ರೈಲಿನಲ್ಲಿ ರೀಲು; ಭಲೇ ಹುಡುಗೀರಾ! ‘ಮೆಚ್ಚಿದೆವು ನಿಮ್ಮ ಆತ್ಮವಿಶ್ವಾಸವ’

Confidence : ರೈಲಿನಲ್ಲಿ ಜನರೆದುರು ಊಟ ಮಾಡಲೂ ನನಗೆ ಸಾಧ್ಯವಾಗುವುದಿಲ್ಲ ಎಂದು ಒಬ್ಬಾತ. ದೇವರೇ ನನಗೂ ಇಂಥ ಆತ್ಮವಿಶ್ವಾಸ ಕೊಡು ಎಂದು ಇನ್ನೊಬ್ಬಾತ. ವೈರಲ್ ಆಗಿರುವ ಹುಡುಗಿಯರ ರೀಲ್ ಬಗ್ಗೆ ನೀವೇನಂತೀರಿ?

ರೈಲಿನಲ್ಲಿ ರೀಲು; ಭಲೇ ಹುಡುಗೀರಾ! 'ಮೆಚ್ಚಿದೆವು ನಿಮ್ಮ ಆತ್ಮವಿಶ್ವಾಸವ'
ರೈಲಿನಲ್ಲಿ ಮೈಚಳಿಬಿಟ್ಟು ಕುಣಿದ ಹುಡುಗಿಯರು!
Follow us
TV9 Web
| Updated By: ಶ್ರೀದೇವಿ ಕಳಸದ

Updated on:May 06, 2023 | 11:59 AM

Viral Video : ನಿನ್ನೆಯಷ್ಟೇ ಸಾರ್ವಜನಿಕ ಸ್ಥಳದಲ್ಲಿ ಅಪರಿಚಿತರೊಂದಿಗೆ ಡ್ಯಾನ್ಸ್​ ಮಾಡುವಂತೆ ಮಗಳಿಗೆ ಒತ್ತಾಯಿಸುತ್ತಿದ್ದ ತಂದೆಯ ಬಗ್ಗೆ ಓದಿದಿರಿ. ಸಂಕೋಚ ಸ್ವಭಾವದ ಮಗಳು ನಿಧಾನವಾಗಿ ಒಂದೆರಡು ಹೆಜ್ಜೆಯನ್ನೂ ಹಾಕಿದಳು. ನೀವೆಲ್ಲ ಈ ವಿಡಿಯೋ ನೋಡಿ ವಾಹ್​ ಎಂದಿರಿ. ಇದೀಗ ಈ ಹುಡುಗಿಯರು ರೈಲಿನಲ್ಲಿ ಟ್ರೆಂಡಿಂಗ್​ ಹಾಡಿಗಾಗಿ ಮೈಚಳಿ ಬಿಟ್ಟು ನರ್ತಿಸಿದ್ದಾರೆ. ನೆಟ್ಟಿಗರೆಲ್ಲ ಇವರ ಆತ್ಮವಿಶ್ವಾಸವನ್ನು ಬೆರಗಿನಿಂದ ನೋಡುತ್ತಿದ್ದಾರೆ. ಈ ಕೆಳಗಿನ ವಿಡಿಯೋ ನೋಡಿ.

ಇವರೆಲ್ಲರೂ ಎಲ್ಲಿಯೋ ಪ್ರಯಾಣ ಹೊರಟಿದ್ದಾಗ ಹೀಗೆ ರೀಲು ಮಾಡುವ ಹುಕಿ ಬಂದಿದೆ. ಪ್ರಯಾಣಿಕರೆದುರೇ ಈ ಮೇಲಿನ ಹಾಡಿಗೆ ನರ್ತಿಸಿದ್ದಾರೆ. ನೆಟ್ಟಿಗರು ಈ ವಿಡಿಯೋ ಹಂಚಿಕೊಂಡು ವಿವಿಧ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. ಅಣ್ಣಾ, ನನಗಂತೂ ರೈಲಿನಲ್ಲಿ ಜನರೆದುರು ಊಟ ಮಾಡಲೂ ಮನಸ್ಸಾಗುವುದಿಲ್ಲ ಎಂದಿದ್ದಾರೆ ಒಬ್ಬರು.

