AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಾದವನ್ನು ಹಿಮ್ಮುಖವಾಗಿ ಕಾಲಿಗೆ ಜೋಡಿಸಿದ ವೈದ್ಯರು; ಇದು ತನ್ನ ಜೀವವನ್ನು ಉಳಿಸಿದೆ ಎಂದ ವ್ಯಕ್ತಿ!

ಮೂಳೆ ಕ್ಯಾನ್ಸರ್‌ನಿಂದ ಬಳಲುತ್ತಿರುವ ವ್ಯಕ್ತಿಯೊಬ್ಬರ ಕಾಲನ್ನು ತುಂಡರಿಸಿ ಮತ್ತೆ ನಡೆಯಲು ಸಹಾಯ ಮಾಡಲು ಅವರ ಪಾದವನ್ನು ಹಿಂದಕ್ಕೆ ಹೊಲಿಯಲಾಯಿತು.

ಪಾದವನ್ನು ಹಿಮ್ಮುಖವಾಗಿ ಕಾಲಿಗೆ ಜೋಡಿಸಿದ ವೈದ್ಯರು; ಇದು ತನ್ನ ಜೀವವನ್ನು ಉಳಿಸಿದೆ ಎಂದ ವ್ಯಕ್ತಿ!
ಇಬ್ರಾಹಿಂ ಅಬ್ದುಲ್ರೌಫ್Image Credit source: SWNS
Follow us
ನಯನಾ ಎಸ್​ಪಿ
|

Updated on: May 05, 2023 | 11:41 AM

ಇಂದು ಆಡಿ-ಓಡಿ ನಲಿಯುತ್ತಿದ್ದ ಪುಟ್ಟ ಬಾಲಕನಿಗೆ ನಾಳೆ ತನಗೆ ನಡೆಯಲು ಸಾಧ್ಯವಾಗುವುದಿಲ್ಲ ಎಂಬ ಅರಿವೇ ಇರಲಿಲ್ಲ. 2015 ರಲ್ಲಿ 14 ವರ್ಷದ ಇಬ್ರಾಹಿಂ ಅಬ್ದುಲ್ರೌಫ್ ತನ್ನ ಸಹೋದರನೊಂದಿಗೆ ಫುಟ್ಬಾಲ್ (Football) ಆಡುತ್ತಿದ್ದಾಗ ಕಾಲಿಗೆ ಗಾಯ ಮಾಡಿಕೊಂಡಿದ್ದರು. ಅವರು ಆರಂಭದಲ್ಲಿಸಣ್ಣ ಗಯಾವೆಂದು ಭಾವಿಸಿದ್ದರು ಆದರೆ ಮರುದಿನ ನಡೆಯಲು ಸಾಧ್ಯವಾಗದಿದ್ದಾಗ, ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಮೂಳೆ ಕ್ಯಾನ್ಸರ್‌ನಿಂದ (Bone Cancer) ಬಳಲುತ್ತಿದ್ದರೆ ಎಂದು ತಿಳಿದ ನಂತರ ಇದೀಗ ಈ ವ್ಯಕ್ತಿಯ ಕಾಲನ್ನು ತುಂಡರಿಸಿ ಮತ್ತೆ ನಡೆಯಲು ಸಹಾಯ ಮಾಡಲು ಅವರ ಪಾದವನ್ನು ಹಿಂದಕ್ಕೆ ಹೊಲಿಯಲಾಗಿದೆ.

2015 ರಲ್ಲಿ ಆಸ್ಪತ್ರೆಗೆ ದಾಖಲಿಸಿದ ನಂತರ ಅವರಿಗೆ ಮೂಳೆಯ ಸೋಂಕು ಇದೆ ಎಂದು ತಿಳಿಸಲಾಯಿತು ಮತ್ತು ಬರ್ಮಿಂಗ್ಹ್ಯಾಮ್‌ನ ರಾಯಲ್ ಆರ್ಥೋಪೆಡಿಕ್ ಆಸ್ಪತ್ರೆಗೆ ಕಳುಹಿಸಲಾಯಿತು. ವೈದ್ಯರು ಅಂತಿಮವಾಗಿ ಇಬ್ರಾಹಿಂ ಮೂಳೆ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ ಮತ್ತು ಅವರ ಕಾಲನ್ನು ತೆಗೆಯಬೇಕು ಎಂದು ಹೇಳಿದರು.

