ನಿಮ್ಮ ಹರಕೆ ಈಡೇರಬೇಕೇ? ಹಾಗಾದರೆ ಈ ದೇವರಿಗೆ ಮಂಚ್ ಚಾಕಲೇಟ್ ನೈವೇದ್ಯ ಮಾಡಿ!
ಕಳೆದ ಆರು ವರ್ಷಗಳಿದ ಈ ಸ್ಥಳ ಮುಂಚ್ ಮುರುಗನ್ ದೇವಾಲಯ ಎಂದೇ ಪ್ರಸಿದ್ದಿ ಪಡೆದಿದೆ. ಕೆಲವು ವರ್ಷಗಳ ಹಿಂದೆ ಪುಟ್ಟ ಬಾಲಕನೊಬ್ಬ ಮಂಚ್ ಚಾಕೊಲೇಟ್ ಅನ್ನು ಬಾಲಮುರುಗನ್ ದೇವರಿಗೆ ಅರ್ಪಿಸಿದ ನಂತರ ಅದನ್ನು ದೇವರು ಮೆಚ್ಚಿದ್ದಾರೆ ಎಂಬುದು ಇಲ್ಲಿನ ಭಕ್ತಾದಿಗಳ ನಂಬಿಕೆ.
ಆಳಪ್ಪುಳ: ಭಾರತದಲ್ಲಿ ಹಿಂದೂಗಳು ಮುಕ್ಕೋಟಿ ದೇವರನ್ನು ಪೂಜಿಸುತ್ತಾರೆ. ಎಲ್ಲಾ ದೇವರಿಗೂ ವಿವಿಧ ರೀತಿಯ ನೈವೇದ್ಯವನ್ನು ನೀಡುತ್ತಾರೆ. ಗಣಪತಿಗೆ ಗರಿಕೆ, ಕೃಷ್ಣನಿಗೆ ಬೆಣ್ಣೆ, ಶಿವನಿಗೆ ಬಿಲ್ವಪತ್ರೆ ಹೀಗೆ ಒಂದೊಂದು ದೇವರಿಗೆ ಒಂದೊಂದು ಬಗೆ ಅಚ್ಚುಮೆಚ್ಚು ಎಂಬುದು ಜನರ ನಂಬಿಕೆ. ಮಕ್ಕಳನ್ನು ಓಲೈಸಲು ಚಾಕಲೇಟ್ ಕೊಡುವುದು ಸಹಜ ಆದರೆ ಕೇರಳದ ಆಳಪ್ಪುಳದ (Alappuzha) ಚೆಮ್ಮೋತ್ ನ ಶ್ರೀಸುಬ್ರಹ್ಮಣ್ಯ ಸ್ವಾಮಿ ದೇವಾಲಯದಲ್ಲಿ ನೆಲೆಸಿರುವ ಬಾಲಮುರುಗನ್ (Balamurugan) ದೇವರನ್ನು ಒಲಿಸಲು ಕೂಡ ನೀವು ಮಂಚ್ ಚಾಕಲೇಟ್ (Munch Chocolate) ನೀಡಬೇಕಂತೆ!
ಹೌದು, ಕಳೆದ ಆರು ವರ್ಷಗಳಿದ ಈ ಸ್ಥಳ ಮುಂಚ್ ಮುರುಗನ್ ದೇವಾಲಯ ಎಂದೇ ಪ್ರಸಿದ್ದಿ ಪಡೆದಿದೆ. ಕೆಲವು ವರ್ಷಗಳ ಹಿಂದೆ ಪುಟ್ಟ ಬಾಲಕನೊಬ್ಬ ಮಂಚ್ ಚಾಕೊಲೇಟ್ ಅನ್ನು ಬಾಲಮುರುಗನ್ ದೇವರಿಗೆ ಅರ್ಪಿಸಿದ ನಂತರ ಅದನ್ನು ದೇವರು ಮೆಚ್ಚಿದ್ದಾರೆ ಎಂಬುದು ಇಲ್ಲಿನ ಭಕ್ತರ ನಂಬಿಕೆ.
ಈ ದೇವಾಲಯದಲ್ಲೂ ಮೊದಲು ಎಲ್ಲ ದೇವರಿಗೆ ನೈವೇದ್ಯ ನೀಡುವ ರೀತಿ ಹಣ್ಣು-ಕಾಯಿ, ಹೂವು, ಇತ್ಯಾದಿಗಳನ್ನು ನೀಡುತ್ತಿದ್ದರಂತೆ ಆದರೆ 6 ವರ್ಷಗಳ ಹಿಂದೆ ನಡೆದ ಆ ಒಂದು ಘಟನೆಯಿಂದ ಈಗ ಎಲ್ಲ ಭಕ್ತಾದಿಗಳು ಮಂಚ್ ಚಾಕಲೇಟ್ ಅನ್ನು ನೈವೇದ್ಯವಾಗಿ ನೀಡುತ್ತಿದ್ದಾರೆ ಎಂದು ದೇವಾಲಯದ ಆಡಳಿತ ನಡೆಸುತ್ತಿರುವ ಅನೂಪ್ ಎ.ಚೆಮ್ಮೋತ್ ಹೇಳಿದ್ದಾರೆ.
