AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video Viral : ಅಣ್ಣ-ತಂಗಿ ಮಧ್ಯೆ ಜಗಳ, ಅಮ್ಮ ಬರದಿದ್ರೆ ಮಹಾಯುದ್ಧ ನಡೆಯುತ್ತಿತ್ತು?

ಪತ್ರಿಯೊಬ್ಬರ ಮನೆಯಲ್ಲೂ ಅಣ್ಣ ತಂಗಿಯ ಕೋಳಿ ಜಗಳ ಇದ್ದೇ ಇರುತ್ತದೆ. ದಿನಂಪ್ರತಿ ಕಿತ್ತಾಡುತ್ತಾ ಒಬ್ಬರನ್ನೊಬ್ಬರು ದೂರುತ್ತ ಇರುತ್ತಾರೆ. ಈ ಅಣ್ಣ ತಂಗಿಯರ ಕೋಳಿ ಜಗಳದ ನಡುವೆ ಅಮ್ಮ ಬಂದು ಎರಡು ಬೈಗುಳ ನೀಡಿದರೆ ಮಾತ್ರ ಆ ಜಗಳ ಕಡಿಮೆಯಾಗುತ್ತದೆ.

Video Viral : ಅಣ್ಣ-ತಂಗಿ ಮಧ್ಯೆ ಜಗಳ, ಅಮ್ಮ ಬರದಿದ್ರೆ ಮಹಾಯುದ್ಧ ನಡೆಯುತ್ತಿತ್ತು?
ವೈರಲ್ ವಿಡಿಯೊ
TV9 Web
| Edited By: |

Updated on:Feb 25, 2023 | 6:57 PM

Share

ಪತ್ರಿಯೊಬ್ಬರ ಮನೆಯಲ್ಲೂ ಅಣ್ಣ ತಂಗಿಯ ಕೋಳಿ ಜಗಳ ಇದ್ದೇ ಇರುತ್ತದೆ. ದಿನಂಪ್ರತಿ ಕಿತ್ತಾಡುತ್ತಾ ಒಬ್ಬರನ್ನೊಬ್ಬರು ದೂರುತ್ತ ಇರುತ್ತಾರೆ. ಈ ಅಣ್ಣ ತಂಗಿಯರ ಕೋಳಿ ಜಗಳದ ನಡುವೆ ಅಮ್ಮ ಬಂದು ಎರಡು ಬೈಗುಳ ನೀಡಿದರೆ ಮಾತ್ರ ಆ ಜಗಳ ಕಡಿಮೆಯಾಗುತ್ತದೆ. ಅಣ್ಣಂದಿರಿಗಿಂತ ಈ ತಂಗಿಯಂದಿರೇ ಜಾಸ್ತಿ ಕಿತ್ತಾಡುತ್ತಿರುತ್ತಾರೆ. ಜೋರು ಕಿರಿಚಾಡುತ್ತಾ ಮನೆ ಪೂರ ಗದ್ದಲ ಮಾಡುತ್ತಿರುತ್ತಾರೆ. ಜೊತೆಗೆ ಅಮ್ಮಂದಿರ ಕೈಯಲ್ಲಿ ತಂಗಿಯಂದಿರು ಬೈಗಳು ತಿನ್ನುವುದು ಹೆಚ್ಚು. ಕೆಲವು ಬಾರಿ ಜಗಳ ಅತಿರೇಕಕ್ಕೆ ಹೋದ ಸಂದರ್ಭದಲ್ಲಿ ಅಣ್ಣ ಮತ್ತು ತಂಗಿ ಇಬ್ಬರಿಗೂ ಅಮ್ಮನ ಕೈಯಿಂದ ಬಾಸುಂಡೆ ಬೀಳುತ್ತದೆ. ಸಾಮಾನ್ಯವಾಗಿ ಎಲ್ಲಾ ಮನೆಗಳಲ್ಲೂ ಮಕ್ಕಳು ಇದೇ ರೀತಿ ಇರುತ್ತಾರೆ.

