ಮದುವೆಗೂ ತಟ್ಟಿದ ಚುನಾವಣೆ ನೀತಿ ಸಂಹಿತೆ ಬಿಸಿ: ಸಾಮಗ್ರಿಗಳನ್ನು ಬುಕ್​​ ಮಾಡಲು ಹೋದರೆ ಅನುಮತಿ ಕೇಳಿದ ಅಂಗಡಿ ಮಾಲೀಕ

ಮೈಸೂರಿನ ಹೆಚ್​.ಸಿ ಲಕ್ಷ್ಮಿಕಾಂತ್​ ಎಂಬುವರು ತಮ್ಮ ಮಗಳ ಮದುವೆಯನ್ನು ಇದೇ ತಿಂಗಳು ಏಪ್ರಿಲ್​ 23 ಮತ್ತು 24 ರಂದು ನಿಶ್ಚಯ ಮಾಡಿದ್ದಾರೆ. ಮದುವೆಗೆಂದು ಐಸ್​ ಕ್ರೀಮ್​ ಬುಕ್​​ ಮಾಡಲು ಹೋದರೇ, ಐಸ್​​ ಕ್ರೀಮ್​ ಸರಬರಾಜಿಗೆ, ಅಂಗಡಿ ಮಾಲೀಕರು, ಚುನಾವಣಾ ಆಯೋಗದ ಅನುಮತಿ ಪಡೆದಿದ್ದೀರಾ ಎಂದು ಪ್ರಶ್ನಿಸಿದ್ದಾರೆ.

ಮದುವೆಗೂ ತಟ್ಟಿದ ಚುನಾವಣೆ ನೀತಿ ಸಂಹಿತೆ ಬಿಸಿ: ಸಾಮಗ್ರಿಗಳನ್ನು ಬುಕ್​​ ಮಾಡಲು ಹೋದರೆ ಅನುಮತಿ ಕೇಳಿದ ಅಂಗಡಿ ಮಾಲೀಕ
ಸಾಂದರ್ಭಿಕ ಚಿತ್ರ
Follow us
ವಿವೇಕ ಬಿರಾದಾರ
|

Updated on:Apr 11, 2023 | 8:28 AM

ಮೈಸೂರು: ಕರ್ನಾಟಕ ವಿಧಾನಸಭೆಗೆ ಚುನಾವಣೆ (Karnataka Assembly Election) ಘೋಷಣೆಯಾದ ಹಿನ್ನೆಲೆ ರಾಜ್ಯದಲ್ಲಿ ಮಾದರಿ ನೀತಿ ಸಂಹಿತೆ (Model Code of Conduct) ಜಾರಿಯಾಗಿದೆ. ಹೀಗಾಗಿ 50 ಸಾವಿರಕ್ಕಿಂತ ಹೆಚ್ಚಿನ ಹಣವನ್ನು ಮತ್ತು ಹೆಚ್ಚಿನ ಪ್ರಮಾಣದ ಸಾಮಾಗ್ರಿಗಳನ್ನು ಸಾಗಿಸಲು ಸೂಕ್ತ ದಾಖಲೆ ಇರಬೇಕು ಅಥವಾ ಕಡ್ಡಾಯವಾಗಿ ಚುನಾವಣಾ ಆಯೋಗದ (Election Commission) ಅನುಮತಿಯನ್ನು ಪಡೆಯಬೇಕು. ಇಲ್ಲವಾದರೆ ಹಣ ಮತ್ತು ವಸ್ತುಗಳನ್ನು ಸೀಜ್​​ ಮಾಡಲಾಗುವುದು. ಈ ನೀತಿ ಸಂಹಿತೆ ನಿಯಮದ ಬಿಸಿ ಮದುವೆ ಮನೆಗಳಿಗೆ ತಟ್ಟಿದೆ. ಹೌದು ಮೈಸೂರಿನ (Mysore) ಹೆಚ್​.ಸಿ ಲಕ್ಷ್ಮಿಕಾಂತ್​ ಎಂಬುವರು ತಮ್ಮ ಮಗಳ ಮದುವೆಯನ್ನು ಇದೇ ತಿಂಗಳು ಏಪ್ರಿಲ್​ 23 ಮತ್ತು 24 ರಂದು ನಿಶ್ಚಯ ಮಾಡಿದ್ದಾರೆ. ಮದುವೆಗೆಂದು ಐಸ್​ ಕ್ರೀಮ್​ ಬುಕ್​​ ಮಾಡಲು ಹೋದರೇ, ಐಸ್​​ ಕ್ರೀಮ್​ ಸರಬರಾಜಿಗೆ, ಅಂಗಡಿ ಮಾಲೀಕ ಚುನಾವಣಾ ಆಯೋಗದ ಅನುಮತಿ ಪಡೆದಿದ್ದೀರಾ ಎಂದು ಪ್ರಶ್ನಿಸಿದ್ದಾರೆ. ಇದರಿಂದ ಲಕ್ಷ್ಮಿಕಾಂತ್​ ಕಂಗಾಲಾಗಿದ್ದಾರೆ.

