Video Viral : ಆಸ್ತಿಯ ವ್ಯಾಮೋಹ, ಸಾವನ್ನಪ್ಪಿದ ವೃದ್ಧೆ ಕೈಯಿಂದ ಆಸ್ತಿ ಪತ್ರಕ್ಕೆ ಹೆಬ್ಬೆಟ್ಟು ಹಾಕಿಸಿಕೊಂಡ ಸಂಬಂಧಿಕರು
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ವಿಡಿಯೋ ತುಣುಕೊಂದು ಹರಿದಾಡುತ್ತಿದ್ದು, ವ್ಯಕ್ತಿಯೊಬ್ಬ ಮೃತ ವೃದ್ಧೆಯ ಹೆಬ್ಬೆರೆಳಿನ ಗುರುತೊಂದನ್ನು ತೆಗೆದಿರುವುದು ಕಂಡುಬಂದಿದೆ.
ಆಸ್ತಿಗೋಸ್ಕರ ಸತ್ತ ಹೆಣವನ್ನು ಬಿಡದೆ ಆಸ್ತಿ ಪತ್ರಗಳ ಮೇಲೆ ಹೆಬ್ಬೆಟ್ಟು ಹಾಕಿಸಿಕೊಂಡಿರುವ ಫಟನೆ ಉತ್ತರಪ್ರದೇಶದ ಲಕ್ನೋದಲ್ಲಿ ನಡೆದಿದೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ವಿಡಿಯೋ ತುಣುಕೊಂದು ಹರಿದಾಡುತ್ತಿದ್ದು, ವ್ಯಕ್ತಿಯೊಬ್ಬ ಮೃತ ವೃದ್ಧೆಯ ಹೆಬ್ಬೆರೆಳಿನ ಗುರುತೊಂದನ್ನು ತೆಗೆದಿರುವುದು ಕಂಡುಬಂದಿದೆ. ಮೃತ ವೃದ್ಧೆಯ ಶವವನ್ನು ಕಾರಿನ ಹಿಂಬದಿಯ ಸೀಟ್ನಲ್ಲಿ ಮಲಗಿಸಿರುವುದನ್ನು ಕಾಣಬಹುದು. 45 ಸೆಕೆಂಡುಗಳ ವೀಡಿಯೊದಲ್ಲಿ ವ್ಯಕ್ತಿಯೊರ್ವ ಶವದ ಹೆಬ್ಬೆರಳಿನ ಮುದ್ರೆಯನ್ನು ಬಲವಂತವಾಗಿ ತೆಗೆದುಕೊಳ್ಳುವುದನ್ನು ಕಾಣುತ್ತದೆ. ಏಕೆಂದರೆ ವೃದ್ಧೆ ಕಾರಿನಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವುದನ್ನು ಕಾಣಬಹುದು. ಮಹಿಳೆಯನ್ನು ಆಸ್ಪತ್ರೆಗೆ ಕರೆದೊಯ್ಯುವ ನೆಪದಲ್ಲಿ ಹೆಬ್ಬೆರಳಿನ ಗುರುತನ್ನು ವಂಚನೆಯಿಂದ ತೆಗೆದುಕೊಂಡು ವೃದ್ದೆಯ ಆಸ್ತಿಯನ್ನು ಕಸಿದುಕೊಳ್ಳಲು ಪ್ರಯತ್ನಿಸಿಸುತ್ತಿದ್ದಾರೆ ಎಂದು ವರದಿಗಳು ಸೂಚಿಸುತ್ತವೆ.
Accused of usurping will from thumb of dead old woman in Agra, citing that she was taken to hospital after her death body was brought to Agra in car itself video of entire incident went viral on social media @Uppolice @agrapolice @CMOfficeUP @UPGovt pic.twitter.com/DWfRenseSk
— Amir qadri (@AmirqadriAgra) April 10, 2023
ಇದನ್ನೂ ಓದಿ: ಅಂದು ಎಲ್ಲರೂ ಅಬ್ಬಾ ಇದೇನ್ ವಿಚಿತ್ರ ಬುದ್ಧಿ ಇಲ್ವಾ ಅಂದಿದ್ರು: ದೆವ್ವದ ಜತೆ ಮದುವೆಯಾಗಿದ್ದ ಮಹಿಳೆಗೆ ಈಗ ವಿಚ್ಛೇಧನ ಬೇಕಂತೆ!
ಈ ಘಟನೆಯು ಮೇ.08 2021 ಹಿಂದಿನದ್ದು, ಆದರೆ ಇದೀಗಾ ಟ್ವಿಟರ್ನಲ್ಲಿ ಭಾರೀ ವೈರಲ್ ಆಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಆಗ್ರಾ ಮೂಲದ ಜಿತೇಂದ್ರ ಶರ್ಮ ಅಂದರೆ ಮೃತ ವೃದ್ಧೆಯ ಮೊಮ್ಮಗ ಪೋಲಿಸರಿಗೆ ದೂರು ನೀಡಿದ್ದರೂ ಏನೂ ಪ್ರಯೋಜನವಾಗಿಲ್ಲ ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದರು. ನನ್ನ ಸಂಬಂಧಿಕರು ಸಂಚು ರೂಪಿಸಿ ಅಜ್ಜಿಯನ್ನು ಕೊಂದಿದ್ದಾರೆ. ಅಜ್ಜಿ ಬದುಕಿರುವಾಗ ಆಸ್ತಿಯನ್ನು ಕಬಳಿಸಲು ಪ್ರಯತ್ನಿಸಿದ್ದರು, ಆದರೆ ಅದು ಸಾಧ್ಯವಾಗಲಿಲ್ಲ, ಅದಕ್ಕಾಗಿ ಕೊಲೆ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.
ಮೇ.08 2021 ನನ್ನ ಅಜ್ಜಿಯ ಸ್ಥಿತಿ ಗಂಭೀರವಾಗಿದೆ. ಆ ಸಮಯದಲ್ಲಿ ನನ್ನ ಸಂಬಂಧಿಕರಾದ ಬೈಜನಾಥ್ ಹಾಗೂ ಅನ್ಶುಲ್ ಅಜ್ಜಿಯನ್ನು ಆಸ್ಪತ್ರೆಗೆ ಸೇರಿಸುವ ನೆಪದಲ್ಲಿ ಕಾರಿನಲ್ಲಿ ಕರೆದುಹೋಗಿದ್ದಾರೆ. ಮಾರ್ಗ ಮಧ್ಯೆದಲ್ಲೇ ಅಜ್ಜಿ ತೀರಿಕೊಂಡಿದ್ದಾರೆ. ಆ ಸಮಯದಲ್ಲಿ ಕಾರನ್ನು ನಡು ರಸ್ತೆಯಲ್ಲೇ ನಿಲ್ಲಿಸಿ ಆಸ್ತಿ ಪತ್ರಗಳಿಗೆ ಬೆರಳಿನ ಗುರುತನ್ನು ತೆಗೆದುಕೊಂಡಿದ್ದಾರೆ ಜಿತೇಂದ್ರ ಶರ್ಮ ಆರೋಪಿಸಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: