Viral Video: ಬ್ರೆಡ್ ಟೋಸ್ಟ್ನಲ್ಲಿ ಮೂಡಿಬಂದ ಕಿಂಗ್ ಚಾರ್ಲ್ಸ್ ಚಿತ್ರ
ಬ್ರಿಟನ್ನಲ್ಲಿ ಕಿಂಗ್ ಚಾರ್ಲ್ಸ್ ಪಟ್ಟಾಭಿಷೇಕದ ಪ್ರಯುಕ್ತ ಕಲಾವಿದರೊಬ್ಬರು ಬ್ರೆಡ್ ಟೋಸ್ಟ್ನಲ್ಲಿ ರಾಜರ ಚಿತ್ರವನ್ನು ರೂಪಿಸಿದ್ದು, ಕಲಾವಿದನ ಕೈಚಳಕಕ್ಕೆ ಎಲ್ಲರು ಬೆರಗಾಗಿದ್ದಾರೆ.
ಈ ವಾರವೇ ಕಿಂಗ್ ಚಾರ್ಲ್ಸ್ III ಅಧಿಕೃತವಾಗಿ ಸಿಂಹಾಸವನ್ನು ಏರಳಿದ್ದು, ಬ್ರಿಟನ್ ಜನತೆ ಈ ಸಂಭ್ರಮದ ವಾರಾಂತ್ಯಕ್ಕೆ ಸಜ್ಜಾಗಿದೆ. ಮೇ 6, 2023 ರಂದು ರಾಜರ ಮಹಾ ಪಟ್ಟಾಭಿಷೇಕ ಸಮಾರಂಭವು ಲಂಡನ್ನಲ್ಲಿ ಪ್ರಾರಂಭವಾಗಲಿದೆ. ಜನರು ಬಕಿಂಗ್ಲ್ಯಾಮ್ ಅರಮನೆಯಲ್ಲಿನ ಮೆರವಣಿಗೆ ಮತ್ತು ವೈಭವವನ್ನು ನೋಡಲು ಕುತೂಹಲದಿಂದ ಕಾಯುತ್ತಿದ್ದಾರೆ. ಈ ಸಮಾರಂಭದಲ್ಲಿ ಕಲಾವಿದರು ತಮ್ಮದೇ ಆದ ವಿಶೇಷ ರೀತಿಯಲ್ಲಿ ರಾಜನಿಗೆ ಗೌರವ ಸಲ್ಲಿಸುತ್ತಿದ್ದಾರೆ. ನಾಥನ್ ವೈಬರ್ನ್ ಎಂಬ ಬ್ರಿಟನ್ ಮೂಲದ ಕಲಾವಿದರೊಬ್ಬರು ಬ್ರೆಡ್ ಟೋಸ್ಟ್ ಮತ್ತು ಮಾರ್ಮೈಟ್ ಸ್ಪೆಡ್ ಬಳಸಿಕೊಂಡು ಟೋಸ್ಟ್ ಮೇಲೆ ರಾಜರ ಚಿತ್ರವನ್ನು ರಚಿಸಿದ್ದಾರೆ.
ಈ ವೀಡಿಯೋವನ್ನು ಕಲಾವಿದ ನಾಥನ್ ವೈಬರ್ನ್ ಅವರು ಇನ್ಸ್ಟಾಗ್ರಾಮ್ ರೀಲ್ಸ್ ನಲ್ಲಿ ಹಂಚಿಕೊಂಡಿದ್ದು, ವೀಡಿಯೋ ಸುಮಾರು 37.2 ಸಾವಿರ ವೀಕ್ಷಣೆಗಳನ್ನು ಮತ್ತು ನೂರಾರು ಕಮೆಂಟ್ಸ್ ಗಳನ್ನು ಪಡೆದುಕೊಂಡಿದೆ. ರಾಜರ ಚಿತ್ರವನ್ನು ಮಾಡುವ ಸಂಪೂರ್ಣ ಪ್ರಕ್ರಿಯೆಯನ್ನು ಕಲಾವಿದ ನಾಥನ್ ವೈಬರ್ನ್ ಅವರು ವಿಡಿಯೋದಲ್ಲಿ ತೋರಿಸಿದ್ದಾರೆ. ಮೊದಲು ಅವರು ಬ್ರೆಡ್ ತೆಗೆದುಕೊಂಡು ಅವುಗಳನ್ನು ಟೋಸ್ಟ್ ಮಾಡಿ, ಆ ಟೋಸ್ಟ್ಗಳನ್ನು ಸಾಲಾಗಿ ಜೋಡಿಸಿಟ್ಟರು. ನಂತರ ಅವರು ಕಿಂಗ್ ಚಾರ್ಲ್ಸ್ ಅವರ ಅದ್ಭುತ ಚಿತ್ರವನ್ನು ರಚಿಸಲು ಟೋಸ್ಟ್ ಮೇಲೆ ಕಂದು ಬಣ್ಣದ ಮಾರ್ಮೈಟ್ ಪೇಸ್ಟ್ನ್ನು ಹರಡಿದರು. ಅದನ್ನು ತಯಾರಿಸುವ ವಿಧಾನವು ತುಂಬಾ ಆಸಕ್ತಿದಾಯಕವಾಗಿತ್ತು. ಇದರ ಅಂತಿಮ ಫಲಿತಾಂಶವನ್ನು ಕಂಡು ನೋಡುಗರು ಬೆರಗಾಗಿದ್ದಾರೆ.
View this post on Instagram
ಇದನ್ನೂ ಓದಿ: Viral Video: ಟರ್ಕಿ ಶೃಂಗಸಭೆಯಲ್ಲಿ ಉಕ್ರೇನ್ ಸಂಸದರಿಂದ ರಷ್ಯಾ ಪ್ರತಿನಿಧಿಗೆ ಥಳಿತ
ಈ ಅದ್ಭುತ ವೀಡಿಯೋಗೆ ಹಲವಾರು ಕಮೆಂಟ್ಗಳು ಹರಿದು ಬಂದಿದ್ದು, ಒಬ್ಬ ಬಳಕೆದಾರರು ‘ತುಂಬಾ ಆಕರ್ಷಕವಾಗಿದೆ’ ಎಂದು ಕಮೆಂಟ್ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರರು ‘ಅದ್ಭುತವಾದ ಚಿತ್ರ, ಆದರೆ ಮಾರ್ಮೈಟ್ನ್ನು ವ್ಯರ್ಥ ಮಾಡಬೇಡಿ’ ಎಂದು ಕಮೆಂಟ್ ಮಾಡಿದ್ದಾರೆ. ಇನ್ನು ಅನೇಕ ಬಳಕೆದಾರರು ಚಿತ್ರ ಅದ್ಭುತವಾಗಿದೆ ಎಂದು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 7:23 pm, Fri, 5 May 23