ಅಂದು ಎಲ್ಲರೂ ಅಬ್ಬಾ ಇದೇನ್ ವಿಚಿತ್ರ ಬುದ್ಧಿ ಇಲ್ವಾ ಅಂದಿದ್ರು: ದೆವ್ವದ ಜತೆ ಮದುವೆಯಾಗಿದ್ದ ಮಹಿಳೆಗೆ ಈಗ ವಿಚ್ಛೇಧನ ಬೇಕಂತೆ!

ಪ್ರೇತದ ಜತೆ ಮದುವೆಯಾಗಿದ್ದ ಮಹಿಳೆ ಈಗ ವಿಚ್ಛೇದನ ಪಡೆಯಲು ಬಯಸುತ್ತಿದ್ದಾಳೆ. ಕಳೆದ ವರ್ಷ ಮಹಿಳೆಯೊಬ್ಬಳು ದೆವ್ವವನ್ನು ಮದುವೆಯಾಗಿದ್ದಾಳೆ ಎಂದು ತುಂಬಾ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು.

ಅಂದು ಎಲ್ಲರೂ ಅಬ್ಬಾ ಇದೇನ್ ವಿಚಿತ್ರ ಬುದ್ಧಿ ಇಲ್ವಾ ಅಂದಿದ್ರು: ದೆವ್ವದ ಜತೆ ಮದುವೆಯಾಗಿದ್ದ ಮಹಿಳೆಗೆ ಈಗ ವಿಚ್ಛೇಧನ ಬೇಕಂತೆ!
ದೆವ್ವದ ಜತೆ ಮದುವೆಯಾಗಿದ್ದ ಮಹಿಳೆ
Follow us
ನಯನಾ ರಾಜೀವ್
|

Updated on:Apr 11, 2023 | 3:11 PM

ಪ್ರೇತದ ಜತೆ ಮದುವೆಯಾಗಿದ್ದ ಮಹಿಳೆ ಈಗ ವಿಚ್ಛೇದನ ಪಡೆಯಲು ಬಯಸುತ್ತಿದ್ದಾಳೆ. ಕಳೆದ ವರ್ಷ ಮಹಿಳೆಯೊಬ್ಬಳು ದೆವ್ವವನ್ನು ಮದುವೆಯಾಗಿದ್ದಾಳೆ ಎಂದು ತುಂಬಾ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು. ಆದರೆ ಒಂದು ವರ್ಷದೊಳಗೆ ಆಕೆ ತನ್ನ ಗಂಡನ ಮೇಲೆ ತುಂಬಾ ಕೋಪಗೊಂಡಿದ್ದಾಳಂತೆ, ಅವರನ್ನು ಬಿಡಲು ಪ್ರಯತ್ನಿಸುತ್ತಿದ್ದಾಳಂತೆ, ಅಷ್ಟು ಸಲೀಸಾಗಿ ಹೇಗೆ ಬಿಡುತ್ತಾನೆ, ಅದಕ್ಕಾಗಿ ತಂತ್ರ-ಮಂತ್ರಗಳನ್ನು ಅಳವಡಿಸಿಕೊಳ್ಳಬೇಕು ಎಂದು ಮಹಿಳೆ ಹೇಳಿಕೊಂಡಿದ್ದಾಳೆ.

ಜನರು ತಮಗಿಂತ ಹಿರಿಯ ಅಥವಾ ಕಿರಿಯ ವ್ಯಕ್ತಿಯೊಂದಿಗೆ ಪ್ರೀತಿಯಲ್ಲಿ ಬೀಳುವುದನ್ನು ನೀವು ನೋಡಿರಬೇಕು. ಬೇರೊಂದು ಧರ್ಮ ಅಥವಾ ದೇಶದಲ್ಲಿ ವಾಸಿಸುವ ವ್ಯಕ್ತಿಯನ್ನು ಯಾರಾದರೂ ಪ್ರೀತಿಸುವುದನ್ನು ನೀವು ನೋಡಿರಬೇಕು ಮತ್ತು ಕೇಳಿರಬಹುದು, ಆದರೆ ದೆವ್ವವನ್ನು ಪ್ರೀತಿಸಿ ಮದುವೆಯಾದವರನ್ನು ಎಲ್ಲಾದರೂ ಕಂಡಿದ್ದೀರಾ.

