Viral video: ಪುಟ್ಟ ಬಾಲಕನಿಗೆ ಬಂತು ಪ್ರಾಸ್ಥೆಟಿಕ್ ಕಾಲು; ವೈದ್ಯರ ನಡೆಗೆ ನೆಟ್ಟಿಗರು ಖುಷ್!
ಒಂದು ಪುಟ್ಟ ಬಾಲಕನಿಗೆ ಪ್ರಾಸ್ಥೆಟಿಕ್ ಕಾಲು ನೀಡಿ ಬಾಲಕ ನಡೆಯುವತೆ ಮಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವೈರಲ್ ಆದ ವಿಡಿಯೋದಲ್ಲಿ ಪುಟ್ಟ ಬಾಲಕನಿಗೆ ವೈದ್ಯರು ಕೃತಕ ಕಾಲು ತಂದಿದ್ದಾರೆ, ಈ ವಿಡಿಯೋ ಜನರ ಗಮನ ಸೆಳೆದಿದೆ.

ಒಬ್ಬ ವ್ಯಕ್ತಿಗೆ ಸಹಾಯ ಮಾಡುವ ಗುಣವಿದ್ದರೆ ಆತ ಇಡೀ ಜಗತ್ತನ್ನೇ ಬದಲಿಸಬಲ್ಲ. ಇದು ಮತ್ತೊಬ್ಬನ ಮನಸ್ಥಿತಿಯನ್ನು ಬದಲಾಯಿಸಬಹುದು, ಇನ್ನೊಬ್ಬನ ಮುಖದಲ್ಲಿ ನಗು ತರಬಹುದು, ಇನ್ನು ಕೆಲವರ ಜೀವನದಲ್ಲಿ ಚಿಂತೆಯನ್ನು ಕಡಿಮೆ ಮಾಡಬಹುದು. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೋವೊಂದು ವೈದ್ಯರ ಕರುಣೆಯನ್ನು ಸೆರೆಹಿಡಿದಿದೆ. ಈ ವಿಡಿಯೋದಲ್ಲಿ ಒಬ್ಬ ಅಂಗವಿಕಲ ಮಗುವಿನ ಮುಖದಲ್ಲಿ ಒಬ್ಬ ವೈದ್ಯ ನಗುವನ್ನು ಮೂಡಿಸುತ್ತಿರುವ. ವೈದ್ಯರೊಬ್ಬರು ಮಗುವಿಗೆ ಪ್ರಾಸ್ಥೆಟಿಕ್ ಲೆಗ್ ಅನ್ನು ಕಾಲಿಗೆ ಹಾಕಲು ಸಹಾಯ ಮಾಡುವ ದೃಶ್ಯ ಈ ವಿಡಿಯೋಯಾದಲ್ಲಿ ನೋಡಬಹುದು.
ಈ ಮನ ಮುಟ್ಟುವ ವಿಡಿಯೋವನ್ನು ಗುಡ್ ನ್ಯೂಸ್ ವರದಿಗಾರರು ತಮ್ಮ ಟ್ವಿಟ್ಟರ್ನಲ್ಲಿ ಹಂಚಿಕೊಂಡಿದ್ದಾರೆ. ಆಟಿಕೆ ಕಾರಿನ ಮೇಲೆ ಮಗುವಿಗೆ ಪ್ರಾಸ್ಥೆಟಿಕ್ ಕಾಲನ್ನು ವೈದ್ಯರು ತರುವುದನ್ನು ಈ ವಿಡಿಯೋದಲ್ಲಿ ಕಾಣಬಹುದು. ನಂತರ ವೈದ್ಯರು ಕಾರಿನಿಂದ ಕೃತಕ ಕಾಲನ್ನು ತೆಗೆದುಕೊಂಡು ಮಗುವಿನ ಅಂಗಕ್ಕೆ ಅಳವಡಿಸುತ್ತಾರೆ. ಕಾಲು ಸರಿಯಾಗುತ್ತಿದ್ದಂತೆ, ಮಗು ಉತ್ಸಾಹದಿಂದ ಕೃತಕ ಕಾಲಿನೊಂದಿಗೆ ನಡೆಯಲು ಪ್ರಯತ್ನಿಸುತ್ತದೆ. ತನ್ನ ಮಗು ನಡೆಯುವುದನ್ನು ಕಂಡ ತಾಯಿಯ ಖುಷಿಯನ್ನು ವಿಡಿಯೋದಲ್ಲಿ ನೋಡಬಹುದು. “ಚಿಕ್ಕ ಹುಡುಗನಿಗೆ ತನ್ನ ಮೊದಲ ಪ್ರಾಸ್ಥೆಟಿಕ್ ಲೆಗ್ ಅನ್ನು ಅಳವಡಿಸಲಾಗಿದೆ ಮತ್ತು ತಕ್ಷಣವೇ ನಡೆಯಲು ಮುಂದಾಗಿದೆ. ಈ ಅದ್ಭುತ ವೈದ್ಯರಿಗೆ ತುಂಬು ಧನ್ಯವಾದಗಳು!” ಎಂದು ಶೀರ್ಷಿಕೆ ಬರೆದಿದ್ದಾರೆ.
