Viral Post: ತಿನ್ನುವ ಆಹಾರವನ್ನು ಎಸೆದಿರುವ ಆರೋಪಿಗೆ ಶಿಕ್ಷೆಯಾಗಬೇಕು, ಆಕ್ರೋಶಗೊಂಡ ನೆಟ್ಟಿಗರು
ಸುಮಾರು 300 ರಿಂದ 400 ಪೌಂಡ್ಗಳಷ್ಟು ಬೇಯಿಸಿದ ಪಾಸ್ಟಾವನ್ನು ತೊರೆಯ ಬಳಿ ಎಸೆದು ತಿನ್ನುವ ಆಹಾರವನ್ನು ವ್ಯರ್ಥ ಮಾಡಿದ ಘಟನೆ ನ್ಯೂಜೆರ್ಸಿಯಲ್ಲಿ ನಡೆದಿದೆ. ಈ ಘಟನೆಯನ್ನು ವ್ಯಕ್ತಿಯೊಬ್ಬರು ರೆಡ್ಡಿಟ್ ಆಪ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ಪ್ರತಿನಿತ್ಯ ಸಾಮಾಜಿಕ ಜಾಲತಾಣದಲ್ಲಿ ವಿವಿಧ ರೀತಿಯ ವಿಷಯಗಳು ವೈರಲ್ ಆಗುತ್ತಿರುತ್ತವೆ. ಆಹಾರ ಸಂಬಂಧಿತ, ನೃತ್ಯ ಸಂಬಂಧಿಸಿದ ವೀಡಿಯೋಗಳು, ಪ್ರಾಣಿಗಳ ಕುರಿತ ವೀಡಿಯೋಗಳು ವೈರಲ್ ಆಗುತ್ತಿರುತ್ತವೆ. ಅದರಲ್ಲೂ ಆಹಾರಗಳನ್ನು ಅಗತ್ಯವಿರುವ ಜನರಿಗೆ ಕೊಡದೆ, ಎಸೆಯುವಂತಹದ್ದು, ಅಥವಾ ಪ್ರಾಣಿಗಳಿಗೆ ಹಿಂಸೆ ನೀಡುವುದು ಈ ರೀತಿಯ ಘಟನೆಗಳು ಸಂಭವಿಸಿದರೆ ಜನರು ಸಾಮಾಜಿಕ ತಾಣಗಳಲ್ಲಿ ಆಕ್ರೋಶವನ್ನು ವ್ಯಕ್ತಪಡಿಸುತ್ತಾರೆ. ಅದೇ ರೀತಿ ಇಲ್ಲೊಂದು ವಿಲಕ್ಷಣ ಪೋಸ್ಟ್ ವೈರಲ್ ಆಗಿದೆ. ಅದೇನೆಂದರೆ ನ್ಯೂಜೆರ್ಸಿಯ ಬ್ರಿಡ್ಜ್ ಪಕ್ಕದಲ್ಲಿನ ಹಳ್ಳಕ್ಕೆ ಸುಮಾರು 181 ಕೆಜಿಯಷ್ಟು ಬೇಯಿಸಿದ ಪಾಸ್ಟಾವನ್ನು ಎಸೆಯಲಾಗಿದೆ. ಈ ಕುರಿತ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಆಹಾರ ವ್ಯರ್ಥ ಮಾಡಿದ್ದಕ್ಕಾಗಿ ನೆಟ್ಟಿಗರು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.
ರೆಡ್ಡಿಟ್ ಆಪ್ನಲ್ಲಿ ‘@stormborn72’ ಹೆಸರಿನ ಬಳಕೆದಾರರು ಪಾಸ್ಟಾ ಎಸೆದಿರುವ ಪೋಟೊವನ್ನು ಪೋಸ್ಟ್ ಮಾಡಿದ್ದಾರೆ. ಕಳೆದ ವಾರ ಹಳೆಯ ಬ್ರಿಡ್ಜ್ನ ವೆಟರನ್ಸ್ ಪಾರ್ಕ್ ಬಳಿಯ ಹಳ್ಳದ ಪಕ್ಕದಲ್ಲಿ ಅಂದಾಜು 300 ರಿಂದ 400 ಪೌಂಡ್ಗಳಷ್ಟು ಬೇಯಿಸಿದ ಪಾಸ್ಟಾವನ್ನು ಯಾರೋ ಅಪರಿಚಿತರು ಎಸೆದಿದ್ದಾರೆ. ಅದನ್ನು ಈಗ ಟೌನ್ಶಿಪ್ ತೆರವುಗೊಳಿಸಿದೆ. ಆದರೆ ಅಪರಾಧಿಯನ್ನು ಇನ್ನೂ ಬಂಧಿಸಲಾಗಿಲ್ಲ ಎಂದು ಬರೆದುಕೊಂಡಿದ್ದಾರೆ.
Estimated 300-400 lbs of pasta dumped in Old Bridge by u/stormborn72 in newjersey
ಇದನ್ನೂ ಓದಿ: Viral Post: ಭಾರತೀಯ ನೋಟುಗಳ ಮೇಲೆ ಮುದ್ರಿತವಾದ ಐತಿಹಾಸಿಕ ಸ್ಥಳಗಳ ಬಗ್ಗೆ ನಿಮಗೆಷ್ಟು ಗೊತ್ತಾ?
ಮೂರು ದಿನಗಳ ಹಿಂದೆ ರೆಡ್ಡಿಟ್ ಆಪ್ನಲ್ಲಿ ಈ ಪೋಸ್ಟ್ನ್ನು ಹಂಚಿಕೊಳ್ಳಲಾಗಿದ್ದು, ಈ ಪೋಸ್ಟ್ಗೆ 1800ಕ್ಕೂ ಹೆಚ್ಚು ಲೈಕ್ಸ್ ಬಂದಿದೆ. ಹಾಗೂ ಅನೇಕರು ಕಮೆಂಟ್ ಮಾಡಿದ್ದಾರೆ. ಒಬ್ಬ ಬಳಕೆದಾರರು ‘ಅಪರಾಧಿಗಳನ್ನು ಜೈಲಿಗೆ ಕಳುಹಿಸಬೇಕು’ ಎಂದು ಕಮೆಂಟ್ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾದರು ‘ಇದು ಬೇಯಿಸಿದ ಪಾಸ್ಟಾವೇ? ಸುಮ್ಮನೆ ಈ ಪಾಸ್ಟಾವನ್ನು ಬೇಯಿಸಿ ಎಸೆಯುವ ಅವಶ್ಯಕತೆ ಏನಿತ್ತು’ ಎಂದು ಕಮೆಂಟ್ ಮಾಡಿದ್ದಾರೆ, ಇನ್ನೊಬ್ಬ ಬಳಕೆದಾದರು ‘ಇದು ನಿಜವಾಗಿಯು ನನ್ನ ರಕ್ತವನ್ನು ಕುದಿಯುವಂತೆ ಮಾಡಿದೆ’ ಎಂದು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.
Published On - 4:57 pm, Fri, 5 May 23