ಇಬ್ರಾಹಿಂ ಆರು ತಿಂಗಳು ಕೀಮೋಥೆರಪಿಗೆ ಪಡೆದರು ಆದರೆ ಶಸ್ತ್ರಚಿಕಿತ್ಸೆ ಇಲ್ಲದೆ ಅವರ ಕ್ಯಾನ್ಸರ್ ಎಲ್ಲೆಡೆ ಎರಡುವ ಅಪಾಯ ಹೆಚ್ಚಿತ್ತು. ಈ ಸಮಯದಲ್ಲಿ ವೈದ್ಯರು ಇಬ್ರಾಹಿಂಗೆ ರೊಟೇಶನ್ ಪ್ಲಾಸ್ಟಿ ಶಸ್ತ್ರ ಚಿಕಿತ್ಸೆ ಪಡೆಯುವಂತೆ ಸಲಹೆ ನೀಡಿದರು, ಅದರಲ್ಲಿ ಅವರ ಕಾಲಿನ ಮಧ್ಯ ಭಾಗವನ್ನು ತೆಗೆದು ಅವರ ಪಾದವನ್ನು ಹಿಮ್ಮುಖವಾಗಿ ಹೊಲಿಯಲಾಗುತ್ತದೆ. ಇದು ಪಾದವು ಮೊಣಕಾಲಿನ ಜಂಟಿಯಾಗಿ ಕಾರ್ಯನಿರ್ವಹಿಸಲು ಸಹಾಯ ಮಾಡಿಕೊಡುತ್ತದೆ ಮತ್ತು ಪ್ರಾಸ್ಥೆಟಿಕ್ಸ್‌ನೊಂದಿಗೆ ನಡೆಯಲು ಇಬ್ರಾಹಿಂ ಅವರಿಗೆ ಸುಲಭವಾಗುತ್ತದೆ ಎಂದು ವೈದ್ಯರು ತಿಳಿಸಿದರು.

“ಹಿಮ್ಮುಖವಾದ ಪಾದದಲ್ಲಿ ನನ್ನನು ನಾನು ನೋಡಿಕೊಳ್ಳಲು ಊಹಿಸಲು ಕಷ್ಟವಾದ ಸಂಗತಿಯಾಗಿತ್ತು. ನಾನು ಫ್ರಾಂಕೆನ್‌ಸ್ಟೈನ್‌ನಂತೆಯೇ ಎಂದು ಯೋಚಿಸುತ್ತಿದ್ದೆ. ಶಸ್ತ್ರಚಿಕಿತ್ಸೆಯ ನಂತರ, ನಾನು ಸಂಪೂರ್ಣವಾಗಿ ಚೇತರಿಸಿಕೊಂಡ ಗಳಿಗೆಯನ್ನು ನೆನಪಿಸಿಕೊಳ್ಳಲು ಇಷ್ಟಪಡುತ್ತೇನೆ. ವೈದ್ಯರು ನನಗೆ ಶಸ್ತ್ರಚಿಕಿತ್ಸೆ ಮಾಡಿದ್ದಾರೆಯೇ ಅಥವಾ ಇಲ್ಲವೇ ಎಂದು ನನಗೆ ತಿಳಿದಿರಲಿಲ್ಲ. ಬೆಡ್ಶೀಟ್ ಕೆಳಗಿನಿಂದ ನಾನು ನನ್ನ ಕಾಲನ್ನು ಎತ್ತಿ ನೋಡಿದಾಗ ನನಗೆ ನಂಬಲು ಸಾಧ್ಯವಾಗಲಿಲ್ಲ. ನಾನು ಮಲಗಲು ಹೋದಾಗ ನನಗೆ ಕಾಲು ಇತ್ತು ಮತ್ತು ನಾನು ಎಚ್ಚರಗೊಂಡೆ ನನ್ನ ಕಾಲು ಹಿಂದಕ್ಕೆ ತಿರುಗಿತ್ತು. ಕಾಲಿಗೆ ಬ್ಯಾಂಡೇಜ್ ಹಾಕಲಾಗಿತ್ತು ಆದರೆ ಕೆಳಭಾಗದಲ್ಲಿ ಕಾಲು ಕಾಣುತಿತ್ತು, ”ಎಂದು ಇಬ್ರಾಹಿಂ ಮೆಟ್ರೋ ವರದಿಯಲ್ಲಿ ಮೂಲಕ.