ಇದೇ ರೀತಿ ಅಣ್ಣ ತಂಗಿಯ ಜಗಳವನ್ನು ತೋರಿಸುವ ಬೆಕ್ಕುಗಳು ಹಾಗೂ ನಾಯಿಯ ತಮಾಷೆ ವಿಡಿಯೋವೊಂದನ್ನು ಇನ್ಟಾಗ್ರಾಮ್‌ನಲ್ಲಿ ಹಂಚಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ಎರಡು ಮುದ್ದಾದ ಬೆಕ್ಕುಗಳು ಒಂದನ್ನೊಂದು ದೂರುಗುಡುತ್ತಾ ನಿಂತಿರುತ್ತದೆ. ಅದರಲ್ಲಿ ಒಂದು ಬೆಕ್ಕು ಜೋರಾಗಿ ಮ್ಯಾವ್ ಮ್ಯಾವ್ ಎಂದು ಜಗಳ ಕಾಯುವ ಹಾಗೆ ಜೋರಾಗಿ ಕಿರುಚುತ್ತದೆ. ಅದರಲ್ಲಿ ಜೋರಾಗಿ ಕಿರುಚುವ ಬೆಕ್ಕನ್ನು ತಂಗಿಗೆ ಹೋಲಿಸಿದ್ದಾರೆ. ಹಾಗೂ ಸುಮ್ಮನೆ ದುರುಗುಡುತ್ತಾ ನಿಂತಿರುವ ಬೆಕ್ಕನ್ನು ಅಣ್ಣನಿಗೆ ಹೋಲಿಸಿದ್ದಾರೆ. ಕೆಲವು ಸೆಕೆಂಡುಗಳವರೆಗೆ ಈ ಎರಡು ಬೆಕ್ಕುಗಳು ಒಂದನ್ನೊಂದು ದುರುಗುಡುತ್ತಾ ನೋಡುತ್ತಿರುತ್ತವೆ. ಇನ್ನೇನೂ ಈ ಎರಡು ಬೆಕ್ಕುಗಳ ನಡುವೆ ಕಿತ್ತಾಟ ಶುರುವಾಗಬೇಕು ಎನ್ನುವಷ್ಟರಲ್ಲಿ ಒಂದು ದೊಡ್ಡ ನಾಯಿ ಈ ಬೆಕ್ಕುಗಳ ಮಧ್ಯೆ ಬಂದು ನಿಂತು ಅವುಗಳ ಜಗಳ ತಣ್ಣಗಾಗುವಂತೆ ನೋಡಿಕೊಳ್ಳುತ್ತದೆ.

ಇದನ್ನೂ ಓದಿ:Viral Video: ದು:ಖದ ನಡುವೆಯೂ ಬಂದ ಅತಿಥಿಗಳನ್ನು ಖುಷಿಗೊಳಿಸಿದ ಮಧುವಿನ ಸೂರ್ಯವಂಶ ಹಾಡು

ಆ ಬೆಕ್ಕುಗಳ ಮಧ್ಯೆ ಬಂದಿರುವ ನಾಯಿಯನ್ನು ತಾಯಿಗೆ ಹೋಲಿಸಲಾಗಿದೆ. ಮೀಮ್ ರೀತಿಯಲ್ಲಿ ಈ ವಿಡಿಯೋವನ್ನು ಶೇರ್ ಮಾಡಲಾಗಿದೆ. ತಮಾಷೆಯಾಗಿರುವ ಈ ವಿಡಿಯೋವನ್ನು ನೋಡಿದ ಪ್ರತಿಯೊಬ್ಬರೂ ನಮ್ಮ ಮನೆಯಲ್ಲೂ ಇದೇ ರೀತಿ ಅಣ್ಣ ತಂಗಿ ಜಗಳ ಇರುತ್ತೆ ಅಲ್ವಾ ಎಂದು ನಸು ನಗೋದಂತೂ ನಿಜ. ಜೊತೆಗೆ ನಮ್ಮ ಬಾಲ್ಯದ ಕಿತ್ತಾಟವನ್ನು ಕೂಡಾ ನೆನಪಿಸುತ್ತದೆ.

ಇನ್ಟಾಗ್ರಾಮ್‌ನಲ್ಲಿ ಶೇರ್ ಆಗಿರುವ ಈ ವಿಡಿಯೋ 11 ಮಿಲಿಯನ್ ವೀಕ್ಷಣೆಯನ್ನು ಪಡೆದುಕೊಂಡಿದೆ. ಹಾಗೂ ಹೆಚ್ಚಿನ ಸಂಖ್ಯೆಯ ಲೈಕ್ಸ್ ಮತ್ತು ಕಮೆಂಟ್‌ಗಳು ಈ ವಿಡಿಯೋಗೆ ಸಿಕ್ಕಿದೆ. ಒಬ್ಬ ಬಳಕೆದಾದರು ಬೆಕ್ಕನ್ನು ನೋಡಿ ಎಷ್ಟು ಮುದ್ದಾಗಿರುವ ತಂಗಿ ಎಂದು ಕಮೆಂಟ್ ಮಾಡಿದ್ದಾರೆ. ಇನ್ನೊಬ್ಬರು ಇದು ನಿಜ ಪ್ರತಿ ಮನೆಯಲ್ಲೂ ಹೀಗೆಯೇ ಎಂದು ನಗುತ್ತಾ ಕಮೆಂಟ್ ಮಾಡಿದ್ದಾರೆ.

Published On - 6:57 pm, Sat, 25 February 23

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