ಬಾಲ ಮುರುಗನ್ ‘ಮುಂಚ್ ಮುರುಗನ್’ ಆಗಿ ಬದಲಾಗಿದ್ದು ಹೇಗೆ?
6 ವರ್ಷಗಳ ಹಿಂದೆ ಆಟವಾಡುತ್ತಿದ್ದ ಒಬ್ಬ ಪುಟ್ಟ ಮುಸ್ಲಿಂ ಬಾಲಕ ಈ ದೇವಾಲಯಕ್ಕೆ ಬಂದು ಗಂಟೆ ಬಾರಿಸಿದನಂತೆ. ಇದಕ್ಕೆ ಆತನ ಪೋಷಕರು ಅವನನ್ನು ತರಾಟೆಗೆ ತೆಗೆದುಕೊಂಡಿದ್ದರಂತೆ. ಅದೇ ದಿನ ರಾತ್ರಿ ಬಾಲಕನ ಆರೋಗ್ಯದಲ್ಲಿ ಏರುಪೇರು ಕಾಣಿಸಿಕೊಂಡಿತ್ತು. ರಾತ್ರಿ ಪೂರ್ತಿ ಬಾಲಕ ಮುರುಗನ್ ಹೆಸರು ಕನವರಿಸುತ್ತಿದ್ದ ಕಾರಣ ಪೋಷಕರು ಮರುದಿನ ಬೆಳಿಗ್ಗೆ ದೇವಸ್ಥಾನಕ್ಕೆ ಬಂದು ಅರ್ಚಕರ ಬಳಿ ನಡೆದದ್ದನ್ನು ಹೇಳಿದ್ದಾರೆ. ಆಗ ಅರ್ಚಕರು ದೇವರಿಗೆ ಏನಾದರು ನೈವೇದ್ಯ ನೀಡಬೇಕೆಂದಾಗ ಪೋಷಕರು ಎಳ್ಳೆಣ್ಣೆ ನೀಡಲು ಒಪ್ಪಿಕೊಂಡರು. ಅಲ್ಲೇ ಇದ್ದ ಬಾಲಕ ತನ್ನ ಬಳಿ ಇದ್ದ ಮಂಚ್ ಚಾಕಲೇಟ್ ಅನ್ನು ದೇವರಿಗೆ ನವ್ಡ್ಯ ಮಾಡುವತೆ ಪಟ್ಟು ಹಿಡಿದ್ದಿದ್ದ, ಕೊನೆಗೆ ಮಂಚ್ ಚಾಕಲೇಟ್ ಅನ್ನೇ ದೇವರಿಗೆ ಅರ್ಪಿಸಿದ್ದಾರೆ. ಪವಾಡ ಎಂಬಂತೆ ಈ ಘಟನೆಯ ನಂತರ ಆತ ಗುಣಮುಖನಾಗಿಬಿಟ್ಟಿದ್ದ. ಈ ಘಟನೆ ಊರೆಲ್ಲಾ ಹಬ್ಬತೊಡಗಿತು. ಹೀಗೆ ಭಕ್ತಾದಿಗಳು ಮಂಚ್ ಚಾಕಲೇಟ್ ಅನ್ನು ನೀಡಲಾರಂಭಿಸಿದರು. ಈ ಘಟನೆಯ ಬಳಿಕ ಬಾಲ ಮುರುಗನ್ ‘ಮಂಚ್ ಮುರುಗನ್’ ಆಗಿ ಪ್ರಸಿದ್ದಿ ಹೊಂದಿದರು.
ಇದನ್ನೂ ಓದಿ: ಹುಡುಗರಿಗೆ ಹೀಗೆ ಮದುವೆ ಆಮಂತ್ರಣ ಪತ್ರಿಕೆ ಕೊಟ್ರೇ ಕುಣಿದು ಕುಪ್ಪಳಿಸೋದು ಗ್ಯಾರಂಟಿ
ಇದೀಗ ಕೇರಳದ ವಿವಿಧ ಭಾಗಗಳಿಂದ ಭಕ್ತಾದಿಗಳು ಮಂಚ್ ಚಾಕಲೇಟ್ ಅನ್ನು ರಾಶಿ ರಾಶಿಯಾಗಿ ತಂದು ದೇವರಿಗೆ ಅರ್ಪಿಸುತ್ತಾರೆ. ಪರೀಕ್ಷಾ ಸಮಯದಲ್ಲಂತೂ ಮಕ್ಕಳು ತಮ್ಮ ಇಷ್ಟ ದೈವ ಬಾಲ ಮುರುಗನ್ ದರ್ಶನ ಪಡೆದು ದೇವರಿಗೆ ಮುಂಚ್ ಅನ್ನು ನೀಡುತ್ತಾರಂತೆ. ಅಷ್ಟೇ ಅಲ್ಲದೆ ಈ ದೇವಾಲಯದಲ್ಲಿ ಯಾವುದೇ ಜಾತಿ ಧರ್ಮದ ಭೇದವಿಲ್ಲದೇ ಎಲ್ಲ ಭಕ್ತರಿಗೆ ಮಂಚ್ ಚಾಕಲೇಟ್ ಅನ್ನು ಪ್ರಸಾದವಾಗಿ ನೀಡುತ್ತಾರೆ.