ರಾಕರ್ ಬ್ರೋಕಾರ್ಡ್ ಎಂಬ ಮಹಿಳೆಯೊಂದಿಗೆ ಇದೇ ರೀತಿಯ ಘಟನೆ ಸಂಭವಿಸಿದೆ. ಆಕೆ ಪ್ರೇತವನ್ನು ಪ್ರೀತಿಸಿ ಮದುವೆಯಾಗಿದ್ದಳು. ಬ್ರೋಕಾರ್ಡೊ ಮದುವೆಯಾಗುವ ಭೂತಕ್ಕೆ ಎಡ್ವರ್ಡೊ ಎಂದು ಹೆಸರಿಡಲಾಗಿದೆ. ದೆವ್ವ ತನ್ನ ಜವಾಬ್ದಾರಿಯನ್ನು ಅರ್ಥಮಾಡಿಕೊಳ್ಳದ ಕಾರಣ ಈಗ ಅವನ ಮದುವೆಯಲ್ಲಿ ಸಮಸ್ಯೆ ಇದೆ.

ಮತ್ತಷ್ಟು ಓದಿ: Haunted Hotel: ಅಮೆರಿಕದ ಟೆಕ್ಸಾಸ್​​ನಲ್ಲೊಂದು ಪ್ರಾಚೀನ ಭೂತ ಬಂಗಲೆ; ಇಲ್ಲಿನ ದೆವ್ವದ ಬಗ್ಗೆ ಕೇಳಿದ್ರೆ ಬೆಚ್ಚಿ ಬೀಳ್ತೀರಿ

ಅವನು ಇದ್ದಕ್ಕಿದ್ದಂತೆ ತಡರಾತ್ರಿ ಮಲಗುವ ಕೋಣೆಗೆ ಬರುತ್ತಾನೆ ಮತ್ತು ಯಾವಾಗ ಬೇಕಾದರೂ ಹೋಗುತ್ತಾನೆ. ಮೊದಲಿದ್ದಂಗೆ ಇರಲು ಸಾಧ್ಯವಿಲ್ಲ, ಅವನಿಗೆ ಮದುವೆಯಾಗಿದೆ ಜವಾಬ್ದಾರಿಯನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದ್ದಾಳೆ. ಮಹಿಳೆ ಪ್ರೇತವನ್ನು ಮದುವೆಯಾಗಿ ಒಂದು ವರ್ಷವೂ ಆಗಿಲ್ಲ, ಆದರೆ ಪರಿಸ್ಥಿತಿ ಹದಗೆಡಲು ಆರಂಭವಾಗಿದೆ.

ವಿಕ್ಟೋರಿಯನ್ ಯುಗದ ಸೈನಿಕ ಭೂತದ ಮೇಲೆ ಪ್ರೀತಿ : 38 ವರ್ಷದ ಬ್ರೋಕಾರ್ಡ್ ಮದುವೆಯಾದ ಪ್ರೇತ ವಿಕ್ಟೋರಿಯನ್ ಸೈನಿಕ. ಮಹಿಳೆ ಬ್ರೋಕಾರ್ಡ್ ಗಾಯಕಿ. ಅವಳು ಎಡ್ವರ್ಡೊನ ಪ್ರೇತವನ್ನು ಆಳವಾಗಿ ಪ್ರೀತಿಸುತ್ತಿದ್ದಳು. ಎಡ್ವರ್ಡೊ ಅಂದರೆ ದೆವ್ವ ಕೂಡ ಈಕೆಯನ್ನು ಪ್ರೀತಿಸುತ್ತಾನಂತೆ.

