Viral News: ಹೆಂಡತಿಗೆ ಡೈವೋರ್ಸ್​ ನೀಡಿ, ಸಂಭ್ರಮಿಸಲು ಹೋದಾತ ಆಸ್ಪತ್ರೆಗೆ ದಾಖಲು

ಕಡೆಗೂ ಪತ್ನಿಯಿಂದ ವಿಚ್ಛೇದನ ಸಿಕ್ಕಿರುವ ಖುಷಿಯನ್ನು ಸಂಭ್ರಮಿಸಲು ಮುಂದಾಗಿದ್ದಾನೆ . ಆದರೆ ಆತನ ಸಂಭ್ರಮವೇ ಆತನ ಜೀವಕ್ಕೆ ಕಂಟಕವಾಗಿದೆ.

Viral News: ಹೆಂಡತಿಗೆ ಡೈವೋರ್ಸ್​ ನೀಡಿ, ಸಂಭ್ರಮಿಸಲು ಹೋದಾತ ಆಸ್ಪತ್ರೆಗೆ ದಾಖಲು
ರಫಾಲೆ ಸಾಂಟೊಸ್​​(27) Image Credit source: LADbible
Follow us
ಅಕ್ಷತಾ ವರ್ಕಾಡಿ
|

Updated on:May 07, 2023 | 11:13 AM

ಬ್ರೆಜಿಲ್​​​​: ವ್ಯಕ್ತಿಯೊರ್ವ ತನ್ನ ಹೆಂಡತಿಯೊಂದಿಗೆ ಜೀವನ ಮುಂದುವರಿಸಲು ಸಾಧ್ಯವಿಲ್ಲ, ಅದಕ್ಕಾಗಿ ಸಾಕಷ್ಟು ಹರಸಾಹಸದ ನಂತರ ಆಕೆಯಿಂದ ವಿಚ್ಛೇದನ(Divorce) ವನ್ನು ಪಡೆದುಕೊಂಡಿದ್ದಾನೆ. ಕಡೆಗೂ ಪತ್ನಿಯಿಂದ ವಿಚ್ಛೇದನ ಸಿಕ್ಕಿರುವ ಖುಷಿಯನ್ನು ಸಂಭ್ರಮಿಸಲು ಮುಂದಾಗಿದ್ದಾನೆ . ಆದರೆ ಆತನ ಸಂಭ್ರಮವೇ ಆತನ ಜೀವಕ್ಕೆ ಕಂಟಕವಾಗಿದೆ. ಇದೀಗಾ ಆಸ್ಪತ್ರೆಯಲ್ಲಿ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾನೆ. ಆಷ್ಟಕ್ಕೂ ಏನಿದು ಘಟನೆ, ಇಲ್ಲಿದೆ ಸಂಪೂರ್ಣ ಮಾಹಿತಿ.

ರಫಾಲೆ ಸಾಂಟೊಸ್​​(27) ಬ್ರೆಜಿಲ್​​​​ ಮೂಲದ ವ್ಯಕ್ತಿ ತನ್ನ ಪತ್ನಿಗೆ ವಿಚ್ಛೇದನವನ್ನು ನೀಡಿದ್ದ. ಇದಾದ ಬಳಿಕ ಈ ಖುಷಿಯನ್ನು ಜೀವನಪೂರ್ತಿ ನೆನಪಿನಲ್ಲಿಟ್ಟುಕೊಳ್ಳುವಂತೆ ಸಂಭ್ರಮಿಸಲು ಮುಂದಾಗಿದ್ದಾನೆ. ಸುಮಾರು 70 ಅಡಿ ಎತ್ತರದಿಂದ ಬಂಗಿ ಜಂಪಿಂಗ್​​​​ ಮಾಡಲು ಹೋಗಿದ್ದಾನೆ. ಬಂಗಿ ಜಂಪಿಂಗ್​​ ಒಂದು ರೀತಿಯ ಸಾಹಸಮಯ ಕ್ರೀಡೆ. ಈ ಸಮಯದಲ್ಲಿ ಮುಂಚಿತವಾಗಿ ತರಬೇತಿ ಹಾಗೂ ಮುಂಜಾಗೃತ ಕ್ರಮ ತೆಗೆದುಕೊಳ್ಳುವುದು ಅಗತ್ಯ. ಆದರೆ ಈತ ಬಂಗಿ ಜಂಪಿಂಗ್ ವೇಳೆ ಹಗ್ಗ ತುಂಡಾಗಿ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾನೆ. ಆಸ್ಪತ್ರೆಗೆ ದಾಖಲಿಸಲಾಗಿದ್ದು, ಕುತ್ತಿಗೆ ಮತ್ತು ಸೊಂಟದ ಬೆನ್ನುಮೂಳೆ ಮುರಿದಿದೆ. “ವಿಚ್ಛೇದನದ ನಂತರ, ನಾನು ಜೀವನವನ್ನು ಆನಂದಿಸಲು ಬಯಸಿದ್ದೆ” ಎಂದು ರಾಫೆಲ್ ಹೇಳಿಕೊಂಡಿದ್ದು ದಿ ಮಿರರ್‌ ವೆಬ್​​ಸೈಟ್​​ನಲ್ಲಿ ವರದಿ ಮಾಡಿದೆ.

ಇದನ್ನೂ ಓದಿ: ಬೈಕ್ ಸ್ಟಂಟ್ ಮಾಡಿಕೊಂಡು ಲಿಪ್​​ಲಾಕ್ ಮಾಡಿದ ಯುವತಿಯರು, ನೆಟ್ಟಿಗರು ಹೇಳಿದ್ದೇನು ಗೊತ್ತಾ?

ಡೈವೋರ್ಸ್ ನಂತರ ಸಂಭ್ರಮಿಸುವುದು ಇದೇನೂ ಹೊಸತಲ್ಲ, ಇತ್ತೀಚೆಗಷ್ಟೇ ತಮಿಳು ಕಿರುತೆರೆ ನಟಿ ಶಾಲಿನಿ ತನ್ನ ಪತಿಯಿಂದ ವಿಚ್ಛೇದನ ಪಡೆದು ಸಂಭ್ರಮಿಸಿದ್ದಾರೆ. ಇದಲ್ಲದೇ ಡೈವೋರ್ಸ್ ಫೋಟೋಶೂಟ್ ಮಾಡಿಸಿದ್ದಾರೆ. ಈ ಫೋಟೋಗಳನ್ನು ಅವರುದಲಲ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಈ ಬಗ್ಗೆ ಪರ ವಿರೋಧ ಚರ್ಚೆ ಆಗುತ್ತಿದೆ. ‘ಈ ಕಣ್ಣುಗಳಲ್ಲಿ ಇದನ್ನು ನೋಡುವುದೊಂದು ಬಾಕಿ ಇತ್ತು’ ಎಂದು ಕೆಲವರು ಟೀಕೆ ಮಾಡಿದ್ದಾರೆ.

ಮತ್ತಷ್ಟು ವೈರಲ್​​ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

Published On - 11:11 am, Sun, 7 May 23

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್