ಐಸ್​ ಕ್ರೀಮ್​ ಮಾತ್ರವಲ್ಲದೇ ಮದುವೆಗೆ ಬೇಕಾದ ಉಡುಗೊರೆ ಮತ್ತು ದಿನಸಿ ಸಾಮಗ್ರಿ ಇತ್ಯಾದಿ ವಸ್ತುಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಸಾಗಿಸಲು ಕೂಡ ಚುನಾವಣಾ ಆಯೋಗದ ಅನುಮತಿ ಪಡೆಯಬೇಕಾದ ಹಿನ್ನೆಲೆ ಲಕ್ಷ್ಮಿಕಾಂತ್​ ಅವರಿಗೆ ತೆಲೆನೋವಾಗಿ ಪರಿಣಮಿಸಿದೆ. ಒಂದು ವೇಳೆ ಹಾಗೆ ಸಾಗಿಸಿದರೂ ಚೆಕ್​ ಪೋಸ್ಟ್​​ನಲ್ಲಿ ತಪಾಸಣೆ ವೇಳೆ ಸಿಕ್ಕಿಬೀಳಲಿದ್ದು, ಅಧಿಕಾರಿಗಳು ಸೀಜ್​ ಮಾಡಿಕೊಳ್ಳುತ್ತಾರೆ.

ಅನುಮತಿ ಇಲ್ಲಿದೆ ವಸ್ತುಗಳನ್ನು ಸಾಗಿಸುವಂತಿಲ್ಲ ಎಂದು ಕಟ್ಟುನಿಟ್ಟಾಗಿ, ಚುನಾವಣಾ ಆಯೋಗ ನಮಗೆ ನಿರ್ದೇಶನ ನೀಡಿದೆ. ಈ ವಿಚಾರವನ್ನು ನಾವು ಲಕ್ಷ್ಮಿಕಾಂತ್​ ಅವರಿಗೆ ತಿಳಿಸಿದ್ದು, ಚುನಾವಣಾ ಆಯೋಗದ ಅನುಮತಿ ಪಡೆಯಿರಿ ಅಂತ ಹೇಳಿದ್ದೇವೆ ಎಂದು ಮೈಸೂರಿನ ಯಾದವಗಿರಿ ಐಸ್​​ ಕ್ರೀಮ್​​ ತಯಾರಕ ವಿಜಯಕುಮಾರ್​ ಅವರು ಹೇಳಿದ್ದಾರೆ.

ಇದನ್ನೂ ಓದಿ: ನೀತಿ ಸಂಹಿತೆ ಜಾರಿ ಹಿನ್ನೆಲೆ ಶಸ್ತ್ರಾಸ್ತ್ರ ಬಳಕೆ ನಿಷೇಧ: ವಿನಾಯಿತಿ ನೀಡುವಂತೆ ಮೈಸೂರು ಪೊಲೀಸ್ ಕಮಿಷನರ್​ಗೆ ಪರವಾನಿಗೆದಾರರ ಮನವಿ

