Viral Video: ಯಾವುದೇ ಖರ್ಚಿಲ್ಲದೆ ಪ್ರಧಾನಿ ಮೋದಿ ರೋಡ್ ಶೋ ಮಾಡಿದ ಪುಟ್ಟ ಅಭಿಮಾನಿಗಳು: ವೀಡಿಯೊ ನೋಡಿ
ಇಲ್ಲೊಂದು ಪುಟ್ಟಮಕ್ಕಳ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ಪುಟ್ಟ ಮಕ್ಕಳು ಸೇರಿ ಯಾವುದೇ ಖರ್ಚು ಇಲ್ಲದೆ ಮೋದಿ ಅವರ ರೋಡ್ ಶೋ ಮಾಡಿದ್ದಾರೆ.
ಕರ್ನಾಟಕದಲ್ಲಿ ಒಂದು ರೀತಿ ಚುನಾವಣೆ ಹಬ್ಬವೇ ನಡೆಯುತ್ತಿದೆ. ಎಲ್ಲ ಕಡೆ ರಾಜಕೀಯ ವ್ಯಕ್ತಿಗಳ ಹವಾ ಶುರುವಾಗಿದ್ದು. ಮೇ 10ಕ್ಕೆ ಕರ್ನಾಟಕ ವಿಧಾನಸಭಾ ಚುನಾವಣೆ 2023 ನಡೆಯಲಿದ್ದು. ಇದೀಗ ರಾಜಕೀಯ ನಾಯಕರು ಎಲ್ಲ ಕಡೆ ರೋಡ್ ಶೋ ಶುರು ಮಾಡಿದ್ದಾರೆ. ಇಂದು ಪ್ರಧಾನಿ ಮೋದಿ ಕೂಡ ರೋಡ್ ಶೋ ಮಾಡುತ್ತಿದ್ದಾರೆ. ಈ ಸಮಯದಲ್ಲಿ ಪುಟ್ಟ ಮಕ್ಕಳ ರೋಡ್ ಶೋ ವೀಡಿಯೊ ವೈರಲ್ ಆಗಿದೆ. ಮೇ.10ಕ್ಕೆ ಚುನಾವಣೆ ಇರುವ ಕಾರಣಕ್ಕೆ ಈಗಾಗಲೇ ಪ್ರಚಾರ ರಂಗು ಶುರುವಾಗಿದೆ. ವಿವಿಧ ಪಕ್ಷಗಳು ನಾಯಕರು ಜನರನ್ನು ಸೆಳೆಯಲು ಅನೇಕ ತಂತ್ರಗಳನ್ನು ಮಾಡುತ್ತಿದ್ದಾರೆ. ಪರ-ವಿರೋಧಗಳ ನಡುವೆ ಪ್ರಚಾರ ಜೋರಾಗಿಯೇ ನಡೆಯುತ್ತಿದೆ. ಇನ್ನೂ ಸ್ಟಾರ್ ಪ್ರಚಾರಕ್ಕೆ ಸಿನಿಮಾ ನಟ-ನಟಿಯರು ರಾಜಕೀಯ ನಾಯಕರ ಪರ ಪ್ರಚಾರ ಮಾಡುತ್ತಿದ್ದಾರೆ. ಬೇರೆ ಬೇರೆ ರಾಜ್ಯಗಳ ರಾಜಕೀಯ ನಾಯಕರು ಬಂದು ಅಭ್ಯರ್ಥಿಗಳಿಗೆ ಸಾಥ್ ನೀಡಿದ್ದಾರೆ. ಇನ್ನೂ ಇಂದು (ಮೇ6) ಪ್ರಧಾನಿ ಮೋದಿ ಬೆಂಗಳೂರಿಗೆ ಬಂದಿದ್ದು ಅದ್ಧೂರಿ ರೋಡ್ ಶೋ ಆರಂಭಿಸಿದ್ದಾರೆ. ಬೆಂಗಳೂರಿನ ಇನ್ನೂ ಅನೇಕ ಕಡೆ ರೋಡ್ ಶೋ ಮಾಡಲಿದ್ದಾರೆ. ಈ ರೋಡ್ ಶೋ ಅಥವಾ ಯಾವುದೇ ಪಕ್ಷದ ಪ್ರಚಾರಕ್ಕೆ ಲಕ್ಷ ಲಕ್ಷ ಖರ್ಚು ಮಾಡುತ್ತಾರೆ. ಇದು ಒಂದು ರೀತಿಯಲ್ಲಿ ಜನರನ್ನು ಸೆಳೆಯಲು ಮಾಡುತ್ತಿರುವ ತಂತ್ರ, ಆದರೆ ಇಲ್ಲೊಂದು ಪುಟ್ಟಮಕ್ಕಳ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ಪುಟ್ಟ ಮಕ್ಕಳು ಸೇರಿ ಯಾವುದೇ ಖರ್ಚು ಇಲ್ಲದೆ ಮೋದಿ ಅವರ ರೋಡ್ ಶೋ ಮಾಡಿದ್ದಾರೆ. ಇದೀಗ ಈ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇದಕ್ಕೆ ಅನೇಕರು ಮೆಚ್ಚುಗೆ ಕೂಡ ವ್ಯಕ್ತಪಡಿಸಿದ್ದಾರೆ.
