ಪೋಷಕರಿಗೆ ಅದ್ಬುತ ಉಡುಗೊರೆಯನ್ನು ನೀಡಿದ ಮಗಳು; ಪೋಷಕರ ಪ್ರತಿಕ್ರಿಯೆಗೆ ನೆಟ್ಟಿಗರು ಭಾವುಕ!

ಇತ್ತೀಚೆಗಷ್ಟೇ ಮಹಿಳೆಯೊಬ್ಬರು ತಮ್ಮ ತಂದೆ-ತಾಯಿಗೆ ದೊಡ್ಡ ಗಾತ್ರದ ಭಾವಚಿತ್ರವನ್ನು ಉಡುಗೊರೆಯಾಗಿ ನೀಡಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅವರ ಪ್ರತಿಕ್ರಿಯೆಗೆ ನೆಟ್ಟಿಗರ ಮನಸ್ಸು ಕರಗಿದೆ.

ಪೋಷಕರಿಗೆ ಅದ್ಬುತ ಉಡುಗೊರೆಯನ್ನು ನೀಡಿದ ಮಗಳು; ಪೋಷಕರ ಪ್ರತಿಕ್ರಿಯೆಗೆ ನೆಟ್ಟಿಗರು ಭಾವುಕ!
ವೈರಲ್ ವಿಡಿಯೋ Image Credit source: Instagram
Follow us
ನಯನಾ ಎಸ್​ಪಿ
|

Updated on: Feb 25, 2023 | 3:47 PM

ಹೆತ್ತವರೊಂದಿಗೆ ಮಗಳ ಸಂಬಂಧ ಯಾವಾಗಲು ವಿಶೇಷವಾಗಿರುತ್ತದೆ. ಮಗಳ ರಕ್ಷಣೆ ಮಾಡುವುದರ ಜೊತೆಗೆ ಮಗಳ ಎಲ್ಲಾ ಕೆಲಸದಲ್ಲೂ ತಂದೆ ಸಂತೋಷವನ್ನು ಕಾಣುತ್ತಾನೆ. ಮತ್ತೊಂದೆಡೆ, ತಾಯಿಯು ಮಗಳು ಬೇರೆಲ್ಲೂ ಸಿಗದ ಬೆಸ್ಟ್ ಫ್ರೆಂಡ್ ಆಗಿರುತ್ತಾಳೆ. ಮಗಳು ಹರಟೆ ಹೊಡಿಯುವುದರಿಂದ ಬೇಜಾರಾದಾಗ ಮಡಿಲಿನಲ್ಲಿ ಅಳುವವರೆಗೂ ಎಲ್ಲದಕ್ಕೂ ತಾಯಿಯ ಬಳಿ ಹೊಗುತ್ತಾಳೆ. ಈ ಸಂಬಂಧಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಇತ್ತೀಚೆಗಷ್ಟೇ ಮಹಿಳೆಯೊಬ್ಬರು ತಮ್ಮ ತಂದೆ-ತಾಯಿಗೆ ದೊಡ್ಡ ಗಾತ್ರದ ಭಾವಚಿತ್ರವನ್ನು ಉಡುಗೊರೆಯಾಗಿ ನೀಡಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅವರ ಪ್ರತಿಕ್ರಿಯೆಗೆ ನೆಟ್ಟಿಗರ ಮನಸ್ಸು ಕರಗಿದೆ.

ವೀಡಿಯೊದಲ್ಲಿ, ಮಹಿಳೆಯು ಟೇಪ್ ಮತ್ತು ಕವರ್‌ನಲ್ಲಿ ಸುತ್ತಿರುವ ಬೃಹತ್ ಆಕಾರದ ಬಾಕ್ಸ್ ಒಂದನ್ನು ಓಪನ್ ಮಾಡಲು ಪ್ರಯತ್ನಿಸುತ್ತಿರುವುದನ್ನು ಕಾಣಬಹುದು. ಯಾರೋ ಒಬ್ಬರು ಉಡುಗೊರೆಯನ್ನು ಕಳಿಸಿದ್ದಾರೆ ಎಂದು ಮಹಿಳೆ ತನ್ನ ಪೋಷಕರಿಗೆ ಹೇಳುತ್ತಾಳೆ. ಒಂದು ಹಂತದಲ್ಲಿ, ಅವಳು ಅದನ್ನು ತೆರೆಯಲು ಸಹಾಯ ಮಾಡಲು ತನ್ನ ತಂದೆಯನ್ನು ಕೇಳುತ್ತಾಳೆ. ನಂತರ ತಂದೆ-ಮಗಳು ಸೇರಿ ಆ ಪ್ಯಾಕೇಜ್ ಅನ್ನು ತೆರೆಯುತ್ತಾರೆ. ತಂದೆ ಕವರ್ ಹೊರತೆಗೆದ ತಕ್ಷಣ, ಬೃಹತ್ ಭಾವಚಿತ್ರವನ್ನು ನೋಡಿ ಆಶ್ಚರ್ಯಚಕಿತರಾಗುತ್ತಾರೆ. ತಾಯಿ ಕೂಡ ಬಂದು ಭಾವಚಿತ್ರವನ್ನು ನೋಡುತ್ತಾರೆ. ಈ ಪೋಷಕರ ಪ್ರತಿಕ್ರಿಯೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಇದನ್ನೂ ಓದಿ: ನಿಮ್ಮ ಹರಕೆ ಈಡೇರಬೇಕೇ? ಹಾಗಾದರೆ ಈ ದೇವರಿಗೆ ಮಂಚ್ ಚಾಕಲೇಟ್ ನೈವೇದ್ಯ ಮಾಡಿ!

ಈ ವಿಡಿಯೋವನ್ನು ಶ್ರೀಲಕ್ಷ್ಮಿ ಎಂಬುವವರು ತಮ್ಮ ಇನ್ಸ್ಟಾಗ್ರಾಮ್ ಅಲ್ಲಿ ಹಂಚಿಕೊಂಡಿದ್ದಾರೆ. ಹಂಚಿಕೊಂಡ ನಂತರ, ಈ ವೀಡಿಯೊ 2.7 ಮಿಲಿಯನ್ ವೀಕ್ಷಣೆಗಳನ್ನು ಮತ್ತು 3.6 ಲಕ್ಷ ಲೈಕ್​ಗಳನ್ನು ಪಡೆದಿದೆ. ಆಕೆಯ ತಂದೆ ಕೂಡ ಈ ಪೋಸ್ಟ್‌ಗೆ ಪ್ರತಿಕ್ರಿಯಿಸಿದ್ದಾರೆ. “ಒಂದು ಅದ್ಭುತವಾದ ಮತ್ತು ಆಶ್ಚರ್ಯಕರ ಉಡುಗೊರೆಯನ್ನು ನೀನು ನಮಗೆ ನೀಡಿದ್ದಿಯ ಮಗಳೇ. ನನ್ನ 37 ವರ್ಷಗಳ ವೈವಾಹಿಕ ಜೀವನದಲ್ಲಿ ಮತ್ತು ನನ್ನ 63 ವರ್ಷಗಳ ಸುಂದರ ಜೀವನದಲ್ಲಿ ಇದು ಅದ್ಬುತ ದಿನ” ಎಂದು ಮಗಳಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.