ಸಂಘಟಕರು ಆಯಾ ಕ್ಷೇತ್ರಗಳ ಚುನಾವಣಾಧಿಕಾರಿಗಳಿಂದ ಅನುಮತಿಯನ್ನು ಪಡೆಯುವುದು ಕಡ್ಡಾಯವಾಗಿದೆ. ಇದರಿಂದ ಆಯೋಗಕ್ಕೆ ನಿಗಾ ಇಡಲು ಅನುಕೂಲವಾಗುತ್ತದೆ. ಈ ಹಿಂದೆ ಸಾರ್ವಜನಿಕರಿಗೆ ಊಟ ಹಾಕಿಸುವ ಮೂಲಕ ರಾಜಕಾರಣಿಗಳು ಮತದಾರರನ್ನು ತಮ್ಮತ್ತ ಸೆಳೆದುಕೊಳ್ಳುತ್ತಿದ್ದರು. ಇದು ಕೂಡ ಮಾದರಿ ನೀತಿ ಸಂಹಿತೆ ಉಲ್ಲಂಘಟನೆಯಾಗಿದೆ. ಸಂಘಟಕರು ಅಧಿಕಾರ ವ್ಯಾಪ್ತಿಯ ಚುನಾವಣಾಧಿಕಾರಿಗಳಿಗೆ ಮಾಹಿತಿ ನೀಡಿ ಅನುಮತಿ ಪಡೆದು ಕಾರ್ಯಕ್ರಮ ಆಯೋಜನೆ ಮಾಡಬಹುದಾಗಿದೆ. ಆದರೆ ಈ ಸಮಾರಂಭಗಳಲ್ಲಿ ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ನೋಡಿಕೊಳ್ಳಬೇಕು ಎಂದು ಹೆಚ್ಚುವರಿ ಮುಖ್ಯ ಚುನಾವಣಾಧಿಕಾರಿ ವೆಂಕಟೇಶ್ ಕುಮಾರ್ ಹೇಳಿದ್ದಾರೆ.

ಮದುವೆ ಮತ್ತಿತರ ಸಮಾರಂಭಗಳ ಆಯೋಜಕರು ಮದುವೆಯ ಆಮಂತ್ರಣ ಪತ್ರಿಕೆ, ಕಲ್ಯಾಣ ಮಂಟಪವನ್ನು ಬುಕ್ ಮಾಡಿದ ರಸೀದಿ ಮುಂತಾದ ವಿವರಗಳನ್ನು ಒದಗಿಸಿ, ಚುನಾವಣಾಧಿಕಾರಿಗಳಿಂದ ಸ್ವೀಕೃತಿ ಪತ್ರ ಪಡೆದರೇ ಅನುಮತಿ ಪಡೆದಂತೆ. “ಸರಕುಗಳು ಚೆಕ್ ಪೋಸ್ಟ್‌ಗಳ ಮೂಲಕ ಹಾದುಹೋಗಲು ಮತ್ತು ಫ್ಲೈಯಿಂಗ್ ಸ್ಕ್ವಾಡ್‌ಗಳಿಂದ ಅನುಮತಿ ಪಡೆಯಲು ಸ್ವೀಕೃತಿ ಅಗತ್ಯ” ಎಂದು ಮೈಸೂರು ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿ ಕಮಲಾಬಾಯಿ ಬಿ. ಹೇಳಿದ್ದಾರೆ.

ರಾಜಕಾರಣಿಗಳನ್ನು ಆಹ್ವಾನಿಸಲು ಇದೆ ನಿಯಮ

ಅಲ್ಲದೆ, ರಾಜಕಾರಣಿಗಳು ಅಥವಾ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳನ್ನು ಮದುವೆಗೆ ಆಹ್ವಾನಿಸುವುದರಿಂದ ಉಂಟಾಗುವ ಪರಿಣಾಮಗಳ ಬಗ್ಗೆ ಮದುವೆ ಮತ್ತು ಇತರ ಸಾಮಾಜಿಕ ಕೂಟಗಳ ಸಂಘಟಕರಿಗೆ ಎಚ್ಚರಿಕೆ ನೀಡಲಾಗಿದೆ. ಮದುವೆಯನ್ನು ರಾಜಕಾರಣಿಗಳು ಚುನಾವಣಾ ಉದ್ದೇಶಗಳಿಗಾಗಿ ಬಳಸಿದರೆ, ಸಮಾರಂಭಕ್ಕೆ ತಗಲುವ ವೆಚ್ಚವನ್ನು ಅಭ್ಯರ್ಥಿಯ ಚುನಾವಣಾ ವೆಚ್ಚ ಎಂದು ಲೆಕ್ಕಹಾಕಲಾಗುತ್ತದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:27 am, Tue, 11 April 23

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