ಗುಜರಾತ್ ಸಿಂಹ ರಾಜ್ಯಕ್ಕೆ ಬಂದಾಗಲೆಲ್ಲಾ ಯಾಕೆ ಕಾಂಗ್ರೆಸಿಗರು ಭಯಪಡುತ್ತಾರೆ? ಪ್ರತಾಪ್ ಸಿಂಹ ಪ್ರಶ್ನೆ
ಪ್ರಧಾನಿ ನರೇಂದ್ರ ಮೋದಿಯವರು ನಿನ್ನೆ (ಏ.9) ಬಂಡೀಪುರ ರಾಷ್ಟ್ರೀಯ ಉದ್ಯಾನವನದಲ್ಲಿ 2 ಗಂಟೆ ಕಾಲ 20 ಕಿ.ಮೀ ಸಫಾರಿ ಮಾಡಿದ್ದರು. ಸಫಾರಿ ವೇಳೆ ಪ್ರಧಾನಿ ಮೋದಿಯವರಿಗೆ ಹುಲಿ ಕಾಣಲಿಲ್ಲವೆಂದು ವಿಪಕ್ಷಗಳು ಕುಹಕವಾಡುತ್ತಿವೆ. ಈ ವಿಚಾರವಾಗಿ ಸಂಸದ ಪ್ರತಾಪ್ ಸಿಂಹ ತಿರುಗೇಟು ನೀಡಿದ್ದಾರೆ.
ಮೈಸೂರು: ಪ್ರಧಾನಿ ನರೇಂದ್ರ ಮೋದಿಯವರು (PM Narendra Modi) ನಿನ್ನೆ (ಏ.9) ಬಂಡೀಪುರ ರಾಷ್ಟ್ರೀಯ ಉದ್ಯಾನವನದಲ್ಲಿ (Bandipur National Park) 2 ಗಂಟೆ ಕಾಲ 20 ಕಿ.ಮೀ ಸಫಾರಿ ಮಾಡಿದ್ದರು. ಸಫಾರಿ ವೇಳೆ ಪ್ರಧಾನಿ ಮೋದಿಯವರಿಗೆ ಹುಲಿ (Tiger) ಕಾಣಲಿಲ್ಲವೆಂದು ವಿಪಕ್ಷಗಳು ಕುಹಕವಾಡುತ್ತಿವೆ. ಈ ವಿಚರವಾಗಿ ಸಂಸದ ಪ್ರತಾಪ್ ಸಿಂಹ (Pratap Simha) ತಿರುಗೇಟು ನೀಡಿದ್ದು, ಗುಜರಾತ್ (Gujarat) ಸಿಂಹ ಕರ್ನಾಟಕಕ್ಕೆ ಬಂದಾಗಲೆಲ್ಲಾ ಯಾಕೆ ಕಾಂಗ್ರೆಸಿಗರು (Congress) ಭಯಪಡುತ್ತಾರೆ. ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಅವರೇ ಈ ಭಯ ನಿಮ್ಮ ಎದೆಯಲ್ಲಿ ಇರಬೇಕು. ಈ ಭಯ ಮೇ 10ರಂದು ಮತ್ಯಾವ ರೀತಿ ಗೋಚರವಾಗುತ್ತೆ ನೋಡಿ ಎಂದು ಹೇಳಿದ್ದಾರೆ.
ಮೈಸೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ವನ್ಯಜೀವಿಗಳ ಮೇಲಿನ ಕಾಳಜಿಯಿಂದ ಮೋದಿ ಬಂಡೀಪುರಕ್ಕೆ ಬಂದರು. ಸಿದ್ದರಾಮಯ್ಯ ಅವರು ಒಂದು ದಿನವೂ ಬಂಡೀಪುರ, ನಾಗರಹೊಳೆಗೆ ಹೋಗ್ಲಿಲ್ಲ. ಮೈಸೂರಿಗೆ ಬಂದು ಕುರಿ ಚರ್ಬಿ ತಿಂದು ಹೋಗುತ್ತಿದ್ದವರು ನೀವು. ಸಿದ್ದರಾಮಯ್ಯರಿಂದ ಹುಲಿ ಬಗ್ಗೆ ಪಾಠ ಕೇಳಿಬೇಕಿಲ್ಲ ಎಂದರು.