Little boy is fitted with his first prosthetic leg and immediately proceeds to walk.
So greatful to these amazing professionals!
— GoodNewsCorrespondent (@GoodNewsCorres1) February 24, 2023
ಈ ವಿಡಿಯೋ ಸಾಕಷ್ಟು ಜನರ ಗಮನ ಸೆಳೆದಿದೆ. ಅನೇಕರು ವೈದ್ಯರು ಮತ್ತು ವೈದ್ಯಕೀಯ ವೃತ್ತಿಯನ್ನು ಶ್ಲಾಘಿಸಿದ್ದಾರೆ. ಈ ವಿಡಿಯೋ ಸಾಕಷ್ಟು ಜನರ ಗಮನ ಸೆಳೆದಿದೆ. ಅನೇಕರು ವೈದ್ಯರು ಮತ್ತು ವೈದ್ಯಕೀಯ ವೃತ್ತಿಯನ್ನು ಶ್ಲಾಘಿಸಿದ್ದಾರೆ. ಒಬ್ಬ ಬಳಕೆದಾರರು “ಬೇರೆ ಯಾವ ವೃತ್ತಿಯು ಮನಸ್ಸಿಗೆ ಇಷ್ಟು ನೆಮ್ಮದಿ ನೀಡಲು ಸಾಧ್ಯವಿಲ್ಲ” ಎಂದಿದ್ದಾರೆ. ಇನ್ನೊಬ್ಬರು “ಈ ವಿಡಿಯೋ ನೋಡಿ ನನ್ನ ಕಣ್ಣಲ್ಲಿ ನೀರು ಬಂತು, ಈ ವೈದ್ಯರು ಮಕ್ಕಳನ್ನು ಎಷ್ಟು ಪ್ರೀತಿಸುತ್ತಾರೆ ಮತ್ತು ಅವರೊಂದಿಗೆ ಎಷ್ಟು ಒಳ್ಳೆಯ ರೀತಿಯಲ್ಲಿ ನಡೆದುಕೊಳ್ಳುತ್ತಾರೆ ಎಂದು ನಾವು ನೋಡಬಹುದು.” ಎಂದರು. ಮೂರನೇ ಬಳಕೆದಾರ “ಇದು ನನ್ನ ವಾರವನ್ನು ಸಂತೋಷದಿಂದ ಕಳೆಯುವಂತೆ ಮಾಡಿದೆ! ಮಗು ಮತ್ತು ತಾಯಿಯ ಮುಖದಲ್ಲಿನ ಸಂತೋಷವು ಅಮೂಲ್ಯವಾಗಿದೆ!” ಎಂದು ಹೇಳಿದರು. ಈ ಕ್ಲಿಪ್ ಅನ್ನು ಲಕ್ಷಕ್ಕಿಂತಲೂ ಹೆಚ್ಚು ಬಾರಿ ವೀಕ್ಷಿಸಲಾಗಿದೆ.