ನೀವು ಸೃಜನಶೀಲರೇ?; ಬಾಳೆಹಣ್ಣಿಗೆ ಕಟ್ಟಿದ ದಾರ ಯಾವ ನಂಬರಿಗೆ ಸಂಬಂಧಿಸಿದ್ದು?
Brain Teaser : ಬಹುಶಃ ನೀವು ಏಳು ಸೆಕೆಂಡುಗಳಿಗಿಂತ ಕಡಿಮೆ ಅವಧಿಯಲ್ಲಿ ಈ ಸವಾಲಿಗೆ ಉತ್ತರವನ್ನ ಕಂಡುಕೊಳ್ಳುತ್ತೀರಿ. ವೀಕೆಂಡ್ ಮೂಡಿನಲ್ಲಿರುವ ನಿಮಗೆ ಕೆಲಸದ ಹೊರೆಯಿಂದ ತಲೆ ಭಾರವಾಗಿರಬಹುದು. ಇದನ್ನೊಮ್ಮೆ ಪ್ರಯತ್ನಿಸಿ.

Viral Brain Teaser : ಇಷ್ಟು ದಿನಗಳಲ್ಲಿ ಬಹುಶಃ ಇದು ಅತ್ಯಂತ ಸರಳವಾದಂಥ ಸವಾಲು ಎನ್ನಿಸುತ್ತಿದೆ. ಈ ಒಂದು ಬಾಳೆಹಣ್ಣು ಮತ್ತು ಒಂದು ದಾರ ಮತ್ತು ನಾಲ್ಕು ನಂಬರುಗಳ ಸುತ್ತ ಇದು ಸುತ್ತುತ್ತಿದೆ. ನಿಮಗಿರುವ ಸಮಯ 7 ಸೆಕೆಂಡುಗಳು. ಬರೀ ಏಳೇ ಸೆಕೆಂಡುಗಳಾ, ಎಂದು ಬೇಸರಿಸಿಕೊಳ್ಳಬೇಡಿ. ಮೊದಲೇ ಹೇಳಿದಂತೆ ಇದು ಬಹಳ ಸುಲಭದ್ದು. ಆದರೆ ನಿಮ್ಮಲ್ಲಿ ಸೃಜನಾತ್ಮಕ ನೋಟವಿದ್ದರೆ ಏಳು ಸೆಕೆಂಡುಗಳಿಗಿಂತ ಮೊದಲೇ ಉತ್ತರ ಕಂಡುಕೊಳ್ಳುತ್ತೀರಿ.

ಈ ಚಿತ್ರ ನೋಡಿದ ಮೇಲೆ ನಿಮಗೆ ಉತ್ತರ ಬೇಗ ಹೊಳೆಯಬಹುದು ಅಲ್ಲವೆ?
ಈ ಮಳೆ, ಮೋಡ, ಬಾಳೆಕಾಯಿ ಚಿಪ್ಸ್, ಕಪ್ ಕಾಫಿ ಜೊತೆ ಮೆದುಳಲ್ಲಿ ಮೇಲಿನ ಚಿತ್ರ ಗಿರಕಿ ಹೊಡೆಯುತ್ತಿದ್ದರೆ ಆಹಾ! ಬಹಳ ಬೇಗ ನಿಮ್ಮ ತಲೆ ಹಗೂರವಾಗುತ್ತದೆ. ಆದರೆ ಈ ಸವಾಲಿಗೆ ಉತ್ತರ ಕಂಡುಕೊಂಡಲ್ಲಿ ಮಾತ್ರ! ನಿಮಗಿನ್ನೂ ಉತ್ತರ ಹೊಳೆದಿಲ್ಲವಾದರೆ ಈ ಕೆಳಗಿನ ಚಿತ್ರವನ್ನು ನೋಡಿಬಿಡಿ!

ಉತ್ತರ ಎರಡು!
ಮೊದಲಿಗೆ ಒಂದನೇ ದಾರದಿಂದ ಎನ್ನುವ ಭ್ರಮೆ ಹುಟ್ಟಿಸುತ್ತದೆ. ಮತ್ತೊಮ್ಮೆ ಮೂರನೇ ದಾರದಿಂದ ಎಂದು. ಚುರುಕುಗಣ್ಣಿನರಾಗಿದ್ದರೆ ಒಂದೇ ಏಟಿಗೆ ಉತ್ತರ ಗೊತ್ತಾಗುತ್ತದೆ!
ನೀವು ಮೆದುಳಿಗೆ ಇಂಥ ಕಸರತ್ತನ್ನು ಕೊಡುವಲ್ಲಿ ಉತ್ಸುಕರಾಗಿದ್ದರೆ ಇಂಥ ಚಟುವಟಿಕೆಗಳನ್ನು ಆಗಾಗ ಪ್ರಯತ್ನಿಸಿ. ನಿಮ್ಮ ಮನೆಯ ಮಕ್ಕಳು ರಚ್ಚೆ ಹಿಡಿದು ಅಳುತ್ತಿದ್ದರೆ ಇಂಥ ಚಟುವಟಿಕೆಗಳನ್ನು ತೋರಿಸಿ ಅವರ ಮನಸ್ಸನ್ನು ತಿರುಗಿಸಲು ಪ್ರಯತ್ನಿಸಿ. ಹಾಗೆಯೇ ನಿಮ್ಮ ಮನೆಯ ಹಿರಿಯರಿಗೂ ಇವುಗಳ ಬಗ್ಗೆ ತಿಳಿಸಿಕೊಡಿ. ಅಷ್ಟೇ ಅಲ್ಲ ಒತ್ತಡದಲ್ಲಿರುವ ನಿಮ್ಮ ಸ್ನೇಹಿತರಿಗೂ ಲಿಂಕ್ ಕಳಿಸಿ ಅವರ ಮನಸ್ಸನ್ನು ಹಗೂರಗೊಳಿಸಲು ಪ್ರಯತ್ನಿಸಿ.
ಏನಂತೀರಿ?
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 4:51 pm, Sat, 6 May 23