Kissing Device Viral: ವಿರಹ ವೇದನಾ, ರಿಮೋಟ್ ಚುಂಬನ ಸಾಧನ; ಚೀನೀ ನಾವೀನ್ಯತೆಗೆ ನೆಟ್ಟಿಗರು ಶಾಕ್!
ಝೊಂಗ್ಲಿ ಅವರ ಈ ಆಧುನಿಕ ಸಾಧನ ಚೀನಾದ ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನವನ್ನು ಸೃಷ್ಟಿಸಿದೆ. 'ಕಿಸ್ಸಿಂಗ್ ಡಿವೈಸ್' ಎಂದು ಕರೆಯಲ್ಪಡುವ ಈ ಸಾಧನವು ಚೀನಾದ ಚಾಂಗ್‌ಝೌ ವಿಶ್ವವಿದ್ಯಾಲಯದ ಆವಿಷ್ಕಾರವಾಗಿದೆ. ಈ 'ಸಿಲಿಕೋನ್ ತುಟಿಗಳು,' ಪ್ರೆಷರ್ ಸೆನ್ಸರ್ಗಳಿಂದ ಮಾಡಲಾಗಿದೆ

ಪ್ರೇಮಿಗಳು ತಮ್ಮ ಸಂಗಾತಿಯನ್ನು ಕಾಣಲು ಸದಾ ಹಾತೊರೆಯುತ್ತಿರುತ್ತಾರೆ. ಲಾಕ್ ಡೌನ್ ಸಮಯದಲ್ಲಂತೂ ಪ್ರೇಮಿಗಳ ಜೀವನ ಬಹಳ ಕಷ್ಟವಾಗಿತ್ತು. ಇದೇ ಸ್ಥಿತಿಯಲ್ಲಿ ಚೀನಾದ ಜಿಯಾಂಗ್ ಝೊಂಗ್ಲಿ ಎಂಬ ವ್ಯಕ್ತಿ ಕೂಡ ಇದ್ದ. ಝೊಂಗ್ಲಿ ತನ್ನ ಗೆಳತಿಯೊಂದಿಗೆ ಲಾಂಗ್-ಡಿಸ್ಟೆನ್ಸ್ ರಿಲೇಷನ್ಶಿಪ್ ಹೊಂದಿದ್ದ. ಒಬ್ಬರಿಗೊಬ್ಬರು ದೂರವಿರುವಾಗ ಅನ್ಯೋನ್ಯತೆಯನ್ನು ಕಾಪಾಡಿಕೊಳ್ಳುವುದು ಕಷ್ಟಕರವಾಗಿತ್ತು. ದೂರವಿದ್ದ ಕಾರಣ ಅವರ ಸಂವಹನವು ಕೇವಲ ಫೋನ್ ಕರೆಗಳಿಗೆ ಸೀಮಿತವಾಗಿತ್ತು. ಈ ಸಮಯದಲ್ಲಿ ಝೊಂಗ್ಲಿ ದೂರವಿರುವ ಸಂಗಾತಿಗಳು ಎದುರಿಸುವ ಸವಾಲುಗಳನ್ನು ನಿವಾರಿಸಲು ಹೊಸ ಪರಿಹಾರವನ್ನು ಕಂಡುಕೊಂಡರು. ಸಂಗಾತಿಗಳು ವಾಸ್ತವ ನಿಕಟ ಕ್ಷಣಗಳನ್ನು ಹಂಚಿಕೊಳ್ಳಲು ಅನುಮತಿಸುವ ಸಾಧನ ಒಂದನ್ನು ಆವಿಷ್ಕರಿಸಲು ಜಿಯಾಂಗ್ ಝೊಂಗ್ಲಿ ಮುಂದಾದರು.