ಇದನ್ನೂ ಓದಿ: ಮೋದಿಗೆ ಭಯಪಟ್ಟು ಗುಹೆ ಸೇರಿದ ಹುಲಿಗಳು: ಸಿದ್ದರಾಮಯ್ಯ ಏಟಿಗೆ ಪ್ರಲ್ಹಾದ್ ಜೋಶಿ ತಿರುಗೇಟು
3 ಹೆಲಿಕಾಪ್ಟರ್ಗಳು ಬಂದಿದ್ದಕ್ಕೆ ಪ್ರಾಣಿಗಳು ಅರಣ್ಯದೊಳಗೆ ಹೋಗಿವೆ. ಹೆಲಿಕಾಪ್ಟರ್ ಶಬ್ದ ಹೆಚ್ಚಾಗಿ ಪ್ರಾಣಿಗಳು ದಟ್ಟ ಅರಣ್ಯದೊಳಗೆ ಹೋಗಿವೆ. ಕನಿಷ್ಠ ಲೋಕ ಜ್ಞಾನವೂ ನಿಮಗೆ ಇಲ್ಲ ಅಂದರೆ ಹೇಗೆ ಹೇಳಿ? ಭ್ರಷ್ಟರ ಪಾಲಿಗೆ ಹುಲಿಯಂತಿದ್ದ ಲೋಕಾಯುಕ್ತ ಮುಗಿಸಿದ್ದವರು ನೀವು ಎಂದು ವಾಗ್ದಾಳಿ ಮಾಡಿದರು.
ಸಿದ್ದರಾಮಯ್ಯ ಅವರಿಗೆ ಕುರಿ ಚರ್ಬಿ ತಿಂದು ತಿಂದು ಕೊಬ್ಬು ಜಾಸ್ತಿಯಾಗಿದೆ. ಸಿದ್ದರಾಮಯ್ಯ ಐದು ವರ್ಷ ಮುಖ್ಯಮಂತ್ರಿ ಆಗಿದ್ದರು. ಘನತೆಯಿಂದ ಮಾತನಾಡುವುದು ಕಲಿಯಬೇಕು. ಹುಲಿ ಯೋಜನೆಗೆ 50 ವರ್ಷ ತುಂಬಿದ ಕಾರಣಕ್ಕೆ ಮೋದಿ ಬಂಡೀಪುರಕ್ಕೆ ಬಂದು ಹೋಗಿದ್ದರು. ಬೇಸಿಗೆ ಇರುವ ಕಾರಣಕ್ಕೆ ಹುಲಿ ಕಾಣಿಸಿಲ್ಲ, ಅದಕ್ಕೂ ಕೊಂಕು ಮಾತನಾಡುವುದು ಯಾಕೆ ? ಎಂದು ಪ್ರಶ್ನಿಸಿದರು.
ಮಾರ್ಮಿಕವಾಗಿ ಟ್ವೀಟ್ ಮಾಡಿ ಮೋದಿ ಕಾಲೆಳೆದಿದ್ದ ಸಿದ್ದರಾಮಯ್ಯ
ಕಡವೆ, ಕಾಡೆಮ್ಮೆ, ಆನೆ, ಕಾಟಿ ಹಾಗೂ ಕೆಲ ಪಕ್ಷಿಗಳು ಪ್ರಧಾನಿ ಮೋದಿ ಕಣ್ಣಿಗೆ ಬಿದ್ದಿವೆ. ಇವುಗಳನ್ನು ನೋಡಿ ಖುಷಿಪಟ್ಟ ಪ್ರಧಾನಿ ಮೋದಿ ಹುಲಿ ಪ್ರತ್ಯಕ್ಷವಾಗಲಿಲೇ ಇಲ್ಲ. ದುರ್ಬಿನ್ ಹಾಗೂ ಕ್ಯಾಮೆರಾ ಹಿಡಿದು ಸುತ್ತಾಡಿದರೂ ಮೋದಿ ಕಣ್ಣಿಗೆ ಒಂದೂ ಹುಲಿ ಕಾಣಿಸಿಲ್ಲ. ಇದಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾರ್ಮಿಕವಾಗಿ ಟ್ವೀಟ್ ಮಾಡಿ ಮೋದಿ ಕಾಲೆಳೆದಿದ್ದರು.
ಸಿದ್ದರಾಮಯ್ಯ ಟ್ವೀಟ್ “ಎಲ್ಲಿ ನನ್ನನ್ನು ಹಿಡಿದು ಮಾರಿ ಬಿಡುತ್ತಾರೋ ಎಂಬ ಭಯದಿಂದ ಯಾವ ಗುಹೆಯೊಳಗೆ ಅಡಗಿ ಕೂತಿದೆಯೋ ಎಂದು ಮೋದಿ ಕಾಲೆಳೆದಿದ್ದು, ಇನ್ನು ಕೆಲವೇ ದಿನಗಳಲ್ಲಿ SaveBandipur ( ಬಂಡಿಪುರ ಉಳಿಸಿ ) ಎಂಬ ಅಭಿಯಾನವನ್ನು ಕನ್ನಡಿಗರು ಶುರು ಮಾಡುವಂತೆ ಆಗದಿರಲಿ. ಅದೇ ನೀವು ಕರುನಾಡಿಗೆ ಮಾಡುವ ದೊಡ್ಡ ಉಪಕಾರ” ಎಂದು ಪ್ರಧಾನಿ ನರೇಂದ್ರ ಮೋದಿಗೆ ಟ್ಯಾಗ್ ಮಾಡಿದ್ದರು.
ಕರ್ನಾಟಕ ವಿಧಾನಸಭೆ ಚುನಾವಣೆ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
Published On - 12:13 pm, Mon, 10 April 23