ಇದನ್ನೂ ಓದಿ : ‘ಸಾಮಿ ಸಾಮಿ’ ಹಾಡಿಗೆ ನರ್ತಿಸುತ್ತಿರುವ ರಷ್ಯನ್​ ಬಾಲೆಯರ ವಿಡಿಯೋ ವೈರಲ್

ಆದರೆ ಆನೇಕರು ಈ ಹುಡುಗಿಯರ ಆತ್ಮವಿಶ್ವಾಸವನ್ನು ಮನಸಾರೆ ಹೊಗಳಿದ್ಧಾರೆ. ದೇವರೇ ನನಗೂ ಆತ್ಮವಿಶ್ವಾಸವನ್ನು ಕೊಡು ಎಂದು ಕೇಳಿಕೊಂಡಿದ್ದಾರೆ ಒಬ್ಬರು. ಇಂಥ ಆತ್ಮವಿಶ್ವಾಸವನ್ನು ಎಲ್ಲಿಂದ ಪಡೆದುಕೊಳ್ಳಬಹುದು ಎಂದು ಮತ್ತೊಬ್ಬರು ಕೇಳಿದ್ದಾರೆ. ಮತ್ತೂ ಒಬ್ಬರು, ಅಯ್ಯೋ ನನಗಂತೂ ಈಗಲೇ ರೈಲಿನಲ್ಲಿ ಪ್ರಯಾಣಿಸಬೇಕೆಂಬ ಆಸೆ ಆಗುತ್ತಿದೆ ಎಂದಿದ್ದಾರೆ.

ಇದನ್ನೂ ಓದಿ : ಡೋಲೋ 650 ಶಶಿರೇಖಾ; ನಿಮ್ಮ ಮನೆಮಗಳೀಗ ಮಾಡೆಲಿಂಗ್​ಗೂ ಸೈ?

ಮೊದಲು ಮೆಟ್ರೋಗಳನ್ನು ರೈಲಿಗಾಗಿ ಬಳಸಿಕೊಳ್ಳುತ್ತಿದ್ದರು. ಈಗ ರೈಲುಗಳಲ್ಲಿ ಇದು ಮುಂದುವರಿದಿದೆ ಎನ್ನಿಸುತ್ತದೆ ಹಾಗಿದ್ದರೆ ಎಂದಿದ್ದಾರೆ ಮಗದೊಬ್ಬರು. ರೈಲ್ವೇ ಅಧಿಕಾರಿಗಳು ಈ ಬಗ್ಗೆ ಕ್ರಮ ಕೈಗೊಳ್ಳಬೇಕು. ಸಾರ್ವಜನಿಕ ಸಾರಿಗೆಯಲ್ಲಿ ಹೀಗೆಲ್ಲ ಮಾಡುವುದರಿಂದ ಸಹಪ್ರಯಾಣಿಕರಿಗೆ ತೊಂದರೆಯಾಗುತ್ತದೆ ಎಂದು ತಕರಾರು ಎತ್ತಿದ್ಧಾರೆ ಇನ್ನೂ ಒಬ್ಬರು.

ಆದರೆ ಈ ವಿಡಿಯೋ ನೋಡಿದ ನಿಮಗೆ ಏನೆನ್ನಿಸುತ್ತದೆ?

ಮತ್ತಷ್ಟು ವೈರಲ್ ವಿಡಿಯೋಗಳಿಗಾಗಿ ಕ್ಲಿಕ್ ಮಾಡಿ

Published On - 11:58 am, Sat, 6 May 23

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