Video Viral: ಮಗುವನ್ನು ರಕ್ಷಿಸಿ ಹೀರೋ ಆದ ವ್ಯಕ್ತಿ! ನೆಟ್ಟಿಗರಿಂದ ಭರಪೂರ ಪ್ರಶಂಸೆ

ಕ್ಯಾಲಿಫೋರ್ನಿಯಾದ ಹೆಸ್ಪೆರಿಯಾದಲ್ಲಿ ವ್ಯಕ್ತಿಯೊಬ್ಬ ಮಗುವಿನ ಜೀವವನ್ನು ಹೇಗೆ ಉಳಿಸಿದ್ದಾನೆ ಎಂಬುದನ್ನು ತೋರಿಸುವ ವೀಡಿಯೊವನ್ನು ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಲಾಗಿದೆ. ಈ ಬಗ್ಗೆ ನೆಟ್ಟಿಗರ ಅಭಿಪ್ರಾಯ ಏನು? ಇಲ್ಲಿದೆ ಮಾಹಿತಿ.

Video Viral: ಮಗುವನ್ನು ರಕ್ಷಿಸಿ ಹೀರೋ ಆದ ವ್ಯಕ್ತಿ! ನೆಟ್ಟಿಗರಿಂದ ಭರಪೂರ ಪ್ರಶಂಸೆ
Viral Video
Follow us
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷತಾ ವರ್ಕಾಡಿ

Updated on: May 06, 2023 | 5:54 PM

ನೀವು ತುಂಬಾ ವಿಡಿಯೋಗಳಲ್ಲಿ ನೋಡಿರಬಹುದು, ಇನ್ನೇನು ಮಕ್ಕಳು ಬೀಳುತ್ತಾರೆ ಎನ್ನುವಾಗ ತಂದೆ ಬಂದು ಕಾಪಾಡುವ ದೃಶ್ಯವನ್ನು, ಅದೇ ರೀತಿ ಇಲ್ಲೊಂದು ವಿಡಿಯೋದಲ್ಲಿ ಒಬ್ಬ ವ್ಯಕ್ತಿಯು ಮಗುವಿನ ಜೀವವನ್ನು ಹೇಗೆ ಉಳಿಸಿದ್ದಾನೆ ಎಂಬುದನ್ನು ತೋರಿಸುವ, ನಂಬಲಾಗದ ತುಣುಕನ್ನು ಆನ್ ಲೈನ್ ನಲ್ಲಿ ಪೋಸ್ಟ್ ಮಾಡಲಾಗಿದೆ. ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋದಲ್ಲಿ, ರಸ್ತೆಯ ಕಡೆಗೆ ಸಾಗುತ್ತಿದ್ದ ಸ್ಟ್ರೋಲರ್ ಅನ್ನು ನಿಲ್ಲಿಸಲು ಆ ವ್ಯಕ್ತಿ ಧಾವಿಸುತ್ತಿರುವುದನ್ನು ತೋರಿಸಲಾಗುತ್ತದೆ. ಬಳಿಕ ಆ ವ್ಯಕ್ತಿ ಮಗುವನ್ನು ಕಾಪಾಡುತ್ತಾನೆ.