ಝೊಂಗ್ಲಿ ಅವರ ಈ ಆಧುನಿಕ ಸಾಧನ ಚೀನಾದ ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನವನ್ನು ಸೃಷ್ಟಿಸಿದೆ. ‘ಕಿಸ್ಸಿಂಗ್ ಡಿವೈಸ್’ ಎಂದು ಕರೆಯಲ್ಪಡುವ ಈ ಸಾಧನವು ಚೀನಾದ ಚಾಂಗ್‌ಝೌ ವಿಶ್ವವಿದ್ಯಾಲಯದ ಆವಿಷ್ಕಾರವಾಗಿದೆ. ಈ ‘ಸಿಲಿಕೋನ್ ತುಟಿಗಳು,’ ಪ್ರೆಷರ್ ಸೆನ್ಸರ್ಗಳಿಂದ ಮಾಡಲಾಗಿದೆ. ಈ ಸೆನ್ಸಾರ್ ನೀವು ಚುಂಬಿಸುವಾಗ ನಿಮ್ಮ ತುಟಿಗಳ ಒತ್ತಡವನ್ನು ಅನುಕರಿಸುವ ಸಾಮರ್ಥ್ಯವನ್ನು ಹೊಂದಿದೆ ಇದರಿಂದ ನಿಮ್ಮ ಸಂಗಾತಿಯೇ ನಿಮ್ಮನ್ನು ಚುಂಬಿಸಿದ ಅನುಭವ ಪಡೆಯುತ್ತೀರಿ ಎಂದು ಚೀನಾದ ಗ್ಲೋಬಲ್ ಟೈಮ್ಸ್ ವರದಿ ತಿಳಿಸಿದೆ.
ಈ ಚುಂಬನ ಸಾಧನವು ದೂರದ ದಂಪತಿಗಳಿಗೆ “ನೈಜ” ದೈಹಿಕ ಅನ್ಯೋನ್ಯತೆಯನ್ನು ಹಂಚಿಕೊಳ್ಳಲು ಒಂದು ಮಾರ್ಗವಾಗಿದೆ ಎಂದು ಹೇಳಲಾಗುತ್ತಿದೆ. ಸಾಧನವು ಚೀನೀ ಸಾಮಾಜಿಕ ಜಾಲತಾಣಗಳಲ್ಲಿ ಕುತೂಹಲವನ್ನು ಸೃಷ್ಟಿಸಿದೆ. ಅನೇಕರು ತಮ್ಮ ಕಳವಳವನ್ನೂ ವ್ಯಕ್ತಪಡಿಸಿದ್ದಾರೆ. ಈ ಸಾಧನಕ್ಕೆ ಚುಂಬನದ ಚಾಲನೆ ಮತ್ತು ಧ್ವನಿಯನ್ನು ಅನುಕರಣೆ ಮಾಡುವ ಸಾಮರ್ಥ್ಯ, ಲಾಂಗ್-ಡಿಸ್ಟೆನ್ಸ್ ರಿಲೇಷನ್ಶಿಪ್ ಅಲ್ಲಿರುವ ಜೋಡಿಗಳ ಕುತೂಹಲವನ್ನು ಕೆರಳಿಸಿದೆ.
Remote kissing device recently invented by a Chinese university student. The device is designed specifically for long-distance relationships and can mimic and transfer the kiss of a person to the “mouth on the other side” pic.twitter.com/G74PrjfHQA
— Levandov (@blabla112345) February 23, 2023
ಈ ಸಾಧನವನ್ನು ಉಪಯೋಗಿಸಲು ಬಳಕೆದಾರರು ಮೊಬೈಲ್ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಬೇಕಾಗುತ್ತದೆ ಮತ್ತು ಸಾಧನವನ್ನು ತಮ್ಮ ಫೋನ್‌ನ ಚಾರ್ಜಿಂಗ್ ಪೋರ್ಟ್‌ಗೆ ಸೇರಿಸಬೇಕು. ನಂತರ ಇಬ್ಬರೂ ವೀಡಿಯೊ ಕಾನ್ಫರೆನ್ಸ್ ಅನ್ನು ಪ್ರಾರಂಭಿಸಬಹುದು ಮತ್ತು ಅಪ್ಲಿಕೇಶನ್ ಮೂಲಕ ತಮ್ಮ ಸಂಗಾತಿಗಳೊಂದಿಗೆ ಚುಂಬನವನ್ನು ಅನುಭವಿಸಬಹುದು.