ್ತಿರದಲ್ಲಿ ರಾಮೆನ್​ ರೆಸ್ಟೋರೆಂಟ್​ ಇದೆ ಎಂದು ಮೂಗರಳಿಸಿದಲ್ಲಿ ಅಚ್ಚರಿಯೇನಲ್ಲ.

ಇದನ್ನೂ ಓದಿ : ಡೋಲೋ 650 ಶಶಿರೇಖಾ; ನಿಮ್ಮ ಮನೆಮಗಳೀಗ ಮಾಡೆಲಿಂಗ್​ಗೂ ಸೈ?

ಜಪಾನಿನ ಮಿಯಾಜಾಕಿ ಪ್ರಾಂತ್ಯದಲ್ಲಿ ಈ ವಿಶೇಷ ರೈಲು ಪ್ರಯಾಣವನ್ನು ಅನುಭವಿಸಬಹುದಾಗಿದೆ. ಇದು ಸುಮಾರು 60 ಪ್ರಯಾಣಿಕರ ಸಾಮರ್ಥ್ಯವನ್ನು ಹೊಂದಿದೆ. ಈ ರೈಲಿಗೆ ಅಮಟೆರಾಸು ಎಂದು ಹೆಸರಿಸಲಾಗಿದೆ.  30 ನಿಮಿಷಗಳ ಈ ಓಪನ್​ ರೈಲುಪ್ರಯಾಣದ ಮೂಲಕ ಹಳ್ಳಿಪರಿಸರವನ್ನು ಆನಂದಿಸಬಹುದಾಗಿದೆ. 344 ಅಡಿ ಎತ್ತರದಲ್ಲಿರುವ ಸೇತುವೆಯ ಮೇಲೆ ಇದು ಚಲಿಸುವುದರಿಂದ ಸುಂದರ ಭೂದೃಶ್ಯವನ್ನು ನೋಡಬಹುದಾಗಿದೆ ಹಾಗೆಯೇ ಸುರಂಗ ಮಾರ್ಗದ ಅದ್ಭುತ ಅನುಭವವನ್ನು ಪ್ರಯಾಣಿಕರು ಹೊಂದಬಹುದಾಗಿದೆ.

ನಿಮ್ಮ ಮನೆಯ ತಂಗಳು ಸಾರು, ಸಾಂಬಾರನ್ನು ಏನು ಮಾಡುವುದು ಎಂದು ಯೋಚಿಸುತ್ತಿದ್ದೀರಾ?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 12:07 pm, Fri, 5 May 23

ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್