ಈ ಘಟನೆ ಕ್ಯಾಲಿಫೋರ್ನಿಯಾದಲ್ಲಿ ನಡೆದಿದೆ ಎನ್ನಲಾಗಿದೆ. ಗುಡ್ ನ್ಯೂಸ್ ಮೂವ್ಮೆಂಟ್ ಈ ವೀಡಿಯೊವನ್ನು ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದು ಜೊತೆಗೆ, ಅದಕ್ಕೆ ವಿವರವಾಗಿ ದೀರ್ಘ ಶೀರ್ಷಿಕೆಯನ್ನು ಸಹ ಪೋಸ್ಟ್ ಮಾಡಿದ್ದಾರೆ. “ಮಹಿಳೆಯೊಬ್ಬರು ಎ 1 ಹ್ಯಾಂಡ್ ಕಾರ್ ಅನ್ನು ವಾಶ್ ಮಾಡಲು ಬಂದಿದ್ದು ಹೊರಗೆ ತನ್ನ ಕಾರನ್ನು ನಿಲ್ಲಿಸಿ, ಮಗುವನ್ನು ಸ್ಟ್ರೋಲರ್ನಲ್ಲಿ ಕುಳ್ಳಿರಿಸಿದ್ದಾರೆ. ಇಳಿಜಾರಿದ್ದರಿಂದ ಗಾಳಿಯ ರಭಸಕ್ಕೆ ಸ್ಟ್ರೋಲರ್ ರಸ್ತೆಯ ಕಡೆಗೆ ಹೋಗಿದೆ ಎಂದು ವರದಿಯಾಗಿದ್ದು. ಸ್ಟ್ರೋಲರ್ ಸುಮಾರು ದೂರ ಕ್ರಮಿಸಿದ್ದು ಮಗುವಿನ ಸಂಬಂಧಿಕರೊಬ್ಬರು ಕಾಪಾಡಲು ಹೋಗುತ್ತಿರುವಾಗ ಬಿದ್ದಿದ್ದಾರೆ. ಬಳಿಕ ಅವರಿಗೆ ಎಷ್ಟೇ ಮಾಡಿದರೂ ಎದ್ದು ಹೋಗಲು ಸಾಧ್ಯವಾಗದೆ ನಿಲ್ಲಲು ಪ್ರಯತ್ನ ಪಡುತ್ತಿರುವ ಸಂದರ್ಭ ಹೀರೊನಂತೆ ಬಂದ ವ್ಯಕ್ತಿ ಆ ಮಗುವನ್ನು ಕಾಪಾಡಿದ್ದಾನೆ” ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ವಿಂಡೋ ಮೂಲಕ ಬಸ್​​ ಹತ್ತಿದ ಯುವತಿ! ನೆಟ್ಟಿಗರು ಹೇಳಿದ್ದೇನು ಗೊತ್ತಾ?

“ಮಗುವನ್ನು ಉಳಿಸುವ ಪ್ರಯತ್ನದಲ್ಲಿ ಅವರ ಸಂಬಂಧಿಕರು ಬಿದ್ದಿದ್ದರು. ಆದರೆ ಸಮಯಕ್ಕೆ ಸರಿಯಾಗಿ ಬಂದ ಆ ವ್ಯಕ್ತಿಯಿಂದ ಮಗು ಮರಳಿ ಬಂದಿದೆ. ಎಲ್ಲಿಯಾದರೂ ಆತ ಬರದಿದ್ದರೆ? ಎಂದು ನೆನೆಸಿಕೊಂಡಾಗ ಮೈ ಜುಮ್ ಎನ್ನುತ್ತದೆ” ಎಂದು ಕೆಲವು ಬಳಕೆದಾರರು ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ. ಇನ್ನು ಕೆಲವು ಬಳಕೆದಾರರು ವಿಡಿಯೋ ವೀಕ್ಷಿಸಿದ ಬಳಿಕ ಅವನನ್ನು ನಿಜವಾದ ಹೀರೊ ಎಂದಿದ್ದಾರೆ. ಸುಮಾರು 18 ಗಂಟೆಗಳ ಹಿಂದೆ ಈ ವೀಡಿಯೊವನ್ನು ಹಂಚಿಕೊಳ್ಳಲಾಗಿದೆ. ಪೋಸ್ಟ್ ಮಾಡಿದಾಗಿನಿಂದ, ಕ್ಲಿಪ್ ವೈರಲ್ ಆಗಿದೆ. ಇಲ್ಲಿಯವರೆಗೆ, ಇದು 1.5 ದಶಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದಿದೆ ಮತ್ತು ಪೋಸ್ಟ್ ಹಲವಾರು ಲೈಕ್ ಗಳನ್ನು ಗಳಿಸಿದೆ.

ಮತ್ತಷ್ಟು ವೈರಲ್​ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

ಶಿಕ್ಷಕರ ಕೊರತೆ ಬಗ್ಗೆ ವಿದ್ಯಾರ್ಥಿಗಳ ವಿಡಿಯೋ ವೈರಲ್​: ಶಾಲೆಗೆ ಸಂಸದ ಭೇಟಿ
ಶಿಕ್ಷಕರ ಕೊರತೆ ಬಗ್ಗೆ ವಿದ್ಯಾರ್ಥಿಗಳ ವಿಡಿಯೋ ವೈರಲ್​: ಶಾಲೆಗೆ ಸಂಸದ ಭೇಟಿ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಶತಕ ಪೂರೈಸುತ್ತಿದ್ದಂತೆ ಕಣ್ಣೀರಿಟ್ಟ ನಿತೀಶ್ ಕುಮಾರ್ ರೆಡ್ಡಿ ಅವರ ತಂದೆ..!
ಶತಕ ಪೂರೈಸುತ್ತಿದ್ದಂತೆ ಕಣ್ಣೀರಿಟ್ಟ ನಿತೀಶ್ ಕುಮಾರ್ ರೆಡ್ಡಿ ಅವರ ತಂದೆ..!