Video Viral: ವಿಂಡೋ ಮೂಲಕ ಬಸ್​​ ಹತ್ತಿದ ಯುವತಿ! ನೆಟ್ಟಿಗರು ಹೇಳಿದ್ದೇನು ಗೊತ್ತಾ?

ವಿಂಡೋ ಮೂಲಕ ಬಸ್​​ ಹತ್ತಿದ ಯುವತಿಯ ವಿಡಿಯೋ ವೈರಲ್ ಆಗಿದೆ. ಈ ಬಗ್ಗೆ ನೆಟ್ಟಿಗರು ಈ ರೀತಿ ಮಾಡುವುದು ಸರಿಯಲ್ಲ, ಇದು ಅಪಾಯವನ್ನು ಉಂಟು ಮಾಡಬಹುದು ಎಂದು ಹೇಳಿದ್ದಾರೆ.

Video Viral: ವಿಂಡೋ ಮೂಲಕ ಬಸ್​​ ಹತ್ತಿದ ಯುವತಿ! ನೆಟ್ಟಿಗರು ಹೇಳಿದ್ದೇನು ಗೊತ್ತಾ?
ವೈರಲ್​​ ವೀಡಿಯೊ
Follow us
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷಯ್​ ಪಲ್ಲಮಜಲು​​

Updated on: May 06, 2023 | 4:27 PM

ನೀವು ಬಸ್ ಏರಬೇಕೆಂದಾಗ ಏನು ಮಾಡುತ್ತೀರಿ? ಛೇ, ಇದು ಎಂಥ ಪ್ರಶ್ನೆ. ಎಲ್ಲರೂ ಬಾಗಿಲಿನ ಮೂಲಕವೇ ಹತ್ತಬೇಕಲ್ಲ ಅನ್ನಬಹುದು. ಆದರೆ ಇಲ್ಲೊಬ್ಬ ಮಹಿಳೆ ಅದನ್ನು ಸುಳ್ಳು ಮಾಡಿದ್ದಾಳೆ. ಏನು ಅಂತೀರಾ? ಸಾಮಾನ್ಯವಾಗಿ ನಾವು ಬಸ್ ಏರುವಾಗ ರಶ್ ಇದ್ದಲ್ಲಿ ಇನ್ನೊಂದು ಬಸ್ ಬರುವ ತನಕ ಕಾದು ಹೋಗುತ್ತೇವೆ. ಇಲ್ಲವಾದಲ್ಲಿ ಅದೇ ಬಸ್ ನಲ್ಲಿ ನಿಂತು ಪ್ರಯಾಣಿಸುತ್ತೇವೆ. ಏಕೆಂದರೆ ಕೆಲವೊಮ್ಮೆ ಕುಳಿತುಕೊಳ್ಳಲು ಜಾಗವಿರುವುದಿಲ್ಲ. ಆದರೆ ಈ ಮಹಿಳೆ ರಶ್ ಇದ್ದ ಕಾರಣ ಬಸ್ ಹತ್ತುವ ಭರದಲ್ಲಿ ಬಾಗಿಲಿನಿಂದ ಹೋಗದೆ, ಬಸ್ಸಿನ ಕಿಟಕಿ ಮೂಲಕ ಬಸ್ಸಿನ ಒಳಗೆ ಹೋಗಿದ್ದಾಳೆ. ಇದೀಗ ಈ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್​​ ಆಗುತ್ತಿದೆ. ಇದು ಹೇಗೆ ಸಾಧ್ಯ ಎಂದು ನೆಟ್ಟಿಗರು ಆಶ್ಚರ್ಯಗೊಂಡಿದ್ದಾರೆ.

ಇನ್ಸ್ಟಾಗ್ರಾಮ್​​ನಲ್ಲಿ ಶೇರ್ ಮಾಡಲಾದ ಈ ಕ್ಲಿಪ್ ಬಗ್ಗೆ ಕೆಲವರು, ಆ ಯುವತಿಯ ಶಕ್ತಿಯ ಬಗ್ಗೆ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ, ಇತರರು ಅವಳು ಮಾಡಿದ್ದನ್ನು ಯಾರೂ ಮಾಡಬಾರದು. ಅದು ಬಹಳ ಅಪಾಯಕಾರಿ ಎಂದಿದ್ದಾರೆ. ಈ ವೀಡಿಯೊದಲ್ಲಿ ತಿಳಿಸಿರುವಂತೆ ಒಂದು ಚಲಿಸುತ್ತಿರುವ ಬಸ್ಸಿನಲ್ಲಿ ಜನ ತುಂಬಿದ ಕಾರಣ. ಹತ್ತಲು ಜಾಗವಿಲ್ಲದ ಕಾರಣ ಬಾಗಿಲಲ್ಲಿಯೇ ತುಂಬಿ ಹೋಗಿದ್ದಾರೆ ಬಹುಶಃ ಬಸ್ ನಲ್ಲಿ ಉಸಿರಾಡಲು ಜಾಗವಿಲ್ಲ ಎಂಬಷ್ಟು ರಶ್. ಆ ನೂಕು ನುಗ್ಗಲಲ್ಲಿ ಬಸ್ ಹತ್ತುವುದು ಕಷ್ಟ ಅಂದುಕೊಂಡ ಯುವತಿ ಕಿಟಕಿಗೆ ಹಾಕಿದ ರಾಡ್ ಹಿಡಿದು ಮೇಲಕ್ಕೆ ಜಿಗಿಯುತ್ತಿರುವುದನ್ನು ನೀವು ಕಾಣಬಹುದು. ಬಳಿಕ ಆ ಸಿಟ್ನಲ್ಲಿದ್ದವರು ಆಕೆಯನ್ನು ಕೈ ಹಿಡಿದು ಎಳೆದುಕೊಂಡಿದ್ದಾರೆ. ಅವರ ಸಹಾಯದಿಂದ ಕಿಟಕಿ ಮೂಲಕ ಬಸ್ಸಿನ ಒಳಗೆ ಹೋಗಿದ್ದಾರೆ.

