ಬಾಲ್ಯದಲ್ಲಿ ನಿಮ್ಮನ್ನು ಆಘಾತಕ್ಕೆ ತಳ್ಳಿದ ಸಿನೆಮಾ ಯಾವುದು?; ಟ್ಟಿಟ್ಟರಿಗರಿಂದ ಭಾರೀ ಪ್ರತಿಕ್ರಿಯೆ
Movie : ಮಟಿಲ್ಡಾ, ಫೈನಲ್ ಡೆಸ್ಟಿನೇಷನ್, ಮಾನ್ಸ್ಟರ್ ಹೌಸ್, ಅಂತೆಲ್ಲ ನೆಟ್ಟಿಗರು ಹೇಳುತ್ತಿದ್ದಾರೆ. ಕನ್ನಡದವರಾದ ನಿಮಗೆ? ಅದೇ ರಾಗ ಅದೇ ಹಾಡು, ಅಂತ, ಆಪ್ತಮಿತ್ರ ಇನ್ನೂ ಯಾವೆಲ್ಲ ಸಿನೆಮಾಗಳು ನಿಮ್ಮನ್ನು ಇನ್ನೂ ಬೆಂಬಿಡದೆ ಕಾಡುತ್ತವೆ?
Viral : ಈತನಕ ನಾವು ಎಷ್ಟೇ ಸಿನೆಮಾಗಳನ್ನು ನೋಡಿದರೂ ಯಾವುದೋ ಒಂದು ಸಿನೆಮಾ ಮನಸ್ಸಿನಲ್ಲಿ ಗಾಢವಾಗಿ ಉಳಿದುಬಿಡುತ್ತದೆ. ಅದರಲ್ಲೂ ಭಯ, ಆತಂಕ ತರುವಂಥ ಸಿನೆಮಾಗಳನ್ನು ಬಾಲ್ಯದಲ್ಲೇನಾದರೂ ನೋಡಿದ್ದರೆ ಆ ಆಘಾತದ ಪರಿಣಾಮ ಹೇಳತೀರದು. ಇಂಥ ಸಿನೆಮಾಗಳ ಬಗ್ಗೆ ಇದೀಗ ಟ್ವಿಟರ್ನಲ್ಲಿ ಭಾರೀ ಚರ್ಚೆ ನಡೆಯುತ್ತಿದೆ. ನೆಟ್ಟಿಗರು ಅಂಥ ಸಿನೆಮಾಗಳ ಪಟ್ಟಿಯನ್ನೇ ನೀಡುತ್ತಿದ್ದಾರೆ.
My fav tho pic.twitter.com/VQWidqegBA
ಇದನ್ನೂ ಓದಿ— Katalina Vega (@katalinaxvega) May 5, 2023
ಮನಸ್ಸನ್ನು ಮೃದುಗೊಳಿಸಿ ಹೃದಯವನ್ನು ಅರಳಿಸಿದ ಅನೇಕ ಸಿನೆಮಾಗಳನ್ನು ಈತನಕವೂ ಮತ್ತೆ ಮತ್ತೆ ನೋಡಬೇಕೆನ್ನಿಸುತ್ತದೆ. ಆದರೆ ಬಾಲ್ಯದಲ್ಲಿ ಆತಂಕ, ಭಯವನ್ನುಂಟು ಮಾಡಿ ನಿಮ್ಮನ್ನು ಆಘಾತಕ್ಕೆ ತಳ್ಳಿದ ಸಿನೆಮಾಗಳನ್ನು? ಹಾಗಿದ್ದರೆ ಅಂಥ ಸಿನೆಮಾಗಳು ಯಾವುವು ಎಂದು ಈಗ ಕೇಳಿದರೆ ಥಟ್ಟನೆ ಅವು ನಿಮ್ಮ ಮನಸಿನ ಮೂಲೆಯಿಂದ ಹೆಡೆ ಎತ್ತಿ ನಿಲ್ಲುತ್ತವೆ.
@PicturesFoIder ಎಂಬ ಟ್ವಿಟರ್ ಖಾತೆದಾರರು ಹೀಗೊಂದು ಪೋಸ್ಟ್ ಹಂಚಿಕೊಂಡಾಗ ನೆಟ್ಟಿಗರೆಲ್ಲ ಬೆನ್ನು ನೆಟ್ಟಗಾಗಿಸಿಕೊಂಡು ಪ್ರತಿಕ್ರಿಯಿಸಲಾರಂಭಿಸಿದರು. ಆಯಾ ಸಿನೆಮಾಗಳ ಸ್ಟಿಲ್ಸ್, ವಿಡಿಯೋ ತುಣುಕುಗಳನ್ನು ಹಂಚಿಕೊಳ್ಳಲಾರಂಭಿಸಿದರು.
Saw ? pic.twitter.com/Et4jmwVGXT
— Aging Death ☠️ (@AgingDeath) May 5, 2023
ಈ ಪೋಸ್ಟ್ ಅನ್ನು ಈಗಾಗಲೇ ಸುಮಾರು 6 ಮಿಲಿಯನ್ ಜನರು ನೋಡಿದ್ದಾರೆ. ಸಾವಿರಾರು ಜನರು ಈ ಪೋಸ್ಟ್ ಹಂಚಿಕೊಂಡಿದ್ದಾರೆ. ಮಟಿಲ್ಡಾ, ಫೈನಲ್ ಡೆಸ್ಟಿನೇಷನ್, ಮಾನ್ಸ್ಟರ್ ಹೌಸ್, ದಿ ನೆವರ್ ಎಂಡಿಂಗ್ ಸ್ಟೋರಿ, ಪೋಲ್ಟರ್ಗಿಸ್ಟ್ ಮುಂತಾದ ಸಿನೆಮಾಗಳನ್ನು ಹೆಸರಿಸಿದ್ದಾರೆ.
ಇದೆಲ್ಲ ಓದುತ್ತಿದ್ದಂತೆ ಬಾಲ್ಯದಲ್ಲಿ ನಿಮ್ಮನ್ನು ಆಘಾತಕ್ಕೆ ತಳ್ಳಿದ ಸಿನೆಮಾ ಕಣ್ಮುಂದೆ ಬರುತ್ತಿರಬಹುದಲ್ಲವೆ? ಯಾವ ಭಾಷೆಯ ಸಿನೆಮಾಗಳಾದರೂ ಸರಿ. ಪ್ರತಿಕ್ರಿಯೆಗಳ ಮೂಲಕ ತಿಳಿಸಿ.
ಮತ್ತಷ್ಟು ವೈರಲ್ ಸುದ್ದಿಗಾಗಿ ಕ್ಲಿಕ್ ಮಾಡಿ
Published On - 10:55 am, Sat, 6 May 23