ಮತ್ತೆ ಐದು ತಿಂಗಳ ಕೀಮೋಥೆರಪಿಯ ನಂತರ, ಇಬ್ರಾಹಿಂ ರಿಹ್ಯಾಬಿಲಿಟೇಷನ್ ಸೇರಿದರು. ಪ್ರಾಸ್ಥೆಟಿಕ್ಸ್‌ನೊಂದಿಗೆ ಮತ್ತೆ ನಡೆಯಲು ಕಲಿಯಲು ಅವರು ಮೂರು ವರ್ಷಗಳನ್ನು ತೆಗೆದುಕೊಂಡರು.

ಇದನ್ನೂ ಓದಿ: ಸೊಸೆಯನ್ನೇ ಮದುವೆಯಾದ ಮಾವ; ವಿಡಿಯೋ ವೈರಲ್​​​

ಇಬ್ರಾಹಿಂ ಈಗ ಕ್ರೀಡೆಗಳನ್ನು ಆಡಬಹುದು ಮತ್ತು ನೃತ್ಯ ಮಾಡಬಹುದು

“ನಾನು ಇನ್ನೂ ಬ್ಯಾಡ್ಮಿಂಟನ್ ಆಡಬಲ್ಲೆ. ನಾನು ಪ್ರತಿ ವಾರಾಂತ್ಯದಲ್ಲಿ ಆಡುತ್ತಿದ್ದೆ. ನನ್ನ ಸ್ವಾತಂತ್ರ್ಯವನ್ನು ಮರಳಿ ಪಡೆದಿದ್ದಕ್ಕಾಗಿ ನಾನು ತುಂಬಾ ಕೃತಜ್ಞನಾಗಿದ್ದೇನೆ, ಯಾರ ಸಹಾಯವಿಲ್ಲದೆ ನಾನು ಈಗ ನನ್ನನ್ನು ನೋಡಿಕೊಳ್ಳಬಹುದು. ರೋಟೇಶನ್ ಪ್ಲಾಸ್ಟಿ ಹೆಚ್ಚಿನ ಕಾರ್ಯ ಮತ್ತು ಚಲನೆಯನ್ನು ನೀಡುತ್ತದೆ. ಈಗ ನನ್ನ ಕಾಲನ್ನು ನಾನೇ ನಿಯಂತ್ರಿಸಬಹುದು. ಈ ರೀತಿಯಾಗಿ ನಾನು ನನ್ನ ಸ್ವಂತ ನರಗಳ ಮೂಲಕ ನನ್ನ ಸ್ವಂತ ಕಾಲನ್ನು ಬಳಸಬಹುದು ಏಕೆಂದರೆ ವೈದ್ಯರು ಕಾಲನ್ನು ಹಿಂದಕ್ಕೆ ಹಾಕಿದ ನಂತರ ಎಲ್ಲವನ್ನೂ ಮತ್ತೆ ಜೋಡಿಸುತ್ತಾರೆ.” ಎಂದು ಇಬ್ರಾಹಿಂ ಹೇಳಿದರು.