ಇನ್ನೂ ಈ ವೀಡಿಯೊದಲ್ಲಿ ತೋರಿಸಿದಂತೆ ಯಾವುದೇ ಖರ್ಚು ಇಲ್ಲದೆ ಪ್ರಚಾರ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಪುಟ್ಟಮಕ್ಕಳು ಪುಟ ಜೀಪ್ನಲ್ಲಿ ಮೋದಿ ಅವರ ಕಟೌಟ್ ಇಟ್ಟು ಜೀಪಿಗೆ ಹಗ್ಗ ಕಟ್ಟಿ, ಒಂದಿಷ್ಟು ಮೋದಿಯ ಪುಟ್ಟ ಅಭಿಮಾನಿಗಳು ಹಿಂದಿನಿಂದ ಜೈಕಾರ ಹಾಕಿಕೊಂಡು. ಮೋದಿ ರೋಡ್ ಶೋವನ್ನು ಅದ್ಭುತವಾಗಿ ಮಾಡಿದ್ದಾರೆ, ಇದೀಗ ಈ ವೀಡಿಯೊ ಎಲ್ಲ ಕಡೆ ವೈರಲ್ ಆಗಿದೆ. ಈ ವೀಡಿಯೋ ಚಿತ್ರದುರ್ಗ ಜಿಲ್ಲೆಯದ್ದು ಎಂದು ಹೇಳಲಾಗಿದೆ. ಇದರಲ್ಲಿ ಮೋದಿ ಜತೆಗೆ ಬಿಜೆಪಿ ಪಕ್ಷದ ತಿಪ್ಪೆ ರೆಡ್ಡಿ ಅವರಿಗೂ ಘೋಷಣೆ ಹಾಕಿದ್ದಾರೆ.
ಇದನ್ನೂ ಓದಿ: ಬೆಂಗಳೂರು: ಪ್ರಧಾನಿ ಮೋದಿ ರೋಡ್ ಶೋನಲ್ಲಿ ಭಜರಂಗಿ ಅಲೆ; ವಿಡಿಯೋ ವೈರಲ್
ಈ ಪುಟ್ಟ ಮಕ್ಕಳ ಮೋದಿ ಅಭಿಮಾನಕ್ಕೆ ಎಲ್ಲರೂ ಫಿದಾ ಆಗಿದ್ದಾರೆ. ಅನೇಕರು ಈ ವೀಡಿಯೊವನ್ನು ಹಂಚಿಕೊಂಡಿದ್ದು, ಮಕ್ಕಳಿಗೂ ಮೋದಿ ಇಷ್ಟ ಎಂದು ಹೇಳಿಕೊಂಡಿದ್ದಾರೆ. ಪ್ರಧಾನಿ ಮೋದಿ ಇಂದು ಬೆಂಗಳೂರಿನ ಅನೇಕ ಕಡೆ ರೋಡ್ ಶೋ ಮಾಡಲಿದ್ದಾರೆ. ಈ ಸಮಯದಲ್ಲಿ ಮಕ್ಕಳ ಮಾಡಿದ ರೋಡ್ ಶೋ ವೀಡಿಯೊ ಎಲ್ಲರ ಮನಗೆದ್ದಿದೆ.
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 2:48 pm, Sat, 6 May 23