ಮಾತನಾಡುವ ವಿಧಾನ : ದೆವ್ವದ ಜೊತೆ ಹೇಗೆ ಮಾತನಾಡುತ್ತಾಳೆ ಎಂಬ ಪ್ರಶ್ನೆ ಎಲ್ಲರನ್ನೂ ಕಾಡುವುದು ಸಹಜ. ಇದಕ್ಕೂ ಮಹಿಳೆ ಉತ್ತರ ನೀಡಿದ್ದಾಳೆ. ಈ ದೆವ್ವ ಮತ್ತು ಆಕೆ ಪರಸ್ಪರ ಮಾತನಾಡಿಕೊಳ್ಳುವ ರೀತಿ ತುಂಬಾ ವಿಚಿತ್ರವಾಗಿದೆ. ಎಡ್ವರ್ಡೊ ರಹಸ್ಯ ಮಾರ್ಗಗಳನ್ನು ಬಳಸಿಕೊಂಡು ಮಹಿಳೆಗೆ ಸಂದೇಶವನ್ನು ಕಳುಹಿಸುತ್ತಾನೆ.

ದೆವ್ವದಿಂದ ಹೀಗೆ ಬಂದಿತ್ತು ಪ್ರೇಮ ನಿವೇದನೆ : ಮಹಿಳೆಗೆ ದೆವ್ವ ಪ್ರೇಮ ನಿವೇದನೆ ಮಾಡಿತ್ತು. ಮಹಿಳೆಯ ದಿಂಬಿನ ಬಳಿ ಉಂಗುರವನ್ನು ಇರಿಸುವ ಮೂಲಕ ದೆವ್ವ ಪ್ರೀತಿಯನ್ನು ಪ್ರಸ್ತಾಪಿಸಿತ್ತು ಎಂದು ಮಹಿಳೆ ಹೇಳಿಕೊಂಡಿದ್ದಾಳೆ. ಇದಾದ ಬಳಿಕ ತನ್ನ ಪ್ರೀತಿಯನ್ನು ಒಪ್ಪಿಕೊಂಡಿದ್ದೀಯಾ ಎಂದು ಉಗಿಯಲ್ಲಿ ಪ್ರಶ್ನಾರ್ಥಕ ಚಿಹ್ನೆಯನ್ನು ಕಳುಹಿಸಿತ್ತಂತೆ, ಅದಕ್ಕೆ ಹೌದು ಎನ್ನುವ ಮೂಲಕ ಮಹಿಳೆ ಪ್ರೀತಿಗೆ ಒಪ್ಪಿಗೆ ನೀಡಿದ್ದಳು ಎಂದು ಹೇಳಿಕೊಂಡಿದ್ದಾಳೆ.

ಸ್ನಾನ ಮಾಡುವಾಗ ಬಿಸಿನೀರಿನ ಹಬೆಯಲ್ಲಿ ಎಡ್ವರ್ಡೊ ಸಂದೇಶ ಬರೆಯುತ್ತಾನಂತೆ. ಅದಕ್ಕೆ ಮಹಿಳೆ ಅಲ್ಲಿಯೇ ಉತ್ತರ ನೀಡುತ್ತಾಳಂತೆ. ಇದಲ್ಲದೆ ಅಡುಗೆ ಮನೆಯಲ್ಲಿ ಪಾತ್ರೆಗಳನ್ನು ಬೀಳಿಸುವ ಮೂಲಕ ತನ್ನ ಉಪಸ್ಥಿತಿಯನ್ನು ಆತ ತೋರಿಸುತ್ತಾನಂತೆ. ನಂತ್ರ ಪಾತ್ರೆಗಳ ಶಬ್ಧದ ಮೂಲಕವೇ ಇಬ್ಬರ ಮಾತುಕತೆ ನಡೆಯುತ್ತದೆಯಂತೆ.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 3:10 pm, Tue, 11 April 23

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