ರಕ್ತ ಪರೀಕ್ಷೆ ಮಾಡಿಸಲಿ: ಚೈತ್ರಾ ಕುಂದಾಪುರ ಆರೋಪಕ್ಕೆ ತಂದೆಯಿಂದ ನೇರ ಸವಾಲು
ರಕ್ತ ಪರೀಕ್ಷೆ ಮಾಡಿಸಲಿ: ಚೈತ್ರಾ ಕುಂದಾಪುರ ಆರೋಪಕ್ಕೆ ತಂದೆಯಿಂದ ನೇರ ಸವಾಲು
ಸಿದ್ದರಾಮಯ್ಯ ನಾಯಕತ್ವದ ಬಗ್ಗೆ ಕಾಂಗ್ರೆಸ್ ಪಕ್ಷದಲ್ಲಿ ಗೊಂದಲವಿಲ್ಲ: ಸುರೇಶ್
ಸಿದ್ದರಾಮಯ್ಯ ನಾಯಕತ್ವದ ಬಗ್ಗೆ ಕಾಂಗ್ರೆಸ್ ಪಕ್ಷದಲ್ಲಿ ಗೊಂದಲವಿಲ್ಲ: ಸುರೇಶ್
ಕುಷ್ಟಗಿ-ಹುಬ್ಬಳ್ಳಿ ಪ್ಯಾಸೆಂಜರ್ ರೈಲಿಗೆ ಚಾಲನೆ ನೀಡಿದ ಸಚಿವ ವಿ ಸೋಮಣ್ಣ
ಕುಷ್ಟಗಿ-ಹುಬ್ಬಳ್ಳಿ ಪ್ಯಾಸೆಂಜರ್ ರೈಲಿಗೆ ಚಾಲನೆ ನೀಡಿದ ಸಚಿವ ವಿ ಸೋಮಣ್ಣ
ಮಂಡಿನೋವಿನ ಸಮಸ್ಯೆಯ ನಂತರ ಸಿದ್ದರಾಮಯ್ಯ ನಡಿಗೆ ಶೈಲಿ ಬದಲಾಗಿದೆ
ಮಂಡಿನೋವಿನ ಸಮಸ್ಯೆಯ ನಂತರ ಸಿದ್ದರಾಮಯ್ಯ ನಡಿಗೆ ಶೈಲಿ ಬದಲಾಗಿದೆ
ರಾಕೇಶ್ ಪೂಜಾರಿ ಸಾವಿನ ಬಗ್ಗೆ ದುನಿಯಾ ವಿಜಯ್ ಮಾತು
ರಾಕೇಶ್ ಪೂಜಾರಿ ಸಾವಿನ ಬಗ್ಗೆ ದುನಿಯಾ ವಿಜಯ್ ಮಾತು
ನತದೃಷ್ಟ ಮಗುವಿಗೆ ತಂದೆಯಿಲ್ಲ, ಕುಟುಂಬದಲ್ಲಿ ಮೂವರಿಗೆ ಹುಟ್ಟುಕಿವುಡು: ಸಂಸದ
ನತದೃಷ್ಟ ಮಗುವಿಗೆ ತಂದೆಯಿಲ್ಲ, ಕುಟುಂಬದಲ್ಲಿ ಮೂವರಿಗೆ ಹುಟ್ಟುಕಿವುಡು: ಸಂಸದ
ಕಟ್ಟಡದೊಳಗೆ ಅಡಗಿದ್ದ ಜೈಶ್ ಉಗ್ರರ ಎನ್​ಕೌಂಟರ್ ನಡೆದಿದ್ದು ಹೇಗೆ?
ಕಟ್ಟಡದೊಳಗೆ ಅಡಗಿದ್ದ ಜೈಶ್ ಉಗ್ರರ ಎನ್​ಕೌಂಟರ್ ನಡೆದಿದ್ದು ಹೇಗೆ?
ಸುಮಾರು ಮೂರು ಲಕ್ಷ ಜನ ಸಾಧನಾ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ: ಈಶ್ವರ್
ಸುಮಾರು ಮೂರು ಲಕ್ಷ ಜನ ಸಾಧನಾ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ: ಈಶ್ವರ್
ಮಗಳ ಸಾವಿಗೆ ಸೇಡು ತೀರಿಸಿಕೊಂಡ ಅಪ್ಪ: ಕೊಲೆ ಮಾಡುತ್ತಿರುವ ಭಯಾನಕ ವಿಡಿಯೋ!
ಮಗಳ ಸಾವಿಗೆ ಸೇಡು ತೀರಿಸಿಕೊಂಡ ಅಪ್ಪ: ಕೊಲೆ ಮಾಡುತ್ತಿರುವ ಭಯಾನಕ ವಿಡಿಯೋ!
ಮೀನುಗಾರಿಕೆ ಕ್ಷೇತ್ರದ ಪ್ರಗತಿ: ಪ್ರಧಾನಿ ಮೋದಿ ಸಭೆ
ಮೀನುಗಾರಿಕೆ ಕ್ಷೇತ್ರದ ಪ್ರಗತಿ: ಪ್ರಧಾನಿ ಮೋದಿ ಸಭೆ