View this post on Instagram

A post shared by ghantaa (@ghantaa)

ಇದನ್ನೂ ಓದಿ:Video Viral : ಅಣ್ಣ-ತಂಗಿ ಮಧ್ಯೆ ಜಗಳ, ಅಮ್ಮ ಬರದಿದ್ರೆ ಮಹಾಯುದ್ಧ ನಡೆಯುತ್ತಿತ್ತು?

ಈ ವಿಡಿಯೋವನ್ನು ಕೆಲವು ಸಾಮಾಜಿಕ ಬಳಕೆದಾರರು ವಿವಿಧ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದು ನೋಡುಗರ ಸಂಖ್ಯೆಯು ಹೆಚ್ಚಾಗಿದೆ. ಈ ಇನ್ಸ್ಟಾಗ್ರಾಮ್ ಪೋಸ್ಟ್ ಇಲ್ಲಿಯವರೆಗೆ 1.6 ಲಕ್ಷಕ್ಕೂ ಹೆಚ್ಚು ಲೈಕ್ಗಳನ್ನು ಪಡೆದುಕೊಂಡಿದೆ. ಜತೆಗೆ ಅನೇಕರ ಕಮೆಂಟ್​​ ಮಾಡಿದ್ದಾರೆ.

ಈ ವೀಡಿಯೊಗೆ ಅನೇಕರು ಕಮೆಂಟ್​​ ಮಾಡಿದ್ದು. ಒಬ್ಬ ಬಳಕೆದಾರ “ಸ್ಪೈಡರ್-ವುಮನ್” ಎಂದು ಇನ್ಸ್ಟಾಗ್ರಾಮ್ನಲ್ಲಿ ಬರೆದುಕೊಂಡಿದ್ದಾರೆ. “ಅಯ್ಯೋ! ಏನು?!” ಎಂದು ಇನ್ನೊಬ್ಬರು ಹಂಚಿಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರ “ಇಚ್ಛಾಶಕ್ತಿ ಇದ್ದರೆ, ಒಂದು ಮಾರ್ಗವಿದೆ” ಎಂದು ಹೇಳಿದ್ದಾರೆ. ಅಲ್ಲದೆ ಕೆಲವರು ಈ ರೀತಿ ಬಸ್ ಹತ್ತುವುದು ಅಪಾಯಕಾರಿ ಎಂದು ವಾದಿಸಿದ್ದಾರೆ. ಇದು ತಮಾಷೆಯ ಮಾತಲ್ಲ. ಒಂದು ದೊಡ್ಡ ಅಪಘಾತ ಸಂಭವಿಸುತ್ತಿತ್ತು. ಇದು ಒಳ್ಳೆಯದಲ್ಲ” ಎಂದು ಹಲವರು ಹೇಳಿದ್ದಾರೆ.

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

ಶಿಕ್ಷಕರ ಕೊರತೆ ಬಗ್ಗೆ ವಿದ್ಯಾರ್ಥಿಗಳ ವಿಡಿಯೋ ವೈರಲ್​: ಶಾಲೆಗೆ ಸಂಸದ ಭೇಟಿ
ಶಿಕ್ಷಕರ ಕೊರತೆ ಬಗ್ಗೆ ವಿದ್ಯಾರ್ಥಿಗಳ ವಿಡಿಯೋ ವೈರಲ್​: ಶಾಲೆಗೆ ಸಂಸದ ಭೇಟಿ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಶತಕ ಪೂರೈಸುತ್ತಿದ್ದಂತೆ ಕಣ್ಣೀರಿಟ್ಟ ನಿತೀಶ್ ಕುಮಾರ್ ರೆಡ್ಡಿ ಅವರ ತಂದೆ..!
ಶತಕ ಪೂರೈಸುತ್ತಿದ್ದಂತೆ ಕಣ್ಣೀರಿಟ್ಟ ನಿತೀಶ್ ಕುಮಾರ್ ರೆಡ್ಡಿ ಅವರ ತಂದೆ..!