AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆನೆಗಳು ಭಯಂಕರ ಕಾದಾಟಕ್ಕಿಳಿದಿವೆ, ನೆಟ್ಟಿಗರು ಮಾತ್ರ ಇದು ಪ್ರೀತಿಯ ಆಟ ಎನ್ನುತ್ತಿದ್ದಾರೆ

Elephants : ಪ್ರತೀ ಜೀವಿಯೂ ವೈಯಕ್ತಿಕವೋ, ಗುಂಪಿನ ಮೇಲೆಯೋ ಪ್ರಾಬಲ್ಯ ಸಾಧಿಸುವುದು ಸಹಜ. ಮನುಷ್ಯರಾದ ನಮಗೆ ನಮ್ಮ ಬಗ್ಗೆ ಗೊತ್ತೇ ಇದೆ. ಉಳಿದಂತೆ ಸ್ವಜಾತಿಯೇ ಇರಲಿ ಅಂತರ್ಜಾತಿಯೇ ಇರಲಿ ಜೀವಿಗಳಲ್ಲಿ ಸಂಘರ್ಷ ನಿರಂತರ.

ಆನೆಗಳು ಭಯಂಕರ ಕಾದಾಟಕ್ಕಿಳಿದಿವೆ, ನೆಟ್ಟಿಗರು ಮಾತ್ರ ಇದು ಪ್ರೀತಿಯ ಆಟ ಎನ್ನುತ್ತಿದ್ದಾರೆ
ಆನೆಗಳ ಕಾದಾಟ
TV9 Web
| Edited By: |

Updated on: May 07, 2023 | 9:52 AM

Share

Viral Video : ಅನ್ಯಜಾತಿಯ ಪ್ರಾಣಿಗಳ ಸಂಘರ್ಷಕ್ಕಿಳಿಯುವುದು ಸಹಜ. ಆದರೆ ಸ್ವಜಾತಿಯ ಪ್ರಾಣಿಗಳಲ್ಲಿಯೂ  ಕಾದಾಟ ಸಹಜ. ಇದು ಅವುಗಳ ನಿತ್ಯಜೀವನದ ಒಂದು ಭಾಗ. ಇದೀಗ ವೈರಲ್ ಆಗಿರುವ ಈ ವಿಡಿಯೋದಲ್ಲಿ ಈ ಎರಡೂ ಆನೆಗಳನ್ನು ನೋಡಿ. ಭಯಂಕರ ಕಾದಾಟಕ್ಕಿಳಿದಿವೆ. ನೆಟ್ಟಿಗರು ಭಯ ಬೆರಗಿನಿಂದ ಈ ವಿಡಿಯೋ ನೋಡುತ್ತಿದ್ದಾರೆ.

ಮನುಷ್ಯರಾದ ನಾವೇ ನಿತ್ಯವೂ ವಾದ, ಜಗಳಕ್ಕಿಳಿಯುವುದಿಲ್ಲವಾ? ಹಾಗೆ ಪ್ರತಿಯೊಂದು ಜೀವಿಯ ಬದುಕಿನಲ್ಲಿ ಸಂಘರ್ಷ ಎನ್ನುವುದು ಇದ್ದೇ ಇರುತ್ತದೆ, ಅದು ವೈಯಕ್ತಿಕವೋ, ಗುಂಪಿನಲ್ಲೋ. ಈ ವಿಡಿಯೋ ನೋಡಿದ ನೆಟ್ಟಿಗರು ವಿವಿಧ ರೀತಿಯಲ್ಲಿ ಪ್ರತಿಕ್ರಿಯಿಸುತ್ತಿದ್ದಾರೆ.

ಇದನ್ನೂ ಓದಿ : ಡೋಲೋ 650 ಶಶಿರೇಖಾ; ನಿಮ್ಮ ಮನೆಮಗಳೀಗ ಮಾಡೆಲಿಂಗ್​ಗೂ ಸೈ?

ಸಂಘರ್ಷ ಒಳ್ಳೆಯದಲ್ಲ ಬಿಟ್ಟುಬಿಡಿ ಎಂದು ಎಚ್ಚರಿಸುತ್ತಿದ್ದಾರೆ. ಇವರು ಜಗಳಾಡುತ್ತಿಲ್ಲ ಪ್ರೀತಿಯ ಆಟದಲ್ಲಿ ಮುಳುಗಿದ್ಧಾರೆ ಎಂದು ಒಬ್ಬರು ಹೇಳಿದ್ದಾರೆ. ಬಲವಾದ ದಂತಗಳನ್ನು ಹೊಂದಿದ ಆ ಎರಡೂ ಆನೆಗಳು ಕಠಿಣವಾದ ಸ್ಪರ್ಧೆಗೆ ಇಳಿದಂತೆ ಕಾಣುತ್ತಿದೆ ಎಂದಿದ್ದಾರೆ ಮತ್ತೊಬ್ಬರು. ಅಯ್ಯೋ ಜಗಳಾಡಬೇಡಿರೋ ನಾನು ನಿಮ್ಮನ್ನು ತುಂಬಾ ಪ್ರೀತಿಸುತ್ತೇನೆ ಎಂದು ಮಗದೊಬ್ಬರು ಹೇಳಿದ್ದಾರೆ.

ಇದನ್ನೂ ಓದಿ : ಅನಾಥ ಮರಿಗಳನ್ನು ದತ್ತು ಸ್ವೀಕರಿಸುತ್ತಿರುವ ಬೆಕ್ಕಮ್ಮನ ವಿಡಿಯೋ ವೈರಲ್

ಪ್ರತೀ ಜೀವಿಗೂ ತಮ್ಮ ಪ್ರಾಬಲ್ಯವನ್ನು ಸಾಧಿಸಬೇಕು ಎಂಬ ಒಳ ಆಸೆ ಇದ್ದೇ ಇರುತ್ತದೆ. ಆಗ ಹೀಗೆ ಜಗಳಕ್ಕೆ ಬೀಳುತ್ತವೆ. ಹೇಗೆ ವಯಸ್ಕ ಗಂಡಸರಲ್ಲಿ ಜಗಳಗಳು ಏಳುತ್ತವೆಯೋ ಹಾಗೆ ಗಂಡುಪ್ರಾಣಿಸಂಕುಲದಲ್ಲಿಯೂ ಇದು ಸಾಮಾನ್ಯ. ಗೆದ್ದ ಗಂಡುಪ್ರಾಣಿಯೂ ಗುಂಪನ್ನು ನಡೆಸುವಲ್ಲಿ ಶಕ್ತನಾಗುತ್ತದೆ. ಹೆಣ್ಣುಪ್ರಾಣಿಗಳನ್ನು ಸಂಗಾತಿಯನ್ನಾಗಿ ಆಯ್ಕೆ ಮಾಡಿಕೊಳ್ಳುತ್ತವೆ.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